Oppanna.com

ಸಮಸ್ಯೆ 110 : ಮನ ನೆ೦ಪಿಲಿ ಕೊರಗಿತು ಇರುಳು

ಬರದೋರು :   ಸಂಪಾದಕ°    on   09/01/2016    25 ಒಪ್ಪಂಗೊ

ಈ ವಾರ ಶರಷಟ್ಪದಿಲಿ ಸಮಸ್ಯೆ : “ಮನ ನೆ೦ಪಿಲಿ ಕೊರಗಿತು ಇರುಳು”

ಯಾವ ಕಾರಣಕ್ಕೆ ಮನ ಮರುಗಿತ್ತು ನೋಡುವ,ಬನ್ನಿ..

25 thoughts on “ಸಮಸ್ಯೆ 110 : ಮನ ನೆ೦ಪಿಲಿ ಕೊರಗಿತು ಇರುಳು

  1. ” ಮನ ನೆ೦ಪಿಲಿ ಕೊರಗಿತ್ತಿರುಳು” ಹೇಳಿ ಮಾಡಿರೆ ಸರಿ ಆವುತ್ತು ,ಅಣ್ಣ . ತಿದ್ದುಪಡಿಗೆ ಧನ್ಯವಾದ .

  2. ಮಂಜುನಾಥ ಅಣ್ಣನ ಸಂಶಯ ಸರಿ ಇದ್ದು . ಆದರೆ ಹವಿಗನ್ನಡಲ್ಲಿ ಬರವಗ ಭಾಷಾ ಶುದ್ಧಿಯ ಉಳಿಸಿಗೊ೦ಬಲೆ ಅನಿವಾರ್ಯವಾಗಿ ವಿಸಂಧಿಯ ದೋಷ ಹೇಳಿ ಪರಿಗಣಿಸೊದು ಬೇಡ ಹೇಳಿ ಒಪ್ಪಣ್ಣನ ಬೈಲಿಲಿ ತೀರ್ಮಾನ ಮಾಡಿದ್ದು .

  3. ‘ಕೊರಗಿತು ಇರುಳು’ ವಿಸಂಧಿ ದೋಷ ಆಗ್ತಿಲ್ಯ? ಅದು ಕೊರಗಿತಿರುಳು ಆಗಡ್ದ ?

  4. ತನುಜೆಯ ಮೇಲೆಯೆ
    ಅನುಪಮ ಮಮತೆಯ
    ಅನುದಿನ ತೋರ್ಸಿದೆ ಓ ಪಿತನೆ
    ಜನಕನು ಅಗಲಿದ
    ದಿನದಿಂದಲೆ ಈ
    ಮನ ನೆಂಪಿಲಿ ಕೊರಗಿತು ಇರುಳು.

    1. ಭಾರೀ ಲಾಯಕ ಪೂರಣ . ತಪ್ಪಿಲ್ಲೆ.. ಅಭಿನಂದನೆ .

  5. ಒಳ್ಳೆ ಪ್ರಯತ್ನ ರೇವತಿ ಅಕ್ಕಾ.ಬೈಲಿನ ಹಳೆ ಸಮಸ್ಯೆಗೊಕ್ಕೂ ಪೂರಣ ಬರೆಯಿ.
    ಜನಕನ ಮುದ್ದಿನ
    ತನುಜೆಯು ಆನೀ
    ತನಕವು ಬದುಕಿದೆ ನೆಮ್ಮದಿಲಿ
    ದಿನ ಕಳುದತ್ತು ಮ
    ಸಣ ಮಾಡಿದವೀ
    ಮನ ನೆಂಪಿಲಿ ಕೊರಗಿತು ಇರುಳು

    ಹೇಳಿ ಮಾಡುಲಕ್ಕು.ಜನಕ, ಮನ ಹೇಳ್ತ ಶಬ್ದಂಗೊ ಪುನರಾವರ್ತನೆ ಆಗಿ ಕವನದ ತೂಕ ರಜ ಕಮ್ಮಿ ಅಪ್ಪಲೆ ಸಾಧ್ಯ ಇದ್ದು.ನಮ್ಮ ಶಬ್ಧ ಭಂಡಾರವನ್ನು ಹೆಚ್ಚು ಮಾಡುಲೆ ಈ ಆದಿಪ್ರಾಸದ ನಿಯಮ ಸಹಕಾರಿ.

    ತನಕವು ಕ

    1. ರಘು ಅಣ್ಣ,ಎನ್ನ ಸಣ್ಣ ಪ್ರಯತ್ನಕ್ಕೆ ನಿಂಗ ಎಲ್ಲೊರು ನೀಡಿದ ಪ್ರೋತ್ಸಾಹಕ್ಕೆ ಬಹಳಷ್ಟು ಧನ್ಯವಾದಂಗೊ.

      1. ಇನ್ನೊಂದು ಪ್ರಯತ್ನ, ತಪ್ಪಿದ್ದರೆ ತಿಳಿಶಿಕ್ಕಿ.

  6. ಜನಕನ ಪ್ರೀತಿಯ
    ತನುಜೆಯು ಆನೂ.
    ಮನ ಅಪ್ಪನ ಮರವಲೆ ಇಲ್ಲೆ
    ಜನಕನು ಅಗಲಿದ
    ದಿನದಿಂದಲೆ ಈ
    ಮನ ನೆಂಪಿಲಿ ಕೊರಗಿತು ಇರುಳು.

      1. ಧನ್ಯವಾದಂಗೊ ಇಂದಿರಕ್ಕ.

        ಆರಂಭದ ಸಾಲಿಲಿ ಪ್ರೀತಿಯ ಹೇಳಿ ಬರದರೆ ಸರಿ ಆವ್ತೋ ಅಲ್ಲಾ ನೆಚ್ಚಿನ ಹೇಳಿದರೆ ಸರಿಯೋ?

    1. ಒಳ್ಳೆ ಕಲ್ಪನೆ ರೇವತಿಯಕ್ಕಾ. ಲಾಯಕಾಯಿದು.

  7. ಕನಸಿನ ಲೋಕ
    ಮನದನ್ನೆಯ ಮುನಿ-
    ಸಿನ ಮಾತುಗಳೇ
    ಸಿನೆಮಾ ಧಾರಾವಾಹಿಲಿಯೆ
    ಕನಸಿನ ಲೋಕದ
    ಮನೆಯುಪ್ಪರಿಗೆಲಿ
    ಮನ ನೆಂಪಿಲಿ ಕೊರಗಿತು ಇರುಳು

  8. ಆ ದಿನ ಓದಿರೆ
    ಮಿನಿ ಕಾದಂಬರಿ
    ಖನಿ ಕಾರಂತರ ಮುಡಿಯ ಗರಿ
    ಹನಿ ಕಣ್ಣೀರಿಲಿ
    ಚನಿಯನೊ ಆ ಚೋ
    ಮನ ನೆಂಪಿಲಿ ಕೊರಗಿತು ಇರುಳು ||

  9. ಹ. ಹ್ಹಾ.. ಛೋಟಾ ಭೀಮನ ಕಾರ್ಟೂನು ನೋಡದ್ದೆ ಕೊರಗಿದನೋ !

  10. ಮಗನ ಅವಸ್ಥೆ 🙂
    ದೆನಿಗೇಳಿರು ಬಾ
    ರನು ಹಗಲಿಲಿ ರಜೆ
    ದಿನವಿಡೀ ನೋಡುವ ಕಾರ್ಟೂನು
    ಮನುಗಿದ ಬೈದರೆ
    ಕನಸಿಲು ಆ ಭೀ
    ಮನ ನೆಂಪಿಲಿ ಕೊರಗಿತು ಇರುಳು 🙂

  11. ಇನ ಜಾರಿದ ಮೇ
    ಲ್ದಿನವೂ ಬಪ್ಪ ಸು
    ಜನ ಮಾಯಮವಾಸ್ಯೆಯೊ ಇ೦ದು ?
    ಹುಣಿಹುಲ್ಲಿಲಿ ಕ೦
    ಬನಿ ಹನಿಗಳೊ ! ಸೋ
    ಮನ ನೆ೦ಪಿಲಿ ಕೊರಗಿತೊ ಇರುಳು ?

  12. ಘನ ಉದ್ಯೋಗವು
    ಜೆನರಿಂಗಿಲ್ಲದೆ
    ಹಣ ಮಾಡಲೆ ಕಟ್ಟುಗು ಮರುಳು |
    ಹೆಣ ಬೀಳುಸಿಯೇ
    ಮನೆ ದೋಚುತ್ತವು
    ಮನ ನೆಂಪಲಿ ಕೊರಗಿತು ಇರುಳು ||

    1. ಅಪ್ಪು ಮಾವಾ , ಎಲ್ಲಾ ಸುಲಾಭಲ್ಲಿ ಪೈಸೆ ಸಂಪಾದನೆ ಆಯೆಕ್ಕು ಹೇಳಿ ಹೊಣೆತ್ತವ್ವೇ ತುಂಬಿಪ್ಪಗ ಮನಸ್ಸು ಕೊರಗದ್ದೆ ಇಕ್ಕೋ ! ಲಾಯ್ಕ ಆಯಿದು .

  13. ಅನುಮಾನಲ್ಲಿಯೆ
    ಹನುಮನ ನೋಡಿತು
    ದನುಜ ಸ್ತ್ರೀಯರ ಮಧ್ಯ೦ದ
    ಮನಸಿನ ಬೇನೆಲಿ
    ಜನಕನ ಸುತೆ ರಾ
    ಮನ ನೆ೦ಪಿಲಿ ಕೊರಗಿತು ಇರುಳು

  14. ಆಹಾ , ಇಂದಿರತ್ತೆ .. ಎರಡೂ ಭರ್ಜರಿ ಆಯಿದನ್ನೇ ..

  15. ನನೆಗಣೆಯನ ಕ
    ಣ್ಣಿನ ಕಿಚ್ಸಿಲಿ ಸು
    ಟ್ಟನೆ ರೌದ್ರದಿ ಶಶಿಶೇಖರನೂ |
    ಕೊನೆಯಾಗಲು ಪತಿ
    ಹನಿಗೂಡಿಯೆ ಕಾ
    ಮನ ನೆಂಪಿಲಿ ಕೊರಗಿತು ಇರುಳು ||

  16. ಜನಕನ ಮಗಳಿನ
    ಅನುಜನು ಲಕ್ಷ್ಮಣ
    ವನದೊಳ ಬಿಟ್ಟಿದ ಚಿಂತೆಯೊಳ |
    ಇನಿಯನ ಝಾನ್ಸುತ
    ಬನದೊಳ್ ಶ್ರೀರಾ
    ಮನ ನೆಂಪಿಲಿ ಕೊರಗಿತು ಇರುಳು ||

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×