Oppanna.com

ವಿಷು ಸ್ಪರ್ಧೆ 2014: ಕವನ ದ್ವಿತೀಯ : "ಹಬ್ಬದ ಗೌಜಿ" – ವಿ. ಬಿ. ಕುಳಮರ್ವ

ಬರದೋರು :   ಸಂಪಾದಕ°    on   08/06/2014    10 ಒಪ್ಪಂಗೊ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2014” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2014ಕವನ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕ ಶ್ರೀ ವಿ.ಬಿ.ಕುಳಮರ್ವ,ಕು೦ಬಳೆ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಶ್ರೀ ವೆಂಕಟ ಕೃಷ್ಣ ಎಂ.ಎನ್ - ಇವರಿಂದ ಕವನ ದ್ವಿತೀಯ ಪ್ರಶಸ್ತಿ ಪಡೆತ್ತಾ ಇಪ್ಪ ಶ್ರೀ ವಿ.ಬಿ.ಕುಳಮರ್ವ
ಶ್ರೀ ವೆಂಕಟ ಕೃಷ್ಣ ಎಂ.ಎನ್ – ಇವರಿಂದ ಕವನ ದ್ವಿತೀಯ ಪ್ರಶಸ್ತಿ ಪಡೆತ್ತಾ ಇಪ್ಪ ಶ್ರೀ ವಿ.ಬಿ.ಕುಳಮರ್ವ

~

ಹಬ್ಬದ ಗೌಜಿ:

ಹಬ್ಬದ ಗೌಜಿಲಿ
ಚುಬ್ಬನ ಮೀಶಲೆ
ಅಬ್ಬಗೆ ರಜವೂಯೆಡೆಯಿಲ್ಲೆ |
ಅಬ್ಬಿಯ ನೀರಿಲಿ
ಒಬ್ಬನೆ ಮಿ೦ದವ
ಕಬ್ಬಿನ ಗೆ೦ಟಿನ ಹಾ೦ಗಿದ್ದ° ||
ಉದಿ ಉದಿಯಪ್ಪಗ
ಮದಲೇಯೇಳುವ
ಮುದಿಯಜ್ಜಜ್ಜಿಯ ಕಾಲ್ ಹಿಡಿವೊ° |
ಗೆದ್ದೆಯ ತೋಟದ
ಉದ್ದಕೆ ಬಗ್ಗಿದ
ಕದಳೀ ಬಾಳೆಯ ಕೊನೆ ತಪ್ಪೊ° ||
ಸೇಮಗೆ ಕಾಯಲು
ಸೀಮಗೆ ದೊಡ್ಡದು
ರಾಮನ ಪೂಜೆಗೆ ಪರಮಾನ್ನ |
ಕಾಮನ ಸುಟ್ಟವ°
ಸೋಮನ ಹೊತ್ತವ°
ಸಾಮಜ ಚರ್ಮವ ಸುತ್ತಿದವ° ||
ಬ೦ದೇ ಬ೦ತಿದ
ಚೆ೦ದಕೆ ಪೆರಣತೆ
ಉದ್ದಿನ ಕೊಟ್ಟಿಗೆ ಬಲಿಯ೦ದ್ರ° |
ಕ೦ದನ ಮನಸಿನ
ಸ೦ದಿಲಿ ಮಿ೦ಚುಗು
ಮು೦ದಿನ ಸ೦ಭ್ರಮ ವಿಷುಕಣಿಯ ||
ದಸರಾ ಚೌತಿ ತೊ
ಳಸಿಪೂಜೆ ಜೆತೆಲಿ
ಮಸರುಕುಡಿಕೆಯಷ್ಟಮಿ ಷಷ್ಠಿ |
ಕಸವುಡುಗಿ ನೈದ
ಹೊಸ ಹೂಮಾಲೆಯ
ಅಸುರಾರಿಗೆ ನಾವರ್ಪಿಸುವೊ° ||
(ವಿ.ಸೂ. : ಹಬ್ಬದ ಗೌಜಿ ಪದ್ಯ ನಡುಗನ್ನಡದ ಶರಷಟ್ಪದಿ ಛ೦ದಸ್ಸಿಲಿ ಬರದ್ದದು.
ಈ ಪದ್ಯಲ್ಲಿ ರಾಮನವಮಿ, ಕಾಮದಹನ, ದೀಪಾವಳಿ, ದಸರಾ, ಚೌತಿ, ತೊಳಶಿಪೂಜೆ, ಮಸರುಕುಡಿಕೆ, ಅಷ್ಟಮಿ, ಷಷ್ಠಿ ಮೊದಲಾದ ಹತ್ತು ಹಬ್ಬಗಳ ಸೂಚನೆಯಿದ್ದು.)

~*~*~

10 thoughts on “ವಿಷು ಸ್ಪರ್ಧೆ 2014: ಕವನ ದ್ವಿತೀಯ : "ಹಬ್ಬದ ಗೌಜಿ" – ವಿ. ಬಿ. ಕುಳಮರ್ವ

  1. ಕುಳಮರ್ವ ಮಾವನ ಪದ್ಯ ಭಾರೀ ಚೆಂದ ಆಯಿದು.
    ಹಬ್ಬದ ಗೌಜಿಗ ಪದ್ಯದ ಸಾಲುಗಳಲ್ಲಿ ಚೆಂದಲ್ಲಿಯೇ ಬಯಿಂದು..
    ಪ್ರಶಸ್ತಿ ಗಳಿಸಿದ್ದಕ್ಕೆ ಅಭಿನಂದನೆಗೊ..

  2. ಪದ್ಯ ಪಷ್ಟಾಯಿದು ವೆಂಕಪ್ಪಣ್ಣ ,ಅಭಿನಂದನೆಗೊ.

  3. ಹರೇರಾಮ.ಕುಳವರ್ಮ ಅವರೇ ಕವನ ಚೆಂದಾಜು, ವೋದಿ ಕುಶಿ ಆತು. ಅಭಿನಂದನೆಗಳು- ಲಲಿತಾಲಕ್ಷ್ಮೀ

    1. ಲಲಿತಕ್ಕ… ಕುಳವರ್ಮ ಅಲ್ಲ… ಕುಳಮರ್ವ… 🙂

      1. ಶ್ಯಾಮಣ್ಣನ ಕಣ್ಣು ಒಳ್ಳೆಸೂಕ್ಷ್ಮ ಇದ್ದಾನೆ. ಇಟ್ ಇಸ್ ಜಸ್ಟ್ ಜಂಬ್ಲಿಂಗ್ ಆಫ್ ಲೆಟರ್ಸ್ ಯಾಹ್.
        ಹಬ್ಬಂಗಳ ಪದ್ಯ ತುಂಬಾ ಲಾಯಕಾಯಿದು. ಅಭಿನಂದನೆಗೊ.

  4. ತೆಂಕಣ ಸೀಮೆಲಿ
    ಕನ್ನಡದಿಂಪಿನ
    ಹಾರುಸುವಾ ಈ ದೊಡ್ಡಕುಳ |
    ಹವ್ಯಕ ಭಾಷೆಲಿ
    ಪದ್ಯವ ಬರದೂ
    ರೈಸಿದವಯ್ಯಾ ಕುಳಮರ್ವ ||
    ಅಭಿನಂದನೆಗೊ, ಮಾವ.

    1. ಅಪ್ಪು…… ಅವರ ಶಿಷ್ಯೆ ಹೇಳುಲೆ ಎನಗೂ ಹೆಮ್ಮೆ ಅನುಸುತ್ತು…
      ಅಭಿನಂದನೆಗೊ ಮಾಷ್ಟ್ರೇ….

  5. ಪದ್ಯ ಭಾರೀ ಲಾಯಕಾಯಿದು ವೆಂಕಪ್ಪಣ್ಣ.ಅಭಿನಂದನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×