Oppanna.com

ಹೆಮ್ಮಕ್ಕಳ ಕೆಲಸಿ ಅಂಗ್ಡಿ.

ಬರದೋರು :   ಶ್ರೀಹರ್ಷ ಭಟ್ (ಸಾಹಸಿ)    on   15/11/2013    6 ಒಪ್ಪಂಗೊ

ಮೊನ್ನೆ ಆದಿತ್ಯವಾರ ಮನೆಲಿ ಧರ್ಮಭಾರತಿ ಓದಿಯೊಂಡು ಕೂದಿತ್ತಿದ್ದೆ. ಅಷ್ಟಪ್ಪಗ ಮೇಗಾಣ ಮನೆ ಚಿತ್ರಕ್ಕ ಬಂತು.ಹೆರಟೊಂಡು ಬಯಿಂದು. ದೂರ ಹೆರಟದು? ಹೇಳಿ ಆನು ಕೇಳುವಗ ಒಳಾಂದ ಅಮ್ಮನೂ ಬಂತು. ಹೋ..ಚಿತ್ರನೊ? ಎಂತ ಚಿತ್ರ? ಹೇಳಿಂಡು. ಈ ಚಿತ್ರಕ್ಕ ಇದ್ದನ್ನೆ ಮೂಡುಗೆದ್ದೆ ಶಂಕರಮಾವನ ಮಗಳು. ಅದು ಕೋಲೇಜಿಂಗೆ ಮಂಗ್ಳೂರಿಂಗೆ ಹೋದ್ದದಿದ. ಹಾಂಗಾಗಿ ರಜ್ಜ ಪೇಟೆ ನಮೂನೆ. ಫೇಶನ್ನು, ಗೀಶನ್ನು ಎಲ್ಲ ಹೆಚ್ಚು. ಅದರ ಮದುವೆ ಆದ್ದದು ಎಂಗಳ ಮೇಗಾಣ ಮನೆ ಗಣೇಶಭಾವ ಇದ. ಕಳುದ ವರ್ಷ ಮದುವೆ ಆದ್ದದು. ಗೊಂತಿಕ್ಕನ್ನೆ?. ಅದಕ್ಕೆ ಹತ್ತ್ರತ್ತ್ರೆ ಎನ್ನದೇ ಪ್ರಾಯ. ಒಂದು ನಾಲ್ಕೈದು ವರ್ಷ ದೊಡ್ಡ ಅಷ್ಟೆ. ಹಾಂಗಾಗಿ ಎನಗೂ ಅದಕ್ಕೂ ಒಳ್ಳೆ ದೋಸ್ತಿ.

ಚಿತ್ತ್ರಕ್ಕ”ಆನು ಪಾರ್ಲರಿಂಗೆ ಹೆರಟದು. ನೀನು ಬತ್ತೆಯೋ?” ಹೇಳಿ ಕೇಳಿತ್ತು. ಮನೆಲಿ ಸುಮ್ಮನೇ ಕೂದೊಂಬದನ್ನೆ ಹೋಗು. ಹಾಂಗೆ ಆ ತಲೆಕಸವಿನ ಕೊಡಿ ರಜ್ಜ ಕತ್ತರುಸಿ ನೇರ್ಪ ಮಾಡಿಂಡು ಬಾ ಹೇಳಿ ಹೇಳಿತ್ತು ಅಮ್ಮ. ಆತು ಹೇಳಿಂಡು ಪಾರ್ಲರಿಂಗೆ ಹೆರಟೆ. ಈ ಪಾರ್ಲರು ಹೇಳಿರೆ ಗೊಂತಿದ್ದನ್ನೆ. ಕೂಸುಗಳ ತಲೆಕಸವು ಕತ್ತರುಸುತ್ತ ಕೆಲಸಿ ಅಂಗ್ಡಿ.

ಈ ಚಿತ್ರಕ್ಕನತ್ರೆ ಸ್ಕೂಟಿ ಇದ್ದದ. ಹಾಂಗಾಗಿ ಕೆಲಸಿ ಅಂಗ್ಡಿಗೆ ಬೇಗ ಎತ್ತಿತ್ತು. ರಾಮ… ರಾಮ… ಅಲ್ಲಿ ಎಂತೆಲ್ಲಾ ಇದ್ದು ಹೇಳಿ ಅಲ್ಲಿಗೆ ಹೋದಪ್ಪಗಳೇ ಗೊಂತಾದ್ದದಪ್ಪ ಎನಗೆ. ಒಂದು ಹೆಮ್ಮಕ್ಕೊ ಕೈ, ಕಾಲು ಎಲ್ಲ ನೀರಿಲ್ಲಿ ಮಡುಗಿಂಡು, ಮೋರಗೆ ಸಗಣದಾಂಗಿರುತ್ತದರ ಮೆತ್ತಿಂಡು ಕೂದಂಡಿತ್ತಿದ್ದು. ಅಲ್ಲಿಪ್ಪ ಕೂಸುಗೊ ಅದರ ಕೈಬೆರಳು, ಕಾಲುಬೆರಳು ಎಲ್ಲ ತಿಕ್ಕಿ ತಿಕ್ಕಿ ಚೆಂದ ಮಾಡಿಯೊಂಡಿತ್ತಿದ್ದವು. ಚಿತ್ತ್ರಕ್ಕ ಹೇಳಿತ್ತು, ಈ ಕೈಉಗುರು ಚೆಂದ ಮಾಡ್ತದಕ್ಕೆ ಮ್ಯಾನಿಕ್ಯೂರ್ ಹೇಳಿಯೂ, ಕಾಲುಬೆರಳು, ಉಗುರು ಎಲ್ಲ ಚೆಂದ ಮಾಡ್ತದಕ್ಕೆ ಪೆಡಿಕ್ಯೂರ್ ಹೇಳಿಯೂ ಹೆಳ್ತವಡ. ಅಲ್ಲಾ, ನಾವು ಮನೆಲಿ ಮೀವಗ ಈ ಕೈ ಕಾಲಿನ ಉಗುರಿಂಗೆ ಸೋಪು ಹಾಕಿ,ಹಳತ್ತು ಬ್ರೆಶ್ಶಿಲ್ಲಿ ತಿಕ್ಕಿರೆ ಚೆಂದ ಆವುತ್ತಿಲ್ಲಿಯೋ? ಮತ್ತೆ ಎಂತಕೆ ಇವಕ್ಕೆ ಪೈಸೆ ಸೊರುಗುವದು. ಇನ್ನು ಈ ಸಗಣ ಮೆತ್ತುತ್ತದಕ್ಕೆ ಫೇಶಿಯಲು ಹೇಳುಗಡ. ಎಂತ ಕರ್ಮವೊ? ಹೇಳ್ಲೆ ನಾಲಗೆಯೂ ತೆರಚ್ಚದ್ದಾಂಗಿರ್‍ತ ಶಬ್ದಂಗೊ.

ಚೂರು ಹೊತ್ತು ಕೂದುಬೊಡುದಪ್ಪಗ ಅಲ್ಲಿ ಒಂದು ಪುಸ್ತಕ ಕಂಡತ್ತು. ಓದ್ಲೆ ನೋಡಿರೆ ಅದು ಫೇಶನು ಮೆಗಜಿನು. ಅದರಲ್ಲಿ ಇಪ್ಪ ಒಂದೊಂದರ ವೇಷವ ಎನ್ನ ಅಜ್ಜಿ ನೋಡಿತ್ತಿದ್ದರೆ “ಇವಕ್ಕೆ ವಸ್ತ್ರಕ್ಕೆ ಗೆತಿ ಇಲ್ಲೆಯೋಪ್ಪ! ಎನ್ನ ಪೆಟ್ಟಿಗೆಂದ ನಾಲ್ಕು ಸೀರೆ ತೆಗದು ಕೊಡು ಇವಕ್ಕೆ” ಹೇಳಿ ಹೇಳಿತ್ತವು. ಮತ್ತೆ ಕೆಲವು ರಟ್ಟಿನ ಪೆಟ್ಟಿಗೆಯ ಎಲ್ಲ ಸುರುಕ್ಕೊಂಡು ನಿಂದಿದವು. ಇನ್ನೊಂದರ ಉಗುರಿನಲ್ಲಿ ಚಿತ್ರ ಬರದಿದ್ದರ ನೋಡೆಕ್ಕು ನಿಂಗೊ. ನಮ್ಮ ಡ್ರೋಯಿಂಗು ಮಾಷ್ರಿಂಗುದೇ ಬರವಲೆದಿಯ ಹಾಂಗಿಪ್ಪ ಚಿತ್ರ.ಅದಕ್ಕೆ ನೈಲು ಆರ್ಟು ಹೇಳುಗಡ.

ಹೀಂಗೆ ಪುಟ ತಿರುಗುಸಿಯೊಂಡಿಪ್ಪಗ ಅಲ್ಲಿಯಾಣ ಕೂಸು ಬಂದು ದಿನಿಗೇಳಿತ್ತು. ಚಿತ್ರಕ್ಕ ಹೋಗಿ ಕೆಲಸಿಕುರ್ಶಿಲಿ ಕೂದತ್ತು. ಆ ಕೂಸು ಅದರ ಹುಬ್ಬಿನ ಚೆಂದ ಮಾಡ್ಲೆ ಸುರುಮಾಡಿತ್ತು. ಒಂದು ನೂಲಿನ ಬಾಯಿಲಿ, ಕೈಲಿ ಎಲ್ಲ ಹಿಡ್ಕೊಂಡು ಹುಬ್ಬಿನ ಸಪೂರ ಬಳ್ಳಿ ಹಾಂಗೆ ಮಾಡಿತ್ತು.ಮತ್ತೆ ಚಿತ್ರಕ್ಕ ಅದರ ಹತ್ತರೆ ತಲೆಕಸವು ಕತ್ತರುಸಲೆ ಹೇಳಿತ್ತು. ಈ ಚಿತ್ರಕ್ಕಂಗೆ ಮದಲೇ ಜೊಟ್ಟು ಕಟ್ಲೆತಕ್ಕವೇ ತಲೆಕಸವು ಇಪ್ಪದು. ಇನ್ನೂ, ಕತ್ತರುಸಿರೆ ಆ ಮಕ್ಕೊ ಎಲ್ಲ ಹಾಕುತ್ತವಿಲ್ಲೆಯ ಹೇರುಬೇಂಡು ಅದರ ಹಾಕೆಕ್ಕಷ್ಟೆ ಹೇಳಿ ತೋರಿತ್ತೆನಗೆ. ಅಷ್ಟಪ್ಪಗ ಅಲ್ಲಿಗೆ ಒಂದು ಅಜ್ಜಿ ಬಂದವು. ಒಂದು ಅರುವತ್ತು-ಎಪ್ಪತ್ತು ವರ್ಷ ಅಕ್ಕಾಯಿಕ್ಕು. ತಲೆಕಸವು ಅಲ್ಲಲ್ಲಿ ಬೆಳಿ ಆಯಿದು.

ಚಿತ್ರಕ್ಕ ಎದ್ದಪ್ಪಗ ಆ ಕೂಸು ಎನ್ನತ್ರೆ ಹೇಳಿತ್ತು. ಈ ಅಜ್ಜಿಯ ತಲಗೆ ಕಲರು ಹಾಕಿಕ್ಕಿ ನಿಂಗಳದ್ದು ಮಾಡ್ತೆ. ಐದೇ ನಿಮಿಷ ಅಷ್ಟೆ ಹೇಳಿ. ಆತಪ್ಪ,ಹೇಳಿದೆ ಆನು. ಆ ಅಜ್ಜಿ ಹತ್ತಿ ಕೂದೊಂಡವು ಕುರ್ಶಿಲಿ. ಆ ಕೂಸು ಒಂದು ಕರಿನಾಯಿ ಹೇಲಿನಾಂಗಿರ್‍ತದರ ಕರಡಿ ಅಜ್ಜಿ ತಲೆಕಸವಿಂಗೆ ಉದ್ದಲೆ ಸುರುಮಾಡಿತ್ತು. ಇಶ್ಶೀ……. ಅದು ಬೆಳಿ ತಲೆಕಸವು ಕಪ್ಪಪ್ಪಲಡ. ಅದರ ಆ ಅಜ್ಜಿಯ ತಲಗಿಡೀ ಮೆತ್ತಿಕ್ಕಿ ಕರೆಲಿ ಕೂರ್ಸಿತ್ತು. ಎನ್ನ ದಿನಿಗೇಳಿತ್ತು. ಆನು, ತಲೆಕಸವಿನ ಕೊಡಿ ರಜ್ಜವೇ ಕತ್ತರುಸಿರೆ ಸಾಕು. ಹೆಚ್ಚು ಕತ್ತರುಸೆಡ ಹೇಳಿ ಎಲ್ಲ ಹೇಳಿರುದೇ ಕತ್ತರುಸಿದ ಮತ್ತೆ ನೋಡುವಗ ಒಂದು ಬೆರಳಿನಷ್ಟುದ್ದ ತಲೆಕಸವು ಕತ್ತರುಸಿ ಇಡ್ಕಿದ್ದು. ಎನ್ನ ಉದ್ದ ತಲೆಕಸವು ಕಂಡು ಕೇಡಾಯಿಕ್ಕು ಆ ಕೇಡುಮುಟ್ಟಗೆ. ಮನಸಿಲ್ಲೇ ಪರಂಚಿಯೊಂಡು ರುಪಾಯಿ ಕೊಟ್ಟಿಕ್ಕಿ, ಹೆರಟೆಯೊ. ತಲೆಕಸವಿನ ಕೊಡಿ ಮಾಂತ್ರ ಕತ್ತರುಸಿದ್ದಕ್ಕೆ ಐವತ್ತು ರುಪಾಯಿ ಪೀಂಕುಸಿತ್ತು.

ಅಲ್ಲಿಂದ ಸೀತಾ ಈ ಬಳೆ, ಬೊಟ್ಟು ಎಲ್ಲ ಮಾರ್‍ತ ಫೇನ್ಸಿಗೆ ಹೋದೆಯೊ. ಈ ಕೆಲಸಿ ಅಂಗ್ಡಿದು ಕತ್ತರುಸಿದ ಚೆಂದಕ್ಕೆ ಇನ್ನು ಜೆಡೆ ಹಾಕಲೆಡಿಯನ್ನೇ ಹೇಳಿ ಒಂದು ಕ್ಲಿಪ್ಪು ತೆಕ್ಕೊಂಡೆ. ಚಿತ್ರಕ್ಕ ಸೆಂಟು, ಬೆಳಿಯಪ್ಪಲಿಪ್ಪ ಕ್ರೀಮು ಹೇಳಿಂಡು ಒಂದು ಹತ್ತುಹದ್ನೈದು ಬಗೆ ತೆಕ್ಕೊಂಡತ್ತು. ಹೆರಹೆರಟು ಬಪ್ಪಗ ಆ ಅಜ್ಜಿ ಸಿಕ್ಕಿದವು. ಈಗ ನೋಡೆಕ್ಕು ಮೋರೆ ಎಲ್ಲ ಚಿರುಟಿರುದೇ, ತಲೆ ಮಾಂತ್ರ ಒಳ್ಳೆ ಟಾರು ಹಾಕಿದಾಂಗೆ ಕರಿಕರಿ ಮಿಂಚುತ್ತು. ಅಲ್ಲಾ, ರಾಮ… ರಾಮ… ಹೇಳಿ ಜೆಪ ಮಾಡ್ತ ಪ್ರಾಯಲ್ಲಿ ತಲೆಕಸವು ಕಪ್ಪು ಮಾಡ್ತ ಭ್ರಾಂತೆಂತಕೆ. ಆ ಧೋನಿ ಇಲ್ಲೆಯ ಕ್ರಿಕೆಟಾಡ್ತದು. ಅದಕ್ಕೆ ಮೂವತ್ತು ಕಳಾತಷ್ಟೆ ಈಗಳೇ ತಲೆಬೆಳಿಯಾಯಿದು. ಹಾಂಗೇಳಿ ಅದೆಂತ ಕರಿ ಮೆತ್ತುತ್ತ. ಹಾಂಗಿಪ್ಪಗ, ಈ ಅರುವತ್ತು ಕಳುದ ಅಜ್ಜಿಯ ತಲೆಬೆಳಿಯಾದರೆ ದೊಡ್ಡ ವಿಶೇಷ ಎಂತ ಇದ್ದು.ಎನ್ನ ಅಂದಾಜಿಂಗೆ ಆ ಅಜ್ಜಿಗೆ ನಮ್ಮಾಂಗಿರ್‍ತ ಪುಳ್ಳಿಯಕ್ಕೊ ಇಲ್ಲೆ ಹೇಳಿ ಕಾಣ್ತು. ಇದ್ದಿದ್ದರೆ ಹೇಳ್ತಿತವು “ಅಜ್ಜೀ, ನಿಂಗಳ ಪ್ರಾಯಕ್ಕೆ ತಲೆಕಸವು ಅರ್ಧರ್ಧ ಬೆಳಿ ಆದರೇ ಚೆಂದ ಅಲ್ಲದ್ದೆ ಹೀಂಗೆ ಬಣ್ಣ ಮೆತ್ತಿ ಕರಿ ಮಾಡಿರೆ ಹೇಸಿಗೆ ಕಾಣ್ತು” ಹೇಳಿ.

ಆನು ಇಂದೇ ನಿಜಮಾಡಿದ್ದೆ. ಇನ್ನೊಂದರಿ ಈ ಕೆಲಸಿ ಅಂಗ್ಡಿಗೆ ಬತ್ತಿಲ್ಲೆ ಹೇಳಿ. ಎನಗೆ, ತಲಗೆ ಎಣ್ಣೆ ಹಾಕಿ ಬಾಚಿ, ಜೆಡೆ ಹಾಕಿ ಒಂದು ಬೊಟ್ಟು ಹಾಕಿರೇ ಚೆಂದ ಕಾಂಬದು. ಈಗಾಣವು ಮಾಡ್ತ ಹಾಂಗೆ ಮೋರೆಗೆಲ್ಲ ಮೆತ್ತಿಂಡು, ತಲೆಕಸವಿನ ಮುಳಿಗುಡ್ಡೆ ಹಾಂಗೆ ಮಾಡಿಂಡು, ಬಿರ್ಕಲಿಗಳ ಹಾಂಗೆ ತಿರುಗಿರೆ ದಾರಿಕರೆಲಿ ಆ ಡೇರೆಲಿ ಮನುಗುತ್ತವಿಲ್ಲೆಯ ಅವರ ಹಾಂಗೆ ಕಾಣ್ತು.

 ಅಲ್ಲದೊ ಮತ್ತೆ ಚಾಮಿ ದೇವರು ಕೊತ್ತದರ ಕೊಟ್ಟ ಹಾಂಗೆ ಮಡುಗಿಯೊಳ್ಳದ್ದೆ ಈಕೆಲಸಿ ಅಂಗ್ಡಿಗೆ ಹೋಗಿ ಯಕ್ಷಗಾನ ವೇಷದ ಹಾಂಗೆ ಕೋಲ ಕಟ್ಟುವದೆಂತಕೆ??.

6 thoughts on “ಹೆಮ್ಮಕ್ಕಳ ಕೆಲಸಿ ಅಂಗ್ಡಿ.

  1. ಒಳ್ಳೆ ಶುದ್ದಿ,
    ಗೆಂಡು ಮಕ್ಕೊ ಕೇಳಿ ಅರಡಿಯದ್ದ ಕಥೆಗೊ…
    ಶುದ್ದಿ ಬರೆತ್ತಾ ಇರು…
    ಕೇಳುಲೆ ಎಂಗೊ ಇದ್ದೆಯೊ°
    🙂

  2. ಕೆಲಸಿ ಅಂಗ್ಡಿ ಚಿತ್ರಣ ಲಾಯ್ಕಾದು. ಶೃತಿ….. ಬಣ್ಣ ಹಚ್ಚುಲೆ ಸುರು ಮಾಡಿತು ಹೇಳಿರೆ, ಅದು ಒಂತರಾ ಟೆಮ್ಟ್ ಅಪ್ಪಲ್ಲೆ ಸುರು ಆವುತು. ಯಂಗ್ ಆಗಿ ಕಾಂಬ ಹೇಳಿ. ಎಂಗಳ ವಯಸ್ಸಿನ ಸಿನೆಮಾ ಹೀರೋಯಿನ್ ಗಳು ಇನ್ನೂ ಇಪ್ಪತ್ತರ ಹಾಂಗೆ ಕಂಡುಕ್ಕೋಂಡ್ ಇರ್ತವಿದ ಟಿವಿಲಿ !……….. ಹಾಂಗೆ ಹೇಳಿ ಏವ ವಯಸ್ಸಿಗೆ ನಿಲ್ಸುದು ಹೇಳಿ ಹೆಚ್ಚಿನವಕ್ಕೆ ಗೊಂತಾವ್ತಿಲ್ಲೆ. ಅಜ್ಜಿ ಕತೆನೂ ಹಾಂಗೆ ಆಗಿಕ್ಕು!………
    ಆದರೆ ದುರ್ಗಾಶರ್ಮ ಬರದಂಗೆ ಕುಂಕುಮ ಇಡುವ ಅಭ್ಯಾಸ ಮಾಡುಲೆ ಕಷ್ಟ ಇದ್ದು. ಅದು ಬಿಂದಿಗೆ ಅಭ್ಯಾಸ ಆಗಿ ಹೋದ ಮತ್ತೆ !
    ಅಲ್ಲದಾ ?

  3. ಶೃತಿಯ ಹಾಸ್ಯ ಮಿಶ್ರಿತ ಲೇಖನ ಲಾಯಿಕಾಯಿದು .

  4. ( ಕರಿನಾಯಿ ಹೇಲಿನಾಂಗಿರ್‍ತದರ ಕರಡಿ ಅಜ್ಜಿ )
    ಅದರ ಮೆತ್ತಿದ ಮತ್ತೆ ಆ ಅಜ್ಜಿ ಕರಡಿಯ ಹಾಂಗೇ ಆತಾಯ್ಕು.. ಅಲ್ಲದಾ?

  5. ಶ್ರುತಿಯ ಅಭಿಪ್ರಾಯ ಸರಿಯಾದದ್ದೆ. ನಮ್ಮ ಹಿಂದೂ ಸಂಪ್ರದಾಯಲ್ಲಿ ದೇವರಿಂದ ಹಿಡುದು ಶವ ಸಂಸ್ಕಾರಕ್ಕೆ ಕೊಂಡೋಪಲ್ಲಿಯವರೆಗೆ ಮನುಷ್ಯರೆಲ್ಲಾ (ಶವದ ಮೆರವಣಿಗೆ ಸೇರಿ) ಅಲಂಕಾರ ಪ್ರಿಯರು. ಹಿಂದೆಯೂ ಜದೆಗಳಲ್ಲಿ ಹಲವಾರು ವಿನ್ಯಾಸಂಗೊ, ಅದರಲ್ಲಿ ರಿಂಗು,ಕ್ಲಿಪ್ಪು,ಚವ್ರಿ, ರಿಬ್ಬುನ್ನು ಹೀಂಗಿಪ್ಪ ಸಾಮಾಗ್ರಿಗಳ ಉಪಯೋಗಿಸಿಂಡಿತ್ತಿದ್ದವು. ಹೆಣ್ಣು ಪ್ರಕ್ರುತಿಯಹಾಂಗೆ ಸುಂದರವಾಗಿದ್ದರೆ ಒಳ್ಳೆದು. ಹಾಂಗೇಳಿ ಬಾಯಮ್ಮನ ಹಾಂಗೆ ಬೊಟ್ಟಿಲ್ಲದ್ದೇ, ಬಳೆಯಿಲ್ಲದ್ದೇ ಸರಿಯಾದ ಬಟ್ಟೆಯೂ ಇಲ್ಲದ್ದೆ ಕಾಂಬಗ ಅಸಹ್ಯ ಆವುತ್ತು. ಎಲ್ಲ ಅಲಂಕಾರಕ್ಕೂ, ಶ್ರುತಿ ಹೇಳೀದ ಹಾಂಗೆ ಪ್ರಾಯಕ್ಕೆ ತಕ್ಕಹಾಂಗೆ ನಡೆದರೆ ಚೆಂದ. ಹರೇ ರಾಮ.

  6. ನಿಂಗೊ ಹೇಳಿದ್ದು ನೂರಕ್ಕೆ ನೂರು ಸರಿ…ಈ ರಾಸಾಯನಿಕಂಗಳ ಮೆತ್ತಿ ಆರೋಗ್ಯ ಹಾಳು ಮಾಡುದರ ಬದಲು ನಮ್ಮದೇ ಅರಸಿನ,ಕುಂಕುಮ ಹಚ್ಹುವ..ನಮ್ಮ ಸಂಸ್ಕಾರಂಗಳ ಒಳಿಶಿದಾಂಗೆಯೂ ಆತು..ಅಲ್ಲದೊ..ಎಲ್ಲಾ ಹೆಮ್ಮಕ್ಕಳೂ,ಕೂಸುಗಳೂ ಓದೆಕ್ಕಾದ ವಿಶಯ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×