ಕಿಟ್ಟಣ್ಣಜ್ಜ ಬಫೆಲಿ ಉಂಡದು.
ನಿಂಗೊಗೆ ಎಂಗಳ ಕಿಟ್ಟಣ್ಣಜ್ಜನ ಗೊಂತಿದ್ದಲ್ಲದ?ಗೊಂತಿಲ್ಲದ್ದೆ ಎಂತರ ಮೊನ್ನೆ ಮೊನ್ನೆವರೆಗೂ ಜೆಂಬಾರಲ್ಲಿ ಕಂಡಿಪ್ಪಿ.ಹಾಂಗೆ ಗುರ್ತ ಇಲ್ಲದ್ದರುದೇ ಹೇಳಿಯಪ್ಪಗ ಗುರ್ತ ಸಿಕ್ಕುಗು.ಒಳ್ಳೆ ಜೆನ ಅವು.ಜೆಂಬಾರಲ್ಲಿ ಒಳ್ಳೆ ಸುದರಿಕೆ ಮಾಡುಗು.ಒಂದೇ ಒಂದು ದುರಭ್ಯಾಸ.ಅಲ್ಲ,ದುರಭ್ಯಾಸ ಹೇಳ್ಳೂ ಎಡಿಯ ಹೇಳುವೊ.ಎಂತ ಹೇಳಿರೆ ಅವಲ್ಲಿ ಜೆಂಬಾರಲ್ಲಿ ಹೋಗಿ ಉಂಬದು ಹೇಳಿರೆ ಆತು.ಹೇಳಿಕೆ ಇಲ್ಲದ್ದರುದೇ ಜೆಂಬಾರ ಇದ್ದು ಹೇಳಿ ಶುದ್ಧಿ ಗೊಂತಾದರೆ ಅಲ್ಲಿಗೆ ಹೋಕು,ಒಟ್ಟಿಂಗೇ ಸೀತಜ್ಜಿಯನ್ನೂ ಒತ್ತಾಯ ಮಾಡಿ ಹೆರಡುಸಿಯೊಂಗು.ನಮ್ಮ ಸೀತಜ್ಜಿಗೆ,ಅವರ ಮಕ್ಕೊ ಒಪ್ಪಣ್ಣ,ಒಪ್ಪಕ್ಕಂದ್ರಿಂಗೆ ಇದೆಲ್ಲ ಆಗಿಬತ್ತಿಲ್ಲೆ.ಈ ಸೀತಜ್ಜಿ ಯಾವಗಳುದೇ ಪರಂಚುಗು,ನಿಂಗೊಗೆ ಹೇಂಗೂ ಗೊಂತಿಲ್ಲದ್ದವರಲ್ಲಿಗೆ ಹೋಪ ಭ್ರಾಂತು.ಒಟ್ಟಿಂಗೆ ಎನ್ನ ಎಂತಕೆ ಬಲುಗುವದು?ಹೇಳಿ.ಈ ಮಕ್ಕೊ ಹುಟ್ಟುವಂದ ಮದಲು ಎಲ್ಲಿಯಾದರು ಜೆಂಬಾರ ಇದ್ದು ಹೇಳಿ ಗೊಂತಾದರೆ ಇವು ಒಲೆ ಕತ್ಸಲೆ ಬಿಡವು ಹೇಳಿ ಸೀತಜ್ಜಿ ಹೇಳುಗು.ಈಗ ಈಗ ಕಿಟ್ಟಣ್ಣಜ್ಜ ಒಬ್ಬನೇ ಹೋಕು.ಹೀಂಗೆಲ್ಲಾ ದಿನಿಗೇಳದವರಲ್ಲಿಗೆ ಹೋಗೆಡಿ ಹೇಳಿ ಮಕ್ಕೊ ಹೇಳಿರೂ ಕೇಳವು.ಹಳೇ ಕಾಲದವಲ್ಲದಾ ಅವರತ್ತರೆ ಹಾಂಗೆ ಮಾಡೆಡಿ ಹೀಂಗೆ ಮಾಡೆಡಿ ಹೇಳಿರೆ ಈ ಮಕ್ಕೊಗೆ ಹಿರಿಯವಕ್ಕೆ ಮರ್ಯಾದಿ ಕೊಡ್ಲೆ ಗೊಂತಿಲ್ಲೆ ಹೇಳಿ ಹೇಳುಗು.
ಅಂಬಗೆಲ್ಲಾ ಈಗಾಣಾಂಗೆ ಜೆಂಬಾರ ಇಪ್ಪ ಕಲ್ಯಾಣ ಮಂಟಪದ ಎದುರು ಕಾವಲಿನದ್ದು ಇರ.ಈಗ ದೊಡ್ಡವರ ಜೆಂಬಾರಲ್ಲಿಈ ಕಾವಲಿನದ್ದು ಹೇಳಿಕೆ ಕಾಗತ ಇದ್ದೊ,ಪಕೀಟಿಲ್ಲಿ ಬಾಂಬೊ ಮಣ್ಣೋ ತಯಿಂದನೋ ಹೇಳಿ ವಿಚಾರಣೆ ಮಾಡಿಯೇ ಒಳ ಬಿಡುಗಷ್ಟೆ.ನಮ್ಮ ಕಿಟ್ಟಣ್ಣಜ್ಜನ ಕಾಲಲ್ಲಿ ಜೆಂಬಾರದ ಮನೆ ಹೇಳಿರೆ ಮನೆಮಕ್ಕೋ,ಹತ್ರಾಣ ನೆಂಟ್ರು ಮನೆ ಬಾಗಿಲ್ಲೆ ನಿಂದೊಂಡು ಬಂದವಕ್ಕೆ ಆಸರಿಂಗೆ ಕೊಟ್ಟು ಬನ್ನಿಬನ್ನಿ ಹೇಳಿ ಉಪಚಾರ ಮಾಡಿ ಹಸೆ ಹಾಕಿ ಕೂರ್ಸುಗು.ಹಾಂಗಾಗಿ ಇಷ್ಟ್ರವರೆಗೆ ಆರುದೇ ಕಿಟ್ಟಣ್ಣಜ್ಜನತ್ರೆ ನಿಂಗೊ ಹೇಳಿಕೆ ಇದ್ದೊಂಡು ಬಂದದೊ ಹೇಳಿ ಕೇಳಿದ್ದವಿಲ್ಲೆ.ಹಾಂಗೆ ಹೋದಲ್ಲೆಲ್ಲ ಇವು ಚೂರು ಸುದರಿಕೆ ಮಾಡಿಕ್ಕಿ ಹಂತಿಲಿ ಕೂರುಗು.ಉಂಬಲೆ.ಈ ಬಡುಸುವವಕ್ಕುದೇ ಅವರದ್ದೇ ಗಡಿಬಿಡಿ ಹಾಂಗಾಗಿ ಅವುದೆ ನಿಂಗೊ?ಗುರ್ತ ಸಿಕ್ಕಿದ್ದಿಲ್ಲನ್ನೇ?ಹೇಳಿ ಹೇಳವು.ಹೆಡಗೆಲಿ ತಂದು ಬಳುಶಿದ ಬೆಶಿ ಬೆಶಿ ಅಶನ,ಬೆನ್ನಾರೆ ಬಪ್ಪ ಸಾರು,ಸಾಂಬಾರು,ಮೇಲಾರ,ಮೊಸರು,ಮಜ್ಜಿಗೆ ಎಲ್ಲ ಬಡುಶಿಯೊಂಡು ಮೂಗಿಲ್ಲೆ ಬಾಯಿಲೆ ಉಂಗು.”ಹರಿಭೋಜನ ಕಾಲೇ ಪಾರ್ವತೀಪತೇ…..”ಹೇಳಿ ಹೇಳುವಗ ಉಂಡಾಗದ್ದರೆ ಎಲ್ಲೊರದ್ದುದೆ ದೃಷ್ಟಿ ಬೀಳುಗಿದ.ಹಾಂಗಾಗಿ.ಉಂಡಿಕ್ಕಿ ಬೈಲಿಲ್ಲೇ ನೆಡಕ್ಕೊಂಡು ಮನಗೆತ್ತುವಗ ಗಂಟೆ ನಾಲ್ಕಕ್ಕು.ಮತ್ತೆ ಗಡದ್ದು ಒಂದೊರಕ್ಕು.ಎಲ್ಲಿ ಜೆಂಬಾರ ಇದ್ದರೂ[ಗುರ್ತ ಇಲ್ಲದ್ದವರಲ್ಲಿ]ಇದೇ ಕ್ರಮ.ಗುರ್ತ ಇದ್ದವರಲ್ಲಿ ಆದರೆ ಪಂಚಾಯತಿಗೆಗೆ ಜೆನ ಸಿಕ್ಕುಗು ಹಾಂಗಾಗಿ ಚಾಯ ಎಲ್ಲ ಕುಡುದಿಕ್ಕಿಯೇ ಹೆರಡುಗಷ್ಟೆ.
ನಿಂಗೊಗೆ ಆಚಕರೆ ಮಾಲಿಂಗಜ್ಜನ ಮಗ ಶ್ಯಾಮಣ್ಣನ ಗೊಂತಿಕ್ಕನ್ನೆ.ಅಪ್ಪು,ಅವನೇ ಅಮೆರಿಕಲ್ಲಿಪ್ಪವ.ಅವನ ಮಗನ ಉಪನಯನ ಇಲ್ಲೇ ಪುತ್ತೂರಿಲ್ಲಿ ಮಾಡಿದ್ದಿದ.ಅವ ದೂರ ಇಪ್ಪದಲ್ಲದ ಹಾಂಗಾಗಿ ಊರಿಲ್ಲಿಡೀ ಹೇಳಿಕೆ ಹಂಚಿಗೊಂಡು ಬಯಿಂದಾಯಿಲ್ಲೆ.ಅಲ್ಲದ್ದರುದೇ ಕಿಟ್ಟಣ್ಣಜ್ಜ ಇಪ್ಪದು ಆಚ ಬೈಲಿಲ್ಲಿ ಹಾಂಗಾಗಿ ನೆರೆಕರೆ ಆವುತ್ತಿಲ್ಲೆ.ಗುರ್ತದವೊ,ನೆಂಟ್ರೊ ಅಲ್ಲ ಮತ್ತೆ ಅವಕ್ಕೆ ಹೇಳಿಕೆ ಸಿಕ್ಕಿದಿಲ್ಲೆ ಹೇಳಿ ಬೇರೆ ಹೇಳೆಡನ್ನೆ.ಆದರೆ ಕಿಟ್ಟಣ್ಣಜ್ಜಂಗೆ ಆರೊ ಶುದ್ಧಿ ಹೇಳಿದವು.ಗೊಂತಾದ ಮತ್ತೆ ಹೋಗದ್ದರೆ ಮನಸ್ಸು ಕೇಳ.ಹೇಳಿಕೆ ಇಲ್ಲದ್ದರೆ ಮಣ್ಣು ಹಾಕಿತ್ತಾಡ ಹೇಳ್ಯೊಂಡು ಉಪನಯನಕ್ಕೆ ಹೆರಟವು.ನಮ್ಮ ಶ್ಯಾಮಣ್ಣ ಪುತ್ತೂರಿಲ್ಲಿ ಹೋಲಿಲ್ಲಿ ಉಪನಯನ ಮಡುಗಿಂಡದಿದ,ಉದಿಯಪ್ಪಗಾಣ ಮೂರ್ತವುದೇ.ಹಾಂಗಾಗಿ ಕೃಷ್ಣ ಬಸ್ಸಿಂಗೇ ಹೆರಟು ಹೋದವು ಕಿಟ್ಟಣ್ಣಜ್ಜ.ಅಲ್ಲಿಗೆತ್ತಿಯಪ್ಪಗ ಎಂತರ?ಕಾಲಿಂಗೆ ನೀರು,ಕುಡಿವಲೆ ಆಸರಿಂಗೆ ಕೊಡ್ಲೆ ಮನೆ ಮಕ್ಕೊ ನಿಂದೊಂಡಿಲ್ಲೆ.ಅವ ರಜ್ಜ ಈಗಾಣ ಕ್ರಮಲ್ಲಿ ಉಪನಯನ ಮಾಡ್ತದಿದ ಹಾಂಗಾಗಿ.ಒಂದು ಮೇಜಿಲಿ ಗ್ಲಾಸಿಲ್ಲಿ ಸರ್ಬತ್ತು ಮಡಗಿಂದಿತ್ತಿದ್ದು.ಬೇಕಾದವು ತೆಗದು ಕುಡಿವದು.ಮುಗುದಪ್ಪಗ ಅಡುಗೆಯವ ತಂದು ತಂದು ಎರವದು.ಎಂತಾರು ಆಗಲಿ ಹೇಳಿಂಡು ನಮ್ಮ ಕಿಟ್ಟಣ್ಣಜ್ಜ ಒಂದು ಗ್ಲಾಸು ನೆಗ್ಗಿ ಕುಡುದವು.ಕಾಫಿ ತಿಂಡಿಗೆ ಹೇಳಿ ಅಡುಗೆ ಕೊಟ್ಟಗೆ ಕರೇಲಿ ಒಂದು ಕೊಟ್ಟಗೆ ಇತ್ತಿದ್ದು.ಅಲ್ಲಿ ಹೋಟ್ಲಿನ ಹಾಂಗೆ ನಾಲ್ಕು ಮೇಜಿ ಕುರ್ಶಿ ಹಾಕಿ,ಬಂದವಕ್ಕೆ ಮಸಾಲೆ ಹಾಕಿ ಒಗ್ಗರುಸಿದ ಸೇಮಗೆ ಸಮಾರಾಧನೆ ಆವುತ್ತಾ ಇದ್ದತ್ತು.ಈಗಾಣಾವರ ಒಂದೊಂದು ಕ್ರಮಂಗೊ ಹೇಳಿ ತೋರಿರೂ ಖಾಲಿ ಇಪ್ಪ ಕುರ್ಶಿ ಎಳಕ್ಕೊಂಡು ಕೂದಂಡವು.ಚೂರು ತಿಂದಪ್ಪಗ ಮಸಾಲೆಯ ಮೂರಿ ಮೆಚ್ಚದ್ದೆ ಎದ್ದು ಕೈ ತೊಳದವು.
ಶ್ಯಾಮಣ್ಣನ ಅಮೆರಿಕಲ್ಲಿಪ್ಪದಲ್ಲದ ಹಾಂಗಾಗಿ ದೊಡ್ಡ ದೊಡ್ಡ ಜೆನಂಗೊ ಎಲ್ಲ ಬಯಿಂದವು.ಅವೆಲ್ಲಾ ಅಲ್ಲಿ ಹೋಲಿಲ್ಲಿ ಹಾಕಿಂಡಿಪ್ಪ ಕುರ್ಶಿಲಿ ಕೂದಂಡಿತ್ತಿದ್ದವು,ಅಲ್ಲೆ ಕರೆಲಿ ಒಂದು ಕುರ್ಶಿಲಿ ಕೂದಂಡವು ನಮ್ಮ ಕಿಟ್ಟಣ್ಣಜ್ಜ.ಅಷ್ಟಪ್ಪಗ ಒಬ್ಬ ಕೇಳಿಯೇ ಬಿಟ್ಟ ನಿಂಗೊ ಶ್ಯಾಮಂಗೆ ಎಂತಾಯೆಕು?ಹೇಳಿ.ಎಂತರ ಹೇಳುವದು ಮದುವೆಲಿ ಆದರೆ”ಮಾಣಿ ಕಡೆವಕ್ಕೆ ಕೂಸಿನ ಕಡೆಂದ ಹೇಳಿ,ಕೂಸಿನವಕ್ಕೆ ಮಾಣಿ ಕಡೆಂದ ಹೇಳಿ ಮಂಕು ಮಾಡ್ಲೆ ಎಡಿತ್ತಿತು.ಉಪನಯನ ಆದ ಕಾರಣ ಹಾಂಗೆ ಹೇಳ್ಲೆ ಎಡಿಯ.ಆನು ನೆರೆಕರೆಯವ ಹೇಳಿ ಮಾತು ತೇಲ್ಸಿದವು ಕಿಟ್ಟಣ್ಣಜ್ಜ.ಆ ಪುಣ್ಯಾತ್ಮ ಹೆಚ್ಚು ಒಕ್ಕಿದ್ದ ಇಲ್ಲೆ ಪುಣ್ಯಕ್ಕೆ.ಅವ ಸುಮ್ಮನೇ ಕೂರ್ತದಕ್ಕೆ ಮಾತಿಂಗೆ ಎಳದ್ದದಷ್ಟೆ.”ಕುಂಬಳಕಾಯಿ ಕಳ್ಳ ಬೆನ್ನು ಮುಟ್ಟಿದಾಂಗೆ”ಕೂಡ್ಲೆ ಅಲ್ಲಿಂದ ರಟ್ಟಿದವು ಕಿಟ್ಟಣ್ಣಜ್ಜ.ಅಲ್ಲಿಂದ ಹಾಂಗೆ ಅಡಿಗೆ ಕೊಟ್ಟಗೆ ಕರೇಲಿ ಒಂದು ಸುತ್ತು ಹಾಕಿಕ್ಕಿ ಆ ಮನುಷ್ಯನತ್ತರಂದ ದೂರ ಕೂದಂಡವು.
ಈ ಅಮೆರಿಕದವಕ್ಕೆ ಅವು ತಿಂತ ಫಾಸ್ಟ್ ಫುಡ್ಡಿನ ಹಾಂಗೇ ಎಲ್ಲ ಬೇಗ ಬೇಗ ಆಯೆಕು ಹೇಳಿ ಗ್ರೇಶಿಂಡೊ ಎಂತದೊ ಬಟ್ಟಮಾವ ಬೇಗ ಬೇಗ ಮಂತ್ರ ಹೇಳಿ ಮಾಣಿಗೆ ಒಂದು ಜನಿವಾರ ಸುರುಶಿ ಹನ್ನೆರಡು ಗಂಟೆಗೆ ಕಾರ್ಯಕ್ರಮ ಮುಗುಶಿದವು.ಬೇಗ ಮುಗುದತ್ತನ್ನೆ ಉದಿಯಪ್ಪಗ ಸರೀ ತಿನ್ನದ್ದೆ ಹಶುದೆ ಆವ್ತು,ಇನ್ನು ಸೀತಾ ಉಂಡಿಕ್ಕಿ ಹೋಪದೆ ಹೇಳಿ ಉಂಬ ಕೊಟ್ಟಗಗೆ ಹೋದರೆ ಹಂತಿಯೇ ಹಾಕಿದ್ದವಿಲ್ಲೆ.ಹೆಮ್ಮಕ್ಕೊ,ಕೂಸುಗೊ ಎಲ್ಲ ಒಂದೊಂದು ಬಗೆ ಮೇಜಿಲಿ ಮಡುಗಿಂಡು ಸೌಟು ಹಿಡುಕ್ಕೊಂಡು ನಿಂದಿದವು,ಬಟ್ಲುದೆ ಕೊಡ್ತವು.ಚಕ್ಕನಾಟಿ ಕೂದು ಬಾಳೆಲಿ ಬಳುಸಿಂಡು ಉಂಬ ಕಿಟ್ಟಣ್ಣಜ್ಜಂಗೆ ಇದೆಂತ ಕರ್ಮ,ಆ ಬೇಳದ ಪುರ್ಬುಗಳ ಶಾಲೆಲಿ ಮಕ್ಕೊ ಗಂಜಿ ಊಟಕ್ಕೆ ಹೋವುತ್ತವಿಲ್ಲೆಯ ಹಾಂಗೆ ಸಾಲಿಲ್ಲಿ ಹೋಪದು ಹೇಳಿ ತೋರಿತ್ತು.ಹಾಂಗೆ ಎಂತದೂ ಅರಡಿಯದ್ದೆಪ್ಪಗ ಹತ್ರಿಪ್ಪ ಪ್ರಾಯದವರ ಕೇಳಿದವು ಹ್ಂತಿ ಇಲ್ಲೆಯೋ ಹೇಂಗೆ?ಹೇಳಿ.ಅವು..ಇಲ್ಲೆ ಈಗ ಬಫೆಯೇ ಸುಖ ಅಪ್ಪದು ಬೇಕಾದ್ದದರ ಹಾಕಿಂಡು ಬೇಗ ಉಂಡಿಕ್ಕಿ ಹೆರಡ್ಲಕ್ಕು ಹೇಳಿದವು.ಎಂತ ಸುಡುಗಾಡೋ ಮಣ್ಣೊ ಹೇಳಿಂಡು ಅವರ ಹಿಂದೇ ಸಾಲಿಲ್ಲಿ ಹೋದವು ಕಿಟ್ಟಣ್ಣಜ್ಜ.ಬಟ್ಲಿಲ್ಲಿ ಬಳುಸಿದ್ದು ನೋಡಿರೆ ತಲೆ ತಿರುಗಿತ್ತು ಕಿಟ್ಟಣ್ಣಜ್ಜಂಗೆ ಒಂದು ಫ್ರೈಡ್ ರೈಸಡ, ಸಲಾಡಡ,ಧಾಲಡ,ಚಪಾತಿ ಅಡ ಮತ್ತೋಂದು ಕೇಕೋ ಪಡಿಜ್ಙಾರೋ ಎಂತದೋ ಹೆಸರೂ ಗೊಂತಿಲ್ಲದ್ದ ಅಡಿಗೆಗೊ.ಕರೇಲಿ ರಜ್ಜ.ರಜ್ಜ ಹೇಳಿರೆ ಎರಡು ಚಂಚದಷ್ಟು ಅಶನ ಮೊಸರು ಬಳುಸಿದ್ದವು ಪುಣ್ಯಕ್ಕೆ.ಹೀಂಗೆ ಸಾಲುಕಟ್ಟಿ ಹೋಪಗ ಎಲ್ಲರನ್ನೂ ಕಾಣ್ತದ ಮನೆವಕ್ಕೆ.ಗುರ್ತವೂ ಹಿಡಿತ್ತವು.ನಾಲ್ಕು ಮಾತೂ ಆಡ್ತವು.ಕಿಟ್ಟಣ್ಣಜ್ಜನ ಗುರ್ತ ಇಲ್ಲೆ ಇದ ಹಾಂಗಾಗಿ ಇವ್ವಾರು,ನಿಂಗೊಗೆ ಗುರ್ತ ಸಿಕ್ಕಿತ್ತಾ?ಹೇಳಿ ಹೆಮ್ಮಕ್ಕೊ ಪಿಸಿ ಪಿಸಿನೆ ಮಾತಾಡಿಂಡವು.ಇದರೆಡೆಲಿ ಆರದ್ದೊ ಎಂಜಲು ಬಟ್ಲು ತಾಗಿತ್ತು ಕಿಟ್ಟಣ್ಣಜ್ಜನ ಮೈಗೆ.ಮೈಲಿಗೆ ಆವುತ್ತಿದಾ ಎಂಜಲು ಬಟ್ಲು ತಾಗಿರೆ.ಹಾಂಗೇಳಿ ಎರಡು ಬೊಬ್ಬೆ ಹಾಕಲುದೇ ಎಡಿಯ ದಿನಿಗೇಳದ್ದೆ ಹೋದ್ದದ್ದಲದೋ?ನಮ್ಮ ಕಿಟ್ಟಣ್ಣಜ್ಜಂಗೆ ಬಟ್ಲಿಲ್ಲಿ ಬಳುಸಿದ್ದೊಂದೂ ಮೆಚ್ಚಿದ್ದಿಲ್ಲೆ.ಮೊಸರು ಅಶನ ತಿಂಬೊ ಹೇಳಿರೆ ಚೂರೇ ಇಪ್ಪದು,ಹೊಟ್ಟೆ ತುಂಬ ಇಲ್ಲೆ.ವಾಪಾಸು ಕೇಳ್ಲೆ ಅದೇ ಹೆಮ್ಮಕ್ಕಳೆದುರು ಹೋಯೆಕನ್ನು ನಾಮೋಸು ಆವುತ್ತಿದ.ಹೇಂಗಾರು ಇಲ್ಲಿಂದ ಬಿಡುಗಡೆ ಆದರೆ ಸಾಕು ಹೇಳಿ ಆ ಜೆನಂಗಳೆಡೆಂದ ಪೆಡಚ್ಚಿಯೊಂಡೇ ಹೆರಬಂದು ಸೀತಾ ಹೆರಟು ಬಸ್ಸತ್ತಿ ಮನಗೆ ಬಂದವು.
ಈಗ ಕಿಟ್ಟಣ್ಣಜ್ಜ ಮೊದಲಾಣಾಂಗೆ ಜೆಂಬಾರಕ್ಕೆ ಹೋವ್ತವಿಲ್ಲೆ.ಹತ್ರಾಣವು ಬರೆಕು ಹೇಳಿ ಒತ್ತಾಯ ಮಾಡಿರೆ,ಹಂತಿ ಹಾಕುತ್ತಿ ಅಲ್ಲದೋ ಹೇಳಿ ಕೇಳಿಂಡೇ ಹೋಕಷ್ಟೆ.ಸೀತಜ್ಜಿ ಹೇಳುದೆಂತರ ಹೇಳಿರೆ ಈ ಬಫೆ ಬಂದದು ಒಳ್ಳೆದೇ ಆತು.ಇವರ ಜೆಂಬಾರದ ಭ್ರಾಂತು ಬಿಟ್ಟತ್ತು ಹೇಳಿ.ಆನು ಹೇಳುದು ಎಂತರಾ ಹೇಳಿರೆ ಒಂದು ಹಂತಿ ಆದರುದೇ ಹಾಕಿಯಪ್ಪಾ ನಮ್ಮ ಕಿಟ್ಟಣ್ಣಜ್ಜನಾಂಗಿರ್ತವಕ್ಕೆ ಹೇಳಿ.ನಿಂಗೊ ಎಂತ ಹೇಳ್ತಿ?
~~~
- ಗಡಿಬಿಡಿ ಎಡೆಲಿ ಚೂರು ಹೊತ್ತು ಅಪ್ಪಂಗೆ ಕೊಡ್ಲೆಡಿಗೊ…..? - December 15, 2013
- ಕಿಟ್ಟಣ್ಣಜ್ಜ ಬಫೆಲಿ ಉಂಡದು. - December 8, 2013
- ಹೆಮ್ಮಕ್ಕಳ ಕೆಲಸಿ ಅಂಗ್ಡಿ. - November 15, 2013
ಬರವಣಿಗೆ ಕಿಟ್ಟಣ್ಣಜ್ಜಂಗೆ ಸಿಕ್ಕುವ ಹಂತಿ ಊಟದಷ್ಟೇ ರುಚಿಯಾತು ಎನಗೆ .
ಪಾಪ ! ಆ ಸೀತಜ್ಜಿಗೆ ಅಜ್ಜ ಹಾಂಗೆ ಬಲುಗಿಯೊಂಡು ಹೂಪಗ ಹೇಂಗಾಗಡ !. ಹಾಂಗಾಗಿ ಇಲ್ಲಿ ಆನು ಸೀತಜ್ಜಿಯ ಪಾರ್ಟಿ . ಮತ್ತೆ ಹೋಲಿಂಗೆ ಊಟಕ್ಕೆ ಹೋದರೆ ಕಿಟ್ಟಣ್ಣಜ್ಜನ ಕಡೆ :-). ಅಂದಿಂಗೆ ಹಂತಿಯೇ ಸುಖ . ಇ೦ದ್ರಾಣ ಕಾಲಲ್ಲಿ ಎರಡೂ ಬೇಕಪ್ಪ . ಇಲ್ಲದ್ದರೆ ಬಂದ ಜನಂಗಳ ಚಂದಕ್ಕೆ ಊಟ ಮಾಡ್ಸಿ ಕಳುಸಿ ಕೊಡೆಕ್ಕಾರೆ ಮನೆಯವಕ್ಕೆ ಕಷ್ಟ ಅಕ್ಕು .
ಹಂತಿಲಿ ಕೂದು ಉಣ್ಣುವ ರೀತಿಯೇ ಲಾಯ್ಕ.
ಕರೇ ಎಲೆವರೆಂಗೆ ವಿವಿಧ ಪದಾರ್ಥ ಬಳಸಿ – ಅಶನ ಬಳಿಸಿ ಆದ ಮತ್ತೆ, ದೇವರ ಸ್ಮರಣೆಯೊಂದಿಗೆ ಊಟ ಸುರು ಮಾಡಿರೆ – ಕ್ರಮ ಪ್ರಕಾರ ಖಾದ್ಯಂಗ ಬಪ್ಪದು – ಪಾಯಸ ಬಪ್ಪ ಹೊತ್ತಿಂಗೆ ಚೂರ್ಣಿಕೆ ಹೇಳೆಕ್ಕು – “ಭೋಜನ ಕಾಲೆ ನಮ: ಪಾರ್ವತಿ ಪತೇ.. ಹರ ಹರ ಮಹದೇವ” ಬೊಬ್ಬೆ ಹೊಡೆಯೆಕ್ಕು – ಕೋನೇಲಿ ಮಜ್ಜಿಗೆ /ಮೊಸರು ಅಶನ ತಿಂದ ಮತ್ತೆ “ಗೋವಿಂದ …ಗೋವಿಂದ” ಹೇಳೆಕ್ಕು – ಮಧ್ಯ ಪಂಕ್ತಿಲಿ ಎದ್ದು ಹೋಪಲಾಗ. ಬಳಿಸೋವು ಜಾಗ್ರತೆ ಮಾಡಿರೆ ಹೆಚ್ಚು ವೇಸ್ಟ್ ಆಗ…
ಆಹಾ ! ಎಷ್ಟು ಚಂದದ ಊಟದ ಕ್ರಮ ! ಊಟ ಹೇಳಿರೆ ದೇವರ ಪೂಜೆ ಹಾಂಗೆ …. ಕ್ರಮ ಪ್ರಕಾರ.
ಹೋಳಿಗೆ ಬಳಸಿದೋವೆ ಎಲೆ ಎತ್ತೆಕ್ಕು ಮತ್ತೆ !
ಅದು ಬಿಟ್ಟು ಎಲೆ ಮೇಲೆ ಪಾಯಸ ಬಿತ್ತೋ ಕೂಡ್ಲೆ ತಿಂದವು.. ಕೋಸಂಬರಿ ಬಳಸಿದವೋ ಅದು ಕೂಡ್ಲೆ ಮಾಯ..
ಅಶನ ಬಪ್ಪಗ ಎಲೆಲಿ ಬೇರೆ ಎಂತ ಇರ್ತಿಲ್ಲೆ ! ಈ ಸಹಪಂಕ್ತಿಯೋವ ಜೊತೆ ಊಟಕ್ಕೆ ಕೂದರೆ ಹಿಂಸೆ…
ಬ್ರಾಹ್ಮಣರ ಜೋತೆ ಊಟಕ್ಕೆ ಕೂರೆಕಡ. ಅದ್ರೆ ಅವುಗಳ ಊಟದ ಕ್ರಮ ಕಲಿಯುವ ಮನಸ್ಸಿಲ್ಲೆ. ಮಂಗಂಗ…
ಇನ್ನು ಬಫೆಯೋ… ಎನಗಂತು ಆಗ… ಎನಗೊಂದು ನೆಲ ಸೀಟು…ಖುರ್ಚಿ ಟೇಬಲ್ ಆಗದ್ದೆ ಇಲ್ಲೆ…..
ಅಪ್ಪು.. ಹ೦ತಿಲಿ ಕೂದು ಉ೦ಡರೇ ಸುಖ.. ಲಾಯ್ಕ ಆಯಿದು ಬರವಣಿಗೆ.
ಶಹಬ್ಬಾಸ್…ಬರದ್ಸು ಒಳ್ಳೆದಾಯಿದು.
ಒಳ್ಳೆ ನಿರೂಪಣೆ.
ಬಫೆಗೆ ಅದರದ್ದೇ ಆದ ಇತಿ ಮಿತಿ ಇದ್ದು. ಅಂಬೆರ್ಪಿಂಗೆ ಆಯೆಕ್ಕದವಕ್ಕೆ, ಕೆಳ ಕೂಬಲೆ ಎಡಿಯದ್ದವಕ್ಕೆ, ಇದುವೇ ಲಾಯಿಕ.
ಕ್ರಮ ಪ್ರಕಾರ, ಕೆಳಕೂದು ಉಣ್ತವಕ್ಕೆ ಆ ವೆವಸ್ಥೆಯೂ ಬೇಕು.
ಬಫೆಲಿ ಉಂಡದು ಉಂಡ ಹಾಂಗೆ ಆವ್ತಿಲ್ಲೆ ಹೇಳುವದು ನಿಜ. ಕಿಟ್ಟಣ್ಣಜ್ಜ ಬಫೆಲಿ ಉಂಡದು ಲಾಯಕಾತು. ಒಳ್ಳೆ ಬರವಣಿಗೆ ಶ್ರುತಿ.
ಸಂಪ್ರದಾಯಸ್ಥರಿಂಗೋಸ್ಕರ ಒಂದು ಹಂತಿ ಮಾಡಿ ಬಾಕಿ ಎಲ್ಲೋರುದೆ ಬಫೆಲಿ ಉಂಬದು ಒಳ್ಳೆದು. ಹಂತಿ ಊಟಲ್ಲಿ( ಉಣ್ಣದ್ದೆ) ಚೆಲ್ಲಿದ ಆಹಾರ ಲೆಕ್ಕ ಹಾಕಿರೆ ಎಷ್ಟೋ ಹಸಿದ ಹೊಟ್ಟೆಗೆ ಊಟ ಕೊಡಲೆ ಸಾಧ್ಯ ಇದ್ದು. ಈ ಕಾಲಲ್ಲಿ ಆಹಾರ, ಗಾಳಿ, ನೀರು ಸಾರ್ವಜನಿಕ ಸೊತ್ತಾಂದರಿಂದ , ಹಾಳುಮಾಡುವ ಹಕ್ಕು ಆರಿಂಗೂ ಇಲ್ಲೆ. ವಿಷಯ ಲಾಯಕ ಆಯಿದು. ಧನ್ಯವಾದ. ಹರೇ ರಾಮ.
ಕಿಟ್ಟಣ್ಣಜ್ಜ ಬಫೆಲಿ ಉಂಡಾಡಿದ ಶುದ್ದಿ ಲಾಯ್ಕಾಯಿದು.ಕಣ್ಮರೆಯಾಗಿಯೊಂಡಿಪ್ಪ ಸಂಪ್ರದಾಯದ ಬಗ್ಗೆ ನಿರೂಪಣೆ ಕೊಶಿಯಾತು.
ಬೇಕಪ್ಪಾ …. ಬೇಕು. ಒಂದಂತಿಯಾರೂ ಇಲ್ಲದ್ರೆ ನವಗೆ ಮತ್ತೆ ಭೋಜನಕಾಲೇ ಮರದಿಕ್ಕುಗು
ಶುದ್ದಿ ಪಷ್ಟಾಯ್ದು
ಹೆಸರು ಶ್ರುತಿ ಆಯೆಕ್ಕು ಅಲ್ಲದೊ?ಶೃತಿ ಹೇಳಿ ಬರೆವದು ಸರಿ ಅಲ್ಲ ಹೇಳಿ ಕಾಣುತ್ತು.
ಗೋಪಾಲಣ್ಣಾ,
{ ಶ್ರುತಿ ಆಯೆಕ್ಕು ಅಲ್ಲದೊ }
ಶೃತಿ – ಶುದ್ಧ ಸಂಸ್ಕೃತ ಮೂಲರೂಪ.
ಶ್ರುತಿ – ಕನ್ನಡ / ಇಂಗ್ಲೀಷ್ ರೂಪ.
ಸಂಸ್ಕೃತ ರೂಪಲ್ಲಿ ಈ ಶಬ್ದವ ಪರಿಚಯ ಆದೋರು ಈ ಶಬ್ದವ “ಶೃತಿ” ಹೇಳಿ ಬರಗು; ಕನ್ನಡ ರೂಪಲ್ಲಿ ಕಲ್ತು / ಅದುವೇ ಹೆಚ್ಚು ಬಳಕೆ ಆದೋರು ಶ್ರುತಿ ಹೇಳಿ ಬರಗು.
ಎರಡೂ ರೂಪವೂ ಸರಿಯೇ ಆದ ಕಾರಣ, ಎರಡುದೇ ಬಳಕೆಲಿ ಇದ್ದು.
ಬೈಲಿಲಿಯೂ ಹಾಂಗೇ ಇರಳಿ. ಅಲ್ಲದೋ?
ಹರೇರಾಮ
ಗುರಿಕ್ಕಾರರೇ,
ಸಂಸ್ಕೃತಲ್ಲಿ ಇಪ್ಪದು ‘ಶ್ರುತಿ’ಹೇಳಿಯೇ, ‘ಶೃತಿ’ ಅಲ್ಲ. श्रुति.
ಗುರಿಕ್ಕಾರರೇ,
ಸಂಸ್ಕೃತಲ್ಲಿ ಇಪ್ಪದು ‘ಶ್ರುತಿ’ಹೇಳಿಯೇ, ‘ಶೃತಿ’ ಅಲ್ಲ. श्रुति ಆಯೆಕ್ಕು.