Oppanna.com

ಹೀಂಗಾದ್ರೆ……

ಬರದೋರು :   ಕಲ್ಪನಾ ಅರುಣ್    on   30/03/2014    7 ಒಪ್ಪಂಗೊ

ಹವೀಕ್ರ ಶಾಸ್ತ್ರ ಸಂಪ್ರದಾಯ ಛಲೋ ಇದ್ದು
ಸಸಾರಕ್ಕೆ ಆಚರಣೆ ಮಾಡ್ಕಂಬಾಗಿದ್ದು
ಯಾವ್ದೇ ವಿಷ್ಯಾ ಆಡಂಬರಕ್ ದೂರಾ ಇದ್ದು
ಕಾಲಮಾನಕ್ ತಕ್ಕಾಂಗೆ ಬದ್ಲಾಗ್ತಾ ಇದ್ದು||
 
ಕೃಷಿ ಕೆಲ್ಸಾ ಈಗೀಗ ಬಿಡ್ತಾ ಇದ್ದೊ
ನೌಕ್ರಿ ಸ್ವಂತ ವ್ಯವಹಾರ ಮಾಡ್ತಾ ಇದ್ದೊ
ಕೃಷಿ ಮಾಡ್ದ್ರೆ ಯಾವ್ದೇ ರೀತಿ ದೋಷಾ ಇಲ್ಲೆ
ಜೀವ್ನ್ದ ದಾರಿ ಕಂಡ್‍ಕಂಡ್ರೆ ಬೇಜಾರಿಲ್ಲೆ||
 
ಆಚಾರ ವಿಚಾರಯೆಲ್ಲಾ ಈಗಾ ಬದ್ಲ ಆಯ್ದು
ದಿನ ಕಳ್ದಾಂಗ್ ಮಕ್ಳ ಯೋಚ್ನೆ ಹೊಸಾಹೊಸಾದ್ ಆಯ್ದು
ಪ್ರಪಂಚಾ ಬೆಳ್ದಂಗ್ ನಂಗ್ಳತನಾವೂ ಬೆಳ್ಯೊ
ಆಧುನಿಕತೆ ಸೌಕರ್ಯ ಎಲ್ರಿಗೂ ಸಿಗೊ||
 
ಹಳ್ಳಿ ಮನೆ ವಾತಾವರಣ ಇಷ್ಠಾ ಆಗೋ
ಅಲ್ಲಿ ಗಾಳಿ ಸಂಪ್ರದಾಯ ಹಿತಾ ಆಗೋ
ಈಗ್ನ ಕಾಲ್ದವೆಲ್ಲಾ ಹಳ್ಳೀ ರುಚಿ ಕಾಣೋ
ಹಚ್ಕಂಡ್ ಜೀವ್ನ ಮಾಡ್ವಂತಾ ಖುಶೀ ಇರೋ||
 
ಸರಳಾದ್ರೂ ಉಳ್ಯೊ ಮಕ್ಳಲ್ ವಳ್ಳೇತನಾ
ಸಹಾಯ ಸಹಕಾರ್ದ ಜೀವ್ನ್ದ ಖುಶಿತನಾ
ಕೃಷಿಯಾದ್ರೂ, ನೌಕ್ರಿಯಾದ್ರೂ ಜೀವ್ನ್ದ ದಾರಿ
ಕೆಲ್ಸ ಕಲ್‌ತ್ಕಂಡ್ ಜೀವ್ನ ನಡೆದ್ರೆ ಬದ್ಕೇ ಭಾರೀ||

7 thoughts on “ಹೀಂಗಾದ್ರೆ……

  1. .[…..ಕೃಷಿಯಾದ್ರೂ, ನೌಕ್ರಿಯಾದ್ರೂ ಜೀವ್ನ್ದ ದಾರಿ
    ಕೆಲ್ಸ ಕಲ್‌ತ್ಕಂಡ್ ಜೀವ್ನ ನಡೆದ್ರೆ ಬದ್ಕೇ ಭಾರೀ||] — ಒಪ್ಕೊ೦ಬ ಮಾತೇ ಜೌದು.ದುರದೃಷ್ಟಕ್ಕೆ ಹಳ್ಳಿ ಬದುಕು ಈಗ ಅಜ್ಜಿ-ಅಜ್ಜ೦ಗೆ ಮಾತ್ರ ಲಾಯ್ಕು ಅ೦ಬ್ ಹಾ೦ಗೆ ಆಗೋತು.ಅಲ್ದಾ!ಪದ್ಯದ ಭಾವನ್ಗೊ ಚೆನ್ನಾಗಿದ್ದು.ಕೊಶಿಯಾಗೊತು.ಅಭಿನ೦ದನಗೊ.

  2. .[…..ಕೃಷಿಯಾದ್ರೂ, ನೌಕ್ರಿಯಾದ್ರೂ ಜೀವ್ನ್ದ ದಾರಿ
    ಕೆಲ್ಸ ಕಲ್‌ತ್ಕಂಡ್ ಜೀವ್ನ ನಡೆದ್ರೆ ಬದ್ಕೇ ಭಾರೀ||] — ಒಪ್ಕೊ೦ಬ ಮಾತೇ ಜೌದು.ದುರದೃಷ್ಟಕ್ಕೆ ಹಳ್ಳಿ ಬದುಕು ಈಗ ಅಜ್ಜಿ-ಅಜ್ಜ೦ಗೆ ಮಾತ್ರ ಲಾಯ್ಕು ಅ೦ಬ್ ಹಾ೦ಗೆ ಆಗೋತು.ಅಲ್ದಾ!ಪದ್ಯದ ಭಾವನ್ಗೊ ಎನ್ನಾಗಿದ್ದು.ಕೊಶಿಯಾಗೊತು.ಅಭಿನ೦ದನಗೊ.

  3. ಖುಶಿ ಆತು ನರಸಿಂಹಣ್ಣ ನಿಂಗ್ಳ್ ಒಪ್ಪ ನೋಡಿ

  4. ಖುಷಿ ಕೊಡ್ತು ನಿಂಗ್ಳ ಪದ್ಯ.

  5. ಚನೈ ಬಾವ ನಿಂಗೆ ಕ್ರತಜ್ನತೆ ಮಾತ್ರ ಹೇಳ್ವೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×