- ಉದ್ದಿನ ಗೊಜ್ಜಿ - December 4, 2013
- ಕೆಸವಿನೆಲೆ ಚಟ್ನಿ - November 23, 2013
- ಕಣ್ಣಿಲಿ ಕುರು ಅಪ್ಪದಕ್ಕೆಮದ್ದು - November 11, 2013
ಪುಳ್ಯಕ್ಕೊ ಹಲಸಿನಕಾಯಿ ಆಯೆಕ್ಕಾರೇ ಸುರು ಮಾಡಿದ್ದವು “ಅಜ್ಜೀ ಉಂಡ್ಳಕಾಳೂ…” ಹೇಳಿಗೊಂಡು. ಉಪ್ಪಿಲಿ ಹಾಕಿದ ಸೊಳೆ ಕಳುದೊರುಷದ್ದು ಎಲ್ಲ ಮುಗುದಿತ್ತು. ಇನ್ನು ಹೊಸತ್ತು ಹಾಕಿ ಆಯೆಕ್ಕಷ್ಟೇ ಹೇಳಿ ಸಮಾದಾನ ಮಾಡಿ ಮಾಡಿ ಬಚ್ಚಿತ್ತು ಅಜ್ಜಿಗೆ.
ಅಂತೂ ಮೊನ್ನೆ ಮಾಡಿದೆ ಅದಾ. ಪುಳ್ಯಕ್ಕೊ ಕುಶೀಲಿ ಕಟುಂಕುಟುಂ ಅಗಿವದರ ನೋಡುದೇ ಕುಶಿ ಅಜ್ಜಿಗೆ.
ಹ್ಮ್.. ಈ ಉಪ್ಪಿಲಿ ಹಾಕಿದ ಸೊಳೆದು ಬಾರೀ ಉಪಯೋಗ ಇದ್ದು ಮಾಂತ್ರ. ಹಲಸಿನಕಾಯಿ ಇಲ್ಲದ್ದರೂ ವರುಷ ಇಡೀಕ ಸೊಳೆ ಸಿಕ್ಕುತ್ತದ. ಮೊದಲೆಲ್ಲ ಮಣ್ಣಿನ ಮಂಡಗೆಲಿ ಹಾಕಿಗೊಂಡಿದ್ದದು. ಅಡಿಯಂಗೆ ರಜಾ ಉಪ್ಪು, ಅದರ ಮೇಗೆ ಸೊಳೆ, ಪುನಾ ಉಪ್ಪು – ಸೊಳೆ ಹೀಂಗೆ. ಒಂಡು ದಿನ ರಜ್ಜ ಹಾಕಿ ಮಡುಗಿ ಅದಕ್ಕೆ ಒಂದು ಬಾಳೆ ಮುಚ್ಚಿ, ಕಲ್ಲು ಮಡುಗುದು ಭಾರಕ್ಕೆ. ಎರಡು ದಿನ ಕಳುದಪ್ಪಗ ಜಗ್ಗುತ್ತದ. ಪುನಾ ಹಾಕುದು… ಹಾಂಗೆ ಮಾಡಿ ಒಳ್ಳೆತ ಹಿಡಿಶುಲಾವುತ್ತು. ಒಂದರಿಯಂಗೇ ಹಾಕಲೆ ಹೆರಟ್ರೆ ದಣಿಯ ಹಿಡಿತ್ತಿಲ್ಲೆ. ಮತ್ತೆ ಅದರ ಬಾಯಿ ಕಟ್ಟೆಕು ಗಟ್ಟಿಗೆ. ಮುಚ್ಚೆಲು ಇದ್ದರೆ ಬಾರೀ ಒಳ್ಳೆದು. ಗಾಳಿ ಹೋಪಲಾಗ ಅದಕ್ಕೆ. ತಲೆಕಸವುದೇ ಬೀಳುಲಾಗ… ಸೊಳೆ ಮೆಸ್ತಂಗೆ ಆವುತ್ತು.
ಈಗ ಎಲ್ಲ ಪ್ಲೇಷ್ಟಿಕಿನ ಡ್ರಮ್ಮಿಲಿ ಹಾಕುತ್ತದು ಹೆಚ್ಚಿನವು. ಮಣ್ಣಿನ ಅಳಗೆ ಎಲ್ಲ ಸಿಕ್ಕುದು ಅಪುರೂಪ ಅಲ್ಲದೋ..?
ಅದಿರಲಿ…ಉಪ್ಪಿಲಿ ಹಾಕಿದ ಸೊಳೆದು ಉಂಡ್ಳಕಾಳು, ವೊಡೆ, ರೊಟ್ಟಿ, ತಾಳ್ಳು, ಬೆಂದಿ, ಮೇಲಾರ, ಸಾಂಬಾರು ಎಲ್ಲ ಆವುತ್ತು. ಸೊಳೆ ಹೊರಿವಲೂ ಆವುತ್ತು. ಈ ಸರ್ತಿ ಇದರನ್ನೇ ಬರವಾಳಿ ಕಂಡತ್ತು.
ಉಂಡ್ಳಕಾಳು:
ಎಂತದೇ ಮಾಡ್ತರುದೇ ಉಪ್ಪು ನೀರಿಲಿಪ್ಪ ಸೊಳೆಯ ತೆಗದು ಚಪ್ಪೆ ನೀರಿಲಿ ಹಾಕಿ ಮಡುಗೆಕ್ಕು. ಉಪ್ಪುಬಿಡುಸುಲೆ… ಒಂದು ಎರಡು ಗಂಟೆ ಎಲ್ಲ ಬೊದುಲ್ಲೆ ಹಾಕೆಕಕ್ಕು. ಮತ್ತೆ ಉಪ್ಪು ನೋಡಿಗೊಂಡತ್ತು. ಜಾಸ್ತಿ ಇದ್ದರೆ ಇನ್ನುದೇ ರಜ ಬೊದುಲ್ಲೆ ಬಿಟ್ರಾತು…
ಬೊದುಲ್ಲೆ ಹಾಕಿದ್ದದರ ಒಳ್ಳೆತ ಹಿಂಡೆಕ್ಕು. ಮೃದುವಾಗಿ ತೆಳೂ ಇಪ್ಪ ಸೊಳೆ ಆದರೆ ಕಡವಲೆ ಸುಲಾಬ. ಗಟ್ಟಿ ಇದ್ದರೆ ಅದರ ಸೀಳು ಸೀಳು ಮಾಡೆಕ್ಕು. ಒಂದು ಮುಷ್ಟಿ ಅಕ್ಕಿಯುದೇ ಹಾಕೆಕ್ಕಾತೊ. ಬೆಳ್ತಿಗೆಯೂ ಅಕ್ಕು ಇಲ್ಲದ್ರೆ ಬೆಳೀ ಇಪ್ಪ ಕೊಯಿಶೆಕ್ಕಿಯೂ ಅಕ್ಕು… ಮೊದಲೇ ಬೊದುಲ್ಲೆ ಹಾಕೆಕ್ಕು ಅದರ.
ಅಕ್ಕಿ, ಸೊಳೆ, ಜೀರಿಗೆ, ಅರಿಶಿನ, ಕಾಯಿ, ಉಪ್ಪು ಕಮ್ಮಿ ಇದ್ದರೆ ಉಪ್ಪು – ಎಲ್ಲ ಒಟ್ಟಿಂಗೆ ಕಡವಕಲ್ಲಿಂಗೆ ಹಾಕಿ ತಿರುಗುಸಿತ್ತು. ಈ ಕಡವದೇ ದೊಡಾ ಕೆಲಸ. ಕೈ ಗೆಂಟು ಬೇನೆ ಇದಾ. ತೆಳೂ ಸೊಳೆ ಆದರೆ ಸುಲಾಬ ಆವುತ್ತು. ಮೊನ್ನೆ ಆನು ಮಾಡಿದ್ದದು ಹಾಂಗೇ ಇತ್ತು. ಇಲ್ಲದ್ದರೆ ಕಡವಲೆಡಿಯೆಕ್ಕೆ ಅಜ್ಜಿಗೆ. ಹೇಳಿದಾಂಗೆ ಒಪ್ಪಣ್ಣ ಕಡದು ಕೊಡ್ತೇಳಿದ್ದ ಒಂದರಿ… ಪುಳ್ಯಕ್ಕೊ ಎಲ್ಲ ಸೇರಿರೆ ಎಷ್ಟುದೇ ಮಾಡ್ಳಕ್ಕಪ್ಪ.
ಹ್ಮ್.. ಕಡದಾತೊ. ಇನ್ನು ಅದರ ಸಣ್ಣ ಸಣ್ಣ ಉಂಡೆ ಮಾಡಿ ಹೊರುದರೆ ಆತು.. ಉಂಡೆ ಮಾಡ್ಳುದೇ ರೆಜಾ ತಾಳ್ಮೆ ಬೇಕಾವುತ್ತು. ಮೇಗಾಣ ಮನೆ ಈಚಂಗೆ ಅಂಬೆರ್ಪು ಜಾಸ್ತಿ. ದೋಡ್ಡ ಉಂಡೆ ಮಾಡಿ ಹಾಕುಗು, ಬೇಗ ಉಂಡೆಮಾಡಿ ಮುಗಿಯೆಕ್ಕೂಳಿ. ಸಣ್ಣ ಸಣ್ಣಕ್ಕೆ ಮಾಡಬ್ಬೋ ಹೇಳಿರೆ ಕೇಳ.. ಹೇಂಗಾದರೆಂತ ಎಲ್ಲ ಹೊಟ್ಟೆಗೇ ಹೋಪದನ್ನೇ ಹೆಳಿ ಅವನ ತರ್ಕ…
ಬರೇ ಉಂಡೆ ಮಾಡುದು ಮಾಂತ್ರ ಅಲ್ಲ… ಇನ್ನೊಂದು ಬಗೆ ಇದ್ದು. ಉಂಡೆಯ ಒಳದಿಕೆ ಸಣ್ಣ ಗೋಟುಕಾಯಿ ತುರಿ ಮಡುಗಿ ಉಂಡೆ ಮಾಡ್ತದು. ಚೂರಿಬೈಲಿನ ದೀಪ ಹಾಂಗೇ ಮಾಡುದು. ಅದರ ತಾಳ್ಮೆಗೆ ಮೆಚ್ಚೆಕ್ಕೇ… ಅದೂ ಬಾರೀ ಲಾಯಿಕಾವುತ್ತು. ಗೋಟುಕಾಯಿ ತುಂಡು ಮಡುಗುತ್ತರೆ ಕಡವಾಗ ದಣಿಯ ಕಾಯಿ ಹಾಕೆಕ್ಕೂಳಿಲ್ಲೆ…
ಉಂಡೆ ಮಾಡಿದ್ದದರ ಮತ್ತೆ ಹೊರುದತ್ತು.. ರಜಾ ಕೆಂಪಪ್ಪಾಗ ತೆಗವದು. ರಜಾ ಹಸಿ ಇಪ್ಪಾಗಳೇ ತೆಗೆತ್ತ ಕ್ರಮವೂ ಇದ್ದು. ಅದು ಕರುಕುರು ಇರ್ತಿಲ್ಲೆ. ಆದರೂ ಅದೊಂದು ರುಚಿ…! ಬಂಡಾಡಿಪುಳ್ಳಿಗೆ ಹಾಂಗೆ ರಜಾ ಹಸಿ ಇಪ್ಪದರ ತಿಂಬಲೆ ಬಾರೀ ಪ್ರೀತಿ… ಒಲೆಬುಡಲ್ಲೇ ಕಾದು ಕೂರುಗು ಪಾಪ…
ವೊಡೆ:
ಉಂಡ್ಳಕಾಳಿಂದೇ ಹಿಟ್ಟಿನ ವೊಡೆ ಮಾಡ್ಳೂ ಆವುತ್ತು. ಬಾಳೆಲೆಲಿ ತಟ್ಟಿ ಹೊರುದರಾತು. ಉಂಡೆ ಮಾಡುವಷ್ಟು ತಾಳ್ಮೆ ಇರ್ತಿಲ್ಲೆ ಸರಸೊತಿ ಅಕ್ಕನಾಂಗಿದ್ದವಕ್ಕೆ… ಹೀಂಗೆ ಒಡೆ ಮಾಡಿರಾತು… ಅದೇ ರುಚಿ. ಆಕಾರ ಮಾಂತ್ರ ಬೇರೆ…
ಕಾರ ಬೇಕಾರೆ ರಜ ಮೆಣಸಿನ ಹೊಡಿ, ಕೊತ್ತಂಬರಿ ಎಲ್ಲ ಹಾಕುಲಕ್ಕು ಹಿಟ್ಟಿಂಗೆ..
ಸೊಳೆರೊಟ್ಟಿ:
ರೊಟ್ಟಿ ಮಾಡ್ತರೆ ಬೊದುಲ್ಲೆ ಹಾಕಿದ ಸೊಳೆಯ ಹಿಂಡುವಾಗ ಹದಾಕೆ ಹಿಂಡಿರೆ ಸಾಕು. ಉಂಡ್ಳಕಾಳಿಂಗೆ ಸಮಾಕೆ ಹಿಂಡೆಕ್ಕು…
ಸೊಳೆಗೆ ಒಂದೆರಡು ಹಸಿಮೆಣಸು, ಕಾರ ಜಾಸ್ತಿ ಬೇಡದ್ರೆ ಒಂದು ಸಾಕು, ಮತ್ತೆ ನೀರುಳ್ಳಿ, ಕಾಯಿ, ಉಪ್ಪು ಬೇಕಾದರೆ ಎಲ್ಲ ಹಾಕಿ ಕಡವದು. ಅಕ್ಕಿದೇ ಬೇಕಾರೆ ಹಾಕುಲಕ್ಕು. ಒಳ್ಳೆ ಸೊಳೆ ಆದರೆ ಬರೇ ಸೊಳೆಯನ್ನೇ ಕಡದು ಮಾಡ್ಳಾವುತ್ತು.. ಬಾರೀ ರುಚಿ ಆವುತ್ತದು..
ಕಡದಿಕ್ಕಿ ರಜಾ ದೊಡ್ಡ ಉಂಡೆ ಮಾಡಿ, ಒಂದು ಬಾಳೆ ಕೀತಿಲಿ ಕೈಲಿ ಹತ್ಸೆಕ್ಕು ಅದರ.. ರೊಟ್ಟಿಯಾಂಗೆ ತೆಳೂವಿಂಗೆ… ಮತ್ತೆ ಬಾಳೆ ಸಮೇತ ಕಾವಲಿಗೆಗೆ ಹಾಕುದು… ರೊಟ್ಟಿ ಕಾವಲಿಗೆಲಿ ಬಾಳೆ ಮೇಗಂದ ಇಪ್ಪಾಂಗೆ – ಕವುಂಚಿ… ಒಂದು ರಜ್ಜ ಕಳುದು ಬಾಳೆಕೀತಿನ ತೆಗೆಯೆಕ್ಕು ಮೆಲ್ಲಂಗೆ. ಆ ರೊಟ್ಟಿಗೆ ತುಪ್ಪವೋ ಎಣ್ಣೆಯೋ ಮಣ್ಣ ಹಾಕಿ ಬೇಶೆಕ್ಕು ಲಾಯ್ಕಕ್ಕೆ… ಎರಡು ಹೊಡೆಯನ್ನುದೇ…
ರುಚಿ ರುಚಿ ರೊಟ್ಟಿ ತಯಾರಾತದ.. ಇದರ ಅಂತೇ ತಿಂಬಲಕ್ಕು… ಕೂಡ್ಳೆ ಎಂತ ಬೇಕೂಳಿಲ್ಲೆ…
ಸೊಳೆ ಹೊರುದ್ದು:
ಹೊರಿಯೆಕ್ಕಾರೆ ಬರೇ ಮೆಸ್ತಂಗೆ ಸೊಳೆ ಆಗ. ಗಟ್ಟಿ ಸೊಳೆ ಬೇಕು. ಸೊಳೆಯ ನೀರಿಂಗೆ ಹಾಕಿ ತೆಗದು ಮಡುಗೆಕ್ಕು. ಅದರ ನೀರಿನಂಶ ಆದಷ್ಟು ಹೋಯೆಕ್ಕು..
ಸಪುರ ಸಪೂರಕ್ಕೆ ಕೊರದು ಹೊರುದರಾತು ಮತ್ತೆ. ದಣಿಯ ಸಪುರ ಕೊರವದು ಬೇಡ… ಚಿರುಟುತ್ತು ಅದು…
ನಾವು ಹಲಸಿನಕಾಯಿ ಸೊಳೆ ಅಂತೆ ಹೊರಿವಾಗ ಉಪ್ಪುನೀರು ಮಾಡಿ ಹಾಕುತ್ತಲ್ಲದೋ… ಇಲ್ಲಿ ಅದು ಬೇಡ. ಸೊಳೆಲೇ ಉಪ್ಪಿದ್ದನ್ನೆ.. ಸೊಳೆ ಇಲ್ಲದ್ರೂ ಸೋಂಟೆ ತಿಂಬಲಕ್ಕದ..
ತಾಳ್ಳು:
ತಾಳ್ಳುದೇ ರುಚೀ ಆವುತ್ತು.. ಉದ್ದಿನ ಬೇಳೆ, ಸಾಸಮೆ, ಮೆಣಸು ಎರಡು ತುಂಡು, ಎಣ್ಣೆ – ರಜ ಜಾಸ್ತಿ, ಎಲ್ಲ ಹಾಕಿ ಒಗ್ಗರಣೆ ಮಡುಗಿತ್ತು ಬಣಲೆಲಿ.. ಚಟ ಚಟ ಹೊಟ್ಟುವಾಗ ಬೇನ್ಸೊಪ್ಪು, ಮತ್ತೆ ಸೊಳೆ ಹಾಕಿತ್ತು.. ರಜ ನೀರು, ಮೆಣಸಿನ ಹೊಡಿ, ಉಪ್ಪು – ಬೇಕಾರೆ, ಬೆಲ್ಲ – ಸೀವು ಜಾಸ್ತಿ ಬೇಕಾರೆ ಹೆಚ್ಚೆ ಹಾಕಿತ್ತು, – ಎಲ್ಲ ಹಾಕಿ ಮುಚ್ಚಿ ಮಡುಗಿತ್ತು.. ರಜ ಕಳಿವಾಗ ಲಾಯಿಕ ತೊಳಸೆಕ್ಕು.. ಆತೂಳಿ ಅಪ್ಪಾಗ ಕಾಯಿ ಹಾಕಿತ್ತು.. ಕಾಯಿ ಬೇಕೂಳಿಯೇ ಇಲ್ಲೆ.. ಹಾಕಿರೆ ರಜ ಹೆಚ್ಚು ಹೊತ್ತು ಒಲೆಲೆ ಮಡುಗೆಕ್ಕು.. ಇಲ್ಲದ್ರೆ ಇರುಳಿಂಗೊರೆಗೆ ಒಳಿಯ ಇದಾ.. ಈ ತಾಳ್ಳಿಂದು ಒಗ್ಗರಣೆಲೇ ಪರಿಮ್ಮಳ.. ಕಾಯಿ ಹಾಕದ್ರೂ ಸಾರ ಇಲ್ಲೆ..
ರಜ ಸೀವು ಸೀವು ಮಾಡಿರೆ ಲಾಯಿಕಾವುತ್ತು…
ಹಾಂಗೇ ಉಪ್ಪಿಲಿ ಹಾಕಿದ ಸೊಳೆದು ಮೇಲಾರ, ಬೆಂದಿ, ಸಾಂಬಾರು ಎಲ್ಲವುದೇ ಆವುತ್ತು… ಉಪ್ಪು ನೋಡಿಗೊಂಡ್ರಾತು..
ಹ್ಮ್.. ಒಂದರಿ ಮಾಡಿದೆ ಅದಾ ಉಂಡ್ಳಕಾಳು… ಪುಳ್ಳಿ ಅದರ ಎಲ್ಲ ಪಟ ತೆಗದು ಮಡಗಿದ್ದು, ಬೈಲಿಂಗೆ ತೋರುಸುಲಡ.. ಇಲ್ಲಿ ಅಂಟುಸಿದ್ದೆ.. ನೋಡಿ ಆತೋ..
ಅಜ್ಜೀ, ಹೀಂಗೆ ಉಂಡ್ಳಕಾಳು ಮಾಡಿ ಚೆಂದಕ್ಕೆ ಎದುರು ಮಡಿಗಿದರೆ ಬೈಲಿಲಿ ಎಂಗೊಗೆಲ್ಲಾ ಕೊದಿ ಆವುತ್ತು.. ಉಪ್ಪಿನ ಸೊಳೆ ವೈವಿಧ್ಯಂಗ ಲಾಯಕಾಯಿದು.
ಈ ವರ್ಷ ಹಲಸಿನ ಕಾಯಿ ಇಲ್ಲದ್ದೆ ಸೊಳೆ ಉಪ್ಪಿಲಿ ಹಾಕಿದ್ದಿಲ್ಲೇ. ನಿಂಗಳಲ್ಲಿಗೆ ಬಪ್ಪದು ಆಗದೋ? ಸೊಳೆಯೋ, ಉಂಡಲಕಾಳೋ, ಇನ್ನೆಂತಾರೋ ಮಾಡಿದ್ದದರ ಕೊಟ್ಟಿಕ್ಕಿ ಆತೋ ಅಜ್ಜೀ?
ಈಗ ಆನು ಬಪ್ಪಗ ತಡವಾಗಿ ಶ್ರೀಶಣ್ಣ, ಒಪ್ಪಣ್ಣ, ಒಪ್ಪಕ್ಕ ತಿಂದು ಮುಗಿಶಿದವೋ ಕಾಣ್ತು.
ಧಾರಳ ಕೊಡುವೊ…
ನೀನು ಬತ್ತರೆ ಪುನಾ ಮಾಡ್ಳಕ್ಕಪ್ಪಾ.. ಮಾಡೆಕ್ಕಾರೆ ಎಂತ ಆಗೆಡ.. ಬಾರದ್ವಾಜದ ಮಕ್ಕೊಗುದೇ ಸಿಕ್ಕಿದಾಂಗಾವುತ್ತು..
ಅಜ್ಜೀ..
ಸಕಾಲಕ್ಕೆ ಒಳ್ಳೆ ಅಡಿಗೆ ಮಾಡ್ಳೆ ಹೇಳಿಕೊಟ್ಟಿದಿ. ಲಾಯಿಕಾಯಿದು.
ಮೊನ್ನೆ ಉಂಡ್ಳಕಾಳು ಮಾಡಿಪ್ಪಗ ಕೀಜಿಡಬ್ಬಿಲಿ ತುಂಬುಸಿದ್ದಲ್ಲದೋ ನಾವು? 😉
ಅಂಬಗ ಇದೇವತ್ತು ಮಾಡಿದ್ದೋ?
ಎಂಗೊಗೆ ಗೊಂತಾಗದ್ದೆ ಮಾಡಿದ್ದೋ ಹೇಳಿಗೊಂಡು ಒಪ್ಪಕ್ಕಂಗೊಂದು ಸಣ್ಣ ಸಂಶಯ ಬಯಿಂದು. 🙁
ಅಲ್ಲಬ್ಬೋ… ಅದೇ ದಿನ ಕಸ್ತಲಪ್ಪಾಗ ಪುಳ್ಳಿಗೆ ಪಟ ತೆಗೇಕು ಹೇಳಿ ಕಂಡದು ಪುನಾ… ಅಂಬಗ ಹೀಂಗೆ ಪ್ಲೇಶ್ಟಿಕು ಡಬ್ಬಿಲಿ ಹಾಕಿದ್ದು ಅದು.. ಉಮ್ಮ ನಮುನೆ ನಮುನೆಲಿ ಪಟ ತೆಗಕ್ಕೊಂಡಿದ್ದತ್ತು.. ಮುಗುದ ಮತ್ತೆ ಒಪ್ಪಣ್ಣಂಗೆ ತೋರುಸಿ ಆಸೆ ಬರುಸುಲಡ..
ಅಜ್ಜೀ..
ಶಾಕ ಪಾಕ ಪೂರ ಲಾಯಿಕಾಯಿದು.
ಕಾದೊಂಡಿತ್ತಿದ್ದೆ, ಅಂಬೆರ್ಪಿಲಿ ಬೆಶಿಬೆಶಿ ಉಂಡ್ಳಕಾಳಿನ ಅಗುದೆ, ನಾಲಗೆ ಕರಂಚಿ ಇಷ್ಟುದಿನ ಮಾತಾಡ್ಳಾಯಿದಿಲ್ಲೆ! 🙁
{ಬಾಳೆಲೆಲಿ ತಟ್ಟಿ ಹೊರುದರಾತು.}
– ಅಜ್ಜೀ, ಹೀಂಗುದೇ ಹೊರಿವಲಾವುತ್ತೋ? ಎಣ್ಣೆ ಬೇಡದೋ ಅಂಬಗ?
ಎಂತ್ಸದೂ ಮಾಡುವಿ ನಿಂಗೊ ಅಡಿಗೆಒಳ ಕೂದಂಡು.
ಏ ನೆಗೆಗಾರ°,,,ಅಲ್ಲಿ ಪಟ ೪ ರಲ್ಲಿ ಪುಚ್ಚೆ ಕೂಡ ಕಾದು ಕೂಯಿದು.ನೀನು ಹಾಂಗೆ ಅಂಬೆರ್ಪಿಲಿ ತಿಂದರೆ ಹೇಂಗೆ? ರಜ್ಜ ಸಮಾಧಾನ…ಆನುದೇ ಬತ್ತೆ..
(ಎನ್ನ ಹಾಂಗೆ ಅಜ್ಜಿಯಕ್ಕೊಗೆ ಕೈಸಕಾಯಕ್ಕೆ ಸೇರೇಕು) ಅಜ್ಜಿಗೆ ಕೈ ಸಕಾಯ ಮಾಡಿಯೂ ಬಾಳೆಲಿ ತಟ್ಟಿ ಹೊರಿವದು ಹೇಂಗೆ ಗೊಂತಾಯಿದಿಲ್ಲೆಯಾ?. ಕೈ ಸಕಾಯ ಕೈಂದ ಬಾಯಿಗೋ ಹೇಳಿ ಒಂದು ಸಣ್ಣ ಸಂಶಯ. 🙂 🙂
ಅದಾ, ನೆಗೆಗಾರಂಗೆ ನಾಲಗೆ ಕರಂಚಿದ್ದಡ್ಡ.. ಮತ್ತೆ ಅಕ್ಕಂಗೆ ಕೊಡದ್ದೆ ತಿಂದರೆ ಹಾಂಗೆ ಅಕ್ಕು ಆತೋ ನೆಗೆಗಾರೋ? ಇನ್ನಾದರೂ ರಜ್ಜ ಬಾಕಿದ್ದೊರಿಂಗೆ ಕೊಟ್ಟು ತಿಂದುಗೋ ಆತೋ?
ನಗೆಗಾರಣ್ಣೋ, ಇದಾ ಜಾಸ್ತಿ ಬಿಂಗಿ ಮಾಡೆಡ, ಡಾಗುಟ್ರಕ್ಕನ ಸೂಜಿಯ ಪರಿಚಯ ಇದ್ದನ್ನೆ? ಮರದತ್ತಾ?? ಅಲ್ಲದ್ದೆ ಬಂಡಾಡಿ ಅಜ್ಜಿಯುದೆ ಬಾಳೆಯ ಬದಲಿಂಗೆ ನಿನ್ನ ಬೆನ್ನಿಂಗೆ ತಟ್ಟಿ ಹೊರಿವಲೆ ಹೆರಟ್ರೆ ಕಷ್ಟ ಅಕ್ಕು ಮತ್ತೆ! 🙂
ಹೀಂಗೆ ಬಿಂಗಿ ಮಾತಾಡುದಕ್ಕೇ ನಾಲಗೆ ಕರಂಚುತ್ತದು.. ಗೊಂತಾತೊ?
ಹೇಳಿದ್ದದರ ಸರಿ ಕೇಳುಲಿಲ್ಲೆ..
ಅಜ್ಜೀ! ಎನಗೊಂದು ಸಣ್ಣ ಸಂಶಯ, ಬಾಲ್ದಿಲಿ, ಕರಡಿಗೆಲಿ, ಪಾತ್ರಲ್ಲಿ, ಬಟ್ಲಿಲಿ ಎಲ್ಲ ಹಾಕುದು ಕಂಡಿದೆ.. 🙂 ಉಪ್ಪಿಲಿ ಸೊಳೆ ಹಾಕುತ್ತದು ಹೇಂಗೇಳಿ!!!! 🙂
ಅದಪ್ಪು ಮಾಣಿ,
ಅಂತೇ ಪೆರಟ್ಟುಮಾತಾಡಿಗೊಂಡು ಹೊತ್ತು ಕಳದರೆ ಅದೆಲ್ಲ ಹೇಂಗೇಳಿ ಅರಡಿಯ.
ರಜ ರಜ ಎನ್ನ ಹಾಂಗೆ ಅಜ್ಜಿಯಕ್ಕೊಗೆ ಕೈಸಕಾಯಕ್ಕೆ ಸೇರೇಕು. ಗೊಂತಾತೋ? 😉
ಪಟಂಗಳ ನೋಡಿ ಕೊದಿ ತಡವಲಾವುತ್ತಿಲ್ಲೆ ಅಜ್ಜೀ. ಎಂಗೊಗೆ ಕೊಡೆಯಾಲಲ್ಲಿ ಈ ಉಂಡ್ಳ ಕಾಳು ತಿಂತ ಭಾಗ್ಯ ಇಲ್ಲೇನೆ ಹೇಳಿ ಬೇಜಾರು ಆವ್ತು. ಹೇಳಿದ ಹಾಂಗೆ, ಹಲ್ಲು ಸೆಟ್ಟು ಮಡಗಿದ ಅಜ್ಜ/ಅಜ್ಜಿಗವಕ್ಕೆ ಹಸಿ ಇಪ್ಪಗಳೇ ತೆಗೆತ್ತ ಬೆಳಿ ಉಂಡ್ಳ ಕಾಳೇ ಆಯೆಕಷ್ಟೆ. ಇಲ್ಲದ್ರೆ ಗುಂಡು ಕಲ್ಲಿಲ್ಲಿ ಉಂಡ್ಳ ಕಾಳಿನ ಗುದ್ದಿ ಹೊಡಿ ಮಾಡಿ ಮುಕ್ಕೆಕಷ್ಟೆ. ಉಪ್ಪಿಲ್ಲಿ ಹಾಕಿದ ಸೊಳೆಯ ವೈವಿಧ್ಯ ಲಾಯಕಾಯಿದು.
{ ಎಂಗೊಗೆ ಕೊಡೆಯಾಲಲ್ಲಿ ಈ ಉಂಡ್ಳ ಕಾಳು ತಿಂತ ಭಾಗ್ಯ ಇಲ್ಲೇನೆ ಹೇಳಿ ಬೇಜಾರು ಆವ್ತು. }
ಬೇಜಾರು ಮಾಡಡಿಮಾವ°, ಎಂಗೊಗೂ ಕೊಟ್ಟಿದಿಲ್ಲೆ,
ಬೆಶಿತಣುದಕೂಡ್ಳೇ ಸೀತ ಕರಡಿಗೆಗೆ ತುಂಬುಸಿ ಒಳ ಮಡಗಿದ್ದು ಈ ಅಜ್ಜಿ.
ಬೆಶಿ ಇಪ್ಪಗಳೇ ತಿಂದರೆ ಬಾಯಿ ಕರಂಚುತ್ತು! 🙁
ಬಂಡಾಡಿಗೆ ಬಂದರೆ ಎಷ್ಟುದೇ ಕೊಂಡೋಪಲಕ್ಕದ… ಮಾಡಿಕೊಡುವೊ.. ಆತೊ…
ಅಜ್ಜಿಯ ಸೊಳೆ ತಿಂಡಿಗೊಕ್ಕೆ ಕಾದೊಂಡು ಇತ್ತಿದ್ದೆ. ನಿಂಗೊ ಮಾಡಿ ಕೊಟ್ಟ ಸೊಳೆ ರೊಟ್ಟಿಗೆ ತೆಂಗಿನೆಣ್ಣೆ, ಬೆಲ್ಲ ಕೂಡಿ ತಿಂದೆ. ಲಾಯಿಕ್ ಆತು. ಉಂಡ್ಲ ಕಾಳು ಮಾತ್ರ ರೆಜಾ ಗಟ್ಟಿ ಆತು, ಜೌವನಿಗರು ಅಲ್ಲದ, ಹಲ್ಲು ಗಟ್ಟಿ ಇದ್ದು. ಹೊತ್ತೋಪಗಾಣ ಕಾಪಿ ಒಟ್ಟಿಂಗೆ ತಿಂದೆಯೊ. ತಂಗೆ ರೆಜಾ ಹುಗ್ಗಿಸಿ ಮಡುಗಿದ್ದೋ ಸಂಶಯ. ಇರುಳು ಮೆಲ್ಲಂಗೆ ತಿಂಬಲೆ ಸುರುಮಾಡುಗಿದ. ಶಬ್ದ ಕೇಳದ್ದೆ ಇರ 🙂
ಅಜ್ಜಕಾನ ಭಾವಂಗೆ ಸಿಕ್ಕಿದ್ದಿಲ್ಲೆ ಹೇಳಿ ಕೂಗುತ್ತಾ ಇದ್ದ. ಆ ಪ್ಲಾಸ್ಟಿಕ್ ಪಾತ್ರೆಂದ ರೆಜ ಕಳುಸಿ ಕೊಡಿ, ಪಾ,,,ಪ. ನಮ್ಮ ಬಯಲಿನವನೇ ಅಲ್ಲದ!!!
ಎಂಗೊಗೆ ತಾಳು ಮಾಡ್ಲೆ ಸೊಳೆ ಮುಗುದ್ದು. ಇದ್ದರೆ ರೆಜಾ ಕಳಿಸಿಕೊಡಿ.
{ ಪಾ,,,ಪ.
ನಮ್ಮ ಬಯಲಿನವನೇ ಅಲ್ಲದ!!!}
ಇಲ್ಲಿ ಎರಡು ವಾಕ್ಯ ಇದ್ದು. ಒಂದು ಸರಿ ಇನ್ನೊಂದು ತಪ್ಪು.
ಅಜ್ಜಕಾನಬಾವ° ನಮ್ಮ ಬೈಲಿನವನೇ – ಇದು ಸರಿಯಾದ ಮಾತು. 😉
{ಅಜ್ಜಕಾನಬಾವ° ನಮ್ಮ ಬೈಲಿನವನೇ – ಇದು ಸರಿಯಾದ ಮಾತು}
ನಗೆಗಾರಣ್ಣೋ, ಅಪರೂಪಕ್ಕೆ ನೀ ಸರಿಯಾದ ಮಾತು ಹೇಳಿದೆ!! 😉
ಆಗಲಿ.. ಪುಳ್ಯಕ್ಕೊಗೆ ಕುಶಿ ಆದರೆ ಅಜ್ಜಿಗೂ ಕುಶಿಯೇ..
ಅಜ್ಜಕಾನದ ಪುಳ್ಳಿ ಹಾಂಗೆ ಹೇಳಿದಾಳಿ ನೀನು ಪಕ್ಕಕ್ಕೆ ಅವನ ನಂಬಿಕ್ಕೆಡ… ಒಂದರಿ ಎಲ್ಲೊರಿಂಗೂ ಕೊಟ್ಟಿದೆಬ್ಬೊ ಆನು… ಪುನಾ ಸಿಕ್ಕುತ್ತರೆ ಸಿಕ್ಕಲೀಳಿ ಅವನ ಆಲೋಚನೆ..
ಎನಗೆ ಸಿಕ್ಕಿದ್ದಿಲ್ಲೆ.. ಒಪ್ಪಣ್ಣ ಒಪ್ಪಕ್ಕನೊಟ್ಟಿಂಗೆ ಜಗಳ ಮಾಡಿ ಎಲ್ಲಾ ಮುಗುಶಿದವು..
ಅದಕ್ಕೇ ಹೇಳುದು, ಜಗಳ ಮಾಡುವಗ ನೋಡಿಗೊಂಡು ಕೂಪಲಾಗ ಹೇಳಿಗೊಂಡು. 😉
ಇಬ್ಬರ ಜಗಳ ಮೂರನೆಯವಂಗೆ ಆದಾಯ ಹೇಳಿ ನಮ್ಮ ಅಜ್ಜಕಾನ ಭಾವಂಗೆ ನೆಂಪು ಆಯಿದಿಲ್ಲಿ ಅಡ. ಪಾಪ!!!
{ ಒಪ್ಪಣ್ಣ ಒಪ್ಪಕ್ಕನೊಟ್ಟಿಂಗೆ ಜಗಳ ಮಾಡಿ ಎಲ್ಲಾ ಮುಗುಶಿದವು.}
ಆನಲ್ಲ, ಒಪ್ಪಕ್ಕನೇ ಬೊಬ್ಬೆ ಹೊಡದು ಜಗಳ ಮಾಡಿದ್ದದು. ಆನು ಮಾತಾಡದ್ದೆ ತಿಂದೋಂಡಿತ್ತಿದ್ದೆ! 😉 😛
ಒಪ್ಪಣ್ಣನ್ಗೆ ಕೆಣಿ ಗೊಂತಿದ್ದು ಹೆಚ್ಚು ತಿಂಬದು ಹೇಂಗೆ ಹೇಳಿ.. ಒಪ್ಪಕ್ಕ° ಅಜ್ಜಿಯ ಹತ್ತರೆ ದೂರು ಹೇಳ್ತ ಹೊತ್ತಿಲಿ ಉಂಡಲಕಾಳು ಅರೆವಾಶಿ ಕಾಲಿ ಆಯಿದಡ್ದ.. ಮತ್ತೆ ಒಪ್ಪಕ್ಕನ ಸಮಾಧಾನ ಮಾಡೆಕ್ಕಾರೆ ಅಜ್ಜಿ ಒಳ ಜೋಕೆಲಿ ತೆಗದು ಮಡಿಗಿದ್ದರಿಂದ ಕೊಟ್ಟದಡ್ಡ ಅಪ್ಪೋ ಒಪ್ಪಣ್ಣಾ?
ಏ ದೇವೀ.. ಒಪ್ಪಣ್ಣಂಗೆ ಆ ಸಂಗತಿ ಗೊಂತಿಲ್ಲೆ. ನೀನು ಹೇಳಿಕ್ಕೆಡ. ಮತ್ತೆ ಅಲ್ಲಿಂದಲೂ ಅವನೇ ಮುಗಿಶುಗು. ಪಾಪ ಒಪ್ಪಕ್ಕಂಗೆ ಸಿಕ್ಕುಲೇ ಇಲ್ಲೆ…
{ಒಪ್ಪಕ್ಕನೇ ಬೊಬ್ಬೆ ಹೊಡದು ಜಗಳ ಮಾಡಿದ್ದದು}
ಅಪ್ಪಪ್ಪು, ಒಪ್ಪಕ್ಕ ಯೇವತ್ತು ಹಾಂಗೆಯೆ, 🙂 ಒಪ್ಪಕ್ಕೆ ಲಡಾಯಿ ಮಾಡುಗು!! 🙂
ಅಪ್ಪೋ ಒಪ್ಪಣ್ಣ ನೀನು ಹಾಂಗೆ ಮಾಡುದೋ..?
ಕಡದು ಕೊಡು ಹೇಳಿದರೆ ಕೇಳ.. ಪಾಪ ಒಪ್ಪಕ್ಕ ಉಂಡೆ ಮಾಡುಲೆಲ್ಲ ಸೇರಿದ್ದು ಗೊಂತಿದ್ದೋ..