Latest posts by ಕಲ್ಪನಾ ಅರುಣ್ (see all)
- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಯೆಂತ್ರ ಬಗ್ಗೆ ವಿಚಾರ ಮಾಡೋ ಹೇಳಿ ತೆಳಿತಿಲ್ಲೆ
ತುಟ್ಟಿ ಜೀವ್ನ ನೆನಕಂದ್ರೆ ಹೆದ್ರಕೆ ಆಗ್ತಲೇ
ದಿನಾಹೋದಾಂಗ್ ಯೆಲ್ಲಾ ಸಾಮಾನು ಯೇರೂದೆಯಲ್ಲೆ
ಬಡವ್ರಿಗೆಲ್ಲಾ ಜೀವ್ನ ಅಂದ್ರೆ ನಡ್ಕ ಬತ್ತಲೇ||
ಯಾರ ನೋಡ್ದ್ರೂ ಸಾಲಾ ತೆಕ್ಕಂಡ್ ಮಜಾ ಮಾಡ್ತ್ವಲೇ
ಬಡ್ಡಿ ಇಟ್ಕಂಡ್ ಮತ್ತೆ ಮತ್ತೆ ಸಾಲಾ ಮಾಡ್ತ್ವಲೇ
ಬಟ್ಟೆ ಗಿಟ್ಟೆ ಗಿಲೀಟ್ನ ಬಂಗಾರ ಮೈಮೇಲೆ ಜಾಸ್ತಿಯಲ್ಲೆ
ಢಗಾ ಡೋಂಗಿ ದಗಲ್ ಬಾಜಿ ರಾಶಿ ಆಯ್ದಲ್ಲೆ||
ದಿನಾ ಹೋದಾಂಗ್ ದುಡ್ಡು ಕಾಸು ಜನ್ರಲ್ ಓಡ್ತಲೇ
ಊಟಾ ತಿಂಡಿ ಸಾಮಾನ್ ಮಾತ್ರಾ ಕಡ್ಮೆ ಆಗದಿರ್ಲೆ
ಬರೀ ಕಾಸು ದುಡ್ಡು ಇಟ್ಕಂಡ್ರೆ ಯೆಂತಾ ತಿನ್ನವೇ
ಬೆಳೆ ಬೆಳ್ಯೊ ಜಮೀನು ರೈತರು ಊರಲ್ಲಿರವೇ||
ಸರಿ ತಪ್ಪು ಯೋಚ್ನೇ ಮಾಡೋ ಹಿರೀರಿರವೇ
ಗಡಿಬಿಡಿ ಅಂದ್ರೂ ಬಾಳಲ್ ನೆಮ್ಮದಿ ಕಾಣವೇ
ಗಂಡಾ ಹೆಂಡ್ತಿ ಜೊತ್ಯಾಗಿ ಖುಶಿಂದರವೇ
ಸಂಸಾರೆಂಬಾ ನೊಗಾನಾ ಸರಿಯಾಗ್ ಯೇಳ್ಯವೇ||