“ಇನಿದನಿ” ಕವನ ಸಂಕಲನ
ಪ್ರಸನ್ನಾ ವಿ. ಚೆಕ್ಕೆಮನೆ ನಿಂಗಳಲ್ಲಿ ಹೆಚ್ಚಿನವಕ್ಕೆ ಪರಿಚಯ ಇಪ್ಪ ಹೆಮ್ಮಕ್ಕೊ.
ನಿಂಗೊ ಹೊಸ ದಿಗಂತ ದಿನ ಪತ್ರಿಕೆಯ ಓದುವವರಾದರೆ, ಇವರ ಲೇಖನ ಒದಿಪ್ಪಿ. ಪ್ರಸನ್ನಾ ವಿ. ಚೆಕ್ಕೆಮನೆ, ಪ್ರಸನ್ನಾ ವೆಂಕಟಕೃಷ್ಣ, ಈ ಹೆಸರುಗಳಲ್ಲಿ ಲೇಖನ ಬರೆತ್ತವು.
ಆದರ್ಶ ಗೃಹಿಣಿಯಾಗಿ ಇದ್ದುಗೊಂಡು, ಸಾಹಿತ್ಯ ಕ್ಷೇತ್ರಲ್ಲಿ ಕೃಷಿ ಮಾಡ್ತಾ ಇಪ್ಪ ಇವು ಬರದ ಕತೆಗೆ ಕೊಡಗಿನ ಗೌರಮ್ಮ ಪ್ರಶಸ್ತಿ, ಒಪ್ಪಣ್ಣ ನೆರೆಕೆರೆ ವಿಷು ವಿಶೇಷ ಸ್ಪರ್ದೆಲಿ ಪ್ರಶಸ್ತಿ ಸಿಕ್ಕಿದ್ದು.
ಇದುವರೆಗೆ ೫೦ ಕ್ಕೂ ಮಿಕ್ಕಿ ಕತೆ,ಲೇಖನ ಕವನ೦ಗೋ ಹೊಸದಿಗಂತ, ಉದಯವಾಣಿ, ಬಾಲಮಂಗಳ, ತುಷಾರ ಇವುಗಳಲ್ಲಿ ಪ್ರಕಟ ಆದ ಹಿರಿಮೆ ಇವಕ್ಕೆ ಇದ್ದು.
ತನ್ನ ಗೆಂಡ ವೆಂಕಟಕೃಷ್ಣ, ಮತ್ತೆ ಅತ್ತೆ ಮಾವನವರ ಪ್ರೋತ್ಸಾಹಂದ ಬರವಲೆ ಸಾಧ್ಯ ಆವ್ತಾ ಇದ್ದು ಹೇಳಿ ಅವರ ನೆನಪಿಸಿಗೊಳ್ತವು.
ಇವರ ಮಗ ವಿನಯಶಂಕರ ಬಾಲ ಪ್ರತಿಭೆ.
ಇದೀಗ “ಇನಿದನಿ” ಹೇಳ್ತ ಕವನ ಸಂಕಲವ ಬೆಂಗಳೂರಿನ ಪುಸ್ತಕ ಪ್ರಾಧಿಕಾರ ಇದರ ಸಹಕಾರಂದ ಹೆರ ತಯಿಂದವು. ಕೇರಳ ಶಾಲೆಯ 2ನೇ ತರಗತಿಯ ಕನ್ನಡ ಪಠ್ಯಪುಸ್ತಕಕ್ಕಾಗಿ ಇವರ ಕವನ “ನನ್ನ ಕೃಷಿ” ಆಯ್ಕೆ ಆಯಿದು. 36 ಕವನ ಸಂಗ್ರಹದ ಈ ಪುಸ್ತಕಕ್ಕೆ ಮುನ್ನುಡಿ ಬರದ ಹೊಸದಿಗಂತ ದೈನಿಕ ಪತ್ರಿಕೆಯ ಸ್ಥಾನೀಯ ಸಂಪದಕ ಪ್ರಕಾಶ ಇಳಂತಿಲ ಹೀಂಗೆ ಹೇಳುತ್ತವು:-
“ ಕಾವ್ಯ ಜನರ ಬದುಕಿನ ಚೈತನ್ಯ ಚಿಲುಮೆ. ಕವಿಯ ಸೃಜನಶೀಲ ಮನದಲಿ ಹುಟ್ಟಿ ಕಾವ್ಯವಾಗಿ ಹರಿದು ಓದುಗರ ಮನವ ತಟ್ಟಿ ಮಿಡಿಯುವಂತೆ ಮಾಡಲು ಕವನಕ್ಕೆ ಪ್ರಾಣ ತುಂಬಿದಂತೆ. ನೀತಿ ಭಾವರಸದಿಂದ ಕವನ ಝೇಂಕರಿಸಿದರೆ ಓದುಗನ ಮನ ಹೊಕ್ಕಿ ಜೀವರಸಕ್ಕೊಂದು ಶಕ್ತಿಯಾಗುತ್ತದೆ. ಕಾವಕೆ ಒಲಿಯದ ಮನವಿಲ್ಲ, ಕಾವ್ಯಕೆ ಸೋಲದ ಜನರಿಲ್ಲ. ಕಾವ್ಯ ಮನದ ಒರಟನು ತಿದ್ದಿ ನಯಗೊಳಿಸುವ ಪರಿ ಅನನ್ಯ. ಶ್ರೀಮತಿ ಪ್ರಸನ್ನಾ ವ್.ಚೆಕ್ಕೆಮನೆ ಗೃಹಿಣಿಯಾಗಿ ಮನೆವಾರ್ತೆಯ ಜೊತೆ ಜೊತೆಗೆ ತನ್ನ ಸೃಜನಶೀಲ ಚಿಂತನೆಯನ್ನು ಕವನ, ಸಾಹಿತ್ಯ, ಕಥೆ, ಲೇಖನಗಳ ಮೂಲಕ ಹರಿಸುತ್ತಿರುವ ಸುಪ್ತ ಪ್ರತಿಭೆ. ಅವರ ಸೃಜನಶೀಲ ಚಿಂತನೆಗೆ ಈ ಕೃತಿ ಇನ್ನಷ್ಟು ಪುಷ್ಟಿ ಕೊಡಲಿ. ಅವರಿಗೆ ಸಾ ವಿರದ ಆ ಒಂದರ ಕೃಪೆ ಸದಾ ಇರಲಿ”
ಆದಿಲಿ ಗುರುವಿಂಗೆ ಪ್ರಣಾಮ ಅರ್ಪಿಸಿ “ಗುರು ನಮನ” ಕವನ ವಾದರೆ ಮತ್ತೆ ಏಕದಂತ ಗೌರಿಪುತ್ರಂಗೆ “ಮೊದಲ ನಮನ “ ಹೇಳಿಕ್ಕಿ, ಕಂಬಾರು ದುರ್ಗೆಗೆ ಶರಣಾಗಿ “ಕಂಬಾರು ದುರ್ಗೆ” ಕವನ ಬರದರೆ, “ಪೊಸಡಿ ಗುಂಪೆ”ಯ ಮರೆಯದ್ದೆ “ ಓ.. ಪೊಸಡಿ ಗುಂಪೇ ನೀನೆಮ್ಮ ಹೆಮ್ಮೆ” ಹೇಳಿದವು. ಗೊಂತಿಪ್ಪ ಕಥೆಯನ್ನೇ ಕವನ ರೂಪಲ್ಲಿ ಮಕ್ಕೊಗಾಗಿ ಬರದರೆ, “ಹಲ್ಲಿನ ಶುಚಿತ್ವ”, “ಕಂದನಿಗೆ ಕಿವಿಮಾತು” “ಕಾಡೇ ನಾಡಿನ ಸಂಪತ್ತು “ ಹೇಳಿ ಬುದ್ಧಿ ಮಾತು ಹೇಳಿದವು. ಅಮ್ಮನ ಬಗ್ಗೆ ಎರಡು ಕವನ ಬರದರೆ, ಗೋಮಾತೆಯ ಬಗ್ಗೆಯೂ ಒಂದು ಕವನ ಬರದು “ಹಾಲನು ನೀಡುವ ಹಸುವನು ಎಂದೂ ಕಟುಕರ ಕತ್ತಿಗೆ ಒಡ್ಡದಿರಿ” ಹೇಳಿ ವಿನಯಪೂರ್ವಕವಾಗಿ ಕೇಳಿಗೊಂಡವು.
ಒಂದೆರಡು ಪದ್ಯದ ತುಣುಕುಗೊ ನಿಂಗೊಗಾಗಿ
ಚಂದಮಾಮನೆ ಬಾ ಬೇಗ
ಬಾನಲಿ ತೇಲುವ ಬೆಳ್ಳಿಯ ಬಣ್ಣದ
ಚಂದಿರಮಾಮನೆ ಬಾ ಬೇಗ
ನೀಲಿಯ ಬಾನಲಿ ಮೋಡದ ಮರೆಯಲಿ
ಅಡಗುವೆ ಏಕೆ ನೀನೀಗ ||
ಕಂದನಿಗೆ ಕಿವಿಮಾತು
ನೀತಿಮಾರ್ಗದಲ್ಲಿ ಬಾಳು ಪುಟ್ಟಕಂದನೇ
ಸತ್ಯಪಥದಿ ಸಾಗು ನೀನು ನನ್ನ ಚಿಣ್ಣನೇ||
ಅಂಧಕಾರ ಮುಸುಕಿದಾಗ ಭಯವ ಪಡದಿರು
ಹೂನ್ನಕಿರಣ ತೋರಬಹುದು ಧೈರ್ಯಗೆಡದಿರು||
ರಾಗಲ್ಲಿ ಹಾಡುವ ಹಾಂಗಿಪ್ಪ ಕವನಂಗೊ ಒಂದಾದ ಮತ್ತೆ ಒಂದು ಓದಿಸಿಗೊಂಡು ಹೋಪದು ಮಾತ್ರ ಅಲ್ಲದ್ದೆ, ಚಿಂತನೆಗೆ ಎಡೆಮಾಡಿ ಕೊಡುತ್ತು.
ಸಾಹಿತ್ಯ ಪ್ರೇಮಿಗೊ ಕೊಂಡು ಓದಿ ಪ್ರೋತ್ಸಾಹ ಕೊಡೆಕು.
ಹವ್ಯಕ ಸಾಹಿತ್ಯ ಕ್ಷೇತ್ರಲ್ಲಿಯೂ ಇವರಿಂದ ಸಾಕಷ್ಟು ಕೃಷಿ ಆಗಲಿ ಹೇಳಿ ಹಾರೈಸುವೊ
ಇನಿದನಿ ಕವನ ಸಂಕಲನ
ಲೇಖಕಿ: ಪ್ರಸನ್ನಾ ವಿ.ಚೆಕ್ಕೆಮನೆ
ಧರ್ಮತ್ತಡ್ಕ
ಕಾಸರಗೋಡು
ಪುಟ: 40
ಬೆಲೆ: ರೂ 20/=
~~~****~~~
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಪ್ರಸನ್ನಕ್ಕಂಗೆ ಅಭಿನಂದನೆಗೊ
ಬಳಿಬರುವ ಯಾತ್ರಿಕರ
ಕೈ ಬೀಸಿ ಕರೆಯುತಿಹ
ಓ….ಪೊಸಡಿಗುಂಪೆ
ನೀನೆಮ್ಮ ಹೆಮ್ಮೆ…..
ಪ್ರಸನ್ನಕ್ಕ ನಿಮ್ಮಂದ ನಮಗೆಲ್ಲ ಹೆಮ್ಮೆ……………………………
ಅಭಿನಂದನೆಗೊ ಪ್ರಸನ್ನಕ್ಕ
ಪ್ರಸನ್ನಕ್ಕಂಗೆ ಅಭಿನಂದನೆಗೊ. ಕವನ ಸಂಕಲನದ ಪರಿಚಯ ಆದ್ದದು ಸಂತೋಷ. ಈ ಎಡೆಲಿ ಡುಂಡೀರಾಜನ ಒಂದು ಕವನ ನೆಂಪಾವ್ತು.
ರಾವಣನ ಹೆಂಡತಿ ಮಂಡೋದರಿ
ಪುಸ್ತಕವನ್ನು ಕೊಂಡೋದಿರಿ ! !
ಎಲ್ಲೋರು ಪುಸ್ತಕವ ಕೊಂಡೋದಿ ಕೊಂಡಾಡುವೊ.
ಒಪ್ಪಣ್ಣನ ಬೈಲಿನ ಪ್ರಥಮ ವಿಷುವಿಶೇಷ ಸ್ಪರ್ಧೆಲಿ ಬಹುಮಾನ ಪಡದ ಪ್ರಸನ್ನಕ್ಕನ ಕಥೆ,ಕವನ೦ಗೊ ಪತ್ರಿಕೆಗಳಲ್ಲಿ ಪ್ರಕಟ ಆಯಿಕ್ಕೊ೦ಡು ಇದ್ದು ಹೇಳಿ ಗೊ೦ತಿತ್ತು. ಈಗ ಇವರ ಕವನ ಸ೦ಕಲನ ಬಿಡುಗಡೆ ಆಯಿದು ಹೇಳಿ ಗೊ೦ತಾಗಿ ಸ೦ತೋಷ ಆತು.
ಕವನದ ತುಣುಕುಗಳ ಓದಿಯಪ್ಪಗ, ಪ್ರಾಸಬದ್ಧವಾಗಿ ಅರ್ಥಗರ್ಭಿತ ಕವನ೦ಗೊ ತು೦ಬಿಗೊ೦ಡಿದ್ದು ಹೇಳಿ ಅ೦ದಾಜಿ ಆವುತ್ತು.ಮ೦ಗಳೂರು ಆಸುಪಾಸಿಲಿ ಪುಸ್ತಕ ಎಲ್ಲಿ ಸಿಕ್ಕುಗು?
ಆದರ್ಶ ಗೃಹಿಣಿ ಪ್ರಸನ್ನಕ್ಕನ ಮಗನೂ ಒಳ್ಳೆ ಪ್ರತಿಭಾವ೦ತ.ಅವನೂ ಬೈಲಿಲಿ ಕಥೆ ಬರದ್ದ ಹೇಳ್ತದು ಕೊಶಿಯ ಸ೦ಗತಿ.
ಪುಸ್ತಕದ ಪರಿಚಯ ಮಾಡಿಕೊಟ್ಟದಕ್ಕೆ ಧನ್ಯವಾದ ಅಪ್ಪಚ್ಚಿ.
ಪ್ರಸನ್ನನ ಕವನಸಂಕಲನದ ಬಗ್ಗೆ ಒಪ್ಪಣ್ಣ ಬಯಲಿನ ಓದುಗರಿಂಗೆ ಸಿಕ್ಕುವ ಹಾಂಗೆ ಮಾಡಿದ ಶರ್ಮಭಾವಂಗೆ ಧನ್ಯವಾದಂಗೊ
ಪ್ರಸನ್ನ ಅಕ್ಕನ ಪ್ರತಿಭೆಗೆ ವಂದನೆಗೋ,ಅಭಿನಂದನೆಗೋ.
ಹರೇ ರಾಮ . ತೆರೆ ಮರೆಲಿ ಸಾಹಿತ್ಯ ಕೃಷಿ ಮಾಡ್ಯೊಂಡೇ ಇದ್ದವು, ಪತ್ರಿಕೆಲಿ ಲೇಖನಂಗೊ ಕವನಂಗೊ ಬಂದುಗೊಂಡೇ ಇರ್ತವು, ಹೆಸರು ಪರಿಚಿತ ಇದ್ದರೂ ಹೆಸರಿಂಗೆ ಬೇಕಾಗಿ ಕೆಲಸ ಮಾಡದ ಪ್ರಸನ್ನಕ್ಕಂಗೆ ಅಭಿನಂದನೆಗೊ, ಇನ್ನೂ ಇನ್ನೂ ಶ್ರೇಯಸ್ಸಾಗಲಿ ಹೇದು ಶುಭಾಶಯಂಗೊ.
ಅಭಿನ೦ದನೆಗೊ ಪ್ರಸನ್ನ. ನಿನ್ನ ಸಾಹಿತ್ಯ ಕೃಷಿ ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ ಹೇಳಿ ಆಶಿಸುತ್ತೆ. ಹಾ೦ಗೇ ಅಪೂರ್ವ ಪ್ರತಿಭೆಗಳ ಹುಡ್ಕಿ ಬೈಲಿ೦ಗೆ ಪರಿಚಯಿಸುವ ಶರ್ಮಪ್ಪಚ್ಚಿಗೆ ಧನ್ಯವಾದ೦ಗೊ.
ಶರ್ಮಪ್ಪಚ್ಚಿಗೆ ವಂದನೆಗಳು. ಪ್ರಸನಾ್ನ ವಿ.ಚೆಕ್ಕೆಮನೆ ಇವರ ‘ಇನಿದನಿ’ಕವನ ಸಂಕಲನ’ವ ಒಪ್ಪಣ್ಣ ಡಾಟ್‌ಕಾಮ್‌ಲಿ ಪ್ರಕಟಿಸಿ ಉಪಕರಿಸಿದ್ದಕ್ಕೆ ಧನ್ಯವಾದಗಳು…
ಪ್ರಸನ್ನಕ್ಕಾ, ಅಭಿನಂದನೆಗೊ. ಸಾಹಿತ್ಯಕೃತಿಗೊ ಇನ್ನೂ ಇನ್ನೂ ಹರುದು ಬರಳಿ. ಪಠ್ಯಪುಸ್ತಕಕ್ಕೆ ನಿಂಗಳ ಬರೆಹ ಆಯ್ಕೆ ಆದ್ಸು ಸಂತೋಷದ ವಿಷಯ.
ಶರ್ಮಪ್ಪಚ್ಚೀ, ಸಂಗತಿಯ ಬೈಲಿಂಗೆ ಗುರ್ತಮಾಡ್ಸಿದ್ದಕ್ಕೆ ಧನ್ಯವಾದಂಗೊ.