Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಪವನಜ ಮಾವ ಕಳುಸಿದ ಚೆ೦ದದ ಪಟ ಈ ವಾರದ ಸಮಸ್ಯೆ !
(ಫೋಟೋ ತೆಗದ್ದು ಸುರಭಿ. ರೂಪದರ್ಶಿಗೊ ವಿಧಾತ್ರಿ, ವೈದೇಹಿ.)
ಮಲ್ಲಿಗೆಯ ಹಾ೦ಗಿರ್ತ ಕ೦ಜಿಗೆ ಒ೦ದು ಮಲ್ಲಿಕಾಮಾಲೆಯ ಅರ್ಪಣೆ :
ಗೋಕುಲ೦ದಲೆ ಬಂದು ನಿ೦ದದೊ ನಾಕು ಕಾಲಿನ ಕ೦ಜಿಯೂ |
ನಾಕಧೇನುವಿನನ್ನೆ ಮೀರ್ಸುವ ರೂಪದಾ ಅಪರ೦ಜಿಯೂ |
ಮೋಕೆ ಮಾಡುಲೆ ಬ೦ದು ಕೂಯಿದೆ ಶಾಲೆ ಚೀಲವ ಹುಗ್ಗುಸೀ |
ಸಾಕು ಹಾರೆಡ ಮುದ್ದು ಮಾಡುವೆ ಬಾರೆ ಮೊಟ್ಟೆಲಿ ಕೂರುಸೀ |
ಯಾವ ಮೋಹನ ಮುರಳಿ….ಯ ನೆಂಪಾತು. ಪಷ್ಟಾಯಿದು.
ಹತ್ತಿ ರಾಶಿಯ ತೆಗದು ಚೆ೦ದಕೆ
ಮೆತ್ತಿ ಮಡುಗಿದ್ದಿದರ ಮೈಗಿ
ನ್ನೆತ್ತಿ ಕೂರ್ಸುತ್ತೆನ್ನ ಮೊಟ್ಟೆಲಿ ಬಾರೆ ವೈದೇಹಿ |
ಮುತ್ತು ಕೊಡುಲಾವುತ್ತೊ ಕೇಳಿರೆ
ಗತ್ತು ನೋಡದರದ್ದು ಮೋಕೆಯ
ಸೊತ್ತು ನಮ್ಮಯ ಹಟ್ಟಿ ತು೦ಬಲಿ ಪುಟ್ಟು ಕ೦ಜಿಗಳೇ ||
ಹಾಲು ಕೊಡುವ ನಮ್ಮ ಉಂಬೆ
ಶಾಲಗೋಗಿ ಬಪ್ಪ ಹೊತ್ತು
ಬಾಲೆ ಕಂಜಿ ಹೆತ್ತದಿಲ್ಲಿ ಬಂದು ಮೊಟ್ಟೆಲಿ
ನೂಲುನೊಂಪ ಮುಗ್ಧ ನೋಟ
ಸಾಲಿಲರ್ಥ ಸಾರುದೀಗ್ಳೆ
ಶೂಲಕೇರ್ಸೆಡೆನ್ನ ಹೋರಿಯಾಗಿ ಬೆಳದರೆ ||
ರಚನೆ ಲಾಯ್ಕ ಆಯಿದು . ನಾಲ್ಕು ಐದನೇ ಸಾಲುಗೊ ಸರೀ ಅರ್ಥ ಆತಿಲ್ಲೆ ಶೈಲಜಕ್ಕ . ಇನ್ನೂ ಸ್ಪಷ್ಟತೆ ಇದ್ದಾರೆ ಒಳ್ಳೇದು .
ಬಾಲೆ ಕಂಜಿ ಕಪಿಲೆದಿಲ್ಲಿ ಬಂದು ಮೊಟ್ಟೆಲಿ ….ಬರದರೆ ಹೆಚ್ಚು ಅರ್ಥಪೂರ್ಣ ಅಕ್ಕ್ಕೋ ಹೇಳಿ ಎನಗೆ ಅಪ್ಪದು. ಅದು ಕಂಜಿ(ಹೆತ್ತದ)ಕಂಜಿ ಹಾಕಿದ್ದು ಹೇಳುವ ಅರ್ಥ ಬಪ್ಪ ಹಾಂಗಿದ್ದು ಶೈಲಕ್ಕ. ಕೆಳನದ್ದು ಎನಗೂ ಅರ್ಥ ಆಯಿದಿಲ್ಲ
೨ ನೆ ಗೆರೆ ಮೊದಲು ಬಂದರೆ ಮತ್ತೂ ಲಾಯಿಕ ಅರ್ಥ ಆವುತ್ತು
ಶಾಲಗೋಗಿ ಬಪ್ಪ ಹೊತ್ತು
ಹಾಲು ಕೊಡುವ ನಮ್ಮ ಉಂಬೆ
ಬಾಲೆ ಕಂಜಿ ಕಪಿಲೆದಿಲ್ಲಿಬಂದು ಮೊಟ್ಟೆಲಿ
ಶಾಲೆಂದ ಬಪ್ಪಗ ಕಂಜಿ ಹಾಕಿದ ಹಾಲು ಕೊಡುವ ದನದ ಆ ಹೋರಿ ಬಾಲೆಯ ನೋಟ ದೊಡ್ಡಾದಪ್ಪಗ ಕಟುಕರಿಂಗೆ ಕೊಡೆಡಿ ಹೇಳಿ ಸಾರುವ ಅರ್ಥಲ್ಲಿ ಬರದ್ದದು.
ಅಮ್ಮ ಬೇಕಾ ಪುಟ್ಟು ಕಂಜಿ
ಜಾಯಿ ಕುಡಿವಲೆ
ಅಮ್ಮ ಇಲ್ಲೆ ಗುಡ್ಡೆಗೋಯ್ದು
ಹುಲ್ಲು ತಿಂಬಲೆ
ನೀರು ಬೇಕಾ ಪುಟ್ಟು ಕಂಜಿ
ಆಸರಾವುತ್ತಾ?
ಡ್ರಮ್ಮಿಲಿದ್ದು ತೆಗದುಕೊಡುವೆ
ನೀನೇ ಕುಡಿವೆಯಾ?
ಮೊಟ್ಟೆ ಮೇಲೆ ಮನುಗುದೆಂತ?
ಹೊಟ್ಟೆಬೇನೆಯಾ?
ಮೋರೆ ಹಿಡುದು ಮುದ್ದು ಮಾಡ್ಳೆ
ಮಾಡಿದಾಟವಾ?
ಎಂಗ ಎರಡು ಕೂಸುಗಳೂ
ಮುದ್ದು ಮಾಡ್ತೆಯಾ
ನಿನ್ನ ಪುಟ್ಟು ಮೊರೆ ಹಿಡುದು
ಒಪ್ಪ ಕೊಡ್ತೆಯಾ
ಶಾಮಣ್ಣಾ ರೈಸಿತ್ತು ಪುಟ್ಟುಕಂಜಿ ಪದ್ಯ!!
ರೈಸಿತ್ತೋ ರೈಸಿತ್ತು.
ಆಹಾ .. ಶ್ಯಾಮಣ್ಣ ..
ಎಕ್ಕಸಕ್ಕ ಚಳಿಯು ಎನಗೆ
ಅಕ್ಕ ಬಂತು ಶಾಲೆಗೋಗಿ
ಪಕ್ಕ ಬಂದು ನಿಂದುಗೊಂಡೆ ಮೈಯ ಅಂಟಿಸಿ |
ಚೊಕ್ಕವಾಗಿ ಕೂದುಗೊಂಡು
ಚಿಕ್ಕದಾದ ಮೊಟ್ಟೆ ಮೇಲೆ
ಮಕ್ಕಳಾಂಗೆ ಮುದ್ದುಮಾಡಿ ಅಪ್ಪಿಗೊಂಡತು ||
ಭಾಮಿನಿಂದ ಭೋಗ ಲಾಯಕ ಆಯಿದು ಇಂದಿರತ್ತೆ.
ಮೈಯ ಅಂಟಿಸಿ…ಎಡಿಗಾರೆ ತಿದ್ದಿ,ಅತ್ತೆ.
ಮಡಿಸಿ ಕಟ್ಟಿದ ಜಡೆಯ ಜೋಡಿಗೆ
ಹುಡುಗಿ ಯಮಕರ ಶೋಭೆ ಹೆಚ್ಚಿತು
ಮಡಿಲು ಸೇರಿದ ಮಣಕ ಕೂಸಿನ ಮೋರೆ ನೋಡಿತ್ತು |
ಗಡಸು ಕಂಜಿಗೆ ಮೆದುವಿನಾಸನ
ಗಡುಸು ಮೂಡದ ಬಾಲೆ ಚದುರೆಯ
ತೊಡೆಯ ಮೊಟ್ಟೆಲಿ ಹಿತವು ಕಾಣುಗು ಸುರಭಿ ವಂಶಕ್ಕೆ ||
ಕಂಜಿಯ ಹಿಡ್ಕೊಂಡ ಅಕ್ಕಂದ್ರ ಒಂದೇ ಶಬ್ಧಲ್ಲಿ ವಿವರ್ಸಿದ್ದು ಲಾಯಿಕ್ಕಾಯಿದು. -> ಪಣಿಜಡೆಯ ಅಕ್ಕಂದ್ರು.
ಹಲವು ದಿಕ್ಕೇ ವಿಸರ್ಗ ಬಯಿಂದು. ಆದರೆ “ಅಮ್ಮನು ಅಂಬಾ” ಹೇಳ್ತಲ್ಲಿ ಸಂಧಿ ಮಾಡಿರೆ ಭಾವಾರ್ಥ ವೆತ್ಯಾಸ ಅಕ್ಕೋ ಸಂಶಯ.
ಮಾವಾ , ವಿಸ೦ಧಿ ಅಲ್ಲದೋ ?
ಸಂಧಿ ಮಾಡುದು ಎಂಥಕೆ- ಹೇಳಿ ಎನಗೆ ಇನ್ನುದೆ ಅರ್ಥ ಆಗದ್ದ ಒಂದು ಸಮಸ್ಯೆ . ಅದರ ಉದ್ದೇಶ ಎಂತ? ಓದುವಾಗ ಹೇನ್ಗಾರು ಬಿಡುಸಿ ಓದುದು. ಉದಾ; ರುಮ್ಮನೆವೋಡುವ , ಸ್ವರಾಕ್ಷರ ಬೇಕಾದಲ್ಲಿ ವ್ಯಂಜನಾಕ್ಷರ ಹೇಂಗೆ ಸರಿ ಅಪ್ಪದು?
ಕಂಜಿಯ ಸ್ವಗತ
ಅಮ್ಮನ ಜಾಯಿಯ ಚೀಪುತ ಕುಡಿವಲೆ
ರುಮ್ಮನೆ ಓಡುವ ಕಾತರವೆನಗೇ
ದಮ್ಮಯ ಹೇಳುವೆ ನಿಂಗೊಗೆ ಇಲ್ಲೀ ಪಣಿಜೆಡೆಯಕ್ಕಂದ್ರೆ I
ತಿಮ್ಮನು ತಪ್ಪಾ ಚೆಂಬಿನ ಶಬ್ದಕೆ
ಅಮ್ಮನು ಅಂಬಾ ಹೇಳುವ ಧನಿಲೇ
ನೆಮ್ಮದಿಯೆನಗೇ ನಾತದ ಹಟ್ಟಿಲಿ ಕೊಂಡಾಟದ ಆಟ II
ತಿಮ್ಮ = ಹಾಲು ಕರವ ಜನ , ಜಾಯಿ =ಬಾಲ ಭಾಷೆಲಿ ಹಾಲು
ಮುದ್ದಿನ ಕಂಜಿ
ಮುದ್ದಿನ ಕಂಜಿಯು ನೀನೇ-
ಕೆದ್ದೆ ದ್ದೋ ಡುವೆ ಮನಿಕ್ಕೊ ಸುಮ್ಮನೆ ಇಲ್ಲೇ
ಶುದ್ದಿಗೆ ಹೇಳಿಯೆ ಮಾಡೆ ಡ
ಸದ್ದಿನ ನೋಡಲ್ಲಿ ಗೇ ಕೆಮರವ ಪಟ ಕ್ಕೇ
ಯೇವತ್ರಾಣ ಎತ್ತರಕ್ಕೆ ಬಯಿಂದಿಲೆ, ಆದರೂ ಕಂದ ಲಾಯಿಕ್ಕಿದ್ದು.