Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ ಭಾರತದ ಕೆಲವು ದಿಕ್ಕಿಲಿ ಮಳೆ ಹೊಡದತ್ತು. ಆವಗ ಕ೦ಡ ಒ೦ದು ದೃಶ್ಯವ ಪವನಜ ಮಾವ° ಬೈಲಿ೦ಗೆ ಕಳುಸಿದವು . ನಾವು ಒ೦ದು ಪದ್ಯ ಕಟ್ಟುವ° ಆಗದೋ?
ಕಟ್ಟಿದವು ನಾಡುಗಳ
ಆಕಾಶದೆತ್ತರಕೆ ಬೆಳದು ನಿ೦ಬ
ಹವಣಿಕೆಲಿಪ್ಪ ದೈತ್ಯಾಕಾರ ಬೀಡುಗಳ
ಹೊಳೆಯ ಹೊಯ್ಗೆಯ ತೆಗದು,ಭೂಮಿ ಪಾಯವ ಬಗದು
ಏರಿದವು ಎತ್ತರಕೆ ಅಟ್ಟಹಾಸಕೊಟ್ಟವಟ್ಟಲ್ಲಿ
ಭೂಮಿಯಬ್ಬೆಯ ಬಸುರ ಕೊರದು
ಹರಿವ ಹನಿಹನಿ ನೀರಿನೊರತೆಯ ಹೀರಿ
ಬರಡಾದ ಮೇಲೆ ಹುಡುಕೊದೆ೦ತಕೆ ಹಸುರು ?
ಉಸುಲು ನಿ೦ದರೆ ನ೦ದದೊ ಜೀವದ ಸೊಡರು?
ಆದರೂ ಈ ಬಣ್ಣ ಮನಸಿ೦ಗೆ ತ೦ಪು,ಕಣ್ಣಿ೦ಗೆ ಸೊ೦ಪು
ಕೊರಗಿಲಿ ಮುರುಟಿ ಮನುಗಿದಬ್ಬೆಯ ಬರಡುಮೈ ಮುಚ್ಚುಲೆ
ಹರಗುವ ಹನಿಮಳೆಯ ಅಕ್ಷಯಾ೦ಬರದಾಗಮನವ ಕ೦ಡು
ಕರಗಿತ್ತು ಮನಸು ಬಿರುದತ್ತು ಗರಿ ಕೊಣುದತ್ತು ಕಾಲು
ಧೀ೦ಗಿಣವೊ?ತಾ೦ಡವವೊ?ರುದ್ರನರ್ತನವೊ?ಆರಿ೦ಗೊ೦ತು?
ಹಸುರ ಕ೦ಡ ಕೊಶಿಲಿ ಈ ಬೆದುರತು೦ಡು
ಚೆಗುಳಿದರೆ ಮತ್ತೆ ಹೋದ ಕಾಲ ಬಕ್ಕೊ?ಯುಗ ಬದಲಕ್ಕೊ?
ಅಕ್ಕು ಹೇಳುವಾಶಾವಾದ ಕೊಣುಶುಗು ಮೈಮರಶುಗು ಮನತಣುಶುಗು
ಕೊಣಿವೆ ಬಚ್ಚೆಲು ಮರದು
ಬಾ ಮುಗಿಲೆ ಮಳೆಯಾಗಿ ಕೆರೆತೋಡ ತು೦ಬಿ ಹರಿ
ಅಬ್ಬೆ ಸೆರಗಿನ ಸೇರು ಅಬ್ಬೆಯೊಡಲಿಲಿ ಕೂರು
ಬಾ ಮಳೆಯೆ ಬಾ ..
ಮುಳಿಯ ಭಾವಯ್ಯ, ಹೊಸರೂಪದ ಕವನಲ್ಲಿಯುದೆ ರೈಸಿದ್ದವು. “ಭಾಮಿನಿ”ಯ ಬಿಟ್ಟು ಬಾ ಮಳೆಯೆ ಬಾ ಹೇಳಿ “ಮಿನಿ” ಕವನಲ್ಲಿ ಹೇಳಿದ್ದವು. ಲಾಯಕಿತ್ತು.
ಎಲ್ಲ ಪದ್ಯಂಗೊ ಲಾಯಕ್ಕಾಯಿದು
ಬಿರುಗಾಳಿ ಬೀಸಿತ್ತು
ಕರಿ ಮುಗಿಲು ಎದ್ದತ್ತು
ತಟ ಪಟನೆ ನಾಕು ಹನಿ ಮೈಗೆ ಬಿದ್ದತ್ತು /
ಬಾನ ಬಣ್ಣವ ನುಂಗಿ
ಮಳೆ ಮುಗಿಲು ಹಾಕಿತ್ತು
ಅದ ! ಆಗ ಗರಿ ಬಿಡುಸಿ ನವಿಲು ಕೊಣುದತ್ತು /
ಲಾಯಿಕಾಯಿದು ಬಾಲಣ್ಣ
ಹೋ… ನಿಂಗಳ ಊರಿಲಿ ಅಂಬಗ ಮಳೆ ಬಯಿಂದು… 🙂
ಅಲ್ಲಾ ಈ ಪದ್ಯಲ್ಲಿ ಎಲ್ಲೊರಿ೦ಗು ಇಪ್ಪ ಉತ್ಸಾಹ ನೋಡಿದರೆ ದಿನಾಗಲು ಒದೊ೦ದು ಪದ್ಯ ಕೊಟ್ಟರೆ ಅಕ್ಕಾಯಿಕ್ಕು .ಅಲ್ಲದಾ?.
ಪಾರ್ವತಿಯಕ್ಕಾ,ಏಕೆ ಆಗದ್ದೆ ? ನಿಂಗ ಯಾವ ವಾರ ಬರೆತ್ತಿ ?
ಭಾಗ್ಯ , ಈ ಛ0ಧಸ್ಸು ,ಷಟ್ಪದಿ ಎಲ್ಲ ಎನ್ನ೦ದಾಗ .ಇದರ ಎಲ್ಲಾ ಎಲ್ಲಿ೦ದ ಹುಡ್ಕಿ ತತ್ತಿರೋ ಗೊ೦ತಾವುತ್ತಿಲ್ಲೆ .ಆನು ಅ೦ತೇ ಬೇಕಾದರೆ ಬರವೆ .ಅಷ್ಟೆ .
ಈ ಸರ್ತಿ ಅಂತೆ ಬರವ ಅವಕಾಶ ಇದ್ದು ಪಾರ್ವತಿಯಕ್ಕ.ಸಮಸ್ಯೆ ೯೧.ಪ್ರತಿ ಸರ್ತಿ ಚಿತ್ರ ಹಾಕುವಾಗ , ನಿಂಗೊ ಬರದರೆ ಅದರ ಬೇಡ ಹೇಳಿ ಆರಾರು ಹೇಳುಗೊ ? ಹೇಳವು ಹೇಳಿ ಎನಗೆ ಅನ್ಸುತ್ತು . ಛಂದಸ್ಸಿಲಿ ಬರವವಕ್ಕೆ ಹಾಂಗೆ ಬರವಲಕ್ಕನ್ನೆ .
ಭಾರೀ ಲಾಯ್ಕದ ವನಮಂಜರಿ….
ಮುಳಿಯದಣ್ಣ ,ತೆ. ಮಾವ , ಏತಡ್ಕ ಮಾವ , ಶೈಲಕ್ಕ . ಪಾರ್ವತಿಯಕ್ಕ ಎಲ್ಲೋರಿಂಗೂ ಧನ್ಯವಾದ.
ವನಮ೦ಜರಿ ಹೇಳುವ ವೃತ್ತ —
ಚೆಂದದ ಕಾಡಿಲಿ ಕೊಂಬೆಯ ತೋರಣ ಮಂದಕೆ ಬಂದರೆ ಸಂಗತಿಯೋ?
ಗೊಂದಲವಿಲ್ಲದೆ ಬಂಡೆಗೆ ತೋರ್ಸುಲೆ ನೃತ್ಯಕೆ ಹೊಂದಿದ ವೇದಿಕೆಯೂ? I
ಸುಂದರ ಭಂಗಿಯ ನಾಟ್ಯಮಯೂರಕೆ ತೋಷಲಿ ಸೋಲುಗು ಪ೦ಡಿತನೂ
ಬ೦ದದು ಜಾಲಿನ ನೆಟ್ಟಿಯ ತಿಂದರೆ ಅಟ್ಟುಗು ಪಾಮರ ರೈತನುದೇ II
ಆಹಾ ..ಒಳ್ಳೆ ರೂಪಕ . ವನಮಂಜರಿ – ಈ ಹೊಸ ಛಂದಸ್ಸಿನ ಪರಿಚಯವೂ ಆತು . ಧನ್ಯವಾದ ಭಾಗ್ಯಕ್ಕ .
ನವಿಲಿನ ನೃತ್ಯ ಗತಿಯ ಹಾಂಗೆ ಕವನದ ಸಾಲುಗಳೊ, ಅಲ್ಲ ಕವನದ ಗತಿಗೆ ತಕ್ಕ ಹಾಂಗೆ ನವಿಲಿನ ನೃತ್ಯವೋ..!
ಚಿತ್ರ ಪದ್ಯಕ್ಕೆ ಸರಿಯಾದ ವೃತ್ತವ ಆಯ್ಕೆ ಮಾಡಿದ್ದಿ . ಪದ್ಯವೂ ಲಾಯಿಕ ಆತು.
ವನಮಂಜರಿಲಿ ಮಯೂರ ಲಾಸ್ಯ ಲಾಯಕಾಯಿದು ಭಾಗ್ಯಕ್ಕ.
ಆಶಾಜ್ಯೋತಿ
ನಿರ್ಭಯ ತಾಣಲಿ ಪಚ್ಚೆಯ
ಗರ್ಭಲಿ ನರ್ತನಕನಂತ ಕೊಳಲೂದಿದನೋ?
ನಿರ್ಬಲ ಜೀವಿಗೊ ಬದುಕುಲೆ
ನಿರ್ಭಯ ವಾತಾವರಣದ ಪರಿತೋರಿದನೋ?II
ಕಲ್ಪನೆ ಒಳ್ಳೆದಿದ್ದು. ಅಕೇರಿಯಾಣ ಸಾಲಿಲಿ ಒಂದು ಸಣ್ಣ ತಪ್ಪು ಬಯಿಂದು.
ಆ ತಪ್ಪು ಎಂತ್ಸರ ಹೇಳಿ ಹೇಳುವಿರೋ..? ಇದಕ್ಕೆ ಉತ್ತರವ ಭಾಗ್ಯಕ್ಕ ಬಿಟ್ಟು ಬಾಕಿಪ್ಪೋರು ಹೇಳುವಿರಾ..?
೧. ನಿರ್ಭಯ ಪರಿಸರದಮೋಘ ಪರಿತೋರಿದನೋ?
೨. ನಿರ್ಭಯ ನೆರೆಕರೆಲಿ ಸ೦ಕಲೆಯ ಬಿಡುಸಿದನೋ ? II
೩. ನಿರ್ಭಯ ಪರಿಸರದ ಹಸಿರ ಪರಿತೋರಿದನೋ?
ಸರ್ವಲಘು ಬಪ್ಪಗ ಸುರುವಾಣ ಮಾತ್ರೆ ಆದ ಕೂಡಲೇ ಯತಿ ಬರೆಕ್ಕು ..
ಪರಿಣಾಮ
ಸೊರುಗಿದಕಾಲಿಕ ಮಳೆಗೆ
ಪರದಾಡಿದವಯ್ಯ ತುಂಬ ಜೆನ ದುಃಖಂದಾ
ಗರಿಗೆದರಿ ಕೊಣುದ ನವಿಲು ಹ-
ಸುರು ಸಂಕೇತವನೆ ತೋರುಸಿತ್ತು ಮುದಂದಾ
ತಿದ್ದುಪಡಿ:ಸುರುವಿನ ಗೆರೆಯ ಅಕೇರಿಯಾಣ ಶಬ್ದವ ‘ಮಳ ಗೇ’ಹೇಳಿ ಓದಿಯೊಂ ಬದು.
ಯೇತಡ್ಕ ಮಾವ ಕಂದ ಬರೆಯದ್ದರೆ ಪೂರಣ ಪೂರ್ಣ ಆಗ. ಲಾಯಿಕಾಯಿದು ಮಾವ.
ನಿಂಗಳ ಚೆನ್ನುಡಿ ಹೆಚ್ಚುಸಿದ್ದೆನ್ನ ಜವಾಬ್ದಾರಿ. ಧನ್ಯವಾದ ಕುಮಾರಣ್ಣ.