- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಹೆಣ್ಣೀಗ್ ಹೆಣ್ಣೆ ಯಾವತ್ತಿಗೂ ವಳ್ಳೆ ಮಿತ್ರೆ
ಅತ್ತೆ ಸೊಸೆ ಸಂಬಂಧದಲ್ಲೂ ಗೆಳೆತನ ನಿತ್ರೆ
ಸಂಸಾರದಲ್ಲಿ ಬತ್ತಿಲ್ಲೆ ಯಾವ್ದೆ ತಾಪಾತ್ರೆ||
ಹಳೇ ಕಾಲ್ದ ಅತ್ತೆ ಸೊಸೆ ಮಾರಾಮರಿ
ಇವತ್ನವರೆಗೂ ನಡದ್ ಬಂದು ತರಾವರಿ
ಮುಂದಾದ್ರೂ ನಿಂತ್ ಹೋಗ್ಲಿ ಈ ತರಾತುರಿ||
ಬಾಯ್ಗೆ ಬಂದದ್ದೆಲ್ಲ ಆಡ್ದ್ರೆ ಸೊಸೆಗ್ ಬೇಜಾರು
ಅತ್ತೆ ಮೇಲೆ ಪ್ರೀತಿಯಿಲ್ದೆ ಹೊರಗೆ ಹರಾಜು
ಚಾಡಿ ಮಾತು ಕುಹಕ ವ್ಯಂಗ್ಯ ನೂರಾರ್ ಥರದ್ದು||
ಸೊಸೆನೂ ಶುರು ಮಾಡ್ತು ಅತ್ತೆ ಮೇಲೆ ದ್ವೇಷ
ಮಾತಿಗೆ ಮಾತ್ ಬೆಳೆತೂ ತಡುಲಾಗ್ದೆ ತಾಪ
ಬಾಯ್ಗ ಬಂದ ಮಾತ್ನಲ್ಲಿ ಹಾಕ್ತಾ ಶಾಪ||
ಮಗ್ನ ಹೆಣ್ತಿ ಹೇಳೂ ಪ್ರೀತಿ ಅತ್ತೆಗ್ಯಾಕಿಲ್ಲೆ
ಗಂಡ್ನ ಹಡ್ದ ತಾಯಿ ಅನ್ನೊ ಮಮತೆ ಸೊಸೆಗಿಲ್ಲೆ
ಒಟ್ನಲ್ಲಿ ದಾಯಾದಿ ಅತ್ತೆ ಸೊಸೆಗೆ ವಳ್ಳೆ ಮನ್ಸಿಲ್ಲೆ||
ಕೈಯಲ್ಲಿಪ್ಪುತನ್ಕ ಅತ್ತೆ ದರ್ಬಾರ್ ಮಾಡ್ತು
ಹಾಸ್ಗೆ ಹಿಡಿದ್ರೆ ಸೊಸೆಗ್ ಆಗ ಕಾಲ ಬತ್ತು
ತಿರಸ್ಕಾರದಿಂದ ಸೊಸೆ ವಟವಟಗುಡ್ತು||
ಸೊಸೆಕಾಟ ತಡೂಲಾಗ್ದೆ ಅತ್ತೆ ತೀಡ್ತು
ಗಟ್ಟಿಯಿದ್ದಾಗ ಕಾಟಕೊಟ್ಟದ್ ಫಲ ಕೊಡ್ತು
ವೃದ್ಧಾಶ್ರಮ ಸೇರೋತನ್ಕ ವಿಚಾರ ಮಾಡ್ತು||
ಈಗ್ನ ಕಾಲ್ದಲ್ಲಿ ಅತ್ತೆ ನೋಡ್ಕಂಬ್ ಸೊಸೆ ಕಡ್ಮೆ
ನೌಕರಿ ಹೇಳ್ಕಂಡ್ ತಪ್ಪಸ್ಕೊಂಬೊರೇ ಭಾಳಕಡೆ
ಅತ್ತೆಗೆ ಎಂತಾ ಆದ್ರೂ ಬೇಜಾರಿಲ್ಲೆ ಸೊಸೆಕಡೆ||
ಇಂಥಾ ತಾರತಮ್ಯ ಬೇಡ ಅತ್ತೆಯಕ್ಕೊಗೆ
ಸೊಸೆಗೂ ಇರಲಿ ವಿಶ್ವಾಸ ಅತ್ತೆ ಕಡೆ
ಮುಂದಿನ ದಿನ ಕೂಡ್ಕಂಡ್ ಹೋಗ್ಲಿ ಅತ್ತೆ ಸೊಸೆ ಜಡೆ||
ನಿಂಗ್ಳ ಅಬಿಪ್ರಾಯಕ್ಕೆ ಹೇಳುಲೆ ಆಗದಿದ್ದಸ್ಟು ಕ್ರತಜ್ನತೆಗಳು.ಅಬಿಮಾನ ಸದಾ ಇರಲಿ.
ಒಳ್ಳೆ ಆಶಯದ ಕವಿತೆ
ಕವಿತೆ ತುಂಬಾ ಲಾಯ್ಕ ಇದ್ದು ,ಒಳ್ಳೆಯ ಸಂದೇಶವೂ ಇದ್ದು ,ಎಲ್ಲೋರು ಆಲೋಚಿಸಕ್ಕಾದ ವಿಚಾರ ಇದು.
ಇದು ಕಲ್ಪನೆಯೋ.ನಿಜವೋ ಗೊತ್ತಾತಲ್ಲೆ.
ಈಗ್ನ ಕಾಲ್ದಲ್ಲಿ ಅತ್ತೆ ಹಳ್ಳಿ ಕಡೆ,ಸೊಸೆ ಪೇಟೆ ಕಡೆ.ಹೇಂಗೆಲ್ಲ ಆಗ್ತು ಜೀವ್ನ.ಚಲೋ ಆಯ್ದು ಕವ್ನ.
ಹರೇ ರಾಮ.