- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಅಪ್ಪಯ್ಯಂಗೆ ಮಾಸ್ತರಿಕೆ ಮಾಡಿ ಗೊತ್ತಿದ್ದು
ಕಶ್ಟಾ ತ್ರಾಸುಸಹಿಸ್ಕಂಡಿ ಕಲಿಸಿ ಗೊತ್ತಿದ್ದು
ಸರ್ಕಾರಿ ಕೆಲ್ಸ ಮಾಡೂಲಕ್ಕೆ
ಅಪ್ಪಂಗ್ ತ್ರಾಸಾಯ್ದು
ದಮ್ಮು ಕೆಮ್ಮು ಹೇಳ್ಕಂಡಿ
ಜೀವ್ನಾ ಹಾಳಾಯ್ದು!!
ಅಪ್ಪಾದ್ರೂ ಧ್ಯೈರ್ಯ ತಕಂಡಿ
ಕೆಲ್ಸ ಮಾಡಿದ್ದಾ
ನೀರ್ ಹಾಯ್ಕಂಡ್ ಶೀಕಾರ
ಶಾಲೆಗ್ ಮಳೇಲ್ ಹೋಗ್ತಿದ್ದಾ
ಥಂಡಿ ಗಾಳೀಲ್ ದಮ್ಮು ಇನ್ಮೂ ಹೆಚ್ಚಾಗ್ ಹೋಗ್ತಿತ್ತು
ದಾಕ್ಶಿಣ್ಯಾದ್ರೂ ಶೀಕಾರ ಗಂಗಮ್ನ ಮನೇಲ್ ಇರ್ತಿದ್ದಾ!!
ಅಪ್ಪಯ್ಯಂಗೆ ನಾಚ್ಕೆ ಮಾನ ಮರ್ಯಾದಿ ಜಾಸ್ತಿ
ಆದ್ರೆ ಎಂಥದು ಶೀಕಲ್ ಅವಂಗೆ ಬೇಜಾರೆ ಜಾಸ್ತಿ
ಓಡಾಡುಲಾಗ್ದೇ ಅಪ್ಪಾ ಡಬ್ಬೀಲಿ ಕಫ ಉಳ್ಗತಿದ್ದ
ಪಾಯಿಖಾನೆಗ್ ಹೋಪುಲಾಗ್ದೇ ಹಿತ್ಲಲ್ಲೇ ಕೂರ್ತಿದ್ದಾ!!
ಅಪ್ಪಯ್ಯನ ಕಂಡ್ರೆ ನಂಗೆ ಪಾಪ ಅನ್ಸೋಯ್ದು
ಬಿ.ಎ.ಬಿಎಡ್ ಓದ್ಸದ್ದು ಜಾಸ್ತೀನೆ ಅನ್ಸಿದ್ದು
ತಮ್ಮಂಗಂತೂ ಇಂಜನೀಯರಿಂಗ್ ಮಾಡ್ಸೇ
ಕೈತೊಳ್ದಾ
ಕಿರಿ ಮಗಂಗ್ ಎಂ.ಎಸ್ಸಿ. ಮಾಡ್ಸಿ ಲೆಕ್ಚರ್ ಮಾಡ್ಸಬುಟ್ಟಾ!!
ಕೊನೆಗ್ ಅಪ್ಪಾ ಮಾಸ್ತರಿಕೆಗೆ
ವಿ.ಆರ್.ಎಸ್.ತಕಂಡಾ
ನೋವು ಕಶ್ಟಾ ನುಂಗಕಂಡಿ
ಮಕ್ಕಾ ನೋಡ್ಕಂಡಾ
ಆಯಿಗಂತೂ ಜವಬ್ದಾರಿ
ಕಶ್ಟಾ ಆಗ್ತಿತ್ತು
ಕಣ್ಮುಂದ್ ಅಪ್ಪಾ ಮಾತಾಡ್ತಿದ್ರೆ ಖುಶೀಲ್ ಇದ್ದಬುಡ್ತು!!
ಅಪ್ಪಂಗ್ ಈಗಾ ಹಳೇದೆಲ್ಲಾ
ನೆನಪಾಗ್ತಾ ಇತ್ತು
ಮನೀಂದಾ ಹೊರ್ಗೆ ಹೊಗ್ದಗಿದ್ದೆ ಬೇಜಾರೇ ಆಗ್ತು
ಅಪ್ಪಯ್ಯ ಇಪ್ಪಶ್ಟ ದಿನಾನೂ
ನೆಮ್ಮದಿಯಿಂದಿರೊ
ದೇವ್ರು ಅವಂಗೆ ಆಯುಶ್ಯ
ಆರೋಗ್ಯಾ ಕೊಡೊ!!
ಕ್ಶಮ್ಸಿ ಕಲ್ಪನಕ್ಕಾ,
ಹೆಸರು ತಪ್ಪಿ ಹೋಯ್ತು.
ಅರುಣಕ್ಕಾ,
ಅಪ್ಪಯ್ಯನ್ ಕಷ್ಟಾ ನೆನ್ದು ಬೇಜಾರಾತು,
ನಿಂಗೆಲ್ರೂ ಅವ್ರ ಜೊತೆಲೇ ಇಪ್ಪದು ಸಂತೋಷ.
ಮಕ್ಕೊಗೆ ಬೇಕಾಗಿ ಅಪ್ಪ/ಅಮ್ಮ ಅದೆಷ್ಟು ಕಷ್ಟ ಬತ್ತವು. ನಿಜವಾಗಿಯೂ ಅವೆಲ್ಲಾ ವಂದನೀಯರು.
ಎದು
ಹ
ಇದು ನನ್ನ ಅಪ್ಪನ ಸ್ವಂತ ಅನುಭವದ ವಿಚರದ್ದು
ಅಪ್ಪಯ್ಯ ಈ ಕವಿತೆ ನನ್ನ ಅಪ್ಪನ ಬಗ್ಗೆಯೇ ಇದ್ದು ಚಲೋ ಇದ್ರೆ ಒಪ್ಪ ಕೊಡಿ ಪ್ಲೀಸೆ
ಇದು ನನ್ನ ಅಪ್ಪನ ಕುರಿತದ್ದೇ ಹಾಡು .c