Oppanna.com

ಆಶಾ ಹೋಗಿ ಆಯಿಶಾ ಆತು; ಭಾರತಕ್ಕೇ ವಿಷ ಆತು..!

ಬರದೋರು :   ಒಪ್ಪಣ್ಣ    on   15/11/2013    18 ಒಪ್ಪಂಗೊ

ರಂಗಮಾವನ ಒಂದು ಗಾದೆ ಇದ್ದು – ಕಂಡೋನು ಹೇಳ್ತನಿಲ್ಲೆ, ಕೇಳಿದೋನು ಊರಿಡೀ ಹೇಳುಗು – ಹೇದು.
ಹಾಂಗೇ ಆತು ಇಲ್ಲಿಯೂ.
ಕಂಡೋರು ಇಷ್ಟನ್ನಾರವೂ ಈ ವಿಶಯ ಹೇಳಿದ್ದವಿಲ್ಲೆ, ಅಲ್ಲಿಯೋ ಇಲ್ಲಿಯೋ ಕೇಳಿದ ಒಪ್ಪಣ್ಣ ಬೈಲಿಡೀ ಹೇಳ್ತ ಹಾಂಗೆ ಒದಗಿ ಬಂತಿದಾ.  😉
ಇರಳಿ, ಶುದ್ದಿ ಹೇಳುದು ಹೇಳೇಕನ್ನೆ,  ಶುದ್ದಿ ಎಂತರ? ಒಳ್ಳೆದೋ? ಅಲ್ಲ!
ಅದೇ – ಆಶಾ ಹೋಗಿ ವಿಷ ಆದ ಕತೆ!
ಇದೇವ ಆಶನ ಕತೆ ಅಪ್ಪಾ? – ಹೇದು ಚೂರಿಬೈಲು ದೀಪಕ್ಕನೂ, ದೊಡ್ಡಮಾಣಿ ಶಾಂಬಾವನೂ ಕೆಮಿಕೊಟ್ಟು ಕೂರುಗು.
ಆದರೆ, ಇದು ಬೇರೆಯೇ ಆಶ, ನಮ್ಮ ಬೈಲಿಂಗೆ ಸಮ್ಮಂದ ಇರ್ತೋರು ಅಲ್ಲ.

~

ಮದಲೇ ಹೇಳ್ತೆ – ಒಪ್ಪಣ್ಣಂಗೆ ಈ ಜೆನರ ಕಂಡು ಗುರ್ತ ಇಲ್ಲೆ. ಆರೋ ಹೇಳಿದ್ಸರ ಕೇಳಿ ಮಾಂತ್ರ ಗುರ್ತ.
ಚುಬ್ಬಣ್ಣನ ಮಡಿಕ್ಕೇರಿ ಇದ್ದಲ್ಲದೋ – ಅಲ್ಲಿಂದಲೂ ಮುಂದೆ ವಿರಾಜುಪೇಟೆ ಹೇದು ಒಂದು ಊರು.
ಅಲ್ಲಿ ಒಂದು ಬಡ ಕುಟುಂಬ ಅಡ. ಭೀಮಣ್ಣನೋ, ಚೋಮಣ್ಣನೋ ಯೇವದೋ ಒಂದು ಪಾಪದ ಸಜ್ಜನ.
ಅದರ ಕುಟುಂಬ ಸಂಸಾರದ ಹೊಣೆ ನಿರ್ವಹಿಸಲೆ ಒಂದು ಬ್ಯಾರಿಗಳ ಮನೆಗೆ ಕೆಲಸಕ್ಕೆ ಹೋಗಿಂಡಿತ್ತು.
ಆ ದಣಿಗೊಕ್ಕೆ ಒಂದು ಗುರ್ತದ ಜೆನ ಇದ್ದತ್ತು; ಕೊಡೆಯಾಲದ್ದು.
ಅದು ಮಡಿಕ್ಕೇರಿಲಿ ಕಾರು ಓಡುಸಿಗೊಂಡು ಇದ್ದತ್ತಾಡ. ರಝಾಕೋ, ಇಬ್ರಾಯಿಯೋ- ಎಂತ ಸುಡುಗ್ಗಾಡು, ಕುಟ್ಟಂಗಳ ಹೆಸರು ನವಗೆ ನೆಂಪೊಳಿತ್ತಿಲ್ಲೆ.
ಇರಳಿ, ಒಂದು ಮಾಪಳೆ ಇದ್ದತ್ತು, ಈ ಭೀಮಣ್ಣ ಕೆಲಸಕ್ಕೆ ಬತ್ತ ಮನೆಯೇ ಅದಕ್ಕೆ ನೆಂಟ್ರು.

ಭೀಮಣ್ಣನ ಒಟ್ಟಿಂಗೆ ಒಂದೋಂದರಿ ಅದರ ಮಗಳೂ ಆ ಮನೆಗೆ ಹೋಗಿಂಡಿತ್ತಾಡ.
ಕೆಲಸಕ್ಕೇ ಹೋಗಿಂಡಿದ್ದದೋ, ಅಲ್ಲ ಸಂಗಾತಕ್ಕೆ ಹೋಗಿಂಡಿದ್ದದೋ – ನವಗರಡಿಯ. ಅಂತೂ, ಹೋಗಿಂಡಿತ್ತು.
ಒಂದರಿ, ಆ ಕೂಸು ಹೋಗಿಪ್ಪಗಳೇ – ಆ ಕುಟ್ಟನೂ ಹರುದುಬಿದ್ದಿದ್ದತ್ತು. ಇಬ್ರೂ ಅತ್ತಿತ್ತೆ ನೋಡಿಗೊಂಡವು, ಮುಖಪರಿಚಯ ಆತು.
ಕ್ರಮೇಣ ಅವರ ಭೇಟಿ – ಪರಿಚಯ ಅಂಬಗಂಬಗ ಆತೋ ಏನೋ, ಸಲೀಸಾಗಿ ಗುರ್ತವೂ ಆತೋ; ಮಾತುಕತೆಯೂ ಸುರು ಆತು.
ನೂರೊಂದು ನೆನಪೂ – ಹೇದು ರಾಗಲ್ಲಿ ಹೇಳ್ತ ವಿಷ್ಣುವರ್ಧನ ಹಾಂಗೆ ಕಂಡತ್ತೋ ಏನೋ ಆ ಕೂಸಿಂಗೆ; ಕುಟ್ಟನ ಮೇಗೆ ಮನಸಾತು.
ಪ್ರೀತಿ ಉಕ್ಕಿ ಹರುದತ್ತು. ಹರುದ್ದು ಹೇದರೆ, ಪುನಾ ಹೊಲುದು ಸರಿ ಮಾಡ್ಳೆಡಿಯದ್ದಷ್ಟು ಹರುದತ್ತು!
“ನಾವು ಮದುವೆ ಅಪ್ಪೊ°” ಹೇಳಿತ್ತು ಆ ಕುಟ್ಟ. ಇದು ತಲೆ ಆಡುಸಿತ್ತೋ ಏನೋ, ಒಪ್ಪಿತ್ತು.
ಆದರೊಂದು ವಿಷಯ – ಕುಟ್ಟನ ಮದುವೆ ಆಯೇಕಾರೆ ಇದುದೇ ಅದರ ಧರ್ಮಕ್ಕೇ ಸೇರೇಕಿದಾ!!
ಸೇರದ್ದೆ ಉಪಾಯ ಇಲ್ಲೆ; ಅಷ್ಟಪ್ಪಗಳೇ ಸುಮಾರು ದೂರ ಬಂದಾಯಿದು.

ಆ ನತದೃಷ್ಟೆ ಕೂಸಿನ ಹೆಸರೇ “ಆಶಾ” ಹೇದು.

~

ಅಶಕ್ತ ಅಪ್ಪನ ದುಡಿಮೆಲಿ ಬದ್ಕಿಂಡಿದ್ದ ಕೂಸಿನ ಮನಸ್ಸು ಮರುಳು ಮಾಡಿದ ಈ ಕುಟ್ಟ – ಒಂದು ಮೂರ್ತ ನೋಡಿ ಹಾರ್ಸಿತ್ತು.
ಪುಷ್ಪಕ ವಿಮಾನ ಇದ್ದನ್ನೇ – ಅದರದ್ದೇ ಕಾರು. ಸೀತಾ ತೆಕ್ಕೊಂಡು ಹೋದ್ಸು – ಪೊನ್ನಾನಿಗೆ.
ಪೊಣ್ಣುಗಳ ಮತಾಂತರ ಮಾಡ್ಳೇ ಪೊನ್ನಾನಿ ಇಪ್ಪದು – ಹೇದು ಸುಭಗಣ್ಣ ಒಂದೊಂದರಿ ಪೆನ್ನು ಇಲ್ಲದ್ದೇ ಪನ್ನು ಮಾಡ್ಳಿದ್ದು.
ಅಪ್ಪಡ – ಪೊನ್ನಾನಿಲಿ ಧಾರ್ಮಿಕ ಶಾಲೆ ಒಂದಿದ್ದಡ. ಅದರ್ಲಿ ಕುರಾನು, ನಮಾಜು, ಭಾರತದ ಬಗ್ಗೆ, ಹಿಂದುತ್ವದ ಬಗ್ಗೆ ದ್ವೇಷ – ಎಲ್ಲವುದೇ ಹೇಳಿ ಕೊಡ್ತವಡ, ಧರ್ಮಕ್ಕೇ.
ಮರುಳು ಮಾತಿಂಗೆ ಗುಂಡಿಗೆ ಬಿದ್ದ ಎಲ್ಲಾ ಕೂಸುಗಳೂ ಮದಾಲು ಹೋಗಿ ಬೀಳುದು ಆ ಪೊನ್ನಾನಿಗೇ.
ಪೊನ್ನಾನಿಗೆ ಹೋಪಗ ಸುಂದರಿ ಕುಂಕುಮ ಶೋಭಿತೆ ಸುಶೀಲೆ ಸೌಭಾಗ್ಯವತಿ ಆಗಿರ್ತವು.
ಅಲ್ಲಿಂದ ಬಪ್ಪಗ ಶೀಲ, ಧರ್ಮ, ನೀತಿ, ರೂಪ – ಎಲ್ಲವನ್ನೂ ಕಳಕ್ಕೊಂಡು ಮೈತುಂಬಾ ವೈಧವ್ಯ ತುಂಬಿಗೊಂಡು ಬತ್ತವು.

ಆಶಂಗೂ ಹಾಂಗೇ ಆತು.
ಹೋಪಗ ಕೂಸು; ಬಪ್ಪಗ ಬ್ಯಾರ್ತಿ.
ಹೋಪಗ ಸುಮಂಗಲಿ – ಬಪ್ಪಗ ವೈಧವ್ಯ.
ಹೋಪಗ ಅಲಂಕೃತೆ – ಬಪ್ಪಗ ಕರಿಗುಡಿ.
ಹೋಪಗ ಸರ್ವ ಸ್ವತಂತ್ರೆ – ಬಪ್ಪಗ ಬುರ್ಖಾದೊಳ ಬಂಧಿ.
ಹೋಪಗ ಯತ್ರ ನಾರ್ಯಸ್ತು ಪೂಜ್ಯಂತೇ – ಬಪ್ಪಗ ಬುರ್ಖ ತೆಗದರೆ ಜಾಗ್ರತೆ!!

ಹಳೆ ಧರ್ಮದ ಲವಲೇಷವೂ ಒಳಿಯದ್ದ ನಮುನೆಲಿ ಪೂರ್ತಿ ಉದ್ದಿ ತೆಗದು, ಹೊಸ ಧರ್ಮದ ವಿಷಬೀಜವ ಬಿತ್ತಿಯೇ ಕಳುಸುತ್ತವು ಅಲ್ಲಿ.
ಹಿಂದುತ್ವದ ಅಂಶವ ಎಳದು ತೆಗವಗ, ಅದರೊಟ್ಟಿಂಗೆ ಬೇರೆಂತೆಲ್ಲ ತೆಗೆತ್ತವೋ – ಉಮ್ಮಪ್ಪ! ಪುಣ್ಯ, ಜೀವ ಒಂದು ಒಳುದ್ದನ್ನೇ.

ಅಂತೂ – ಹೆರ ಬಂದ ಮತ್ತೆ ಬೇರೆಂತೆ ಅವಕಾಶ ಇದ್ದು? ಈ ಕುಟ್ಟನ ಮದುವೆ ಅಪ್ಪದೊಂದೇ ಇಪ್ಪದು.
ಆ ಕುಟ್ಟಂಗೆ ಅದೊಂದು ಬಿಸಿನೆಸ್ಸು – ಅದಕ್ಕೆ ಮದಲೇ ಒಂದು ಮದುವೆ ಆಗಿದ್ದತ್ತು.
ಈಗ ಇನ್ನೊಂದು ಮದುವೆ – ಅದೂ ಹಿಂದೂ ಕೂಸಿನ ಮದುವೆ ಆದರೆ ಅದಕ್ಕೆ ಲಕ್ಷಗಟ್ಳೆ ಪೈಸೆ ಬತ್ತು.
ಬಪ್ಪದೆಲ್ಲಿಂದ?
ಅದುವೇ ದೊಡ್ಡ ಕತೆ!

~

ಅಶಾಂತಿಪ್ರಿಯ ಧರ್ಮ ಆದ ಆ ಧರ್ಮಲ್ಲಿ ತಲೆಮಾಸಿದ ಕೆಲವು ಧರ್ಮ ಪಂಡಿತರು ಇದ್ದವು.
ಜಿಹಾದು ಮಾಡಿ ಜೆನಂಗಳ ಕೊಲ್ಲೇಕಿದಾ, ಬರೇ ಬೋಂಬು ಮಡಗುದಾದರೆ ಎಲ್ಲೋರನ್ನೂ ನಿರ್ನಾಮ ಮಾಡ್ಳೆ ತುಂಬ ಸಮೆಯ ಬೇಕಕ್ಕು ಹೇದು – ಪ್ರೀತಿಯ ಮೂಲಕ ಜಿಹಾದುಮಾಡುವೊ° – ಹೇದು ಹೊಸ ದಾರಿಯ ಹುಡ್ಕಿಂಡವು.
ಒಂದು ಕೂಸಿನ ಹಿಂದೂ ಧರ್ಮಂದ ತೆಕ್ಕೊಂಡು ಅವರ ಧರ್ಮಕ್ಕೆ ಮತಾಂತರ ಮಾಡಿರೆ – ಲಾಭ ಎಷ್ಟು?
ಹಿಂದು ಧರ್ಮಲ್ಲಿ ಒಂದು ಜೆನ ಕಮ್ಮಿ, ಶತ್ರುಪಾಳಯಲ್ಲಿ ಒಂದು ಜೆನ ಹೆಚ್ಚು.
ಅಷ್ಟು ಮಾಂತ್ರ ಅಲ್ಲದ್ದೆ, ಅದು ಹೆರುವ ಎಲ್ಲಾ ಸಂತಾನವೂ ಹಿಂದೂ ಧರ್ಮಕ್ಕೆ ಬೋಂಬು ಮಡಗಲೇ ಹುಟ್ಟುವಂತಾದ್ದು!

ಆ ಲೆಕ್ಕಲ್ಲಿ, ಮದುವೆ ಅಪ್ಪ ಪ್ರಾಯದ, ಮದುವೆ ಆದ, ಮದುವೆ ಆಗಿ ಬಿಟ್ಟ – ಕೂಸು, ಹೆಮ್ಮಕ್ಕೊ, ಹೆಣ್ಣುಗೊ
– ಎಲ್ಲೋರನ್ನೂ ಹುಡ್ಕಿ ಹುಡ್ಕಿ ಬಲೆ ಬೀಸುತ್ತವಾಡ.

ಆ ಬಲೆ ತುಂಬಾ ದೊಡ್ಡ ಇದ್ದು ಒಪ್ಪಣ್ಣಾ – ಹೇದು ಒಂದೊಂದರಿ ಕೈರಂಗಳ ದೊಡ್ಡಮ್ಮ ಹೇಳುದಿದ್ದು.  ಅವಕ್ಕೆ ಮಠಲ್ಲಿ ಸಿಕ್ಕಿದ ಆರೋ ಹೆಮ್ಮಕ್ಕೊ ಹೇಳಿಗೊಂಡು ಇಪ್ಪದು ಕೇಳಿ ವಿಷಯಂಗೊ ಪೂರಾ ಅರಡಿಗು ಇದಾ!
ಆ ಬಲೆ ಹೇಂಗಿರ್ತು? ನವಗೆ ಆಲೋಚನೆಯೂ ಮಾಡ್ಳೆ ಕಷ್ಟ.
ಒಂದು ಜೆನಕ್ಕೆ “ಇಂತಾಲ್ಲಿ ಒಂದು ಕೂಸು ಇದ್ದು” ಹೇದು ತಿಳಿಸ್ಸು ಕೆಲಸ. ಅದು ತಿಳುದ ಮಾಹಿತಿಯ ಮೊಯಿಲಾರಿಗೆ ಕೊಟ್ರೆ ಆತು.
ಎರಡು ದಿನಲ್ಲಿ ಆ ಮನೆಗೆ ಜೆನ ಬತ್ತು – ಗುಜಿರೆ ತೆಗವಲೋ, ಹಳೆ ಪೇಪರು ತೆಗವಲೋ, ಹೋರಿಕಂಜಿ ತೆಗವಲೋ – ಎಂತಾರು ನೆಪ ಹೇಳಿಗೊಂಡು.
ಆ ಕೂಸಿನ ಮನೆಯ ಸ್ಥಿತಿಗತಿ ಎಂತರ, ಅವರ ಸಾಮಾಜಿಕ ಸಂಪರ್ಕ ಯೇವ ನಮುನೆದು, ಪರಿಸರ ಎಂತದು – ಎಲ್ಲವುದೇ ತಿಳ್ಕೊಂಡು ಮೊಯಿಲಾರಿಗೆ ಹೇಳ್ತ ಕೆಲಸ ಅವರದ್ದು.
ಮತ್ತಾಣ ಹಂತ – ಕೂಸಿಂಗೆ ಗಾಳ.
ಕೂಸು ಎಲ್ಲಿರ್ತು, ಎಂತ ಮಾಡ್ತೋ – ಅದಕ್ಕೆ ಅನುರೂಪವಾದ ಒಂದು ಕುಟ್ಟಂಗೆ ಆ ಜೆಬಾದಾರಿಕೆ.
ಕೂಸು ಕೋಲೇಜಿಂಗೆ ಹೋಪದಾದರೆ ಕೋಲೇಜಿನ ಆಸುಪಾಸಿನ ಕುಟ್ಟ, ಕೂಸು ಫೇನ್ಸಿ ಅಂಗುಡಿಲಿ ಕೆಲಸ ಆದರೆ ಅದರಲ್ಲೇ ಕೆಲಸ ಇಪ್ಪ ಒಂದು ಕುಟ್ಟಂಗೆ ಆ ಜೆಬಾದಾರಿ, ಕೂಸು ಕೆಲಸಕ್ಕೆ ಹೋಪದಾದರೆ ಕೆಲಸದ ಕಂತ್ರಾಟು ತೆಕ್ಕೊಂಬ ಕುಟ್ಟಂಗೆ ಅದರ ಜೆಬಾದಾರಿಕೆ- ಅಂತೂ ಒಂದು ಜೆನ ಕೂಸಿನ ಹತ್ತರೆ ನೆಗೆ ಮಾಡಿ ಮಾತಾಡ್ಸುವ ಸಂಪರ್ಕಕ್ಕೆ ಹರುದು ಬೀಳ್ತು.
ಆಶಂಗೂ ಅದೇ ಆದ್ಸು, ಆ ಕುಟ್ಟ ಚೆಂದಲ್ಲಿ ಪ್ರೀತಿಲಿ ಮಾತಾಡಿ ಬಲೆಗೆ ಬೀಳ್ಸಿತ್ತು.
ಅದು ಎದುರೆ ಬಂದು ಮಾತಾಡ್ಸಿರೂ, ಅದರ ಹಿಂದೆ ಬಹು ದೊಡ್ಡ ಬಲೆ ಇದ್ದು – ಹೇಳ್ತ ಸತ್ಯ ಅದಕ್ಕೆ ಅರಡಿವಗ ಕೈಲಿ ಎರಡು ಮಕ್ಕಳೂ ಆಗಿ ಹೋಗಿತ್ತವು.
ಮಡಿಕ್ಕೇರಿಂದ ಪೊನ್ನಾನಿಗೆ ಎತ್ತುವಾಗ ಆ ಕೂಸು ಎಷ್ಟು ಕೈ ಬದಲಿದ್ದೋ – ದೇವರಿಂಗೇ ಗೊಂತು!

ಇದಕ್ಕೆಲ್ಲದಕ್ಕೂ ಪೈಶೆ ಹೆರದೇಶಂದ ಬತ್ತಾಡ.
ಕಪ್ಪು ನೋಟು, ಕಳ್ಳ ನೋಟು, ಚಿನ್ನ ಸಾಗಾಣಿಕೆ, ದಾವೂದು ಇಬ್ರಾಹಿಂ – ಎಲ್ಲವೂ ಬೆರಕ್ಕೆ ಆಗಿ ನವಗಾರಿಂಗೂ ಗ್ರೇಶಲೆಡಿಯದ್ದಷ್ಟು ಪೈಶೆ ಈ ವಿಷಯಕ್ಕೆ ತಿರುಗೆಂಡು ಇದ್ದಡ.

~

ಅಂತೂ – ಆಶಾ ಇಪ್ಪದು ಆಯಿಶಾ ಆತು.
ಧರ್ಮಾಂತರ ಆಗಿ ಬಪ್ಪನ್ನಾರ ಪ್ರೀತಿಯ ನಾಟಕ. ಅಷ್ಟಾಗಿ ಒಪಾಸು ಬಂದಪ್ಪದ್ದೇ – ಆ ಕುಟ್ಟಂಗೆ ಪೈಶೆ ಬತ್ತಲ್ಲದೋ..
ಮತ್ತೆ ಈ ಬ್ಯಾರ್ತಿ ಬೇಡ.  ಅದರ ಮದಲಾಣ ಬ್ಯಾರ್ತಿಗೂ, ಈ ಬ್ಯಾರ್ತಿಗೂ ಒಟ್ಟಿಂಗೇ ಟಾಟ ಮಾಡಿ ಸೀತ ದುಬಾಯಿಗೆ ವಿಮಾನ ಹತ್ತುಗು.
ಅಲ್ಲದ್ದರೆ ಮತ್ತೊಂದು ಬ್ಯಾರ್ತಿ ಕಟ್ಟಿಗೊಂಗು; ಎಂತ ಬೇಕಾರೂ ಮಾಡುಗು. ಕೇಳುವೋರು ಆರಿದ್ದವು!
ಅವಕ್ಕೆ ಹೇಂಗಾರೂ ಏಕಕಾಲಕ್ಕೇ ನಾಕು ಬ್ಯಾರ್ತಿಗಳ ಕಟ್ಟಿಗೊಂಬಲಕ್ಕು.
ಐದನೇದು ಬೇಕು ಹೇಳಿ ಆದರೆ ನಾಲ್ಕರಲ್ಲಿ ಒಂದರ – ಒಂದರಿಯಂಗೆ – ಬಿಟ್ರೆ ಆತು.
ಸ್ತ್ರೀಯರಿಂಗೆ ಸಮಾನತೆಯ ಮಾತು ಬಿಡಿ, ಮರಿಯಾದಿಯೇ ಇಲ್ಲದ್ದ ಧರ್ಮ ಹೇದರೆ ಅದುವೇ ಆ ಅಶಾಂತಿಪ್ರಿಯಧರ್ಮ – ಹೇದು ಗುಣಾಜೆಮಾಣಿ ಒಂದೊಂದರಿ ಹೇಳುಲಿದ್ದು.
ಅವ ಹೇಳುದರ್ಲಿ ಸತ್ಯವೂ ಇರ್ತು!
ಅದಿರಳಿ, ಮಾತಾಡ್ಳೆ ಹೆರಟು ಎಲ್ಲೆಲ್ಲಿಗೋ ಹೋವುತ್ತು ಒಂದೊಂದರಿ.

~

ಹಾಂಗೆ, ಆಶ ಆಯೆಷಾ ಆಗಿ ಬಂತು. ಬಂದು?
ಶರ್ಮಪ್ಪಚ್ಚಿಯ ಮನೆಕರೆಲಿ ಒಂದು ಟ್ರಾನ್ಸುವರು ಪೆಟ್ಟಿಗೆ ಇಲ್ಲೆಯೋ –  ಅಲ್ಲೇ ಆಚಿಕೆ ಒಂದು ಸಣ್ಣ ಬಿಡಾರಲ್ಲಿ ಇತ್ತಿದ್ದವು.
ಸಂಸಾರವೂ ಬೆಳದತ್ತು. ಎಲ್ಲವುದೇ ಮುಂದೊಂದು ದಿನ ಭದ್ರ ಭಾರತಕ್ಕೆ ಬೋಂಬು ಮಡಗಲಿಪ್ಪ ಸಂತಾನವೇ ಇದಾ!
ಹೀಂಗೆ ಕುಟ್ಟಂಗಳ ಹುಟ್ಟುಸಿರೆ ಸಾಕೋ ಸಾಂಕೆಡದೋ?
ಸಾಂಕೇಕಾರೆ ದುಡಿಯೆಡದೋ?
ದುಡಿಯೇಕಾರೆ ಮೈ ಬಗ್ಗುಸೆಡದೋ?
ಮೈ ಬಗ್ಗುಸಿರೆ ಬಚ್ಚುತ್ತಿಲ್ಲೆಯೋ?

ಅಂಬಗ, ಬಚ್ಚದ್ದೆ, ಮೈ ಬಗ್ಗುಸದ್ದೆ ಒಳ್ಳೆ ಪೈಶೆ ಬಪ್ಪ ದಾರಿ ಯೇವದಿದ್ದು?
ಅದೇ – ಆಗ ಹೇಳಿದಾಂಗೆ ಕಪ್ಪು ಹಣ, ಕಳ್ಳ ಹಣ ಇತ್ಯಾದಿಗಳ ದಾರಿ.
ಇವಕ್ಕೂ ಅದೇ ದಾರಿಯ ರುಚಿ ಸಿಕ್ಕಿತ್ತು ಹೇಂಗೋ.

~

ಭಾರತಲ್ಲಿ ಎಲ್ಲಿಯೋ – ಆರೋ – ಬೋಂಬು ಮಡಗಲೆ ಏರ್ಪಾಡು ಮಾಡ್ತವು ಮಡಿಕ್ಕೊಳಿ.
ಆ ಬೋಂಬು ಕಟ್ಳೆ, ತಪ್ಪಲೆ, ಹೊರ್ಲೆ – ಎಲ್ಲದಕ್ಕೂ ಮಜೂರಿ ಆವುತ್ತಿಲ್ಲೆಯೋ, ಹತ್ಯಾರುಗೊಕ್ಕೆ ಕ್ರಯ ಇರ್ತಿಲ್ಲೆಯೋ – ಇದೆಲ್ಲದಕ್ಕೂ ಪೈಶೆ ಆಗೆಡದೋ?
ಅದುವೇ ನಮ್ಮ ಪಾತಕಿಸ್ಥಾನಂದ ಧಾರೆಧಾರೆಯಾಗಿ ಹರುದು ಬತ್ತಿದಾ!
ಹಾಂಗೆ ಬಪ್ಪದು ಎಲ್ಲಿಗೆ? ಭಾರತಲ್ಲಿಪ್ಪ ಆರಾರು ಮುಗ್ಧವಾಗಿ ಕಾಂಬೋರ ಬೇಂಕಿನ ಖಾತೆಗೆ.
ಈ ಆಶಾನ ಎಕೌಂಟಿಂಗೂ ಆದ ಕತೆ ಅದೇ ಆತಾಡ. ಪಾತಕಿಸ್ಥಾನಂದ ಲಕ್ಷಗಟ್ಳೆ ಪೈಶೆ ಬಂದು ಸೊರುಗಿ ಬೀಳ್ತು.
ಅದರೊಟ್ಟಿಂಗೇ ಒಂದು ಸೂಚನೆಯೂ ಬತ್ತು; ಇಂತಾ ಎಕೌಂಟಿಂಗೆ ಇಂತಿಷ್ಟು ಪೈಶೆ ಹಾಕು – ಹೇದು.
ಲಕ್ಷಗಟ್ಳೆ ಪೈಶೆಯ ವಿಲೇವಾರಿ ಮಾಡಿದ್ದಕ್ಕೆ ಸಾವಿರಗಟ್ಳೆಲಿ ತೇಮಾನು – ಇದಕ್ಕೆ.
ಕೂದಲ್ಲಿಯಂಗೇ – ಒಂದರಿ ಪೈಶೆ ತೆಗದು ಇನ್ನೊಂದು ಎಕೌಂಟಿಂಗೆ ಹಾಕಿದ್ದಕ್ಕೆ –ಎಷ್ಟು ಪೈಶೆ!!

ಸಿಕ್ಕಿದ ಲಾಭಾಂಶಲ್ಲಿ ಅರ್ಧ ರಾತ್ರಿಲೇ ಕೊಡೆ ಹಿಡಿತ್ತ ಹಾಂಗಾತು.
ಬಾಡಿಗೆ ಮನೆಂದ ಒಂದೇ ಸರ್ತಿ ಸ್ವಂತ ಮನೆಗೆ – ಅದೂ ಕೊಡೆಯಾಲ ಪೇಟೆಲಿ – ಸ್ವಂತ ಮನೆ ಮಾಡಿ ಅದಕ್ಕೆ ಬಂದವು.
ಮನೆ ಎದುರು ನಿಂಬಲೆ ಎರಡು ಮೂರು ಬೇರೆಬೇರೆ ನಮುನೆಯ ಕಾರುಗೊ ಬಂತು,
ಅಂಗುಡಿ ಮೂರು ನಾಕು ಮಡಗಲೆ ತಕ್ಕ ಬಂಡ್ವಾಳ ಬಂತು.
ಎಲ್ಲವುದೇ ಬೆಗರು ಹರುಶದ್ದ ಕೆಲಸಲ್ಲೇ ಆದ ಬಗೆ.

ಹಾಂಗೇ ಮಾಡಿ ಬದ್ಕಿತ್ತು ಆ-ವಿಶ.

ಭಾರತಾಂಬೆಯ ಮಡಿಲಿಂಗೆ ಬೋಂಬು ಮಡಗಲಿಪ್ಪ ಪೈಶೆಯ ವಿಲೇವಾರಿ ತಾನು ಮಾಡ್ತಾ ಇಪ್ಪದು – ಹೇದು ಆ ಹೆಣ್ಣಿಂಗೆ ಗೊಂತಿತ್ತೋ?
ಗೊಂತಿದ್ದೂ ಮಾಡಿಗೊಂಡಿದ್ದದೋ?
ಗೊಂತಿಲ್ಲದ್ದೇ ಮಾಡಿಗೊಂಡಿದ್ದದೋ?
ಗೆಂಡನ ಹೆದರಿಕೆಲಿ ಆ ಕಾರ್ಯ ಮಾಡಿಂಡಿದ್ದದೋ?
ಒಂದೂ ಅರಡಿಯ! ಅಂತೂ – ಹೊಟ್ಟೆ ಹಶುವಿಂಗೆ ಎಂತಾರು ಕಾರ್ಯ ಆಯೇಕನ್ನೇ – ಮಾಡಿತ್ತು.

~

ಅಧರ್ಮದ ಯೇವ ಕಾರ್ಯವೂ ಹೆಚ್ಚು ಸಮೆಯ ಮುಚ್ಚಿ ಮಡಗಲೆಡಿಯ.
ಇಲ್ಲಿಯೂ ಹಾಂಗೇ ಆತು; ಪೋಲೀಸರು ಬಂದು ಈ ಹುಳುವಿನ ಸಂಸಾರವ ಹುಡ್ಕಿ ತೆಕ್ಕೊಂಡು ಹೋಯಿದವು.
ಎಲ್ಲವನ್ನೂ ವಿಷಯ ಬೆಲಕ್ಕಿ ಹೆರ ತೆಗಗು. ಈ ನಮುನೆ ಹುಳುಗೊ ಎಷ್ಟಿದ್ದವು- ಎಲ್ಲೋರನ್ನೂ ಜೈಲಿನೊಳ ಹಾಕೇಕು – ಹೇಳ್ತದು ನಮ್ಮ ಮನಸ್ಸಿಲಿಪ್ಪ ಆಶೆ.

ಆದರೆ, ಅದೆಲ್ಲದರಿಂದ ಹಿಂದೆ – ಒಪ್ಪಣ್ಣಂಗೆ ಅನುಸುದು ಎಂತರ ಹೇದರೆ,
ಪಾಪ – ಚೆಂದಲ್ಲಿ ಬದ್ಕುವ ಅವಕಾಶ ಇದ್ದಿದ್ದ ಆ ಆಶ  – ಕ್ಷಣಿಕ ಮನೋದೌರ್ಬಲ್ಯಲ್ಲಿ ಇಂತಾ ಗೆತಿಕೆಟ್ಟ ಕುಟ್ಟನ ಕಟ್ಟಿಗೊಂಡತ್ತನ್ನೇ.
ಧರ್ಮವನ್ನೇ ಬಿಟ್ಟು ವೈಧವ್ಯಲ್ಲಿ ಬದ್ಕೇಕಾತನ್ನೇ..
ಹೊಟ್ಟೆ ತುಂಬುಸಲೆ ಬೇಕಾಗಿ ಭಾರತಮಾತೆಗೇ ಬೋಂಬು ಮಡಗಲೆ ಸಕಾಯ ಮಾಡಿತ್ತನ್ನೇ – ಹೇದು.

ನೋಡಿಗೊಳ್ಳಿ, ನಮ್ಮ ನೆರೆಕರೆ ಕೂಸುಗೊ ಆರಾರು ಎಚ್ಚರಿಗೆ ತಪ್ಪಿ ಯೇವದಾರು ಕುಟ್ಟಂಗಳ ಹಿಂದೆ ಹೋದರೆ ಈ ಎಲ್ಲ ವಿಷಯಂಗಳ ನೆಂಪು ಮಡಗಿ.
ಅವುದೇ ಧರ್ಮ ಬಿಟ್ಟ ವೈಧವ್ಯಲ್ಲಿರ್ತವು;
ಎಷ್ಟೋ ಸವತಿಯರ ಒಟ್ಟಿಂಗೆ ಬದ್ಕುತ್ತವು;
ಎಷ್ಟೋ ಮಕ್ಕಳ ಹೆತ್ತು ಹೆತ್ತು – ಹೆರಿಗೆಯ ಮಿಷನು ಆಗಿ ಹೋವುತ್ತವು;
ಎಲ್ಲಕ್ಕಿಂತ ಮುಖ್ಯವಾಗಿ, ಸಂಸಾರದ ಹೊಟ್ಟೆ ತುಂಬುಸಲೆ ಹೀಂಗಿಪ್ಪ ದೇಶದ್ರೋಹದ ಕೆಲಸ ಮಾಡ್ತವು!

ಹಾಂಗಾಗಿ, ಬೆಳಗೆ ಬೇಲಿ ಹಾಕುವೊ°.
ನಮ್ಮ ತೋಟ, ನಮ್ಮ ಮನೆ, ನಮ್ಮ ಸಂಸಾರ, ನಮ್ಮ ಕುಟುಂಬ, ನಮ್ಮ ಸಮಾಜವ – ನಾವು ಒಳಿಶಿಗೊಂಡ್ರೆ ದೇಶವನ್ನೇ ಒಳುಶಿಗೊಂಡ ಪುಣ್ಯ ಬಕ್ಕು.

ನಮ್ಮ ನೆರೆಕರೆಯ “ಆಶ” ಅಕ್ಕಂದ್ರ ನಾವು ಒಳಿಶುವೊ°.
ಅವು ಆಯೆಶಂಗೊ ಆಗಿ ದೇಶಕ್ಕೇ ವಿಷ ಹಾಕದ್ದ ಹಾಂಗೆ ನಾವು ನೋಡಿಗೊಂಬೊ°. ಆಗದೋ?

~

ಒಂದೊಪ್ಪ: ಆಶ್ರಯ ಕೊಟ್ಟ ಅಬ್ಬೆಗೇ ವಿಷ ಹಾಕುವ ಕ್ರೂರತೆ ತುಂಬಿದ ಧರ್ಮಲ್ಲಿ ಎಂತ ಆಶೆ ಮಡಿಕ್ಕೊಂಬಲೆಡಿಗು?

ಸೂ:
ಸದರಿ ವಿಶಯದ ಬಗ್ಗೆ ಪೇಪರಿಲಿ ಬಂದ ವರದಿ.

ಆಶಾ-ಆಯೆಶಾ-ವಿಷ!!
ಆಶಾ-ಆಯೆಶಾ-ವಿಷ!!

18 thoughts on “ಆಶಾ ಹೋಗಿ ಆಯಿಶಾ ಆತು; ಭಾರತಕ್ಕೇ ವಿಷ ಆತು..!

  1. ಕೂಸುಗೊಕ್ಕೆ ಮಾತ್ರ ಹಾಂಗೆ ಮಾಡ್ಲೆ ಆಗ ಹೀಂಗೆ ಮಾಡ್ಲೆ ಆಗ ಹೇಳಿ ಬುಧ್ಧಿ ಹೇಳಿ ಗುಣ ಇಲ್ಲೆ. ಇದು ಕೂಸುಗಳ ಹೆತ್ತವರುದೇ ರಜಾ ಅಲೋಚನೆ ಮಾಡೆಕ್ಕಾದ ವಿಶಯ. ಸಣ್ಣಾದಿಪ್ಪಗಳೇ ಒಳ್ಳೆಯ ದಾರಿಲಿ ಬೆಳೆಸಿದರೆ ದೊಡ್ಡಪ್ಪಗ ಅಷ್ಟು ಸುಲಾಭಲಿ ದಾರಿ ತಪ್ಪವು.

  2. ಹರೆರಾಮ ಸಂಸ್ಥಾನ. ಈ ಹೋರಾಟಲ್ಲಿ ಒಪ್ಪಣ್ಣ ಬಳಗದೋರ ಅಳಿಲು ಸೇವೆಗೆ ಶ್ರೀ ಗುರುಗಳ ಅಶೀರ್ವಾದ ಬೇಡಿಗೊಳ್ತೆಯೋ.

  3. ನಮ್ಮವರ ನಮ್ಮವಾಗಿಯೇ ಒಳಿಶುಲೆ ಹೋರಾಟ ಮಾಡೆಕ್ಕಾದ ಕಾಲ ಬಯಿಂದು!

    1. ಹರೇರಾಮ ಸಂಸ್ಥಾನ.
      ಮಾತೃಸ್ವರೂಪಿ ಶ್ರೀಗುರುಚರಣಂಗಳಲ್ಲಿ ಮನಸಾ ನಮನಂಗೊ.

      ಸಂಸ್ಥಾನ,
      ನಮ್ಮ ಸಮಾಜದ ಮಕ್ಕಳ ಮೇಲೆ ಆವುತ್ತಾ ಇದ್ದ ಕ್ಷುದ್ರಶಕ್ತಿಗಳ ಧಾಳಿ ಮತ್ತೆ ಅದರಂದ ಅಪ್ಪ ತೊಂದರೆಗಳ ನಾವು ನಿತ್ಯ ಕಾಣ್ತಾ ಇದ್ದು. ನಮ್ಮ ಸಮಾಜದ ಬಂಧುಗಳ ಎಲ್ಲೋರ ಆಂತರ್ಯಲ್ಲಿ ಇಪ್ಪ ಪ್ರತಿರೋಧಕ ಶಕ್ತಿ ಜಾಗೃತ ಅಪ್ಪಲೆ ಶ್ರೀರಾಮನ, ಶ್ರೀಪೀಠದ, ಶ್ರೀಸಂಸ್ಥಾನದ ಆಶೀರ್ವಾದ ರಕ್ಷೆ ಹರುದು ಬರಲಿ..
      ನಮ್ಮ ಸಮಾಜದ ಎಲ್ಲಾ… ಮಕ್ಕೊ ಶ್ರೀಪೀಠದ ಪರಿಧಿಯ ಒಳ ಬಂದು ಸುರಕ್ಷಿತರಾಗಿರಲಿ..
      ಶ್ರೀಸಂಸ್ಥಾನ ಮೊನ್ನೆ ಮಾಣಿ ಮಠಲ್ಲಿ ಹೇಳಿದ ಹಾಂಗೆ ಹುಟ್ಟುವಾಗ ನಮ್ಮ ಸನಾತನ ಸಂಸ್ಕೃತಿಲಿ ತೆಕ್ಕೊಂಡ ಉಸುಲು ಅಂತ್ಯ ಅಪ್ಪಗಳೂ ನಮ್ಮದೇ ಸಂಸ್ಕೃತಿಲಿ ಇರಲಿ ಹೇಳಿ…. ಇದು ಎಲ್ಲೋರಿಂಗೂ, ಯಾವಾಗಲೂ, ಪ್ರತಿ ನಿಮಿಷ ನೆಂಪಿದ್ದುಗೊಂಡು ತಾನೂ ಸುರಕ್ಷಿತವಾಗಿದ್ದು, ನಮ್ಮ ಹತ್ತರೆ ಇಪ್ಪೋರನ್ನೂ ಸುರಕ್ಷಿತರಾಗಿರಿಸಲಿ..
      ಶ್ರೀಗುರುಗಳ ಅನುಗ್ರಹ ಬೈಲಿನ, ಸಮಾಜದ, ವಿಶ್ವದ ಎಲ್ಲೋರ ಮೇಲೆ ಇರಲಿ..
      ಬೈಲಿಂಗೆ ಬಂದು ಅನುಗ್ರಹಿಸಿದ ಶ್ರೀಸಂಸ್ಥಾನಕ್ಕೆ ಮನದಾಳಂದ ನಮನಂಗೊ.
      ಹರೇರಾಮ.

      ಶ್ರೀಚರಣಂಗಳಲ್ಲಿ ಭಕ್ತಿಪೂರ್ವಕ ನಮನಂಗೊ.
      ಪೀಠದ ಶಿಷ್ಯೆ,
      ಶ್ರೀ..

  4. ಒಪ್ಪಣ್ಣ ಒಪ್ಪಕೆ ಬರೆದ್ದೆ..ಎ೦ತವಕ್ಕು ನಾಟುಗು. ..ಮುದಿನ ಜನಾ೦ಗದ ಜೀವನ ಕಲ್ಪಿಸುವಗ ಹೆದರಿಕೆ ಆವುತ್ತು..
    .ಈ ಸುದ್ದಿಯ ಎಲ್ಲ ಹಿ೦ದುಗೋ ಓದೆಕು.. ಪರಿಸ್ಥ್ರತಿ ಎಲ್ಲರಿಗೂ ಅರಿವಾಯಕು.. ಇನ್ನು ಮು೦ದೆ ಆದರೂ ಎಅರ ಆಯಕು ಒಪ್ಪಣ್ಣ… ಮತಾ೦ತರ ಆದರೆ ಮು೦ದಿನ ಜೀವನದ ಭೀಕರತೆ ಪ್ರತಿಯೊಬ್ಬರಿಗೂ ಗೊ೦ತಾದರೆ ಒಳೇದು…ಪೊರ್ಬುಗೊ ಮತಾ೦ತರ ಮಾಡ್ತವು ಹೇಳಿ ಪ್ರಸಿಧ್ಧಿ ಇದ್ದು.. ಈಗ ಬ್ಯಾರಿಗಳದ್ದು ಜೋರಿದ್ದು….
    ನಮ್ಮ ಮಕ್ಕಗೆ ನಮ್ಮ ಧರ್ಮದ ಮಹತ್ವ ,ಸಾರ ಅರಿವಿದ್ದರೆ, ಅಪ್ಪ ಅಮ್ಮ ಆತ್ಮೀಯ ಗೆಳೆಯ ಗೆಳತಿ ಯಾಗಿದ್ದರೆ, ಮಕ್ಕ ಅದರಲ್ಲೂ ಕೂಸುಗ ಹೆರ ಶಾಲೆ ಕಾಲೇಜಿಲಿ ಆರಸ್ನೇಹ ಮಾಡ್ತಿದ್ದೆ, ಚಾಕಲೇಟ್ ಯಾರುಕೊಟ್ಟಿದವು, ಎಲ್ಲೆಲಿಗೆ ಹೋಯಿದೆ ಹೇಳಿ ಮನಬಿಚ್ಚಿ ಅಮ್ಮ ನತ್ವರೆ ಸುದ್ದಿ ಹೇಳುವ ಅಭ್ಯಾಸ ನಾವೇ ಬೆಳೆಸಿರೆ ಅಪಾಯ ತಪ್ಪಿಸುಲೆ ಎಡಿಗು ಕಾಣುತ್ತು… ಅಪ್ಪ ಅಮ್ಮ೦ಗೆ ತು೦ಬ ತಾಳ್ಮೆಲಿ ಮಕ್ಕಳ ಮಾತು ಕೇಳುವ ಅಭ್ಯಾಸ ಬೇಕು.. ಇದು ಎನ್ನ ಅಭಿಪ್ರಾಯ…

  5. ವಾಸ್ತವ ಸಂಗತಿಯ ಮನಸ್ಸಿಂಗೆ ನಾಟುವ ಹಾಂಗೆ ನಿರೂಪಿಸಿದ ಒಪ್ಪಣ್ಣಂಗೆ-
    {ಹೋಪಗ ಯತ್ರ ನಾರ್ಯಸ್ತು ಪೂಜ್ಯಂತೇ – ಬಪ್ಪಗ ಬುರ್ಖ ತೆಗದರೆ ಜಾಗ್ರತೆ!!}-ತದ್ವಿರುದ್ಧ ಸಂಸ್ಕೃತಿ ಇಪ್ಪಲ್ಲಿಗೆ ಹಿಂದೂ ಕೂಸುಗೊ ಹೋಗಿ ಬೀಳ್ತವು ಹೇಳಿ ಆದರೆ, ಅವು ಮಾಡುವ ಮೋಡಿ ಎಂತದು?
    ಹಿಂದೂ ಧರ್ಮಂದ ಬಂದ ಕೂಸಿನ ಮುಸ್ಲಿಂ ಮತಕ್ಕೆ ಸೇರುಸಲೆ ಅವು ಪಡ್ತ ಶ್ರಮದಷ್ಟೆ ಕೆಲಸ/ಪ್ರಯತ್ನವ ನಾವು ಮಾಡಿರೆ, ನಮ್ಮವು ನಮ್ಮಲ್ಲಿಯೇ ಒಳಿವ ಸಾಧ್ಯತೆ ಇದ್ದೋ ಹೇಳಿ ಎನಗೆ ಕಾಂಬದು.
    ಐಶಾರಾಮಿ ಜೀವನದ ಕನಸು, ಮಕ್ಕಳ ಬಗ್ಗೆ ಅಬ್ಬೆ ಅಪ್ಪನ ನಿರ್ಲಿಪ್ತ ಧೋರಣೆ, ನಿರೀಕ್ಷಿಸಿದ ಪ್ರೀತಿ ಸಿಕ್ಕದ್ದ ಕುಟುಂಬ, ಇದೆಲ್ಲವೂ ಈ ಮತಾಂತರಕ್ಕೆ ಕಾರಣ ಅಪ್ಪ ಸಾಧ್ಯತೆಯೇ ಹೆಚ್ಚು.
    ಮಹಿಳೆಗೆ ಹಿಂದೂ ಧರ್ಮಲ್ಲಿ ಇಪ್ಪ ವಿಶೇಶ ಗೌರವ, ಸ್ಥಾನ ಮಾನ ಇನ್ನು ಯಾವ ಮತಂಗಳಲ್ಲಿ ಇಲ್ಲೆ ಹೇಳುವದರ ನಮ್ಮ ಕೂಸುಗೊಕ್ಕೆ ಅರ್ಥ ಆವ್ತ ಹಾಂಗೆ ತಿಳಿಶಿಕೊಡುವ ಜೆವಾಬ್ದಾರಿ/ಕರ್ತವ್ಯ ಹಿರಿಯರಿಂಗೆ ಇದ್ದು.

  6. ೭ ನೇ ಕ್ಲಾಸಿನ ಕೂಸಿನ ಮೇಲೆಯೇ ಈ ಕುಟ್ಟಂಗೊ ಕಣ್ಣು ಹಾಕಿದ್ದವು. ನಮ್ಮವರ ವಿಷಯಲ್ಲಿ ನಾವು ಮೈಯ್ಯೆಲ್ಲಾ ಕಣ್ಣಾಗಿದ್ದರೂ ಸಾಲ. ಆಶಾ ಆಗಿತ್ತಿದ್ದ ಆಯಿಶಾಳ ಬಾಳಿಲಿ ಆಶೆಯೇ ಇಲ್ಲದ್ದ ಹಾಂಗಾತು.

  7. ನಮ್ಮ ತಲೆಯೊಳ ಇಪ್ಪ ಬೊ೦ಡಿನ ಕು೦ಬು ಅಪ್ಪಲೆ ಬಿಡದ್ದೆ – ಯಾವದು ಸರಿ,ಯಾವದು ತಪ್ಪು,ಮು೦ದೆ ಏನೆಲ್ಲಾ ಅಕ್ಕು ರಜಾ ಮು೦ದಾಲೋಚನೆ ಮಾಡಿದರೆ ಹೀ೦ಗಿರ್ತ ಎಷ್ಟೋ ಅನರ್ಥ೦ಗಳ ತಪ್ಪುಸುಲೆಡಿಗು.
    ವೆ೦ಕಟ್ರಮಣ ಮಾವ ಹೇಳಿದ ಹಾ೦ಗೆ ಇ೦ದ್ರಾಣ ಸಾಧನ೦ಗೊ ಮಕ್ಕಳ ( ಕೂಸುಗಳ ಮಾ೦ತ್ರ ಅಲ್ಲ ಮಾಣ್ಯ೦ಗಳನ್ನೂ) ಲಗಾಡಿ ತೆಗೆತ್ತಾ ಇದ್ದು ಹೇಳ್ತದು ಬೇಜಾರಿನ ಸ೦ಗತಿ.

  8. ಓ ದೇವರೇ !ಇದು ಎಲ್ಲಿ ತನಕ ಎತ್ತುತ್ತು ಹೇಳಿ ಗೊಂತಾವುತ್ತಿಲ್ಲೇ
    ಲವ್ ಜಿಹಾದ್ ಬಗ್ಗೆ ಸುದ್ದಿ ಕೇಳುಲೆ ಸುರು ಆಗಿ ಸುಮಾರು 15 -20 ವರ್ಷ ಆತು !ಸುರುವಿನ್ಗೆ ಅಶಿಕ್ಷಿತ ಬಡ ಕುಟುಂಬದ ಹಿಂದೂ ಹುಡುಗಿಯರು ಬಲಿ ಆಗಿ ಕೊಂಡು ಇತ್ತಿದವು !ಈಗ ಸಾಕಷ್ಟು ಆಸ್ತಿ ಬದುಕು ಸಂಸ್ಕಾರ ವಿದ್ಯಾ ಭ್ಯಾಸ ಇಪ್ಪ ನಮ್ಮ ಸಮಾಜದ ಕೂಸುಗಳ ಖೆಡ್ಡಾಕ್ಕೆ ಬೀಳುಸುತ್ತಾ ಇದ್ದವು .ಇದಕಾಗಿ ಚಟ ಹಿಡಿಸುವ ಮಾದಕ ವಸ್ತುಗಳ ಕೂಡಾ ಬಳಕೆ ಮಾದುತ್ತವು. ಈ ರೀತಿ ಖೆಡ್ಡಾಕ್ಕೆ ಬೀಳುಸುಲೇ ಈ ಮತಾಂತರ /ಉಗ್ರಗಾಮಿಗಳ ಜಾಲಕ್ಕೆ ಅಂತರಾಷ್ಟ್ರೀಯ ಮಟ್ಟಲ್ಲಿ ತರ ಬೇತು ಕೊಡ್ತವಡ !
    ಒಂದೆಡೆಲಿ ಮಕ್ಕಳ ಕದ್ದುಗೊಂಡು ಹೋಗಿ ಮತಾಂತರ ಮಾಡಿ ಅವರ ಉಗ್ರ ಗಾಮಿಗ ಮಾಡಿ,ಕೈಲಿ ಚೆಂಡು ಹಿಡುದು ಆಡಕ್ಕಾದ ಮಕ್ಕಳ ಕೈಲಿ ಬಾಂಬ್ ಹಿಡಿಸುತ್ತವು !

    ಇಷ್ಟಾದರೂ ನಾವು ಆಯ್ಕೆ ಮಾಡಿ ಕಳುಸಿದ ನಮ್ಮ ನೇತಾರರಿನ್ಗೆ ದೇಶದ ಬಗ್ಗೆ ನಮ್ಮ ಬಗ್ಗೆ ಒಂದಿನಿತೂ ಕಾಳಜಿ ಇಲ್ಲೇ !ಇದರ ನಿಲ್ಸುವ ಇಚ್ಚಾ ಶಕ್ತಿ ಯಾವ ಪಕ್ಷಕ್ಕೂ ಯಾವ ರಾಜಕೀ ಯ ನೆತಾರರಿನ್ಗೂ ಇಪ್ಪದು ಕಾಣುತ್ತಿಲ್ಲೆ.ಕೆಲವು ಜನಂಗ ವೋಟಿಗಾಗಿಯೋ ಸ್ವಂತ ಪ್ರಚಾರಕ್ಕಾಗಿಯೋ ಉಗ್ರವಾದ ಭಾಷಣ ಬಿಗಿವದು ಕೆಳುತ್ತು ಅಲ್ಲಿ ಅಲ್ಲಿ .ಆದರೆ ಅದೆಲ್ಲ ಮಾತಿಲಿ ಮಾತ್ರ ಕಾರ್ಯ ರೂಪಕ್ಕೆ ಒಂದಿನಿತೂ ಬತ್ತಿಲ್ಲೆ .ನಮ್ಮಲ್ಲೂ ಒಗ್ಗಟ್ಟು ಇಲ್ಲೇ !

    ನಮ್ಮ ಮಕ್ಕಳ ದೇವರೇ ಕಾಪಾಡಕ್ಕಷ್ಟೇ! ಅನ್ಯತಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ !

  9. ಹಿಂದೂ/ಬ್ರಾಹ್ಮಣ ಕೂಸುಗ ಕೇವಲ “ಒಂದು ಚಾಕ್ಲೆಟ್ ಗೆ ” , “ಒಂದು ಮೊಬೈಲು ರಿಚಾರ್ಜ್ ಗೆ ” , ” ಒಂದು ಐ ಪ್ಯಾಡ್ ಗೆ ” , “ಒಂದು ಮರುಳು ಮಾತಿಗೆ ” ….”ಬಲಿ ” ಅಪ್ಪಷ್ಟು ದುರ್ಬಲರು ಆಯಿದವೋ? ಅಯ್ಯೋ ದೇವರೇ , ರಾಮ ರಾಮ …. !!ಕಲಿಗಾಲ!!!!

  10. ಈ ಫ಼ೇಸ್ ಬುಕ್, ಮೊಬೈಲ್ ಯುಗಲ್ಲಿ ಕೂಸುಗೊ ಅಡ್ಡದಾರಿ ಹಿಡುದ್ದದು ಗೊಂತಪ್ಪಗಳೇ ಸಮಯ ಮೀರಿರ್ತು. ಅವರ ಬೈಕು, ಗಿಫ಼್ಟುಗೊ,ಪಾರ್ಟಿಗೊ ಪೈಸೆಯ ದರ್ಬಾರು ಹರೆಯದ ಮಕ್ಕಳಲ್ಲಿ ಆಶೆ ಹುಟ್ಟುಸುತ್ತು. ಹಾಂಗೇ ನಮ್ಮ ಸರ್ಕಾರವೂ ಕಾನೂನೂ ಟೀ ವೀ ಮಾಧ್ಯಮಂಗಳೂ ಅವಕ್ಕೆ ಅನುಕೂಲವಾಗಿಯೇ ಕೆಲಸ ಮಾಡ್ತವು. ಅಂತೂ ಕೂಸಿನ ಅಪ್ಪ, ಅಮ್ಮಂದ್ರಿಂಗೆ ಬಾಳಾಕು ಬೆಶಿಲಿಂಗೆ ಹಾಕಿ ಕಾಕೆಯ ಕಾವಲು ಕಾದಾಂಗೆ ಇಪ್ಪ ಕಥೆ ಆತು. ನಮ್ಮ ಮಕ್ಕೊಗೆ ನಮ್ಮ ಮಠಲ್ಲಿ “ಕನ್ಯಾ ಸಂಸ್ಕಾರ” ಕೊಡುಸುವೊ.ಹಾಂಗಾದರೂ ಒಳಿತ್ತವೊ ನೋದುವೊ. ಹರೇ ರಾಮ.

  11. ಹರೇರಾಮ, ಪ್ರೇಮಕ್ಕ ಕಣ್ಣಿಲ್ಲೆ ಹೇಳ್ತವು. ಕಣ್ಣೂ ಮನಸ್ಸೂ ಎರಡೂ ಕುರುಡಾಗಿ ವ್ಯವಹರಿಸಿರೆ ಹೀಂಗೇ . ಆದರೆ ಕೋತಿ ತಾನೂ ಕೆಡುವುದಲ್ಲದೆ ಊರೆಲ್ಲ ಕೆಡಿಸಿತು ಹೇಳ್ತ ಹಾಂಗೆ ಇಡೀ ಸಮಾಜವನ್ನೇ ಅಲ್ಲ! ದೇಶವನ್ನೇ ಹಾಳು ಮಾದ್ತಲ್ಲೊ? ನಮ್ಮ ಹಿಂದೂ ಕೂಸುಗೊಕ್ಕೆ ಏವ ತರಲ್ಲಿ ಬುದ್ಧಿ ಹೇಳೆಕ್ಕಪ್ಪದು? ಇದುವೇ ಚಿಂತೆ ಆವುತ್ತಾಇದ್ದು! ಅಂತೂ ಬಗೆ ಬಗೆ ತರಲ್ಲಿ ನಾವು ಯೋಚಿಸೆಕ್ಕಾದ ಸಂಗತಿ!!

  12. ಭಯೋತ್ಪಾದಕರ ಕೈಗೊ ಭಯಾನಕವಾಗಿ ಬೆಳೆದ್ದು. ನಮ್ಮ ಮತದ ಯುವಕ-ಯುವತಿಯರಿಂಗೆ ನಮ್ಮ ಮತದ ಬಗ್ಗೆ ಅಭಿಮಾನ ಬಪ್ಪಲೆ ಒಂದು ಅಭಿಯಾನವೆ ಆಯೆಕ್ಕು.

  13. “ಪೊನ್ನಾನಿಗೆ ಹೋಪಗ -ಬಪ್ಪಗ” ಹೇಳ್ತರ ನೋಡಿ ಅಪ್ಪಗ, ಯಬ್ಬಾ ಎಂತಾ ಬದಲಾವಣೆ ಹೇಳಿ ಕಂಡತ್ತು. ಪೊಣ್ಣುಗಳ ಮತಾಂತರ ಮಾಡ್ಳೇ ಪೊನ್ನಾನಿ ಇಪ್ಪದು – ಎಂತಾ ಮಾತು. ಎಂತಾ ಮಾತು. ಇಷ್ಟೆಲ್ಲಾ ಕತಗೊ ನಮ್ಮ ಕಣ್ಣೆದುರೇ ನೆಡದ್ದರ ಕೇಳಿರೂ, ಕೂಸುಗೊ ಎಂತಕೆ ದಾರಿ ತಪ್ಪುತ್ತವೋ ಹೇಳಿ ಬೇಜಾರಾವುತ್ತು. ಎಲ್ಲೋರು ಎಚ್ಚರಲ್ಲಿ ಇರೆಕಾದ ಪರಿಸ್ಥಿತಿ. ಅಕ್ಕಂಬಗ ಆನೀಗ ಒರಗುತ್ತೆ.

  14. ಆಗಳೇ ತಡವಾತು. ದೀಪ ಹೊತ್ತುಸಿ ಶಂಖ ಊದೇಕ್ಕಾದಲ್ಲಿ ಟಿ.ವಿ ನಾದವೇ ಸೌಖ್ಯ ಹೇದು ಮನಗಂಡರೆ ದುಷ್ಟಲಹರಿಗೊ ಹೇಂಗೆ ಮನೆಮನದೊಳ ಹೊಕ್ಕುತ್ತು ಹೇಳ್ಸಕ್ಕೆ ಇದೂ ಒಂದು ನಿದರ್ಶನ ಹೇಳ್ಳಕ್ಕು.
    ಚರ್ಚೆ ಮಾಡ್ತರಿಂದ ಪ್ರತಿಯೊಬ್ಬನೂ ಚಿಂತನೆ ಮಾಡೇಕ್ಕಾದ ಕಾಲ ಆಗಳೇ ಬಂದೆತ್ತಿದ್ದು.
    ಭಗವಂತ! ಕಲಿಕಾಲಲ್ಲಿ ಕೈ ಬಿಡೆಡ ಹೇದು ಬೇಡಿಗೊಂಬ°

    ಹರೇ ರಾಮ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×