Oppanna.com

ಸ್ವಚ್ಛ ಭಾರತ – ವಿಷು ವಿಶೇಷ ಸ್ಪರ್ಧೆ – ದ್ವಿತೀಯ ಬಹುಮಾನ ಪಡದ ಕವನ

ಬರದೋರು :   ಸಂಪಾದಕ°    on   01/09/2015    14 ಒಪ್ಪಂಗೊ

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2015″ ಯಶಸ್ವಿಯಾಗಿ ಈ ವರ್ಷದ ವಿಷು ಸಮಯಲ್ಲಿ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

 

ವಿಷು ವಿಶೇಷ ಸ್ಪರ್ಧೆ- 2015ಕವನ ಸ್ಪರ್ಧೆಲಿ  ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕ ಶ್ರೀ ವಿ.ಬಿ.ಕುಳಮರ್ವ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.DSC_8602

ಸ್ವಚ್ಛ ಭಾರತ

ನಮ್ಮ ದೇಶದ ದೊಡ್ಡ ಮ೦ತ್ರಿಗೊ
ತಮ್ಮ ಪೀಠದ ಮೇಲೆ ಕೂಪಗ
“ಸುಮ್ಮನೆ೦ದೂ ಕೂರೆ” ಹೇಳುವ ಶಪಥ ಮಾಡಿದವು |
“ಬ್ರಹ್ಮದೇವರು ವಿಷ್ಣು ರುದ್ರರು
ಎಮ್ಮೆಗೆ೦ಡನ ಬೆನ್ನ ಯಮನುದೆ
ಹೆಮ್ಮೆ ಬೀರುವ ಹಾ೦ಗೆ ನೆಡೆಶುವೆ ದೇಶ ಭಾರತವ”||

ಕ್ಲೇಶ ಕಳವಲೆ ಊರು ತಿರುಗುವೊ°
ದೇಶ ದೇಶವ ಸುತ್ತಿ ನೋಡುವೊ°
ಕಾಶಿ ಕಟ್ಟುವ ಪೈಸೆಗ೦ಟಿನ ಬಿಡುಸಿ ತೋರುಸುವೊ° |
ವಿಶ್ವ ಸೋದರ ಭಾವ ಬೆಳೆಶುವೊ°
ಅಶ್ವಶಕ್ತಿಯ ಬಲವ ಗಳಿಸುವೊ°
ನಾಶವಿಲ್ಲದ ದೇಶ ಕಟ್ಟುವೊ ಎಲ್ಲರೊ೦ದಾಗಿ ||

ಊರು ತು೦ಬಿದ ಕಸವು ರಾಶಿಯ-
ನಾರು ಚೊಕ್ಕಟ ಮಾಡಿ ಮುಗುಶುಗು
ದಾರಿ ಏವದು ಹೇಳಿಯರಡಿಯ ಸುಖದ ಬದುಕಿ೦ಗೆ |
ಕೇರಿ ಬೀದಿಯ ಸುತ್ತಿ ನೋಡಿರೆ
ಜೋರು ಹಿಡಿಯೆಕು ಮೂಗು ಬೆರಳಿಲಿ
ವಾರಕೊ೦ದರಿ ಕೊಳಕು ಹೇಸಿಗೆ ದೂರ ಹಾಕಿರುದೆ ||

ದೇಶ ಆಳುವ ದೊಡ್ಡ ದೊಡ್ಡವು
ನಾಶ ಮಾಡೆಕು ಕೊಳೆಯ ರಾಶಿಯ
ಕಾಶಿ ವಿಶ್ವನ ಕಾಲ ಅಡಿಲಿಯು ಇಪ್ಪ ವಾಸನೆಯ |
ಕೋಶ ತು೦ಬಿರೆ ಸಾಕೊ ನಮ್ಮದು
ಮೀಶಿ ತೊಳದರೆ ದೇಹ ಹೊಳೆಯದೊ
ಪಾಶ ಅ೦ಕುಶ ಹಾಕಿ ನೋಡೆಕು ಜೆನರ ಪೆರಟಿ೦ಗೆ ||

ಎಲ್ಲಿ ನೋಡಿದರಲ್ಲಿ ತುಪ್ಪುಗು
ಎಲ್ಲ ಜಾಗೆಲಿ ಕೊಳಕು ಚೆಲ್ಲುಗು
ಅಲ್ಲಿ ಇಲ್ಲಿಯೊ ಹೇಳಿ ಹುಡುಕಿರೆ ಅವನೆ ಬರಿ ಬೋಸ°|
ಬೆಲ್ಲದಚ್ಚಿಲಿ ಇಲ್ಲೆ ಕಡೆಕೊಡಿ
ಫುಲ್ಲಲೋಚನ ದೇವ ನೀನೇ
ಇಲ್ಲಿಗೊ೦ದರಿ ಬ೦ದು ನೋಡಿರೆ ನಿನಗೆ ಗೊ೦ತಕ್ಕು||

ಸ್ವಚ್ಛ ಭಾರತ ನಮ್ಮದಾಗಲಿ
ಅಚ್ಛ ಪರಿಸರ ಚೆ೦ದ ಹೆಚ್ಚಲಿ
ಹೆಚ್ಚು ಯತ್ನವ ಗೈದು ದೇಶವ ನಾವು ರಕ್ಷಿಸುವೊ° |
ಕೆಚ್ಚು ನಮ್ಮಲ್ಲಿರಲಿ ಮಿತ್ರರೆ
ಹೊಚ್ಚ ಹೊಸ ಚಳುವಳಿಯ ತೊಡಗುವೊ°
ಬೆಚ್ಚಿ ಬೀಳುವ ಹಾ೦ಗೆ ಮೆರೆಯಲಿ ಸ್ವಚ್ಛ ಭಾರತವು ||

ಕೆಲವು ಪದಗಳ ಅರ್ಥ :
ಕೂಪಗ – ಕುಳಿತುಕೊಳ್ಳುವಾಗ
ಕೂರೆ – ಕುಳಿತುಕೊಳ್ಳಲಾರೆ
ಎಮ್ಮೆಗೆ೦ಡ – ಕೋಣ , ಯಮನ ವಾಹನ
ಏವದು – ಯಾವುದು
ಪೆರಟು – ಅಧಿಕಪ್ರಸ೦ಗ

14 thoughts on “ಸ್ವಚ್ಛ ಭಾರತ – ವಿಷು ವಿಶೇಷ ಸ್ಪರ್ಧೆ – ದ್ವಿತೀಯ ಬಹುಮಾನ ಪಡದ ಕವನ

  1. ಉತ್ತಮ ಕವನ ಕುಳಮರ್ವದಣ್ಣ. ಅಭಿನಂದನೆಗೊ. ಬೈಲಿಂಗೆ ನಿಂಗಳ ಕವನ, ಕಥೆ, ವೈಚಾರಿಕ ಶುದ್ದಿಗೊ ಬತ್ತಾ ಇರಳಿ. ಬೈಲಿಲ್ಲಿ ಸಾಹಿತ್ಯ ಕೃಷಿಲಿ ಚೆಂದಕೆ ನೆಡೆಯಲಿ.

  2. ’ಸ್ವಚ್ಚಭಾರತ’ ಓದಿ ಒಪ್ಪಕೊಟ್ಟವಕ್ಕೆಲ್ಲೋರಿಂಗೂ ತುಂಬಾ ತುಂಬಾ ಧನ್ಯವಾದಂಗೊ

  3. ಒಳ್ಳೇ ಕವನ.. ಮಾಷ್ಟ್ರಿಂಗೆ ಅಭಿನಂದನೆಗ ..

  4. ಒಳ್ಳೆ ಕವನ ಭಾವಯ್ಯ. ವಿ.ಬಿ. ಕುಳಮರ್ವದೊವು ಒಳ್ಳೆ ಪ್ರಸಿದ್ಧ ಕವಿ.ಹಲವಾರು ಸಾಹಿತ್ಯ ನಮುನೆಯ ಶಿಬಿರಂಗಳ , ಶಾಲಗಳಲ್ಲಿ, ಸಂಸ್ಥೆಗಳಲ್ಲಿ, ನಿತ್ಯ-ನಿರಂತರ ನೆಡೆಶುತ್ತಾ ಇರ್ತವು. ಅವು ಗಡಿಬಿಡಿಲಿ ಬರದ ಪದ್ಯವೂ ಒಳ್ಳೆ ರಸವತ್ತಾಗಿ ಛಂದಸ್ಸು ಸಹಿತ ಇರ್ತು.

  5. (ಫುಲ್ಲಲೋಚನ ದೇವ ನೀನೇ) ಈ “ಫುಲ್ಲಲೋಚನ ” ಹೇಳಿರೆ ಎಂತ ಅರ್ಥ ? ಆರಾದ್ರೂ ಹೇಳಿ.

    1. ಹೂಗಿನಾ೦ಗೆ ಅರಳಿದ ಕಣ್ಣಿಪ್ಪವ ಹೇಳಿ ಅರ್ಥ , ವಿಷ್ಣುವಿನ ಹೆಸರುಗಳಲ್ಲಿ ಒ೦ದು . ಒಂದರಿ ಪುಸ್ತಕ ತೆಗದು ಸರಿಯಾಗಿ ಹೇಳುಲೆ ಎಡಿಗಷ್ಟೆ ಶ್ಯಾಮಣ್ಣ.

      1. (ಹೂಗಿನಾ೦ಗೆ ಅರಳಿದ ಕಣ್ಣಿಪ್ಪವ) ಅರಳಿದ ಹೂಗಿಂಗೆ ಕಮ್ಮಿಲಿ ನಾಲ್ಕಾದರೂ ದಳ ಇರ್ತು… 🙂 ಅದಲ್ಲದಾ ಹೇಳಿ ಕಾಣ್ತು… ಬಹುಶ “ಪುಚ್ಚೆ ಕಣ್ಣಿನ” ಹಾಂಗಿಪ್ಪ ಕಣ್ಣೂ (ಬೆಳಿ ಅಥವಾ ನೀಲಿ ಅಥವಾ ನಸು ಹಸುರಿನ ಕಣ್ಣೂ) ಹೇಳಿ ಇಕ್ಕಾ?

        1. ಉದಾಹರಣೆಗೆ ಐಶ್ವರ್ಯ ರೈಯ ಕಣ್ಣು …

        2. ” ಜಿಂಕೆ ಕಣ್ಣು” ಹೇಳಿ ಒಂದು ಅರ್ಥ ಇದ್ದೋ ! ಡಾ. ಮಹೇಶಣ್ಣನತ್ರೆ ಕೇಳೆಕ್ಕಷ್ಟೆ ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×