Oppanna.com

ಕುಞ್ಞಿ ಪುಳ್ಳಿ: ಕಥೆ – ವಿನಯಶಂಕರ ಚೆಕ್ಕೆಮನೆ

ಬರದೋರು :   ವಿನಯ ಶಂಕರ, ಚೆಕ್ಕೆಮನೆ    on   20/11/2012    24 ಒಪ್ಪಂಗೊ

ವಿನಯ ಶಂಕರ, ಚೆಕ್ಕೆಮನೆ
Latest posts by ವಿನಯ ಶಂಕರ, ಚೆಕ್ಕೆಮನೆ (see all)

ಯುವ ಕತೆಗಾತಿ ಪ್ರಸನ್ನಕ್ಕ (ಪ್ರಸನ್ನಾ ವಿ.ಚೆಕ್ಕೆಮನೆ) – ಇವರ ಕತೆ-ಬರಹ-ಕವನಂಗೊ ಅನೇಕ ದಿಕ್ಕೆ ಪ್ರಕಟ ಆವುತ್ತಾ ಇಪ್ಪದರ ಬೈಲು ಗಮನುಸಿದ್ದು.
ವಿಷು-ವಿಶೇಷ ಸ್ಪರ್ಧೆಲಿಯೂ ಬಹುಮಾನ ಗಳುಸಿತ್ತಿದ್ದವು. ಅವರ ಕತೆಗೊ ಬೈಲಿಲಿಯೂ ಪ್ರಕಟ ಆಯಿದು.

ಇದೀಗ ಅವರ ಮಗ ವಿನಯಶಂಕರ ಕತೆ ಬರೆಸ್ಸು ಗೊಂತಿದ್ದೋ?
ಧರ್ಮತ್ತಡ್ಕ ಶಾಲೆಲಿ ಒಂಭತ್ತನೇ ಕ್ಲಾಸಿಲಿ ಕಲಿತ್ತಾ ಇಪ್ಪದಾದರೂ – ಸಾಧನೆ ಅಪಾರ.
ಮಕ್ಕಳ ಹಲವು ಸಹಜ ಹವ್ಯಾಸಂಗಳ ಒಟ್ಟಿಂಗೆ, ಇದೊಂದು – ಕತೆ ಬರೆಸ್ಸ ವಿಶೇಷ ಆಸಗ್ತಿ ಅಪ್ಪಮ್ಮನ ಪ್ರೋತ್ಸಾಹಂದ ಬೆಳದು, ಹಲವು ಪತ್ರಕೆಗಳಲ್ಲಿ ಪ್ರಕಟ ಅಪ್ಪಷ್ಟು ಪ್ರಬುದ್ಧ ಆಯಿದು.

ಒಂದು ಕುಂಞಿ ಕತೆಯ ನಮ್ಮ ಬೈಲಿಂಗೆ ಕೊಟ್ಟು ಕಳುಗಿದ್ದ, ವಿನಯಶಂಕರ. ಇದಾ- ಇಲ್ಲಿದ್ದು ಓದಿ ನೋಡಿ.
ಎಳೆ ಪ್ರತಿಭೆ ವಿನಯಶಂಕರಂಗೆ ಇನ್ನು ಮುಂದೆಯೂ ಅವಕಾಶಂಗೊ ಒದಗಿ ಬಂದು, ಸಾಹಿತ್ಯ ಕ್ಷೇತ್ರಲ್ಲಿ ಬೆಳವಲೆ ಎಡೆ ಸಿಕ್ಕಲಿ – ಹೇಳ್ತದು ನಮ್ಮ ಆಶಯ.
~
ಬೈಲಿನ ಪರವಾಗಿ.

ಕುಞ್ಞಿ ಪುಳ್ಳಿ (ಕಥೆ)

– ವಿನಯಶಂಕರ, ಚೆಕ್ಕೆಮನೆ

 

“ಹಲೋ ಇದಾರು? ಕುಞ್ಞಿ ಪುಳ್ಳಿಯೋ? ಎಲ್ಲಿದ್ದೆ? ಏಂ! ಒರುಂಕಿನ ತಲೇಲಿಯೋ? ನಿನಗೀಗ ಆ ದಾರಿ ಸಿಕ್ಕ, ನಿನಗೆ ಮದ್ಲಾಣ ಅಗಳ ಬಕ್ಕೆ ಮರ ನೆಂಪಿದ್ದಾ? ಅಲ್ಲೇ ಮೇಲಂಗೆ ಬಂದರೆ ಮಾರ್ಗವೇ.
ಗಸಣಿ ದಾರಿಯಲ್ಲ. ರಜ್ಜ ನಡದಪ್ಪಗ ಉರುವೆಲು ಸಿಕ್ಕುಗು. ಬೇಕಾರೆ ಗೆಣಪ್ಪ ಮಾವನ ಮಗನ ಕಳ್ಸುತ್ತೆ, ಆಂ! ಅಪ್ಪು ಅವಂಗೆ ನಿನ್ನ ಗುರ್ತಯಿಲ್ಲೆ ಅಲ್ಲದಾ? ಆತು ಹಾಂಗಾರೇ”
ಎಂಕಪ್ಪಜ್ಜ ಫೋನು ಮಡುಗಿಕ್ಕಿ ಪಾತಿ ಅಜ್ಜಿಯ ಹುಡುಕ್ಕ್ಯೊಂಡು ಸೀದಾ ಒಳ ಹೋದವು. ಅಲ್ಲಿ ಅಜ್ಜಿ ಒಲೆ ಬುಡಲ್ಲಿ ಹಾಲರಿಶಿಂಡಿತ್ತಿದ್ದವು.

“ ಏ… ಇದಾ… ಕೇಳಿತ್ತಾ?.. ನಮ್ಮ ಕುಞ್ಞಿ ಪುಳ್ಳಿ ಈಗ ಬತ್ತಾ°ಡ! ಒರುಂಕಿನ ತಲೇಲಿದ್ದೇಳಿ ಈಗ ಫೋನ್ ಮಾಡಿದ. ಮಧ್ಯಾಹ್ನಕ್ಕೆಂತಾರು ಸೀವು ಮಾಡ್ಲೆ ಶಂಕರಿಯತ್ರೆ ಹೇಳು” ಪಾತಜ್ಜಿಗೂ ಸಂತೋಷ ತಡವಲೆಡಿತ್ತಿಲ್ಲೆ.
ಕುಞ್ಞಿ ಪುಳ್ಳಿ ಹೇಳಿರೆ ಅವರ ಒಂದನೇ ಮಗಳು ಗಾಯತ್ರಿಯ ಮಗ°
“ ಅಪ್ಪೋ ಹಾಂಗಾರೆ ಅವ° ಬದ್ಧದ ಹೇಳಿಕೇಳ್ಲೆ ಬಪ್ಪದಾಗಿಕ್ಕು. ಮೊನ್ನೆ ಶಂಭುಕುಞ್ಞಿಯ ಹೆಂಡತಿ ಸಿಕ್ಕಿಪ್ಪಗ ಭಾವಂಗೆ ಕೂಸು ನಿಗೆಂಟಾಯ್ದುಳಿ ಹೇಳಿದ್ದತ್ತು. ಸಾಬಕ್ಕಿ ಸೀವೇ ಮಾಡ್ಲೆ ಹೇಳ್ತೆ. ’ಕೆಪ್ಪೆಕಣ್ಣು’ ಪಾಚ ಹೇಳಿರೆ ಭಾರೀ ಕೊದಿ, ಹೆಜ್ಜೆ ಉಣ್ಣದ್ದೆ ಅದರನ್ನೇ ಉಂಗವ°”

“ ಅವ° ಈಗಳೂ ನಿಂಗಳ ಕುಞ್ಞಿ ಪುಳ್ಳಿಯೇ ಆದರೂ ದೊಡ್ಡಾಗಿ, ಮದಿಮ್ಮಾಯ ಆವ್ತಾ ಇದ್ದ, ಇನ್ನುದೆ ನಿಂಗಳ ತಲೇಲಿ ಅವ° ಮೊದ್ಲಾಣಾಂಗೆ ಇರ್ತಾ ಹೇಳಿಯಾ?” ಎಂಕಪ್ಪಜ್ಜನ ಮಗ ಗೆಣಪ್ಪ ಮಾವ ನೆಗೆಮಾಡಿಂಡು ಹೇಳ್ಯಪ್ಪಗ ಅಜ್ಜಿ “ಅವ° ಕುಞ್ಞಿ ಆಗಿಪ್ಪಗ ನೋಡಿದ್ದಲ್ಲದಾ? ಹಾಂಗೆ ಮನಸ್ಸಿಲ್ಲಿಯೂ ಹಾಂಗೇ ಇಪ್ಪದಷ್ಟೆ”

“ಎಷ್ಟೊರಿಶಾತು ಎನ್ನ ಕುಞ್ಞಿ ಪುಳ್ಳಿಯ ನೋಡದ್ದೆ” ಎಂಕಪ್ಪಜ್ಜ ಮಣಿ ಚಿಟ್ಟೆಲಿ ಕೂದೊಂಡು ಎಲೆ ತಟ್ಟೆ ಹತ್ರಂಗೆಳದವು. ಅಷ್ಟಪ್ಗಗ ಗೆಣಪ್ಪಮಾವನ ಮಗ ವೆಂಕಟೇಶ ಅಲ್ಲಿಗೆ ಬಂದು “ ಮನೆಗೆ ನೆಂಟ್ರು ಬತ್ತವು ಹೇಳಿಕ್ಕಿ ನಿಂಗೊ ಹೀಂಗೆ ಸಣ್ಣ ತೋರ್ತು ಸುತ್ತಿಂಡು ಕೂದ್ದೆಂತಕಜ್ಜಾ°? ದೊಡ್ಡ ವಸ್ತ್ರ ಸುತ್ತುಲಾಗದಾ?”

ಅಷ್ಟಪ್ಪಗ ಅವನ ಅಮ್ಮ ಶಂಕರಿಯತ್ತೆ ಅಲ್ಲಿಗೆ ಬಂದು “ ಎಂತರ ನೀನು ಅಜ್ಜನ ಹತ್ರೆ ಹಾಂಗೆಲ್ಲ ಮಾತಾಡುದು? ಈಗ ಬಪ್ಪದಾರು ಗೊಂತಿದ್ದ, ಅಜ್ಜನ ಕೊಂಡಾಟದ ಪುಳ್ಳಿ. ಅವ° ನಿನ್ನ ಹಾಂಗೆಲ್ಲ ಅಜ್ಜನತ್ರೆ ಪೆದಂಬು ಮಾತಾಡ್ತಯಿಲ್ಲೆ ಗೊಂತಿದ್ದ? ಇಷ್ಟು ದೊಡ್ಡ ದಾಂಡಿಗ ಆದರೂ ನಿನ್ನ ಪೆರಪ್ಪು ಬುದ್ಧಿ ಹೋಗಿ ನೇರ್ಪ ಬುದ್ಧಿ ಬೈಂದಿಲ್ಲೆನ್ನೇಳಿ ಎನಗೆ ಬೇಜಾರಾವ್ತು

“ ಓಹೋ… ಹಾಂಗಾ? ಅಷ್ಟೊಳ್ಳೆ ಮಾಣಿ ಆದ ಕಾರಣವೇ ನವಗೆ ಇಷ್ಟೊರ್ಷ ಹೋಕು ಬರಕ್ಕು ಇಲ್ಲದ್ದದು ಹ್ಹ…ಹ್ಹ… ಹ್ಹ. ಈಗ ಹೇಂಗೋ ಕೊಂಡಾಟದ ಪುಳ್ಳಿಗೆ ಅಜ್ಜನ ನೆಂಪಾದ್ದದು? ಅಲ್ದಾ ಅಜ್ಜಾ°?

ಅವ° ಹಾಂಗೆ ನೆಗೆ ಮಾಡ್ಯಪ್ಪಗ ಎಂಕಪ್ಪಜ್ಜನ ಮನಸ್ಸು ಒಂದಾರಿ ಚುಂಯಿ ಹೇಳಿ ಆತು.
“ ಅದೆಲ್ಲ ಹಳೇ ಕತೆ, ಈಗ ಅದರೆಲ್ಲ ನೆಂಪು ಮಾಡುದೆಂತಕೇ?” ಅಜ್ಜ ಬಾಯಿಲಿ ಹಾಂಗೆ ಹೇಳಿರೂ ಅವಕ್ಕೆ ಮದ್ಲಾಣದ್ದೆಲ್ಲ ಮತ್ತೊಂದರಿ ನೆಂಪಾಗದ್ದಿರ್ತೋ?

~ ~

ಕತೆಗಾರ ವಿನಯಶಂಕರ ಚೆಕ್ಕೆಮನೆ

ಎಂಕಪ್ಪಜ್ಜನ ಗೊಂತಿಲ್ಲದ್ದವು ಆ ಊರಿಲ್ಲಿ ಆರೂ ಇಲ್ಲೆ. ಒಳ್ಳೆಯ ಜೆನ. ಎಲ್ಲೋರಿಂಗೂ ಉಪಕಾರಿ. ಹೆಚ್ಚು ಆಸ್ತಿ, ತೋಟ ಇಲ್ಲದ್ರೂ, ಇನ್ನೊಬ್ಬರ ನೋಡಿ ಹೊಟ್ಟೆಕಿಚ್ಚುಪಡದ್ದೆ ಇಪ್ಪದ್ರಲ್ಲೇ ಸುಧಾರ್ಸಿಂಡು ಹೋಪ ಜೀವನ ಅವರದ್ದು. ಅವರ ಹೆಂಡತ್ತಿ ಪಾತಿ ಅಜ್ಜಿಯೂ, ಮಗ ಗೆಣಪ್ಪ (ಗಣಪತಿ), ಮಗಳು ಗಾಯತ್ರಿ ಎಲ್ಲೂರೂ ಒಳ್ಳೆಯ ಮನುಷ್ಯರೇ.

ಮಗಳು ಗಾಯತ್ರಿ ಹೇಳಿರೆ ಅಜ್ಜಂಗೆ ಭಾರೀ ಕೊಂಡಾಟ. ಬೆಂಗ್ಳೂರು ಪೇಟೆಲಿಪ್ಪವಕ್ಕೆಲ್ಲ ಅದರ ಮದುವೆ ಮಾಡಿ ಕೊಟ್ರೆ, ಮಗಳ ಅಂಬಗಂಬಗ ನೋಡ್ಲೆ ಬಂಙ ಅಕ್ಕೂಳಿ ಹೊಳೆಕರೆ ಸಣ್ಣಪ್ಪನ ಮಗ ಗೋಪಾಲಂಗೇ ಅದರ ಮದುವೆ ಮಾಡಿ ಕೊಟ್ಟವು.

“ಮರ ನೋಡಿ ಬಳ್ಳಿ ನೆಡೆಕು, ಕುಲ ನೋಡಿ ಹೆಣ್ಣು ಕೊಡೆಕು” ಹೇಳಿ ಎಂಕಪ್ಪಜ್ಜಂಗೆ ಗೊಂತಿದ್ದರೂ ಈ ವಿಶಯಲ್ಲಿ ಮಾತ್ರ ಅವಕ್ಕೆ ರಜಾ ಲೆಕ್ಕ ತಪ್ಪಿತ್ತು. ಸಣ್ಣಪ್ಪನ ಮನೆಯವು ಧಾರಾಳ ಅಸ್ತಿ ಇಪ್ಪವಾದರೂ ’ಬರ್ಕತ್ತಿನ’ ಜೆನಂಗೊ ಅಲ್ಲಾಳಿ ಮಗಳ ಕೊಟ್ಟ ಮತ್ತೆಯೇ ಅವಕ್ಕೆ ಗೊಂತಾದ್ದದು. ಗೋಪಾಲಂಗಂತೂ ಮೂಗಿನ ಕೊಡಿಲಿಯೇ ಕೋಪ. ಆ ಕೋಪ ಎಷ್ಟಿದ್ದತ್ತೂ ಹೇಳಿರೆ, ಅವಂಗಾಗದ್ದರ ಆರಾರೂ ಹೇಳಿದವು ಹೇಳ್ಯಾರೆ ಅವಕ್ಕೆ ನಾಕು ಪೊಳಿ ಕೊಡ್ಲೂ ಹೇಸ° ಅವ°.

ಹಾಂಗೆಪ್ಪ ಅಳಿಯ° ಮಾವಗಳ ಮನೆಗೆ ಬಂದರೆ ಎಂಕಪ್ಪಜ್ಜಂಗೂ, ಪಾತಿಯಜ್ಜಿಗೂ, ಹೊಟ್ಟೆಲಿಯೇ ಚಳಿ ಕೂದಾಂಗಪ್ಪದು. ಹೇಂಗೆ ಮರ್ಯಾದೆ ಮಾಡಿರೂ ಸಾಕಾಗದ್ದಿಪ್ಪ ಅವಂಗೆ ಏನಾರೂ ರಜಾ ಹೆಚ್ಚು ಕಮ್ಮಿಯಾದರೆ ಹಾಳಪ್ಪದು ಮಗಳ ಬದ್ಕಲ್ಲದಾಳಿ ಆದಷ್ಟು ಚೆಂದಕೆ ಸಮ್ಮಾನ ಮಾಡ್ಯೊಂಡಿತ್ತಿದ್ದವು. ಅಂದರೂ ಅವನ ’ಚರಿಪಿರಿ’ ಮುಗುಕ್ಕೊಂಡಿತ್ತಿದ್ದಿಲ್ಲೆ

ಹಾಂಗಿಪ್ಪಗಳೇ ಎಂಕಪ್ಪಜ್ಜಂಗೊಬ್ಬ° ಪುಳ್ಳಿ ಮಾಣಿ ಹುಟ್ಟಿದ°. ಅಜ್ಜಂಗೆ ಭಾರೀ ಕೊಶಿಯಾತು.

“ಎನ್ನ ಕುಞ್ಞಿ ಪುಳ್ಳಿ” ಹೇಳಿ ಅವನ ಕೊಂಡಾಟ ಮಾಡ್ಯೊಂಡಿತ್ತಿದ್ದವು. ಅವ° ರಜಾ ದೊಡ್ಡಾಗಿ ಆಟ ಆಡ್ಲೆ ಸುರು ಮಾಡ್ಯಪ್ಪಗ ಅಜ್ಜ° ಅವನ ಹತ್ತರೆ ಕೂದು ಮಡಿಲ್ಲಿ ಮನುಶಿ ಎಲ್ಲ ಕೊಂಡಾಟ ಮಾಡಿದವು. ಕುಞ್ಞಿ ಪುಳ್ಳಿ ಹೇಳಿರೆ ಅಜ್ಜಂಗೆ ಎಷ್ಟು ಕೊಂಡಾಟವೋ, ಅವಂಗೂ  ಅಜ್ಜಾ° ಹೇಳಿರೆ ಅಷ್ಟೇ ಪ್ರೀತಿ. ತಿಂಗಳಿಂಗೊಂದಾರಿಯಾದರೂ ಅವಕ್ಕತ್ಲಾಗಿತ್ಲಾಗಿ ಕಾಣದ್ರೆ ಇಬ್ರಿಂಗೂ ಅಸಕ್ಕಾಗಿಂಡಿದ್ದತ್ತು.

ಕುಞ್ಞಿ ಪುಳ್ಳಿಯ ಹೆಸರು ಶಂಕರನಾರಾಯಣ ಹೇಳ್ಯಾರೂ, ಅವ° ಶಾಲಗೋಪಲೆ ಸುರು ಮಾಡಿರೂ ಅಜ್ಜಂಗೆ ಮಾತ್ರ ಅವ° ಏವಗಳೂ ಕುಞ್ಞಿ ಪುಳ್ಳಿಯೇ. ಅಜ್ಜ ಹೇಳುವ ಕತೆಗೋ, ಪುರಾಣಂಗೊ, ಲೆಕ್ಕ, ಮಗ್ಗಿ, ತಿಥಿಗಳ ಹೆಸರು, ವಾರ ನಕ್ಷತ್ರ, ಸಂವತ್ಸರದ ಹೆಸರುಗಳೆಲ್ಲ ಅವನ್ದೆ ಕಲ್ತ°. ಇದೆಲ್ಲ ನೋಡುಗ ಅವನ ಅಪ್ಪ° ಗೋಪಾಲಂಗೆ ಪಿಸ್ರು ಬಂದೊಂಡಿದ್ದತ್ತು

“ಇವ° ಅಜ್ಜನ ಬೆನ್ನಾರೆ ತಿರುಗಿ ಹಾಳಾವ್ತ°” ಹೇಳೀ ಪರಂಚಿಂಡಿದ್ದರೂ, ಅವನ ಅಬ್ಬೆ ಗಾಯತ್ರಿ ಪೊಟ್ಟಿಯ ಹಾಂಗೆ ಕೂದತ್ತು. ಗೆಂಡನತ್ರೆ ಲಡಾಯಿ ಕೊಡುವಷ್ಟು ತಾಕತ್ತು ಅದಕ್ಕಿತ್ತಿದ್ದಿಲ್ಲೆ

ಹಾಂಗಿಪ್ಪಗ ಗೆಣಪ್ಪ ಮಾವನ ಮದುವೆ ನಿಗೆಂಟಾತು. ಮಗನ ಮದುವೆ ಹೇಳಿ ಅಜ್ಜಂಗೂ ಅಜ್ಜಿಗೂ ಭಾರೀ ಕೊಶಿ. ಜವುಳಿ ಎಲ್ಲ ತೆಗವಲೆ ಹೋಪಗ ಅಜ್ಜ° ಕುಞ್ಞಿ ಪುಳ್ಳಿಯನ್ನೂ ಕರ್ಕೊಂಡು ಹೋಗಿ, ಅವಂಗೆ ಬೇಕಾದ ಹಾಂಗಿಪ್ಪ ಅಂಗಿ ಪೇಂಟು ಎಲ್ಲ ತೆಗದು ಕೊಟ್ಟವು. ದಿನ ಎಣ್ಸಿದ ಹಾಂಗೆ ಮದುವೆ ದಿನವೂ ಬಂತೇ ಬಂತು. ಕುಞ್ಞಿ ಪುಳ್ಳಿ ಹೊಸ ಅಂಗಿ, ಪೇಂಟು ಹಾಕಿಂಡು, ಅಬ್ಬೆಪ್ಪನೊಟ್ಟಿಂಗೆ ಹೆರಟ°. ಮದುವೆ ಗೌಜಿಲಿ ಕಳುದತ್ತು.

ಮರುದಿನ ಎಂಕಪ್ಪಜ್ಜನ ಮನೆಲಿ ಸಟ್ಟುಮುಡಿ. ಮದುವೆ ದಿನ ಇರುಳು ತುಂಬಾ ಜೆನ ನೆಂಟ್ರು, ನೆರೆಕರೆಯವೆಲ್ಲ ಸೇರಿ ಬೆಂದಿಗೆ ಕೊರಕ್ಕೊಂಡಿತ್ತಿದ್ದವು. ಮಾತು, ನೆಗೆ, ಗೌಜಿಯೋ ಗೌಜಿ!

ಅಷ್ಟಪ್ಪಗ ಆರೋ ಹೇಳಿದ ಒಂದು ಮಾತು ಕುಞ್ಞಿ ಪುಳ್ಳಿಯ ಅಪ್ಪಂಗೆ ಕೊಶಿಯಾಯ್ದಿಲ್ಲೆ. ಅವಂಗೆ ಬಂತದಾ ಪಿಸ್ರು. ಅಲ್ಲಿಯೇ ಗಲಾಟೆ ಮಾಡಿ, ಹೇಳಿದವಂಗೆ ಬಡಿವಲೆ ಕೈ ಬೇರಿಂಡು ಹೋದ್ದದೇ!!. ಬಂದ ನೆಂಟ್ರುಗೊಕ್ಕೆ ಅಪಚಾರ ಮಾಡಿರೆ, ಹೋಪದು ನಮ್ಮ ಮರ್ಯಾದೆ ಹೇಳಿ ಎಂಕಪ್ಪಜ್ಜ ಅಳಿಯನ ತಡದು ಅವಂಗೆ ಬುದ್ಧಿ ಹೇಳಿದವು. “ನೋಡು ಗೋಪಾಲ, ನೀನು ಹೀಂಗೆ ಬಂದವರ ಮೇಲಂಗೆ ಕೈ ಬೇರಿಂಡು ಹೋಪಲಾಗ, ನಾಳಂಗೆ ಜೆಂಬಾರ ಇಪ್ಪ ಮನೆ ಇದು. ಎಂತ ಹೆಚ್ಚು ಕಮ್ಮಿಯಾದರೂ ನಾವೆಲ್ಲ ಒರ್ಮಯಿಸ್ಯೊಂಡು ಹೋಯ್ಕು” ಅಜ್ಜನ ಈ ಮಾತು ಗೋಪಾಲನ ಕೋಪಕ್ಕೆ ತುಪ್ಪ ಎರದ ಹಾಂಗಾತು

“ತನ್ನಿಚ್ಛಗೂ ಚಾಣಿತ್ತಲಗೂ ಮದ್ದಿಲ್ಲೇ”ಳಿ ದೊಡ್ಡವು ಹೇಳುವ ಮಾತು ಇಲ್ಲಿಯೂ ಸತ್ಯ ಆತು. ಗೋಪಾಲ ಕೋಪಲ್ಲಿ ಹಾರಿಂಡು ಇರುಳಿಂದಿರುಳೇ ಕುಞ್ಞಿ ಪುಳ್ಳಿಯನ್ನೂ ಅವನ ಅಬ್ಬೆಯನ್ನೂ ದರ ದರ ಎಳಕ್ಕೊಂಡು ಅವನ ಮನಗೆ ಹೋದ°. “ಆನು ಬತ್ತಿಲ್ಲೇಳಿ” ಇಬ್ರು ಹಠ ಮಾಡಿರೂ ’ ಈಗ ಎನ್ನೊಟ್ಟಿಂಗೆ ಬಾರದ್ದವು ಇನ್ನು ಮುಂದೆ ಎನ್ನ ಮನೆಯ ಮೆಟ್ಟುಗಲ್ಲು ಹತ್ತುಲಾಗ’ ಹೇಳ್ಯಪ್ಪಗ ಇಬ್ರೂ ಹೆದರಿ ಕಣ್ಣೀರಾಕಿಂಡೇ ಅವನ ಹಿಂದಂದ ನೆಡದವು. ಚೆಪ್ಪರಕ್ಕೆ ಕಟ್ಟಿದ ಬುಗ್ಗೆಲಿ ಆಟ ಆಡ್ಲಕ್ಕೂಳೀ ಗ್ರೇಶಿಂಡಿದ್ದ ಕುಞ್ಞಿ ಪುಳ್ಳಿಯ ಕನಸೆಲ್ಲ ಅಲ್ಲಿಯೇ ಕರಗಿತ್ತು. ಎಕ್ಕಿ ಎಕ್ಕಿ ಕೂಗಿಂಡೇ ಅಪ್ಪನೊಟ್ಟಿಂಗೆ ಹೋದ° ಅವ°

ಮರುದಿನ ಸಟ್ಟುಮುಡಿ ಮನೆಲಿ ಎಲ್ಲೋರ ಬಾಯಿಲಿಯೂ ಇದೇ ಸುದ್ದಿ. ಎಲ್ಲೋರೂ ಬಾಯಿಗೊಂದರ ಹಾಂಗೆ ಮಾತಾಡಿಂಡು ಗಮ್ಮತ್ತು ಪಾಚುಂಡಿಕ್ಕಿ, ಹೋಳಿಗೆ ತಿಂದಿಕ್ಕಿ ನೆಡದವು. ಎಂಕಪ್ಪಜ್ಜಂಗೆ ಮಾತ್ರ ಉಂಬಲೆ ಸಾನು ಮೆಚ್ಚಿದ್ದಿಲ್ಲೆ. ಅಜ್ಜಿಯೂ ಅಷ್ಟೆ, ಅಂತೇ ಬಾಯಿ ಕೊಳೆ ಮಾಡಿದ ಸಾಸ್ತ್ರ ಮಾಡಿದ್ದು ಮಾತ್ರ. ಇರುಳುದೆ ಅಜ್ಜ° ಉಂಬಲೆ ಬಾರದ್ದಿಪ್ಪಗ ಅಜ್ಜನ ಸೊಸೆ ಶಂಕರಿಯತ್ತೆಯೇ ಬಂದು ದಿನಿಗೇಳಿದವು. “ಮಾವ° ಹೀಂಗೆಲ್ಲ ನಿಂಗೊ ಬೇಜಾರು ಮಾಡಿಂಡು ಉಣ್ಣದ್ದೆ ಕೂದರೆ ಎಂಗೊಗೆ ಉಂಬಲೆ ಮೆಚ್ಚ. ನಾಳಂಗುದಿಯಪ್ಪಗಳೇ ನಿಂಗೊ ಕುಞ್ಞಿ ಪುಳ್ಳಿಯ ನೋಡ್ಲೆ ಹೋಗಿ, ಹೋಳಿಗೆಲ್ಲ ಕೊಟ್ಟಿಕ್ಕಿ ಬನ್ನಿ” ಹೇಳ್ಯಪ್ಪಗ ಮೆಲ್ಲಂಗೆ ಉಂಬಲೆ ಬಂದವು ಅಜ್ಜ°

ಮರುದಿನ ಗೆಣಪ್ಪ ಮಾವನೂ ಶಂಕರಿಯತ್ತೆಯೂ ’ಮರುವಾರಿ’ ಸಮ್ಮಾನಕ್ಕೆ ಹೋದರೆ ಅಜ್ಜ ಮಾತ್ರ ಹೋಳಿಗೆ, ಕಾರದಕಡ್ದಿ, ಸಾಟು ಎಲ್ಲ ಮಾರಾಪು ಕಟ್ಟ್ಯೊಂಡು ಕುಞ್ಞಿ ಪುಳ್ಳಿಗೆ ಕೊಡ್ಲೇಳಿ ಹೆರಟವು.

ಆ ಮನೆಯ ಉರುವಲು ದಾಂಟುಗಳೇ ಅವಕ್ಕೆ ಕುಞ್ಞಿ ಪುಳ್ಳಿ ತೊಳಶಿ ಕಟ್ಟೆಯತ್ರೆ ನಿಂದೊಂಡಿಪ್ಪದು ಕಂಡು ಕೊಶಿಯಾತು. ಅಜ್ಜನ ಕಂಡಪ್ಪಗ ಅವನೂ ಓಡ್ಯೊಂಡು ಬಂದ°. ಅಷ್ಟಪ್ಪಗ ಎಲ್ಲಿತ್ತಿದ್ದನೋ ಗೋಪಾಲ° ಅಲ್ಲಿಗೆ ಬಂದು ಕುಞ್ಞಿ ಪುಳ್ಳಿಯ ರಟ್ಟೆ ಹಿಡುದು ಜೋರು ಮಾಡಿದ°. “ಆಗದ್ದವು ಮನಗೆ ಬಂದರೆ ಚೆರ್ಪಿಲ್ಲಿ ನಾಕು ಕೊಟ್ಟು ಓಡ್ಸುದು ಬಿಟ್ಟಿಕ್ಕಿ, ಎದುರ್ಗೊಂಬಲೆ ಹೆರಟಿದ° ಅವ°, ಇನ್ನು ಕಾಲು ಮುಂದೆ ಮಡುಗಿರೆ ಆ ಕಾಲಿನನ್ನೇ ಬಡ್ದು ಮುರಿವೆ”

ಅಳಿಯನ ಈ ಮಾತು ಕೇಳ್ಯಪ್ಪಗ ಅಜ್ಜನ ತೆಗಲೆಗೆ ಆರೋ ಬಡ್ದ ಹಾಂಗಾತು. ಬೀಸರೋದಾಂಗಾಗಿ ಅಲ್ಲೇ ನೆಲಕ್ಕಲ್ಲಿ ಕೂದವು. ಅಷ್ಟಪ್ಪಗ ಕುಞ್ಞಿ ಪುಳ್ಳಿ ’ಅಜ್ಜಾ… ಎಂತಾತು?’ ಕೇಳ್ಯೊಂಡು, ಅಪ್ಪನ ಕೈಂದ ಉರುಡಿ ತಪ್ಸಿಂಡು ಅಜ್ಜನತ್ರಂಗೆ ಬಂದ°. ಗೋಪಾಲನ ರೌದ್ರ ಏರಿತ್ತು. ಕೈಗೆ ಸಿಕ್ಕಿದ ಸಲಕ್ಕೆ ತುಂಡಿಲ್ಲಿ ಕುಞ್ಞಿ ಪುಳ್ಳಿಗೆ ಜೆಪ್ಪಿದ°. ಪುಳ್ಳಿ ಹೀಂಗೆ ಪೆಟ್ಟು ತಿಂಬದು ಅಜ್ಜಂಗೆ ನೋಡ್ಲೆಡಿಗೋ?. ಅಜ್ಜ° ಅವರ ಎಡೇಲಿ ನಿಂದು ಅಳಿಯನ ತಳ್ಪುಲೆ ನೋಡಿದವು. ಇದೇ ಒಳ್ಳೆ ಅವಕಾಶ ಹೇಳಿ ಅಜ್ಜಂಗೂ ಸಮಾ ಕೊಟ್ಟ ಅವರ ಅಳಿಯ°

ಇಷ್ಟೆಲ್ಲಾ ಗೌಜಿಯಪ್ಪಗ ಗಾಯತ್ರಿ ಒಳಾಂದ ಓಡ್ಯೊಂಡು ಬಂದು, ಹೇಂಗೋ ಗೋಪಾಲನ ಕೈಂದ ಸಲಕ್ಕೆ ತೆಗದಿಡ್ಕಿತ್ತು. ಮಗನ ಮಂಕಾಡ್ಸಿಯೊಂಡು ಅಪ್ಪನ ಒಳಾಂಗೆ ದೆನಿಗೇಳಿತ್ತು

“ಮನೆಯೊಳಾಂಗೆ ಆರನ್ನೂ ದೆನೊಗೋಳೆಕ್ಕೂಳಿಲ್ಲೆ, ಆನಾರನ್ನೂ ಬಪ್ಪಲೆ ಹೇಳಿದ್ದೂಯಿಲ್ಲೆ….” ಅಳಿಯನ ಬಾಯಿಂದ ಉದ್ರಿದ ಮಾತು ಕೇಳ್ಯಪ್ಪಗ ಅಜ್ಜಂಗೆ ಮತ್ತಲ್ಲಿ ನಿಲ್ಲೆಕ್ಕೂಳಿ ಆಯ್ದೇಯಿಲ್ಲೆ. ಅಳಿಯನ ಕೈಂದ ಪೆಟ್ಟು ತಿಂಬಗ ಅವು ತಂದ ಮಾರಾಪು ರಟ್ಟಿ ಅದರ್ಲಿಪ್ಪದೆಲ್ಲ ನೆಲಕ್ಕಲ್ಲಿ ಬಿಕ್ಕಿ ಹೋಗಿದ್ದತ್ತು. ಅವರ ಕಣ್ಣಿಂದ ಒಂದು ಜಾತಿ ನೀರು ಬಂತಷ್ಟೇ ಹೊರತು ಒಂದಕ್ಷರವೂ ಹೆರಟಿದಿಲ್ಲೆ. ಹೆಗಲ್ಲಿಪ್ಪ ತೋರ್ತಿಲ್ಲಿ ಕಣ್ಣೀರು ಉದ್ದ್ಯೊಂಡು ’ಬಂದ ದಾರಿಗೆ ಸುಂಕಯಿಲ್ಲೆ’ ಹೇಳಿ ಹೆರಟವು ಅಜ್ಜ°. ಅವರ ಮೈಯಿಂದಲೂ ಹೆಚ್ಚು ಗಾಯ ಆದ್ದದು ಮಾತ್ರ ಅವರ ಮನಸ್ಸಿಂಗೆ!

ಅಂದೇ ಅಕೇರಿ. ಅಜ್ಜ, ಕುಞ್ಞಿ ಪುಳ್ಳಿಯ ಮತ್ತೆ ಕಂಡಿದವಿಲ್ಲೆ. ಉಪ್ನಾನಕ್ಕೂ ಹೇಳಿಕೆ ಇತ್ತಿದ್ದಿಲ್ಲೆ ಅವಕ್ಕೆ. ಆರಾರು ನೆಂಟ್ರುಗಳಾ, ನೆರೆಕೆರೆಯವಾ ಮತ್ತೆ ’ ಕುಞ್ಞಿ ಪುಳ್ಳಿ ಕಾಲೇಜಿಂಗೆ ಹೋವ್ತ°, ಕಲಿವಲೆ ಉಶಾರಿದ್ದ°, ಅವಂಗೆ ಕೆಲಸ ಸಿಕ್ಕಿತ್ತೂಳಿಯೆಲ್ಲ ಪಾತಿಯಜ್ಜಿಯತ್ರೆ ಹೇಳುಗ ಅಜ್ಜಂಗೆ ಅವನ ಒಂದಾರಿ ನೋಡೆಕ್ಕೂಳಿ ಕೊದಿಯಾಗಿಂಡಿತ್ತಿದ್ದು. ಗೆಣಪ್ಪ ಮಾವನ ಎರಡು ಮಕ್ಕಳನ್ನೂ ಕುಞ್ಞಿ ಪುಳ್ಳಿಯ ಕೊಂಡಾಟ ಮಾಡಿದಷ್ಟು ಕೊಂಡಾಟ ಮಾಡ್ಲೆ ಎಡ್ತಿದಿಲ್ಲೆ ಅವಕ್ಕೆ.

ಇದೆಲ್ಲ ಆಗಿ ಎಷ್ಟೊರ್ಷಾತೂಳಿಯೂ ನೆಂಪಿಲ್ಲೆ ಅಜ್ಜಂಗೆ. ಈಗ ಅವಕ್ಕೆ ಮೊದ್ಲಾಣಾಂಗೆ ಕಣ್ಣು ಸರೀ ಕಾಣ್ತಿಲ್ಲೆ, ಕೆಮಿ ಸರೀ ಕೇಳ್ತಿಲ್ಲೆ. ಆದರೂ ಸಾಯ್ಯುಂದ ಮೊದಲೊಂದರಿಯಾರೂ ಕುಞ್ಞಿ ಪುಳ್ಳಿಯ ನೋಡೆಕ್ಕೂ ಹೇಳ್ವ ಅಶೆ ಮಾತ್ರ ಮನಸ್ಸಿಲ್ಲಿಯೇ ಇತ್ತಿದ್ದು.

~~~

“ಅಜ್ಜಾ°… ಎನ್ನ ಗುರ್ತ ಸಿಕ್ಕಿತ್ತಾ?” ಹತ್ತರಂದ ದೆನಿ ಕೇಳ್ಯಪ್ಪಗ ಎಂಕಪ್ಪಜ್ಜನ ಅಲೋಚನೆಯ ಸರಪುಳಿ ತುಂಡಾತು. ಹೀಂಗೇ..ತಿರುಗಿ ನೋಡಿದವು. ಮಸ್ಕು ಮಸ್ಕು ಆದ ಕಾರಣ ಮತ್ತೊಂದಾರಿ ಕಣ್ಣುದ್ದಿ ನೋಡಿದವು. ಅಲ್ಲಿ ಬೆಳಿ ಅಂಗಿ ಹಾಕಿ, ಬೆಳಿ ವೇಷ್ಠಿ ಸುತ್ತಿಂಡು ಚೆಂದಕೆ ನೆಗೆ ಮಾಡಿಂಡಿಪ್ಪ ಚೆಂದದ ಜವ್ವನಿಗ ಎನ್ನ ಕುಞ್ಞಿ ಪುಳ್ಳಿಯೇಯಾ? ಹೇಳಿ ಆತವಕ್ಕೆ. ಅವನ ಹಿಂದೆ ಗಾಯತ್ರಿಯೂ, ಗೋಪಾಲನೂ ಇತ್ತಿದ್ದವು. ಗೋಪಾಲ° ತಪ್ಪು ಮಾಡಿದವರ ಹಾಂಗೆ ಮೋರೆ ಅಡಿಯಂಗೆ ಹಾಕಿಂಡಿತ್ತಿದ್ದ°. ಗಾಯತ್ರಿ ಕೊಶೀಲಿದ್ದತ್ತು.

“ಎಂತಾ ಎಲ್ಲೋರೂ ಅಲ್ಲೇ ನಿಂದದು, ಒಳ ಬನ್ನಿ” ಗೆಣಪ್ಪ ಮಾವ° ಬಂದವರ ಒಳಾಂಗೆ ದೆನಿಗೊಳಿಕ್ಕಿ “ ರಜಾ ಆಸರಿಂಗೆ ತಾ” ಹೇಳಿ ಶಂಕರಿಯತ್ತೆತ್ರೆ ಹೇಳಿದ°

ಒಳಾಂಗೆ ಬಂದ ಕುಞ್ಞಿ ಪುಳ್ಳಿ ಮದಾಲು ಅಜ್ಜನ ಹತ್ರಂಗೆ ಬಂದು ಅವರ ಕಾಲಿಡುದ° “ಅಜ್ಜಾ° ಎನ್ನ ಮದುವೆ ನಿಗೆಂಟಾಯ್ದು, ನಾಡ್ದಿಂಗೆ ಬದ್ಧ. ನಿಂಗಳನ್ನೂ ಅಜ್ಜಿಯನ್ನೂ ಅನಿಂದೇ ಕರ್ಕೊಂಡೋವ್ತೆ” ಹೇಳಿದ°. ಗೋಪಾಲನೂ ಮುಂದೆ ಬಂದು “ಎನ್ನದು ತಪ್ಪಾತು ಮಾವ°, ಹಳತ್ತರೆಲ್ಲ ಮನಸ್ಸಿಲ್ಲಿ ಮಡ್ಕೊಳದ್ದೆ, ನಿಂಗೊ ಎಲ್ಲೋರೂ ಬದ್ಧಕ್ಕೆ, ಮದುವೆಗೆಲ್ಲ ಬಂದು ಬೇಕಾದಾಂಗೆ ಚೆಂದಕೆ ಕಳುಶಿ ಕೊಡೆಕೂ”ಳಿ ಹೇಳ್ಯಪ್ಪಗ, ಅಜ್ಜ° “ಹಳತ್ತರೆಲ್ಲ ಆರೂ ಮನಸ್ಸಿಲ್ಲಿ ಮಡ್ಕೊಂಬ ಕ್ರಮಯಿಲ್ಲೆ, ನೀನೆಂತ ಬೇಜಾರು ಮಾಡೆಡ. ಎಂಗೊ ಎಲ್ಲೋರೂ ಕುಞ್ಞಿ ಪುಳ್ಳಿಯ ಮದ್ವೆಗೆ ಬಾರದ್ರೆ ಹೇಂಗಕ್ಕು ಹೇಳು, ಹೇಳಿ ಅಳಿಯನ ನೆಗ್ಗಿದವು.

“ಅಜ್ಜಾ°, ಆನೀಗಳೂ ನಿಂಗಳ ಕುಞ್ಞಿ ಪುಳ್ಳಿಯೇ ಅಪ್ಪಾ ಅಲ್ಲ ದೊಡ್ಡ ಪುಳ್ಳಿಯಾ?” ಕುಞ್ಞಿ ಪುಳ್ಳಿ, ಅಜ್ಜನತ್ರೆ ಕುಶಾಲಿಂಗೆ ಕೇಳ್ಯಪ್ಪಗ ಅಜ್ಜ° “ನೀನೇವಗಳೂ ಎನ್ನ ಕುಞ್ಞಿ ಪುಳ್ಳಿಯೇ, ಎನ್ನ ಜೀವ ಹೋಪಂದ ಮೊದಲೊಂದರಿಯಾರೂ ನಿನ್ನ ಕಾಣೆಕೂಳಿತ್ತೆನಗೆ. ಆನು ನಂಬಿದ ದೇವರು ಎನ್ನ ಕೈ ಬಿಟ್ಟಿದಾ°ಯಿಲ್ಲೆ, ಎನ್ನ ಆಶೆ ಇಂದು ಮುಗುದತ್ತು” ಹೇಳಿ ಅವನ ಅಪ್ಪಿ ಹಿಡ್ಕೊಂಡವು. ಸಂತೋಷಂದ ಅವರ ಕಣ್ಣಿಲ್ಲಿ ನೀರೇ ಬಂತು. ಪುಳ್ಳಿಗೂ ಅಷ್ಟೆ, ಅಷ್ಟು ದೊಡ್ಡ ಜವ್ವನಿಗ ಆದರೂ ಆ ಹೊತ್ತಿಲ್ಲಿ ಎಂತರ ಮಾತಾಡೆಕೂಳಿಯೇ ಅರಡಿಯದ್ದೆ ಅವನ ದೆನಿಯೂ ಕಟ್ಟಿದ ಹಾಂಗಾತು.

ಅಜ್ಜನ್ದೂ ಪುಳ್ಳಿದೂ ಪ್ರೀತಿ ನೋಡ್ಯೊಂಡಿದ್ದ ಅಲ್ಲಿಪ್ಪವಕ್ಕೆಲ್ಲ ಆ ಹೊತ್ತಿಲ್ಲಿ ಕಣ್ಣಿಲ್ಲಿ ನೀರು ತುಂಬಿ,
ಆರಿಂಗೂ ಏವ ಮಾತೂ ನೆಂಪಾಯ್ದೇಯಿಲ್ಲೆ.

~*~*~

 ಸೂ:

  • ವಿನಯ ಶಂಕರನ ಪರಿಚಯ:
    ಹೆಸರು: ವಿನಯಶಂಕರ C.H
    ಅಪ್ಪ: ವೆಂಕಟಕೃಷ್ಣ ಚೆಕ್ಕೆಮನೆ
    ಅಬ್ಬೆ: ಪ್ರಸನ್ನಾ. ವಿ. ಚೆಕ್ಕೆಮನೆ
    ಶಾಲೆ: ಶ್ರೀ ದುರ್ಗಾಪರಮೇಶ್ವರೀ ಪ್ರೌಢ ಶಾಲೆ ಧರ್ಮತ್ತಡ್ಕ, ಒಂಭತ್ತನೆಯ ತರಗತಿ
    ಹವ್ಯಾಸ: ಓದುವದು, ಚೆಸ್ ಆಡುವದು, ಕತೆ ಕವನ ಬರವದು ಇತ್ಯಾದಿ
  • ಸಾಧನೆಗೊ:
    • ಬಾಲಮಂಗಳ, ತುಷಾರ, ತರಂಗ, ಗಿಳಿವಿಂಡು ಪತ್ರಿಕೆಗಳಲ್ಲಿ ಕವನ ಪ್ರಕಟ ಆಯಿದು
    • ಕೋಟಲ್ಲಿ ನಡದ ಹದಿನೆಂಟನೆಯ ಮಕ್ಕಳ ಧ್ವನಿ ಕಾರ್ಯಕ್ರಮಲ್ಲಿ ಕವನ ವಾಚನ
    • ಜಿಲ್ಲಾ ಲೈಬ್ರರಿ ಕೌನ್ಸಿಲ್ ನಡೆಸಿದ ರಸಪ್ರಶ್ನೆ ಸ್ಪರ್ಧೆಲಿ ಜಿಲ್ಲಾ ಮಟ್ಟಲ್ಲಿ ಆಯ್ಕೆ
    • ಒಲಿಂಪಿಕ್ ರಸಪ್ರಶ್ನೆಲಿ ಪ್ರಥಮ ಸ್ಥಾನ
    • ಶಾಲಾ ಕಲೋತ್ಸವಲ್ಲಿಯೂ ಕಥೆ, ಕವನ, ಭಾಷಣ ಸ್ಪರ್ಧೆಲಿ ಪ್ರಥಮ ಸ್ಥಾನ

24 thoughts on “ಕುಞ್ಞಿ ಪುಳ್ಳಿ: ಕಥೆ – ವಿನಯಶಂಕರ ಚೆಕ್ಕೆಮನೆ

  1. “ಬೆಳೆಯ ಸಿರಿ ಮೊಳಕೆಲ್ಲಿ” ನೋಡಿ ತುಂಬಾ ಖುಷಿ ಆವುತ್ತಾ ಇದ್ದು. ವಿನಯಂಗೆ, ಅಮ್ಮ,ಅಪ್ಪಂಗೆ ಹಾಂಗೂ ಚೆಕ್ಕೆ ಮನೆಗೆ ಅಭಿನಂದನೆಗೋ. ಹರೇ ರಾಮ…

  2. ವಿನಯಶ೦ಕರ೦ಗೆ ಶುಭಾಶಯ.ಸರಸ್ವತಿಯ ಕೃಪೆ ನಿನ್ನ ಮೇಲೆ ಸದಾ ಇರಳಿ ಹೇಳಿ ಹಾರೈಕೆಗೊ.

    ಇದು ಎನ್ನ ಜೀವನಲ್ಲಿ ಕಣ್ಣಾರೆ ಕ೦ಡ ಘಟನೆ ಆದ ಕಾರಣ ಮನಸ್ಸಿ೦ಗೆ ತು೦ಬಾ ತಟ್ಟಿತ್ತು.ಒ೦ದೇ ವೆತ್ಯಾಸ.ಬದ್ಧಲ್ಲಿ ಅಜ್ಜ ,ಅಜ್ಜಿ ಇಲ್ಲದ್ರೆ ಮರ್ಯಾದಿಗೆ ಕಮ್ಮಿ ಆವುತ್ತು ಹೇಳ್ತ ಕಾರಣ೦ದ ಅಳಿಯ ಅತ್ತೆ ಮಾವನ ಮನೆಗೆ ಬ೦ದು ಕಾಲು ಹಿಡುದು ಕರಕ್ಕೊ೦ಡು ಹೋದ್ಸು ! ಮದುವೆ ಕಳುದ ಮತ್ತೆ ಜೆನದ ಪತ್ತೆ ಇಲ್ಲೆ…ಆ ಅಜ್ಜ,ಅಜ್ಜಿಯ ಮನಸ್ಸಿನ ಸ೦ಕಟ೦ಗಳ ಹತ್ತರ೦ದ ನೋಡಿ ಅನುಭವಿಸಿದ ದಿನ೦ಗೊ ನೆ೦ಪಾಗಿ ಕಣನೀರು ಬ೦ತು..
    ಅಭಿನ೦ದನೆಗೊ,ಹೀ೦ಗೇ ಬರವದರ ಮು೦ದುವರುಸುವ ಯೋಗವ ದೇವರು ಅನುಗ್ರಹಿಸಲಿ.

  3. ಹೆಸರಿ೦ಗೆ ಮಾತ್ರ ಚೆಕ್ಕೆ, ಕತೆ -ತಿರುಳು ಗಟ್ಟಿ.

  4. ಈ ಪುಟ್ಟುಮಾಣಿ ಕುಂಟಾಂಗಿಲಹಣ್ಣು ಕೊಯ್ದುಕೊಡು ಹೇಳಿಯೊಂಡಿದ್ದದು ನೆಂಪಾತು!
    ಕತೆ ತುಂಬ ಲಾಯ್ಕಾಯ್ದು…
    ಕಥೆ ಓದಿಯಪ್ಪಗ ಇಲ್ಲಿ ಅಜ್ಜನ ಕಣ್ಣಿಲ್ಲಿ ನೀರು ಬಂತು.
    ಇನ್ನೂ ಹೆಚ್ಚಿಗೆ ಸಾಧನೆ ಮಾಡುವ ಶಕ್ತಿ ನಿನಗೆ ಸಿಕ್ಕಲಿ.
    ~~~~~~~~~~~~~~~~~~~~~~~~~~~~~~~~~~~~~
    ಎಲ್ಲದರಲ್ಲೂ ಯಶಸ್ಸು ಸಿಕ್ಕಲಿ ನಿನಗೆ.
    -ಅಜ್ಜ,ಅಜ್ಜಿ.

  5. ಗೋಪಾಲನ ರೌದ್ರಾವತಾರಂದಾಗಿ ಎರಡು ಸಂಸಾರಕ್ಕು ಹೋಕುರ ತಪ್ಪಿದ್ದದು, ಸುಮಾರು ವರ್ಷಂಗಳ ನಂತರ ಎರಡು ಮನೆಗಳು ಒಂದಾದ್ದದು ಕಥೆಲಿ ಚೆಂದಕೆ ಬಯಿಂದು. ಕಥೆಯ ಕಡೇಂಗೆ ಕುಞ್ಞಿ ಪುಳ್ಳಿ-ಅಜ್ಜನ ಪುನರ್ಮಿಲನ ಮನಸ್ಸಿಂಗೆ ತಟ್ಟಿತ್ತು. ಸಣ್ಣ ಕಾರಣಕ್ಕೆ ಬೇಕಾಗಿ ಮನಸ್ಸು ಮುರ್ಕೊಂಡ ಹಲವಾರು ಘಟನೆಗೊ ನಮ್ಮ ಸಮಾಜಲ್ಲಿ ಕಂಡು ಬತ್ತು. ನೈಜವಾಗಿ ಬಂದ ಈ ಕಥೆ ಬರದ ಪ್ರತಿಭಾವಂತ ಮಾಣಿ ವಿನಯಶಂಕರಂಗೆ ಅಭಿನಂದನೆಗೊ. ಉಜ್ವಲ ಭವಿಷ್ಯ ನಿನ್ನದಾಗಲಿ. ಸಾಹಿತ್ಯ ಕ್ಷೇತ್ರಲ್ಲಿ ನಿನಗೆ ಒಳ್ಳೆ ಹೆಸರು ಬರಲಿ. ನಮ್ಮ ಬೈಲಿಲ್ಲಿಯುದೆ ಅಂಬಗಂಬಗ ಬತ್ತಾ ಇರು.

  6. THUMBAA LAIKA IDDU KATHE,,

    IDU BARII KATHEYU ALLA ,,,,,

    KELAVARA JEEVANALLI ,,,,,

    BAPPA VYATHE,,,,,,,,

    ELLAVU KALA BAPPAGA SARIYAGI

    ONDILLONDU DINA GOPALANANGE BUDDI BAPPORU IRTHAVALLADA,,,,,

  7. ಒಂಭತ್ತನೇ ಕ್ಲಾಸಿನ ಪುಟ್ಟು ಮಾಣಿ ವಿನಯ ಶಂಕರ, ಇಷ್ಟು ಲಾಯಿಕದ ಕತೆ ಬರದ್ದು ಓದುಲೆ ತುಂಬಾ ಖುಶಿ ಆತು.
    ಕತೆಲಿ ಅಖೇರಿಗೆ ಅಲ್ಲಿದ್ದವಕ್ಕೆಲ್ಲಾ ಕಣ್ಣೀರು ಬಂದ ಹಾಂಗೆ ಎನಗೂ ಬಂದ ಹಾಂಗೆ ಆತು ….
    ಭಾರೀ ಲಾಯಿಕ ಬರೆತ್ತೆ ನೀನು…
    ನಿನ್ನ ಬರವಣಿಗೆ ಲಾಯಿಕಲ್ಲಿ ಮುಂದುವರುದು ಎಲ್ಲರೂ ಮೆಚ್ಚುವಂತಾಗಲಿ.
    ಶುಭ ಹಾರೈಕೆಗೋ…

  8. ವಿನಯ ಶಂಕರಂಗೆ ಬೈಲಿಂಗೆ ಸುಸ್ವಾಗತ.

  9. ವಿನಯನ ಕತೆ ಲಾಯ್ಕ ಆಯಿದು.ಇನ್ನೂ ಲಾಯ್ಕ ಕತೆಗಳ ಬರೆತ್ತಾ ಇರು.

  10. ಕಥೆ ಮೆಚ್ಹೆಕ್ಕಾದ್ದೆ ಕುಞ್ಞಿ ಮಾಣಿಯ[ವಿನಯನ] ಸಾಧನೆ ಸಣ್ಣದೇನೂಅಲ್ಲ ಈ ಮಾಣಿ ನಮ್ಮ ಬೈಲಿಂಗೆ ಬರದ್ದು ಭಾರೀ ಸಂ ತೋಷಾತು ಇವನ ಸಾಹಿತ್ಯ ಪ್ರತಿಭೆ ಇನ್ನೂ ಬೆಳಗಲಿ ಹೇಳಿ ಹಾರೈಕೆ

    1. ” ಬೆಳೆಯ ಸಿರಿ ಮೊಳಕೆಯಲ್ಲಿ ” ಈ ಮಾತಿ೦ಗೆ ಒ೦ದೊಳ್ಳೆಯ ಉದಾಹರಣೆ ನಮ್ಮ ಈ ಕುಞಿ ಮಾಣಿ[ವಿನಯ]; ಬಾರಿ ಲಾಯಕಕ್ಕೆ ಬಯಿ೦ದು ಪುಟ್ಟ ನಿನ್ನ ಕಥೆ- ಹವಿಗನ್ನಡದ ರಸ ಹರಿವ ಜೇನದ ಪೋಳೆ! ಎನಗ೦ತೂ ಬಾರೀ ಕೊಶಿ ಆತು. ನಿನಗೆ ಒಳ್ಳೆಯ ಭವಿಷ್ಯ ಇದ್ದು.ಈ ಸಾಹಿತ್ಯಾರಾಧನೆಯ ಹೀ೦ಗೇ ಮು೦ದುವರ್ಸು. ಶುಭವಾಗಲಿ ಹೇದು ಎನ್ನ ಹಾರೈಕೆ.

    2. ನಿಂಗಳ ಮಾರ್ಗ ದರ್ಶನ ಆಶಿರ್ವಾದ ಸದಾ ಇರಲಿ

  11. ವಿನಯ ಶಂಕರಂಗೆ ಬೈಲಿಂಗೆ ಸುಸ್ವಾಗತ.
    ಕತೆಯ ವಸ್ತು ಮತ್ತೆ ಬರದ ಶೈಲಿ ಲಾಯಿಕ ಅಯಿದು. ಬರೆತ್ತಾ ಇರು.

  12. ವಿನಯ ನಿನ್ಫ್ನ ಕತೆ ಲಾಯಕ ಇದ್ದು …ನಿನ್ನ ಪಾತಿಮ್ಮನ ಕತೆಯನ್ನೂ ಕಳುಸೆಕಾತ…………

  13. ವಿನಯಕುಮಾರಂಗೆ ಅಭಿನಂದನೆಗೊ. ಇನ್ನೂ ಒಳ್ಳೊಳ್ಳೆ ಸಾಹಿತ್ಯ ಕೃಷಿ ಮಾಡುವ ಉಜ್ವಲ ಭವಿಷ್ಯ ನಿನ್ನದಾಗಲಿ ಹೇಳಿ ಹಾರೈಸುತ್ತೆ.

  14. ಅಜ್ಜಿಪುಳ್ಳಿಯ ಕತೆ….ಅಲ್ಲಾ.. ಕುಂಞಿಪುಳ್ಳಿಯ ಕತೆ ಲಾಯಕ ಆಯ್ದು. ಅಭಿನಂದನೆ.

    ವಿನಯಂಗೆ ಶ್ರೇಯಸ್ಸಾಗಲಿ.

  15. ಕಥೆ ಲಾಯಕ ಆಯಿದು. ಇನ್ನು ಮು೦ದೆದೆ ಅ೦ಬಗ೦ಬಗ ಹೀ೦ಗೆ ಕಥೆಗಳ ಬರೆತ್ತಾ ಇರು ಹೇಳಿ ಒ೦ದೊಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×