Oppanna.com

ಸಮಸ್ಯೆ 81: “ಹೂಡಿ ಮುಗುದತ್ತನ್ನೆ ನೇಜಿ ನೆಡುಲಕ್ಕು”

ಬರದೋರು :   ಸಂಪಾದಕ°    on   01/11/2014    15 ಒಪ್ಪಂಗೊ

” ಚುಟುಕು ಬ್ರಹ್ಮ “ ಹೇಳ್ತ ಗೌರವಕ್ಕೆ ಪಾತ್ರರಾಗಿ ,ನಾಲ್ಕು ಸಾಲಿನ ಚುಟುಕ೦ಗಳ ವಿಡ೦ಬನಾರೂಪಲ್ಲಿ ,ನಮ್ಮ ಆಡಳಿತ ವ್ಯವಸ್ಥೆಗೆ ಸದಾ ಚುರುಕು ಮುಟ್ಟುಸಿಗೊ೦ಡು ಇತ್ತಿದ್ದವು ,ಕನ್ನಡದ ಶ್ರೇಷ್ಟ ಕವಿಗಳಲ್ಲಿ ಒಬ್ಬರಾಗಿತ್ತಿದ್ದ ದಿ.ದಿನಕರ ದೇಸಾಯಿ. ಅವು ಬರದ ಚುಟುಕ೦ಗೊ “ದಿನಕರನ ಚೌಪದಿ” ಹೇಳಿ ಪುಸಕರೂಪಲ್ಲಿ ಲಭ್ಯ ಇದ್ದು.

ಅವರ ಚುಟುಕದ ಒ೦ದು ಉದಾಹರಣೆ ಇಲ್ಲಿದ್ದು :

 

“ಅಕ್ಕಿಯೇತಕೆ, ಮಗಳೆ? ತಿನ್ನೋಣ ಗೆಣಸು.

ಸಾಲದಿದ್ದರೆ ಗೆಣಸು, ಉಂಟು ಕರಿ ಮೆಣಸು.

ಈ ರೀತಿ ಬಿಡಿಸಿದರೆ ಅನ್ನದ ಸಮಸ್ಯೆ-

ಬೆಳದಿಂಗಳಾಗಿ ಹೊಳೆಯುವುದಮಾವಾಸ್ಯೆ”

 

5/5/5/3 – ಈ ಮಾತ್ರಾ ಬ೦ಧಲ್ಲಿಪ್ಪ ಚುಟುಕ೦ಗಳಲ್ಲಿ ಆದಿಪ್ರಾಸಕ್ಕೆ ಪ್ರಾಮುಖ್ಯ ಇಲ್ಲೆ.ಆದರೆ ಸುರುವಾಣ ಎರಡು ಗೆರೆ ಮತ್ತೆ ಕಡೆ ಎರಡು ಗೆರೆಯ ಅ೦ತ್ಯ ಪ್ರಾಸ೦ಗೊ ಒ೦ದೇ ಆಗಿರೇಕು.

ಈ ವಾರದ ಸಮಸ್ಯೆ :  ಹೂಡಿ ಮುಗುದತ್ತನ್ನೆ ನೇಜಿ ನೆಡುಲಕ್ಕು”

15 thoughts on “ಸಮಸ್ಯೆ 81: “ಹೂಡಿ ಮುಗುದತ್ತನ್ನೆ ನೇಜಿ ನೆಡುಲಕ್ಕು”

  1. ಭಾಗ್ಯಲಕ್ಷ್ಮಿ ನಿಂಗೋ ಆನು ಬರದ್ದಕ್ಕೆ ಪ್ರತಿಕ್ರಯಿಸಿದ್ದು ನೋಡಿ ತುಂಬ ಸಂತೋಷ ಆತು. ವಂದನೆಗೊ.

  2. ನಾಡ ಒಡೆಯುವ ಬದಲು ಒಂದಾಗಿ ಕೂಡಿ
    ಹಾಡು ಹಾಡುವೊ ಒಟ್ಟು ಜಯ ಒಲಿದು ಬಕ್ಕು/
    ಕಾಡು ಮೇಡಿನ ಕಡುದು ನೆಲ ತಟ್ಟು ಮಾಡಿ
    ಹೂಡಿ ಮುಗುದತ್ತನ್ನೆ ನೇಜಿ ನೆಡಲಕ್ಕು //

    1. ಹೂಡಿ ಮುಗುದತ್ತನ್ನೇ ನೇಜಿ ನೆಡ್ಳಕ್ಕು|
      ಹೇಳುವಾ ಮಾತೀಗ ಕಲ್ಪನೆಲಿ ಇಕ್ಕು|
      ಬೇಡ ಮನುಜಂಗೆ ಕೃಷಿ ಕೆಲಸ ಕಠಿಣ|
      ಮೂಢತನದ್ದೇ ಅಲ್ಲದೋ ಶೋಕಿನಾ ಪಠಣ

      1. ಸತ್ಯವಾದ ಮಾತು ಆಶಕ್ಕ..ನಿಂಗಳ ಕಂಡು ಕೊಶಿ ಆತು .
        ನಿಂಗ ಬರದ್ದರಲ್ಲಿ ಚೂರು ವ್ಯತ್ಯಾಸ ಮಾಡಿದರೆ ಮಾತ್ರೆ ಲೆಕ್ಕಾಚಾರ ಸರಿ ಆವುತ್ತು . ಈ ರೀತಿ ಮಾಡಿದರೆ ಸರಿ ಅಕ್ಕು . ನಿಂಗಳ ಭಾವನೆ೦ದ ಭಿನ್ನವಾಗಿರುತ್ತೋ ಗೊಂತಿಲ್ಲೆ . ಈ ಪದ್ಯವ ಸರಿ ಮಾಡುವ ಪ್ರಯತ್ನ… ಯಾವಾಗಲೂ ಬರೆತ್ತಾ ಇರಿ

        ಹೂಡಿ ಮುಗುದತ್ತನ್ನೇ ನೇಜಿ ನೆಡ್ಳಕ್ಕು
        ಹೇಳುವಾ ಮಾತೀಗ ಕಲ್ಪನೆಲಿ ಇಕ್ಕುI
        ಬೇಡಪ್ಪ ಮನುಜಂಗೆ ಕೃಷಿ ಕೆಲಸ ಕಠಿಣ
        ಮೂಢತನದೀ ಶೋಕಿ ಮತ್ತಿಲ್ಲಿ ಪಠಣ II

        1. ಸುರುವಾಣ ಸಾಲಿನ ನೊಣ೦ಪ್ರತಿ ಮಾಡಿದ್ದಕ್ಕೆ ದೀರ್ಘ ಹೆಚ್ಚಾತದ ..
          ಹೂಡಿ ಮುಗುದತ್ತನ್ನೆ ನೇಜಿ ನೆಡ್ಳಕ್ಕು
          ಹೇಳುವಾ ಮಾತೀಗ ಕಲ್ಪನೆಲಿ ಇಕ್ಕುI
          ಬೇಡಪ್ಪ ಮನುಜಂಗೆ ಕೃಷಿ ಕೆಲಸ ಕಠಿಣ
          ಮೂಢತನದೀ ಶೋಕಿ ಮತ್ತಿಲ್ಲಿ ಪಠಣ II

  3. ತಾಡಿ ಸಂಕೋಲೆ ಕಡ್ಕೊಂಬ ಗೋಣ೦ಗೆ
    ಬಿಗಿ ಹಿಡುದು ಬಳ್ಳಿ ಸುರುದಾಗಿ ಮೂಗಿಂಗೆ I
    ಹೂಡಿ ಮುಗುದತ್ತನ್ನೆ ನೇಜಿ ನೆಡುಲಕ್ಕು
    ನೊಗ,ನಾಯರಿನ ಕೊಟ್ಟಗೆಲಿ ಮಡುಗುಲಕ್ಕು II

    ನೊಗ ,ನಾಯರು =ಹೂಡುಲೆ ಬಳಸುವ ಸಾಮಾನು ,
    ಕೊಟ್ಟಗೆ =ಅಪರೂಪಕ್ಕೆ ಬೇಕಪ್ಪ ಸಾಮಾನು ಸರ೦ಜಾಮುಗಳ ಮಡುಗುವ ಜಾಗೆ

  4. ಟಾರು ಹಾಕಿದ ಮಾರ್ಗ ಗರ್ಪಿ ಹಾಕಿದ್ದು
    ಮಳೆ ಬಂದು ಅಲ್ಲೆಲ್ಲ ಮಣ್ಣು ಕರಗಿದ್ದು
    ಲಾರಿ ಬಸ್ಸುಗೊ ಎಲ್ಲ ಅಲ್ಲಿಯೇ ಬಕ್ಕು
    ಹೂಡಿ ಮುಗುದತ್ತನ್ನೆ ನೇಜಿ ನೆಡುಲಕ್ಕು ||

    1. ಹ.ಹಾ .. ಇ೦ದಿರತ್ತೆಯೂ ಚಾಟಿ ಬೀಸಿದವು . ರೈಸಿದ್ದು .

  5. ಬೇಸಾಯ
    ಹೂಡಿ ಮುಗುದತ್ತನ್ನೆ ನೇಜಿ ನೆಡುಲಕ್ಕು
    ಶ್ರೀಪದ್ಧತಿಲಿ ಭತ್ತದ ಬೆಳೆ ಲಾಯಕ್ಕು
    ಬುಡಕ್ಕೊಂದೇ ನೇಜಿ ನೆಟ್ಟ ರೇ ಸಾಕು
    ಎಗೆಯೊಡದು ಪುಂಡೆಲಾಗಿ ಬೆಳವ ಲೆ ಬೇಕು
    ರುಚಿ
    ಹಡಿಲು ಹಾಕೆಡಿ ಗೆದ್ದೆ ಬೇಸಾಯ ಮಾಡಿ
    ಸ್ವಂತ ಅಕ್ಕಿಯ ಅಶನ ಭಾರಿ ರುಚಿ ನೋಡಿ
    ಕೃಷಿ ಪರಂಪರೆಗಿದ್ದು ಭವ್ಯ ಇತಿಹಾಸ
    ನಂಬಿ ನೆಡವ ವಂಗಿಲ್ಲೆನ್ದಿಂಗು ಮೋಸ

  6. ಲಾಯಿಕ ಆಯಿದು ಭಾಗ್ಯಕ್ಕಾ….
    ಎನ್ನ ಪ್ರಯತ್ನ
    ಮೋದಿ ಮಾತ ಮೋಡಿ ಬಲಗೆ ಎಲ್ಲ ಬಿದ್ದು
    ದೇಶ ಗೆದ್ದೆಲೀಗ ಕನಸ ಪಕ್ಷ ಗೆದ್ದು
    ಭವ್ಯ ಭಾರತದ ಸೆಸಿ ಹುಟ್ಯೊಂಡು ಬಕ್ಕು
    ಹೂಡಿ ಮುಗುದತ್ತನ್ನೆ ನೇಜಿ ನೆಡುಲಕ್ಕು ||

    1. ಶೈಲಜಕ್ಕಾ , ಮಾತ್ರೆಗೋ ರಜಾ ಹೆಚ್ಚು ಕಮ್ಮಿ ಕಾಣುತ್ತು .

      ಮೋದಿ ಮಾತಿನ ಮೋಡಿ ಬಲಗೆಲ್ಲ ಬಿದ್ದು
      ದೇಶ ಗೆದ್ದೆಲಿ ಕನಸ ಪಕ್ಷ ಮೇಲೆದ್ದು
      ಭವ್ಯ ಭಾರತದ ಸೆಸಿ ಹುಟ್ಯೊಂಡು ಬಕ್ಕು
      ಹೂಡಿ ಮುಗುದತ್ತನ್ನೆ ನೇಜಿ ನೆಡುಲಕ್ಕು ||

  7. ಹೂಡಿ ಮುಗುದತ್ತನ್ನೆ ನೇಜಿ ನೆಡುಲಕ್ಕು
    ಹಾಡು ಹೇಳುಲೆ ಬೈಲ ಕಮಲನೇ ಬಕ್ಕು I
    ಸೂಡಿ ನೇಜಿಯ ಗದ್ದಗೂರುವದೆ ಹಬ್ಬ
    ಮೋಡಿ ಮಾಡುಗು ನಮ್ಮ ಕುಡ್ಲದ್ದೆ ಕಬ್ಬ II

    ಕುಡ್ಲ = ಮ೦ಗಳೂರು
    ನಮ್ಮ ಕುಡ್ಲ = ನಮ್ಮ ಊರು ಹೇಳ್ತ ಅರ್ಥ (ದೂರದರ್ಶನದ ವಾಹಿನಿ ಅಲ್ಲ ಹೇಳಿ ಸೂಚನೆ ಅಷ್ಟೆ )
    ಕುಡ್ಲದ್ದೆ ಕಬ್ಬ = ಓ ಬೇಲೆ ಹಾಡುಗೊ
    ಇಂದು ಕನ್ನಡದ ರಾಜ್ಯೋತ್ಸವ ಮತ್ತು ನಮ್ಮ ಭಾಷೆ ಕನ್ನ್ನಡದ ಒಂದು ಉಪಭಾಷೆ ಆದ ಕಾರಣ ಆದಿ ಪ್ರಾಸದ ಮುದ್ರೆ ( trademark )ಒಳಿಶಿಗೊಂಡೆ ಬರದ್ದು . ತಪ್ಪಲ್ಲನ್ನೆ ?

    1. ಲಾಯಕ ಆಯಿದು ಭಾಗ್ಯಕ್ಕ . ಆದಿಪ್ರಾಸವೂ ಸೇರಿತ್ತು .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×