Oppanna.com

ಸಮಸ್ಯೆ 120 : ಚಿತ್ರಕ್ಕೆ ಪದ್ಯ

ಬರದೋರು :   ಸಂಪಾದಕ°    on   04/06/2016    11 ಒಪ್ಪಂಗೊ

ಇರುಳಿನ ಈ ದೃಶ್ಯದ ಮೇಲೆ ಒ೦ದು ಪದ್ಯ ಕಟ್ಟುವ.20160422_203944

11 thoughts on “ಸಮಸ್ಯೆ 120 : ಚಿತ್ರಕ್ಕೆ ಪದ್ಯ

  1. ನೀಲಿ ಬಾನಿಲಿ ಕಾರಿ ಬೇಗೆಯ ತಾರೆ ಭಾಸ್ಕರ ಕಂತಲೂ
    ಬೇಲಿ ಮೇಗಣ ದೊಡ್ಡ ತೆಂಗಿನ ಹಿಂದೆ ಕಾಂಬದು ಎಂತದೂ
    ಖಾಲಿ ಕಪ್ಪಿನ ಬಾನ ಕಾವಲಿಲೊಂದು ಸಣ್ಣಕೆ ದೋಸೆಯೋ
    ತೇಲೊ ಮೋಡಲಿ ತಂಪ ಹಾಸುವ ಚಿತ್ತಚೋರನೆ ಚಂದಿರಾ || 🙂

    1. ಆಹಾ , ಒಳ್ಳೆ ಉಪಮೆ . ಮಲ್ಲಿಕಾಮಾಲೆ ಲಾಯಕ ಆಯಿದು ಶೈಲಜಕ್ಕಾ .

  2. ತೆಂಗಿನ ಮಡಲೆಡೆ
    ತಂಗಿದೆಯೆಂತಕೆ
    ತಿಂಗಳ ಬೆಳಕಿನ ಚೆಲ್ಲುತ್ತಾ |
    ತಂಗೆಯ ಪ್ರೀತಿಯ
    ಕಂಗಳ ತುಂಬಲು
    ಎಂಗಳ ಮನಗೇ ಬಾ ಯಿತ್ತಾ ||

    1. ತಿಂಗಳಿಂಗೆ ಶರಪ್ರಯೋಗ ರೈಸಿದ್ದು ಬೊಳುಂಬು ಮಾವ .

  3. ಚಂದಮಾಮ
    ಚಿಣ್ಣರ ಮಾಮನ ಕಂಡರೆ
    ಸಣ್ಣವು ದೊಡ್ದವಕೆ ತುಂಬ ತುಂಬಾ ಕೊಶಿಯೇ
    ಕಣ್ಣಿಲಿ ನೋಡಿದ ಹಾಂಗೆಯೆ
    ಬಣ್ಣವು ಹಾಲಿನ ನಮೂನೆ ಪೂರ್ವದ ಹೊಡೆಲೀ

    1. ಮಾವಾ, ಚಂದಮಾಮನ ಮೇಲೆ “ಕಂದ” ನ ಕಣ್ಣು .. ಲಾಯಕ ಆಯಿದು .

  4. ಕರಿ ಮೋಡದ ಬಳಿ ಚಂ-
    ದಿರ ಕಾಂತಿಯು ಕಾಣ್ತದ,
    ಮರವಲೆ ಅರಡಿಗೊ ಸೃಷ್ಟಿಯ ನಿಯಮವ?
    ಅರಿವೀಯುವುದದು ಈ
    ಪರಿಯಲಿ ಸುಖ-ದುಃಖ ಗ-
    ಳೆರಡು ಒಂದರ ಮಗ್ಗುಲಿಲಿನ್ನೊಂದು.

    1. ರೇವತಿಯಕ್ಕ , ಒಳ್ಳೆ ರಚನೆ .ಛ೦ದಸ್ಸಿನ ದೃಷ್ಟಿಲಿ ನೋಡ್ತರೆ ಷಟ್ಪದಿಯ ಲೆಕ್ಕಂಗೋ ಸರಿ ಬಂದ ಹಾಂಗಿಲ್ಲೆ. ರಜಾ ಹೆಚ್ಚು ಕಮ್ಮಿ ಕಾಣುತ್ತು .

      1. ಅಪ್ಪು ರಘು ಅಣ್ಣ,ಎನಗೂ ರಜ್ಜ ಡಂಕಿದ ಹಾಂಗೆ ಆವ್ತು.ಅದು ಎಂತದು ಹೇಳಿ ಗೊಂತಾವ್ತಿಲ್ಲೆ.ಛಂದಸ್ಸಿನ ಲೆಕ್ಕಾಚಾರ ಹೇಂಗೆ ಹೇಳಿ ನಿಂಗಳ ಪುರುಸೊತ್ತಿಲಿ ತಿಳಿಶಿಕ್ಕಿ.ಎನಗದು ಗೊಂತಿಲ್ಲೆ.

  5. ಕಪ್ಪು ಹಿನ್ನೆಲೆಯೊಳವೆ ಚಂದಿರ
    ಚಪ್ಪೆಮೋರೆಲಿ ಬಂದ ನೋಡಿರಿ
    ಅಪ್ಪಿಗೊಂಬಲೆ ತಾರೆಯೊಂದೂ ಕಾಣದಾಯ್ದನ್ನೆ
    ಹೆಪ್ಪುಗಟ್ಟಿದ ಇರುಳ ಹೊತ್ತಿಲಿ
    ಸಪ್ಪಳವಮಾಡದ್ದೆ ನಿಂದಿದ
    ಕಲ್ಪವೃಕ್ಷದ ಮಡಲಿನೆಡಕಿಲಿ ಕಂಡುಕಾಣದ್ದೆ ||

    1. ಒಳ್ಳೆ ಪೂರಣ ಇಂದಿರತ್ತೆ , ಪೇಟೆಯ ಧೂಳು ಹೊಗೆಲಿ ನಕ್ಷತ್ರ ಮಾಯ, ಮುಂದೆ ಚಂದ್ರನೂ ಕಾಣದ್ದೆ ಅಕ್ಕೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×