Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಮಳೆಗಾಲ ಕಳುದತ್ತು.ಆದರೆ ಅದರ ನೆನಪ್ಪು ಸದಾ ಇಕ್ಕನ್ನೆ.
ಪವನಜ ಮಾವ ತೆಗದ ಈ ಪಟಕ್ಕೆ ಒ೦ದು ಕವಿತೆ ಕಟ್ಟುವ° ಬನ್ನಿ.
ಕಪ್ಪಿನ ಹರ್ಕಟೆ
ದಪ್ಪದ ರಗ್ಗಿಲಿ
ಒಪ್ಪಕೆ ಇಣುಕುವ ಮಳೆರಾಯ
ಬಪ್ಪಲೆ ಮೋಡದ
ಚೆಪ್ಪರ ಹರುದರೆ
ರಪ್ಪನೆ ಬೀಳುಗೊ ಜಾಲಿಂಗೆ ?
ನೂರು ಯಾಗಗಳೊಡೆಯ
ಬೀರಿಬಿಟ್ಟನೋ ಕಪ್ಪು
ನೀರದದೆಡೆಲಿ ಬೆಳ್ಳಿ ರೇಖೆಗಳನೇ |
ಕಾರುತಿಂಗಳಿನಿರುಳು
ಚಾರುಲತೆ ರೂಪದೊಳ
ತೂರಿಬಂತದ ಮಿಂಚು ಕೋರೈಸಿಯೇ ||
ಅತ್ತೇ..ಮಿ೦ಚಿನ ಬೆಣಚ್ಚಿಗೇ ಕುಸುಮ ಅರಳಿತ್ತೊ!!
ಬೆಳ್ಳಿ ಮಿಂಚು
ಉಪ್ಪು ಜಲ ಆವಿಯಾಗಿಯೆ
ಅಪ್ಪ ಕರಿಮುಗಿಲಿನೆ ಡಕ್ಕಿಲಿ ಕವಲೊಡದ್ದೂ
ದಪ್ಪದ ಕೋಲ್ಮಿಂಚು ಹೊಳಗು
ಕಪ್ಪಿನ ಮೋರೆ ಲಿಯೆ ಬೆಳ್ಳಿ ಹಲ್ಲಿನ ಹಾಂಗೇ
ಆಹಾ..ಮಾವಾ.ಕ೦ದವೂ ಹೊಳದತ್ತು ಕೋಲ್ಮಿ೦ಚಿನ ಹಾ೦ಗೆ.
ಮೋಡದ ಆಚಿಗೆ ಆರ ಮನೆ?
ಬಾಗಿಲು ಹಾಕಿದ್ದೆಂತಕ್ಕೆ ?
ಅದೆ ನವಗರಡಿಯ , ದೇವ ಮನೆ!
ಮುಚ್ಚಿದ್ದಿದು ತತ್ಕಾಲಕ್ಕೆ!
ಕತ್ತಿಯ ಬೀಸುದು ಆರಲ್ಲಿ?
ಕಪ್ಪಿನ ಮೋಡದ ಬೆನ್ನಾರೆ?
ವೀರನೆ ಸರಿ ಇವ, ಕೋಪಲ್ಲಿ
ಕತ್ತಿಯ ಬೀಸುವ ಮನಸಾರೆ
ಶಬ್ದಕೆ ಕೆಮಿ ಕೆಪ್ಪಕ್ಕಲ್ಲೋ?
ಮಕ್ಕೊಗೆ ಒರಗಲೆ ಎಡಿಯನ್ನೇ?
ಕೆಮಿಮುಚ್ಚಿರೆ ಸಾಕಕ್ಕಲ್ಲೋ?
ಮಕ್ಕಳೂ ನೋಡಲಿ ಇದರನ್ನೇ !
ಪ್ರಕೃತಿ ಕಲಿಸುವ ಪಾಠವಿದು
ಕಪ್ಪಿನ ಕೊಳೆ ತೊಳೆಯೆಕ್ಕ್ ಹೇಳಿ
ಕತ್ತಿಯ ಬೀಸಲೆ ಬೇಕಿಂದು
ಸುಮ್ಮನೆ ಕೂರದೆ ಎದ್ದೇಳಿ
ಏವಾಗ ಬೇಕೋ ಆವಾಗ
ಬಲವನು ತೋರ್ಸದೆ ಆಗದ್ದ
ದೇಶವೋ ಊರೋ ಒಂದುಳಿಯ
ಕಚ್ಚೆಡ, ಹೆಡೆ ತೆಗೆ,ತೋರ್ಸಯ್ಯ !
ಒಳ್ಳೊಳ್ಳೆ ಕಲ್ಪನೆಗಳ ಸೇರ್ಸಿಗೊ೦ಡು ಬರದ ಕವನ ರೈಸಿತ್ತು ಗೋಪಾಲಣ್ಣ.ಒಳ್ಳೆ ಸ೦ದೇಶವೂ ಬ೦ತು.