Oppanna.com

ಸಮಸ್ಯೆ 97 : ಚಿತ್ರಕ್ಕೆ ಪದ್ಯ

ಬರದೋರು :   ಸಂಪಾದಕ°    on   13/06/2015    14 ಒಪ್ಪಂಗೊ

ದಕ್ಷಿಣ ಭಾರತಲ್ಲಿ ಅಲ್ಲಲ್ಲಿ ಮಳೆ ಬ೦ದರೂ ಉತ್ತರ ದೇಶ ಇನ್ನೂ ಮಳೆರಾಯನ ನಿರೀಕ್ಷೆಲಿ ಇದ್ದು.ಅಲ್ಯಾಣ ಜನಜೀವನ ಬೆಶಿಗಾಳಿಯ ಗಾವಿ೦ಗೆ ಕೆಲವು ದಿನ ಅಸ್ತವ್ಯಸ್ತವೂ ಆಗಿತ್ತು.

ಪವನಜ ಮಾವ ಹಿಡುದು ಕಳುಸಿದ ಈ ಚಿತ್ರಕ್ಕೆ ಒ೦ದು ಪದ ಕಟ್ಟುವನೋ?

IMG_7912

14 thoughts on “ಸಮಸ್ಯೆ 97 : ಚಿತ್ರಕ್ಕೆ ಪದ್ಯ

  1. ಹಸುರು ಜಾಗೆಲಿ ಮಹಡಿ ಕಟ್ಟಿಯೆ
    ಬಸಿರ ನೀರಿನ ಒಕ್ಕಿ ಉರ್ಪಿದ
    ಕೆಸರು ಬುದ್ಧಿಯ ಮನುಜ ಕಟ್ಸಿದ ಟಾಂಕಿ ಪೈಪಿದುವೊ?
    ಪಸೆಯು ಇಲ್ಲೆಯ ಬೀಲ ನೇಲ್ಸಿರೆ
    ಉಸಿರ ಬಿಗುದಿಕಿ ಕೂದೆ ಸುಮ್ಮನೆ
    ಹೆಸರು ಹೇಳ್ಸಿದ ಮೋದಿ ಮೋಡಿಯ ಯೋಗಭಂಗಿಲಿದಾ ||

    1. ಮರ್ಕಟಾಸನವೋ ಶೈಲಜಕ್ಕಾ ?! ಒಳ್ಳೆ ಭಾಮಿನಿ .

  2. ಕಾಟು ಮಂಗ ಬಂದದೆಂತ
    ಪೇಟೆ ಸೇರಿ ಲೂಟಿ ಮಾಡ್ಳೆ
    ಓಟೆ ಪೈಪಿಲೆಂತ ನೀರು
    ಬತ್ತ ನೋಡ್ಳೆಯಾ?
    ನೋಟ ನೋಡು ಗೋಡೆ ಹತ್ತಿ
    ನೀರು ಕುಡಿವ ಹೂಟ ಮಾಡಿ
    ಆಸರಿಂಗೆ ತಣಿಶುವಾಟ
    ಹೊಸತು ಪಾಠವಾ?

    1. ಹ…ಹ… ಶ್ಯಾಮಣ್ಣ… ರೈಸಿದ್ದು…

    2. ಮಂಗ ಕಲುಶುವ ಪಾಠ !ಲಾಯ್ಕ ಆಯಿದು ಶ್ಯಾಮಣ್ಣ .

  3. ಮರಗಿಡ ಬೆಳೆಶುವ
    ಹರಸಾಹಸಕೇ
    ವರಕಪಿ ಹೆರಟಿದೊ ಕಾಣುತ್ತು |
    ತರತರ ಫಲಗಳ
    ತರುಗಳ ನೆಟ್ಟರೆ
    ಹರಿಕುಲ ಹೊಟ್ಟೆಗೆ ಸಾಕಕ್ಕು ||

    ಬೆಶಿಲಿನ ಗಾವಿಲಿ
    ನಶಿಸಿಯೆ ಹೋವುತ
    ಸೆಸಿಗಳ ಒಳುಶುಲೆ ನೋಡಿತ್ತು |
    ಪಸವಿನ ಕಾಲಕೆ
    ಒಸರುವ ನೀರಿನ
    ಮಸುಕಿದ ಪೈಪಿಲಿ ಹುಡುಕಿತ್ತು ||

    1. ಅತ್ತೇ, ಮಂಗ ಸೆಸಿಗೆ ನೀರು ಹಾಕುಲೆ ಹೆರಟತ್ತೋ.. ! ಒಳ್ಳೆ ” ಶರ” ಕಲ್ಪನೆ .

  4. ಆಸರು
    ಬರಿ ಗಾಳಿ ಬಕ್ಕು ನಳ್ಳಿಲಿ
    ಕರಿ ಮೋರೆಯ ಮಂಗನಾಸರು ಒಳಿಗು ಹಾಂಗೇ
    ಉರಿ ಬೆಶಿಲು ತಡವ ಲೆಡಿಯ ಡ
    ಕಿರು ಮಾತಿಲ್ಲಿ ಉಪಚಾರ ಹೇಳುಗು ತಂ ಗೇ

    1. ಬಾಯಿ ಉಪಚಾರಲ್ಲಿಯೇ ಆಸರು ತಣಿಯೆಕ್ಕಷ್ಟೆಯೋ ಹಾಂಗಾರೆ .. ಒಳ್ಳೆ “ಕಂದ” ಮಾವ .

  5. ಕಾಲಕ್ಕೆ ತಕ್ಕ ಕೋಲ

    ಕೋಲ ಕಟ್ಟಿ ರಜ್ಜ ಹೊತ್ತು
    ಬೀಲ ಬಿಟ್ಟು ಉದ್ದ ಜೆಡೆಯ
    ನೇಲುಸುತ್ತಲಾಡ್ಸುವಾಂಗೆಯೆನಗೆಯೆಡಿಯದೊ ? I
    ಕಾಲ ಬಂದ ಹಾಂಗೆ ಕೋಲ
    ಹೇಳುಗೆನ್ನ ಹಿರಿಯರೆಲ್ಲ
    ನೇಲಿಪೈಪಿಲಾಟವಾಡಿ ನೀರು ಕುಡಿವದು I

    ಕಾಲಕ್ಕೆ ತಕ್ಕ ಕೋಲ

    ಕೋಲ ಕಟ್ಟಿ ರಜ್ಜ ಹೊತ್ತು
    ಬೀಲ ಬಿಟ್ಟು ಉದ್ದ ಜೆಡೆಯ
    ನೇಲುಸುತ್ತಲಾಡ್ಸುವಾಂಗೆಯೆನಗೆಯೆಡಿಯದೊ ? I
    ಕಾಲ ಬಂದ ಹಾಂಗೆ ಕೋಲ
    ಹೇಳುಗೆನ್ನ ಹಿರಿಯರೆಲ್ಲ
    ನೇಲಿಪೈಪಿಲಾಟವಾಡಿ ನೀರು ಕುಡಿವದು I

  6. ಕಾಲಕ್ಕೆ ತಕ್ಕ ಕೋಲ

    ಕೋಲ ಕಟ್ಟಿ ರಜ್ಜ ಹೊತ್ತು
    ಬೀಲ ಬಿಟ್ಟು ಉದ್ದ ಜೆಡೆಯ
    ನೇಲುಸುತ್ತಲಾಡ್ಸುವಾಂಗೆಯೆನಗೆಯೆಡಿಯದೊ ? I
    ಕಾಲ ಬಂದ ಹಾಂಗೆ ಕೋಲ
    ಹೇಳುಗೆನ್ನ ಹಿರಿಯರೆಲ್ಲ
    ನೇಲಿಪೈಪಿಲಾಟವಾಡಿ ನೀರು ಕುಡಿವದು I

    1. ಕಾಲಕ್ಕೆ ತಕ್ಕ ಕೋಲ – ಮದಲು ಅಡಕ್ಕೆ ದಂಬೆಲಿ ಬಂದು ಕೆರಗೆ ಬಿದ್ದುಗೊಂಡಿತ್ತು , ಈಗ ಪೈಪ್ಪೇ ಗತಿ .. ಒಳ್ಳೆ ಪೂರಣ ಭಾಗ್ಯಕ್ಕ .

  7. ಮಂಗನ ಸ್ವಗತ
    ==========
    ಕಾಡಿಲಿಪ್ಪ ಮರವ ಬುದ್ಧಿ
    ಗೇಡಿ ಮನುಜ ಪೂರ ಲೂಟಿ
    ಮಾಡಿ ಹಾಕಿ ಜಾಗೆಯಿಲ್ಲೆ ಲಾಗ ಹಾಕುಲೆ
    ಆಡುದೆಲ್ಲಿ ಮಕ್ಕ ಮರಿಗ
    ಬಾಡಿ ಹೋಯ್ದು ನಾಕು ಗಿಡಗ
    ನಾಡಿಲಿಪ್ಪ ನಲ್ಲಿ ಕೊಳವೆ ಗತಿಯು ನೇಲುಲೆ

    1. ಅಪ್ರೂಪಲ್ಲಿ ಬಂದ ಅದಿತಿಯಕ್ಕಂಗೆ ಸ್ವಾಗತ . ಒಳ್ಳೆ ಸ್ವಗತವೇ ಸೈ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×