- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಮನೆಯಂದ್ರೆ ಹೀಂಗಿರೊ
ಸುಣ್ಣಾ ಬಣ್ಣಾ ಮಾಡ್ಸಿರೋ
ಗಾಳಿ ಬೆಳ್ಕು ಬಪ್ಪಾಂಗೆ
ಕಿಟ್ಕಿ ಬಾಗ್ಲು ಹಾಕ್ಸಿರೋ||
ಮನೆಯಂದ್ರೆ ಹೀಂಗಿರೊ
ಗುಡ್ಸಿ ವರ್ಸಿ ಮಾಡ್ತೀರೊ
ಚೊಕ್ಕಾಗ್ ತೊಳ್ದು ಬಳ್ದು
ಚೆಂದಕ್ ಇಟ್ಟಿರೊ||
ಮನೆಯಂದ್ರೆ ಹೀಂಗಿರೊ
ಮನೆ ತುಂಬಿ ಜನಾ ಇರೋ
ನಗ್ತಾ ನಗ್ತಾ ಮಾತುಕತೆ
ಆಡ್ಕತ್ ಕೆಲ್ಸ ನೋಡ್ತಿರೋ||
ಮನೆಯಂದ್ರೆ ಹೀಂಗಿರೊ
ನೆಂಟ್ರು ಇಷ್ಟರು ಬತ್ತಿರೊ
ಊಟಾ ಆಸ್ರಿ ಹರಟೆ ಹಾಸ್ಯ
ಅರಶ್ನ ಕುಂಕುಮಾ ಎಲ್ಲಾ ಇರೊ||
ಮನೆಯಂದ್ರೆ ಹೀಂಗಿರೊ
ನೆಮ್ಮದಿ ಸುಖಾ ಸದಾ ಇರೊ
ದಾಂಪತ್ಯ ಜೀವ್ನದಲ್ಲಿ ಕಷ್ಟಾ ಸುಖಾ ಹಂಚ್ಕಂಡಿರೊ
ಸಂಸಾರ ಬಂಧನದಲ್ಲಿ ಸಂಬಂಧಾನೇ ಕೂಡಿರೊ||
ಮನೆಯಂದ್ರೆ ಹೀಂಗಿರೊ
ದುಡ್ನ ಬೆಲೆ ಗೊತ್ತಿರೊ
ಮನೆ ಮರ್ಯಾದೆ ವಳಿಸಿ
ವಳ್ಳೆ ಚಿಂತ್ನೆ ಮಾಡ್ತಿರೊ||
ಮನೆಯಂದ್ರೆ ಹೀಂಗಿರೊ
ದೇವ್ರ ಗುಡಿಯಾಂಗಿರೊ
ನ್ಯಾಯ ನೀತಿ ಧರ್ಮಕ್ಕೆ ಹೆಗ್ಲ ವಡ್ವಾಂಗಿರೊ
ಮನೆತನದ ಗೌರವ ಜನ್ರ ಬಾಯ್ಲಿ ನಿಂತಿರೊ||
ಸತ್ಯವಾದ ಮಾತು.
ಮನೆ ಹೇದರೆ ಬರೇ ಇಟ್ಟಿಗೆ-ಸಿಮೆಂಟಿನ ಕಟ್ಟೋಣ ಅಲ್ಲ; ಅದಕ್ಕೆ ಚೆಂದ ಬಪ್ಪದು ಬಣ್ಣ ಬಣ್ಣದ ಪೈಂಟು ಬಳಿವದರಿಂದಲೋ, ಶೋಕೇಸು ಫರ್ನಿಚರು ತುಂಬುಸುವುದರಿಂದಲೋ ಅಲ್ಲ; ಒಳ್ಳೆಯ ಸಂಸ್ಕಾರ, ಒಳ್ಳೆಯ ಮನಸ್ಸು ಇಪ್ಪ ಜೆನಂಗೊ ಅಲ್ಲಿ ಇದ್ದರೆ ಮಾಂತ್ರ ಅದು ನಿಜವಾದ ಮನೆ ಆಗಿರ್ತು ಹೇಳುದರ ಕವನಲ್ಲಿ ಚೆಂದಕೆ ನಿರೂಪಣೆ ಮಾಡಿದ್ದಿ ಕಲ್ಪನಕ್ಕಾ..
ಅಭಿನಂದನೆಗೊ..
ನ್ಯಾಯ ನೀತಿ ಧರ್ಮಕ್ಕೆ ಹೆಗ್ಲ ವಡ್ವಾಂಗಿರೊ
ಮನೆತನದ ಗೌರವ ಜನ್ರ ಬಾಯ್ಲಿ ನಿಂತಿರೊ||———-
ಇದರ ಓದಿ ಅಪ್ಪಗ,
ಇ೦ದು ಉದಿಯಪ್ಪಗ ಬೈಟೂ ಕಾಪಿ ಕುಡಿವಾಗ ಭೀಮಗುಳಿಯವು ಬರೆದ ಕೌರವನ ಮನೆ ಅಜ್ಜಿಯ ಲಹರಿ ಓದಿದ ನೆ೦ಪಾತು.
೨ಊ ಉತ್ತಮ ಆಯಿದು.
ಓದಿ, ಅಭಿಪ್ರಾಯ ಬರದು, ಪ್ರೋತ್ಸಾಹಿದಕ್ಕೆ ಧನ್ಯವಾದಂಗೊ.
ವಡ್ವಾಂಗಿರೋ ಇದರ ಅರ್ಥ ಸರಿಯಾಗ್ ಕೊಟ್ಟಿದ್ರಿ ಕ್ರತಜ್ನತೆಗಳು
‘ಒಡ್ಡುವ ಹಾಂಗೆ ಇಪ್ಪ ‘ಹೇಳಿ ಇದರ ಅರ್ಥ ಆಗಿಕ್ಕು.ನ್ಯಾಯ ನೀತಿ ಧರ್ಮಕ್ಕೆ ಹೆಗಲು ಕೊಟ್ಟು ಆಧರಿಸಿ ಮುನ್ನಡೆಸುವ ಮನೆ ಆಗಿರೆಕ್ಕು ಹೇಳಿ ಮಹದಾಶಯ.
ಲಾಯಿಕಿದ್ದು,
“ವಡ್ವಾಂಗಿರೊ” – ಇದರ ಅರ್ಥ ಹೇಳಿ ಅಕ್ಕ.
ಎನ್ನ ಊಹೆ ಇದು –
ವಡ್ವ = ಒಡ್ಡುವ / ಕೊಡುವ
ಹೆಗ್ಲ ವಡ್ವಾಂಗಿರೊ = ಹೆಗಲು ಕೊಡುವ ಹಾಂಗಿರೆಕು.
ಸರಿಯಾ?
ಕೊಶಿ ಆತು.