Oppanna.com

ಸಮಸ್ಯೆ 60 : ಅಮೇರಿಕಲ್ಲಿ ಹಿಮವರ್ಷ

ಬರದೋರು :   ಸಂಪಾದಕ°    on   11/01/2014    21 ಒಪ್ಪಂಗೊ

ಈ ವಾರದ ಸಮಸ್ಯೆ ದೂರದ ಅಮೇರಿಕ ಭೂಖ೦ಡದ್ದು.
ಈ ಪಟಕ್ಕೆ ಒ೦ದು ಪದ್ಯ ಪ್ರಯತ್ನ ಮಾಡುವ°. ಅಮೇರಿಕ ಅಮೇರಿಕ
ಹಾ೦ಗೆಯೇ , ಭಾಮಿನಿಲಿ ಏನಾರು ಪರಿಹಾರ ಸಿಕ್ಕುಗೋ ನೋಡುವ°,ಆಗದೋ?
” ಗಡಗಡನೆ ನಡುಗಿತ್ತಮೇರಿಕ ಹಿಮದ ಪೆಟ್ಟಿ೦ಗೆ”
 
ಚಿತ್ರಕೃಪೆ ಃ ಅ೦ತರ್ಜಾಲ ( NDTV)

21 thoughts on “ಸಮಸ್ಯೆ 60 : ಅಮೇರಿಕಲ್ಲಿ ಹಿಮವರ್ಷ

  1. ಬಡಗು ದಿಕ್ಕಿನ ಶೀತಗಾಳಿಗೆ
    ಪಡುವ ದೇಶವು ತತ್ತರಿಸಿತಡ
    ಮೂಡೊ ಸೂರ್ಯನು ಮಾಯವಾದನು ಚಳಿಯು ಹೆಚ್ಚಾಗಿ ।
    ರೋಡು ತುಂಬಾ ಮಂಜ ಹಾಸಿಗೆ
    ಗಾಡಿಯೆಲ್ಲಕು ಐಸು ಹೊದಕೆಯು
    ಗಡಗಡನೆ ನಡುಗಿತ್ತಮೇರಿಕ ಹಿಮದ ಪೆಟ್ಟಿಂಗೆ ॥

    1. ಮೂರು,ನಾಲ್ಕು,ಐದನೆ ಸಾಲಿಲಿ ಸುರುವಾಣ ಅಕ್ಷರ ಲಘು ಆಯೆಕ್ಕನ್ನೆ ಅತ್ತೆ.

  2. ಚಿತ್ರಕ್ಕೆ ಪದ್ಯ
    ==========================
    ನೀಲಿ ಬಾನಿನ ಬೆಳಿಯ ಮೋಡದ
    ಪಾಲು ಭೂಮಿಗೆ ಬಂದು ಬಿದ್ದದೊ?
    ಜಾಲು ಪೂರಾ ಕೊಯಿಲು ಮಾಡಿದ ಹತ್ತಿ ತುಂಬಿದ್ದೋ?
    ಕಾಲ ಬೀಸಿದ ಕಲೆಯ ಜಾಲವೊ?
    ಹಾಲು ಬಣ್ಣದ ಹೊಳಪಿನೆಸಳಿನ
    ಮಾಲೆ ಕಟ್ಟುಲೆ ಕೈಗೆ ಸಿಕ್ಕದ ದೇವ ಮಲ್ಲಿಗೆಯೋ?

    1. ಆಹಾ..ಅದಿತಿಯಕ್ಕನ ಉಪಮೆ ರೈಸಿದ್ದು.ಒಳ್ಳೆ ಕಲ್ಪನಾಸರಣಿ.

    2. ಅದಿತಿಯಕ್ಕ, ಉಪಮೆಗೊ ಹಿಮದಷ್ಟೇ ಚೆ೦ದವೂ, ಅಷ್ಟೇ ದಪ್ಪವೂ ಆಯಿದು!!

  3. ಬಿಡದೆ ಬೀಸುವ ಶೀತಗಾಳಿಗೆ
    ಜಡಕೆ ಹರಿವದು ಮರದೆ ಹೋಯಿದು
    ಬೊಡುದೆ ಹೋತದ ನಾಡ ಜನತೆಗೆ ಮಂಜಿನಾರ್ಭಟಕೆ ।
    ಜಡತೆ ಹೆಚ್ಚಿತು ಜನಗಳಲ್ಲಿಯೆ
    ತಡವಲೆಡಿಯದ ಶೈತ್ಯದಾಟಕೆ
    ಗಡಗಡನೆ ನಡುಗಿತ್ತಮೇರಿಕ ಹಿಮದ ಪೆಟ್ತಿಂಗೆ ।।

    1. ಹೆಚ್ಚಿತ್ತು ,ತಡವಲೆಡಿಯದ್ದ , ಶೈತ್ಯದಾಟಕ್ಕೆ ಇತ್ಯಾದಿ ಒತ್ತಕ್ಷರ ಬರೆಯದ್ದ ಕಾರಣ ರಜಾ ಕನ್ನಡಕ್ಕೆ ಹತ್ತರೆ ಆಯಿದು ಅತ್ತೆ.
      “ತಡವಲೆಡಿಯದ್ದಿಡಿಯ ತಿ೦ಗಳು ” ಹೇಳಿ ಐದನೆ ಸಾಲಿನ ಬದಲ್ಸುಲಕ್ಕು.

  4. ಎಡೆಬಿಡದ ಚಳಿಯಾದ ಗಾಳಿಗೆ
    ಸುಡುವ ನೀರುದೆ ಮರುಗಳಿಗೆಲೇ
    ಗಡಿಗೆಯೊಳ ಮಂಜಾಗಿ ಜನಜೀವನವೆ ಸೋತತ್ತು I
    ನಡವ ನೆಲದ ಸ್ಥಿತಿಯ ಕಂಡದು
    ಸಿಡಿಲೆರಗಿದಾಂಗಾಗಿ ಕೆಡಗಿಯೆ
    ಗಡಗಡನೆನಡುಗಿತ್ತಮೇರಿಕ ಹಿಮದ ಪೆಟ್ಟಿ೦ಗೆ II

  5. ಎಡೆಬಿಡದ್ದೆಯೆ ಹೆಪ್ಪುಕಟ್ಟಿಕಿ
    ಮಡಲೆಳೆಯ ಹಾ೦ಗಿಲ್ಲಿ ನೇಲುವ
    ಗಡ ಗಡ ಚಳಿಗೆ ನಡುಗಿತ್ತಮೇರಿಕ ಹಿಮದ ಪೆಟ್ಟಿಂಗೇ
    ಮೆಡಿಬಿಡುವ ಚಳಿಗಾಳಿಗೇ ಸರಿ
    ಗುಡಿಯ ಹೆಟ್ಟಿ ಮನುಗೆಡ ಮಿನಿಯಾ
    ಜಡಬಿರುಶುಗಿದ ನೋಡು ಹಿಮಪಾತ ಬೆಶಿ ಬೆಶಿ ಶುದ್ದಿ

    1. ಶೈಲಜಕ್ಕಾ ,
      “ಗಡ ಗಡ ಚಳಿಗೆ ನಡುಗಿತ್ತಮೇರಿಕ ಹಿಮದ ಪೆಟ್ಟಿಂಗೇ”
      ಮಾತ್ರೆ ಹೆಚ್ಚಾತನ್ನೇ,ಚಳಿಗೆ ಶೀತ ಆದರೆ ಮಾತ್ರೆ ನು೦ಗೆಕ್ಕಷ್ಟೆ.ಹು..

  6. ಇಡಿಯ ದೇಶದ ಹಿಮದ ರಾಶಿಯ
    ಬಿಡುಸುಲೆಡಿಯದ್ದೆಲ್ಲ ನಿಶ್ಚಲ
    ಗಡಗಡನೆ ನೆಡುಗಿತ್ತಮೇರಿಕ ಹಿಮದ ಪೆಟ್ಟಿಂಗೆ
    ಕಡು ಚಳಿಗೆ ಜಲಪಾತ ಹಿಮವಾ-
    ತಡ ಮನೆಂದ ಹೆರಟವು ನೋಡುಲೆ
    ತಡವಲೆಡಿಯದ್ದ ಹಿಮಗಾಳಿಲಿಯದರ ಚೆಂದವನೇ

  7. ನೆಡವ ಹಾದಿಲಿ ಹಿಮದ ರಾಶಿಯೊ !
    ಎಡೆಬಿಡದೆ ಸುರಿಸುರಿವ ಮಂಜಿನ
    ಅಡೆತಡೆಯ ದಾರಿಂದ ಬಾಚುವ ನೂಕು ಗಾಡಿಗಳೊ!/
    ಅಡಿಮುಡಿಯ ಒಂಚೂರು ಕೂಡಾ
    ಬಿಡದೆ ಮುಚ್ಚಿದ ಅಂಗಿ ಹಾಕಿರು
    ಗಡಗಡನೆ ನೆಡುಗಿತ್ತಮೇರಿಕ ಹಿಮದ ಪೆಟ್ತಿಂಗೆ /

    1. ಬಾಲಣ್ಣ ಮಾವಾ,
      ಎರಡು ಪೂರಣ೦ಗಳೂ ಲಾಯ್ಕ ಆಯಿದು.

  8. ಹೊಡವ ಬಡಬಾನಲನ ನೆದುರುಸ
    ಲೆಡಿಗೊ ಬಡಮಾನುಶರು ಕಿಚ್ಚಿನ
    ತಡವಲೆಡಿಗೋ ? ಗಾಳಿ ನೀರಿಂಗೆದುರು ಆರು ಸಮ?/
    ನೆಡಶುವವ ಮೇಗಿದ್ದ ಎಲ್ಲೊರ
    ನಡೆಯ ನೋಡುವನವನೆ ಕೊಟ್ಟದು,
    ಗಡಗಡನೆ ನೆಡುಗಿತ್ತಮೇರಿಕ ಹಿಮದ ಪೆಟ್ಟಿಂಗೆ/

  9. ಶ್ಯಾಮಣ್ಣನ ಚಿತ್ರದ ಪ್ರಭಾವ ಇದು . —
    ತಡವು ಮಾಡದೆ ನಡುಕೆ ಕೂಪಾ
    ನಡುಮನೆಯ ಮಾಣಿ ದಡಬಡನೆ
    ದ್ದು ಡಬಡಬನೆಯೆ ಜೋರು ಗುದ್ದುವ ಮಾಷ್ಟರನ ನೋಡಿ
    ಕೊಡುಗದುತ್ತರ “ರವಿಯ ಮನೆಯೊಳ
    ಸುಡುವ ಕಿಚ್ಚಿನ ಗಾವು ಕುಂದಿಯೆ
    ಗಡಗಡನೆ ನಡುಗಿತ್ತಮೇರಿಕ ಹಿಮದ ಪೆಟ್ಟಿ೦ಗೆ” II
    (ಮಾಷ್ಟ್ರು ಕ್ಲಾಸಿಲಿ ಮಕ್ಕಳ ಸಾಮಾನ್ಯ ಜ್ಞಾನ ಪರೀಕ್ಷೆ ಮಾಡ್ಲೆ ಪ್ರಶ್ನೆ ಕೇಳಿಯಪ್ಪಗ ಮುಗ್ದ ಮನಸ್ಸಿಂದ ಉತ್ತರವ ಧೈರ್ಯಲ್ಲಿ ಹೇಳುವ ಮಾಣಿಯ ಕಲ್ಪನೆ …. ರವಿ =ಸೂರ್ಯ )

    1. ಕಲ್ಪನೆ ಲಾಯ್ಕಾಯಿದು.

    2. ಭಾಗ್ಯಕ್ಕಾ,
      “ನಡುಮನೆಯ ಮಾಣಿ ದಡಬಡನೆ
      ದ್ದು ಡಬಡಬನೆಯೆ ”
      ಇಲ್ಲಿ ಮಾತ್ರೆಗೊ ಸರಿ ಇದ್ದರೂ ಓದೊಗ ಡ೦ಕುತ್ತು.ರಜಾ ತಿದ್ದಿ,ಲಘು ಗುರು ಬೆರಕೆ ಮಾಡಿದರೆ ಲಾಯ್ಕ ಇತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×