Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ಸರ್ತಿ ಶರಷಟ್ಪದಿಯ ಸಮಸ್ಯೆ
“ಪತಿ ಕೆರೆಗಿಳುದನೊ ನೋಡಕ್ಕ”
ಪತಿ ಕೆರೆಗಿಳಿವ ಚೆ೦ದವ ಹೇ೦ಗೆಲ್ಲಾ ವರ್ಣನೆ ಮಾಡೊದು ಹೇಳಿ ನೋಡುವ..
ಕಸ್ತಲೆ ಅಪ್ಪಗ
ಹಿತ್ತಲು ಜಾಗೆಲಿ
ಸುತ್ತುಲೆ ಬೆಣ್ಚಿಯೆ ಇಲ್ಲೆಕ್ಕ
ಹಿತಮಿತ ಬೆಳಕಿನ
ಕಾಂತಿಯ ರಜನೀ
ಪತಿ ಕೆರೆಗಿಳುದನೊ ನೋಡಕ್ಕ
ಒಳ್ಳೆ ಪ್ರಯತ್ನ.
ಪ್ರಾಸ೦ಗೊ ಸರಿ ಇದ್ದರೂ ಪ್ರತಿಸಾಲಿನ ಸುರುವಾಣ ಅಕ್ಷರ ಲಘು ಆಯೆಕ್ಕಾದ ಕಾರಣ ರಜಾ ಬದಲ್ಸಿರೆ ಒಳ್ಳೆದು ರೇವತಿ ಅಕ್ಕ.
ಉದಾ:
ಜತೆಯಾಗಿಯೆ ದ೦
ಪತಿ ನೆಡವಗ ಬೀ
ಗುತ ಹೆದರಿಸುವಾ ಕಸ್ತಲೆಯೇ !
ಹಿತಮಿತ ಬೆಳಕಿ೦
ಗತಿಬಲ ರಜನೀ
ಪತಿ ಕೆರೆಗಿಳುದನೊ ನೋಡಕ್ಕ
ಅತಿ ಸು೦ದರ ಸುರ
ಪತಿ ಸಖ ಮಯ ನಿ
ರ್ಮಿತ ಭವನದ ಹೊಸ ಚಾವಡಿಲಿ
ಮತಿ ಕೆಟ್ಟಿದೊ ? ಛಲ
ಪತಿ ಬೆಪ್ಪನೊ? ಕುರು
ಪತಿ ಕೆರೆಗಿಳುದನೊ ನೋಡಕ್ಕ
(ರಾಜಸೂಯಾಧ್ವರಲ್ಲಿ ದ್ರೌಪದಿ ಉವಾಚ)
ಅತಿಚೆಲುವಿನ ಕಣಿ
ಮತಿ ಗೇಡಿಗಳರಿ
ಜಿತಕಾಮನ ನೀ ನೋಡಕ್ಕ I
ಪೃಥೆಯ ಮಗನ ಸಾ-
ರಥಿ ನಮ್ಮೆಲ್ಲರ
ಪತಿ ಕೆರಗಿಳುದನೊ ನೋಡಕ್ಕ II
ಶ್ರೀಕೃಷ್ಣ ಅಷ್ಟಮಹಿಷಿಯರೊಟ್ಟಿಂಗೆ ಜಲಕ್ರೀಡಗೆ ಹೋದಿಪ್ಪಗ, ಅಕ್ಕ ತಂಗೆಕ್ಕೋ ಮಾತಡಿಗೊಂಬ ಕಲ್ಪನೆ
ಈ ವಾರದ ಸಮಸ್ಯೆಗೆ ಬಂದ ಎಲ್ಲಾ ಪೂರಣ೦ಗೋ ಅತ್ಯುತ್ತಮ ಗುಣಮಟ್ಟದ್ದು .ಕೌರವ , ಕಾರ್ತವೀರ್ಯ, ರಾವಣ , ಅಮ್ಮಾವ್ರ ಗೆಂಡ,ಕುಲಪತಿ ಅಕ್ಕ ,ತಮ್ಮ ಹೀಂಗೆ ಸುಮಾರು ಜೆನರ ಸಮರ್ಥವಾಗಿ ಕೆರೆಗೆ ಇಳುಶಿದ್ದವು . ಉತ್ಸಾಹಲ್ಲಿ ಹೊಸ ಹೊಸ ಸಾಧ್ಯತೆಗಳ ಚೆಂದಕೆ ಬರದ ಭಾಗ್ಯಕ್ಕ , ಇಂದಿರತ್ತೆ , ಏತಡ್ಕ ಮಾವ , ಬೊಳುಂಬು ಮಾವಂಗೆ ಅಭಿನಂದನೆ .
ಇನ್ನೂ ನೂತನ ಕಲ್ಪನೆಗೋ / ಪ್ರಯತ್ನಂಗೊ ಬರಲಿ .
” ಪತಿ ಕೆರಗಿಳುದನೋ ನೋಡಕ್ಕ! ” – ಅವ° ಕೆರಗಿಳಿವಲೇ ಕಾದುಕೂದ್ಸು ಎಂತದಕ್ಕಪ್ಪ ಆಯಿಕ್ಕು ! ಉಮ್ಮ!!
ಗೆಂಡನ ಅವಸ್ಥೆ !!
ಸತಿಯೊಡನಾಟದಿ
ಅತಿಸಲುಗೆಲಿಪತಿ
ಮತಿಯಿಲ್ಲದ ಪರಿ ನೆಡೆಕಕ್ಕ ?
ಮಿತಿ ಮೀರಿದ ಕುರೆ
ವಸ್ತ್ರವ ತೊಳವಲೆ
ಪತಿ ಕೆರಗಿಳುದನೊ ನೋಡಕ್ಕ ||
ಭಾರೀ ಲಾಯಿಕಾಯಿದು ಗೋಪಾಲಣ್ಣನ ಪದ್ಯ . ಲೇಡೀಸ್ ಕ್ಲಬ್ಬಿನವು ಈ ಪದ್ಯಕ್ಕೆ ಇನ್ನೂ ಚೆಂದ ಹೆಸರು….. ”ಪುಣ್ಯವಂತೆ ” ಹೇಳಿ ಮಡುಗುಗು
ಅಕ್ಕ ತಂಗೆ
ಮಿತಿ ಮೀರಿದ ಸೆಕೆ
ಅತಿ ಲೂಟಿಯ ಪಶು-
ಪತಿ ಕೆರಗಿಳುದ ನೊ ನೋಡಕ್ಕ
ಸತಿಯಿದ್ದ ಜೆತಗೆ
ಖತಿ ಯೆಂತಕೆ ವಸು-
ಮತಿ ಬಾ ಮಾತಾಡುವೊ ನಾವು
(ಖತಿ=ಚಿಂತೆ,ಸತಿ=ಸತೀಶ)
ಅತಿ ಲೂಟಿಯ ಪಶು-
ಪತಿ ಕೆರಗಿಳುದ ನೊ ನೋಡಕ್ಕ
ಸತಿಯಿದ್ದ ಜೆತಗೆ
ಖತಿ ಯೆಂತಕೆ va
ಭಾಗ್ಯಕ್ಕ, ಇಂದಿರತ್ತೆಯ ಒಂದೊಂದು ಪೂರಣವೂ ಅದ್ಭುತ ಕಲ್ಪನೆಗೋ. ಈ ಸರ್ತಿಯಾಣ ಸಮಸ್ಯೆಗೆ ಒಳ್ಳೆತ ತಲೆ ಓಡ್ಸಿದ್ದಿ. ಅಭಿನಂದನೆಗೋ
ಇತರ ಮಕ್ಕಳ
ಜೊತೆ ತನ್ನ ಸುತನ
ಸುತರ ಕರಕ್ಕೊಂಡೀಜುಸುಲೆ I
ಮತದಾನ ಮುಗಿಶಿ
ಹಿತಚಿಂತಕ° ಕುಲ-
ಪತಿ ಕೆರಗಿಳುದನೊ ನೋಡಕ್ಕ II
ಶುರುವಾಣ ಗೆರೆಲಿ ಮಾತ್ರೆ ಕಮ್ಮಿ ಆಯಿದಲ್ಲದೋ..?
”ಇತರರ ” ಹೇಳಿ ಓದಿಗೊಂಡರೆ ಸರಿಯಾವುತ್ತು ಮಾವ .
ಸತತವು ಕೆರೆಲಿಯೆ
ಸುತನಾಡೊಗ ವಸು-
ಮತಿ ದಿನುಗೇಳುಗು ಮಗಳನ್ನೆ I
ಪ್ರತಿಭಾ, ಅಣ್ಣ
ಚ್ಯುತನ ಜೊತೆ ಶ್ರೀ-
ಪತಿ ಕೆರಗಿಳುದನೊ ನೋಡಕ್ಕ II
ಅಣ್ಣನೊಟ್ಟಿಂಗೆ ತಮ್ಮನೂ ಕೆರಗಿಳುದನೋ ನೋಡಿಕ್ಕಿ ಬಾ ಹೇಳಿ; ಮಗಳತ್ತರೆ ಅಮ್ಮ ಸಣ್ಣ ಮಗನ ಎಲ್ಲಿದ್ದ ಹೇಳಿ ವಿಚಾರುಸುದು
ಹಟದೊಳು ಕೌರವ
ಪಟುಭಟರೆಲ್ಲರ
ಹತಿಯನೆ ಮಾಡ್ಸಿಯು ಸೋತನದಾ |
ಹಿತವಚನವ ಕೇ
ಳುತ ಹುಗ್ಗುಲೆ ಕುರು
ಪತಿ ಕೆರೆಗಿಳುದನು ನೋಡಕ್ಕ ||
ಅತಿ ಬೇಗನೆ ಹೆರ
ಟತಿಶಯ ಮಾಹಿ
ಷ್ಪತಿನಗರಧಿಪತಿ ಜಲಕೇಳಿಗೆ |
ಸತಿಯರು ಖುಷಿ ತಾ
ಳುತ ಕೇಳಿದವದ
ಪತಿ ಕೆರೆಗಿಳುದನೊ ನೋಡಕ್ಕ ||
ಇಂದಿರತ್ತೆಯ ಶರಲ್ಲಿ ”ಜಲಕೇಳಿಗೆ’ ಹೇಳುವಲ್ಲಿ ಮಾತ್ರೆ ಒಂದು ಹೆಚ್ಚಾದ್ದರ ತೆಗದು , ಅರ್ಥವತ್ತಾಗಿ ಮಾಡ್ತರೆ ಕೆಳಾಣ ರೀತಿಲಿ ಸರಿ ಮಾಡ್ಳಕ್ಕೊ .. ಹೇಳಿ ಎನಗನ್ನುಸಿತ್ತು
ಅತಿ ಬೇಗನೆ ಹೆರ
ಟ ತರುಣ ಮಾಹಿ
ಷ್ಮತಿ ನಗರಧಿಪನ ಜಲಕೇಳಿ I
ಮೂರನೆಯ ಗೆರೆಯ ಅಖೇರಿಲಿ ಒಂದು ಗುರು ಅಥವಾ ಎರಡು ಲಘು ಬಪ್ಪಲಕ್ಕು ಹೇಳಿ ಎನ್ನ ಅಂದಾಜು… ಆವುತ್ತಿಲ್ಲೆಯಾ
ಲೆಕ್ಕಾಚಾರ ಸರಿ ಇದ್ದು ,,ಆದರೆ ಕಡೆ ಅಕ್ಷರ ಲಘು ಅಥವಾ ದೀರ್ಘಾಕ್ಷರ ಆದರೆ ಓದುಲೆ ಸರಿ ಸಿಕ್ಕುತ್ತು . ಜಳಕಕ್ಕೆ ಹೇಳಿ ತಿದ್ದಿರೆ ಸಾಕಕ್ಕು .
ಅತಿಶಯ — ಹೇಳುವಲ್ಲಿ ಕೇವಲ ಪದಜೋಡಣೆ ಮಾತ್ರ ಆದ್ದಲ್ಲದೋ ? ಅದು ಹೇಂಗೆ ಸರಿಯಪ್ಪದು? ಅತಿಶಯ ಮಾಹಿಷ್ಮತಿ ಹೇಳಿದರೆ ಎಂತ ಅರ್ಥ ಆವುತ್ತು?
ಅತಿಶಯ(ದ) ಮಾಹಿಷ್ಪತಿ ನಗರ – ಹೇಳುವಲ್ಲಿ ಶ್ರೇಷ್ಠ ಹೇಳಿ ಅರ್ಥ ಮಾಡಿಗೊಂಡೆ , ವ್ಯಾಕರಣ ಪೂರ್ಣ ಆವುತ್ತಿಲ್ಲೆ ಹೇಳ್ತದು ಸರಿ .
ಮುಳಿಯದಣ್ಣ ಸೂಚಿಸಿದ ಪದ ಒಳ್ಳೆದಿದ್ದು.
ಅತಿ ಬೇಗನೆ ಹೆರ
ಟ ತರುಣ ಮಾಹಿ
ಷ್ಮತಿ ನಗರಾಧಿಪ ಜಳಕಕ್ಕೆ II ಹೇಳಿ ಮಾಡಿದರೆ ಸರಿಯಾಗದೋ ?
ವ್ಯಾಕರಣ ದೃಷ್ಟಿ೦ದ ತಪ್ಪಿನ ಸರಿ ಮಾಡಿದರೆ ಒಳ್ಳೆದಲ್ಲದೋ ? ತಪ್ಪನ್ನೇ ಒಪ್ಪಿಗೊಂಡು ಹೋವುತ್ತರೆ ” ಭಾಷಾಸೇವೆ” ಹೇಳುವ ಹಣೆಪಟ್ಟಿ ಯಾವ ಪುರುಷಾರ್ಥಕ್ಕೆ ? (ಒಪ್ಪಣ್ಣನ ಬೈಲಿನ ಎಲ್ಲೊರಿಂಗೂ ಈ ಪ್ರಶ್ನೆ ಅನ್ವಯಿಸುತ್ತು )
ಅತಿಶಯ – ಹೀ೦ಗಿರ್ತ ಪದ ಪ್ರಯೋಗ೦ಗೊ ಹಳೆಯ ಕಾವ್ಯ೦ಗಳಲ್ಲಿ ಸಾಕಷ್ಟು ಇಪ್ಪ ಕಾರಣ ಇದು ತಪ್ಪು ಹೇಳುಲೆ ಬತ್ತಿಲ್ಲೆ.
ಉದಾ :
“ಉತ್ತಮ ಮಣಿಪುರದರಸು ಶೇಷನ ಮೊಮ್ಮ
ಬಬ್ರುವಾಹನ” – ಇದು ಯಕ್ಷಗಾನದ ಒ೦ದು ಪದ್ಯ.
ಇನ್ನು ಕುಮಾರವ್ಯಾಸ ಎಷ್ಟೋ ಜಾಗೆಲಿ ಹೀ೦ಗಿರ್ತ ಪ್ರಯೋಗ ಮಾಡಿದ್ದ.
ಉದಾ :
“ಸ್ನಾತಕ ಪ್ರಿಯ ರುತ್ವಿಗಾಚಾ
ರ್ಯಾತಿಶಯ ಗುರು ನೃಪರು ಸಹಿತೀ
ಭೂತಳದೊಳಿ೦ತಾರು ಮಾನಿಸರರ್ಘ್ಯಯೋಗ್ಯರಲೆ”
ಉದಾಹರಣೆ ಸಮೇತ ತೋರುಸಿದ ಮುಳಿಯದಣ್ಣ೦ಗೆ ಧನ್ಯವಾದ೦ಗೊ.
ಉದಾಹರಣೆಲಿ , ಅದು ಸರಿ ಇದ್ದು ಹೇಳಿಯೇ ಎನಗೆ ಅನ್ನುಸುತ್ತು .ಅದು ಸರಿಯಲ್ಲ ಹೇಳಿ ಹೇಳುಲೆ ಹೋದರೆ ”ಅಜ್ಜಿಗೆ ಪುಳ್ಳಿ ಸೆಮ್ಮುಲೆ ಹೇಳಿಕೊಡುದು ” ಹೇಳುವ ಗಾದೆ ಮಾತಿನ ಹಾಂಗಕ್ಕು .
ಆನು ವ್ಯಾಕರಣದ ನಿಯಮಂಗೊ ಗೊಂತಿದ್ದು ಪದ್ಯ ಬರವದಲ್ಲ . ಎನಗೆ ಭಾಷಾ ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟಿದ್ದೇ ಛಂದಸ್ಸಿನ ಮೂಲಕ ಪದ್ಯ ಬರವಲೆ ಹೆರಟು, ಅದರ ಕಲಿವಲೆ ಸುರು ಮಾಡಿದ ಮತ್ತೆ. ಆನು ಪದ್ಯ ಬರವಗ ವ್ಯಾಕರಣ ಬಳಸುದು ಕನ್ನಡ ಗದ್ಯ ಸಾಹಿತ್ಯದ ಆಧಾರಲ್ಲಿ . ಹೇಳಿದರೆ – ಗದ್ಯಲ್ಲಿ ಆ ಪದವ ಹೇಂಗೆ ಉಪಯೋಗಿಸುತ್ತವು ಹೇಳಿ ಅಂದಾಜಿ ಮಾಡಿಗೊಂಡು .
ಅತಿಶಯ ಹೇಳುವ ಪದವ ಹೆಚ್ಚಾಗಿ ಹೀಂಗೆ ಬಳಸುತ್ತವು — ಅತಿಶಯವಾಗಿತ್ತು .,ಅತಿಶಯವಾದ , ಅತಿಶಯೋಕ್ತಿ ಯಲ್ಲ ಈ ರೀತಿಲಿ . ಅತಿಶಯ ಹೇಳುವ ಪದಕ್ಕೆ ಆಂಗ್ಲ ಭಾಷೆಲಿ excellence ಅಥವಾ superiority ಹೇಳಿ ಅರ್ಥ ಇದ್ದು (ಕಿಟ್ಟೆಲ್ ಕೋಶ ). ಕನ್ನಡಲ್ಲಿ ಪುನಃ … ಉತ್ಕೃಷ್ಟತೆ , ಹಿರಿಮೆ ,ಮೇಲ್ಮೆ, ಶ್ರೇಷ್ಠತೆ ಇತ್ಯಾದಿ .
ಉದಾ – ಎಲ್ಲ ಗುರುಗಳೂ ಶ್ರೇಷ್ಟರು (excellent ). ಗುರುಗಳ ಶ್ರೇಷ್ಟತೆಗೆ (excellence ) ಅವರ ಅನುಸರಿಸುವ ಶಿಷ್ಯರೇ ಸಾಕ್ಷಿ .
ಇಲ್ಲಿ ‘ಅತಿಶಯ’ ಹೇಳುವ ಹೇಳುವ ಪದ ಬಳಕೆಲಿದೆ ; ಶ್ರೇಷ್ಟ ಮತ್ತು ಶ್ರೇಷ್ಟತೆ ಪದವ ಬಳಸುವ ರೀತಿಲಿ ಇಪ್ಪ ವ್ಯತಾಸ ಇದ್ದು ಹೇಳಿ ಎನಗೆ ಅಪ್ಪದು . ಹಾಂಗೆ ಇಂದಿರತ್ತೆ ಬರದ ಪದ್ಯಲ್ಲಿ ವಿಭಕ್ತಿಯೊ , ಅವ್ಯಯವೋ ಎಂತದೋ ಒಂದು ಬೇಕಾಗಿತ್ತು ಹೇಳಿ ಎನಗೆ ಅನ್ನಿಸಿದ್ದರ ಹೇಳಿದ್ದು .
ಅತಿ ಉತ್ಸಾಹ ಭ
ಕುತಿಯೊಳು ಗಿರಿಜಾ
ಸುತನನು ತಂದವು ಮನೆಮನೆಲೀ
ನುತಿಸುತ ಹಾಡಿಸಿ
ತಿಥಿ ಚೌತಿಲಿ ಗಣ
ಪತಿ ಕೆರೆಗಿಳುದನೊ ನೋಡಕ್ಕ ||
ಯತಿ ವೇಷಲ್ಲಾ
ಸತಿ ಸೀತೆಯ ಕ-
ದ್ದತಿಬಲ ತೋರುಸಿ ಮೆರದಸುರ°I
ಮಿತಿ ಮೀರಿದ ಹ-
ತ್ತು ತಲೆಯ ಲಂಕಾ
ಪತಿ ಕೆರಗಿಳುದನೊ ನೋಡಕ್ಕII
ಅತಿಬಲ ಹೇಳಿರೆ ಇಲ್ಲಿ ಜಟಾಯುವ ಒಟ್ಟಿಂಗೆ ಯುದ್ಧ ಮಾಡಿದ ಸಂದರ್ಭ
ರಾವಣ ತನ್ನ ವಶಲ್ಲಿಪ್ಪ ಸ್ತ್ರೀಯರೊಟ್ಟಿಂಗೆ ಜಲಕ್ರೀಡೆಯಾಡುಲೆ ಹೋದ ಸಂದರ್ಭಲ್ಲಿ: ಅವನೊಟ್ಟಿಂಗೆ ಮೀವಲೆ ಹೋದ ಹಲವು ಹೆ೦ಗುಸರಲ್ಲಿ ಕೆರೆಯ ಹತ್ತರಂಗೆ ನಡಕ್ಕೊಂಡು ಬತ್ತಾ ಇಪ್ಪದು ಅಲ್ಲೇ ಹತ್ತರೆ ಕೆರೆ ದಂಡೆಲಿ ನಿ೦ದುಗೊಂಡಿಪ್ಪದರತ್ತರೆ ಕೇಳುದು …
ಪ್ರಥಮಲಿ ಪೂಜಾ
ಸ್ತುತಿ ತೆಕ್ಕೊ೦ಬವ°
ಮತಿಯೊಡೆಯನೆಯೀ ಗೆಣಪತಿಯು I
ಇತಿ ಮಿತಿ ಯಿಲ್ಲ-
ದ್ದತಿ ವರ್ಣದಮಿತ-
ಪತಿ ಕೆರಗಿಳುದನೊ ನೋಡಕ್ಕ II
ಚೌತಿ ಗೆಣವತಿ ದೇವರ ಮೂರ್ತಿಯ ನೀರಿಂಗಿಳಿಶುವಗ ಜನ ತುಂಬಿ ನೋಡ್ಲೆ ಕಾಣದ್ದ ತಂಗೆ ಉದ್ದ ಇಪ್ಪ ಅಕ್ಕನ ಹತ್ತರೆ ಕೇಳುದು –