Oppanna.com

ಶಿವರಾತ್ರಿ ಬಪ್ಪ ಮೊದಲೇ ಸೆಖೆ ಸುರು ಆತು..!!!

ಬರದೋರು :   ಒಪ್ಪಣ್ಣ    on   24/02/2017    3 ಒಪ್ಪಂಗೊ

ಶಿವರಾತ್ರಿ ಬಂದರೆ ಛಳಿಯೂ ಶಿವ ಶಿವ – ಹೇದು ಓಡಿ ಹೋವುತ್ತಾಡ; ಹೀಮ್ಗೊಂದು ಕಾಂಬು ಅಜ್ಜಿಯ ಕಾಲದ ಪಳಮ್ಮೆ ಇದ್ದು.
ಕಾಂಬು ಅಜ್ಜಿ – ಶಂಬಜ್ಜನ ಕಾಲದ ಹಲವೂ ಪಳಮ್ಮೆಗೊ ಈಗ ಅಜ್ಜಂದ್ರ ಬಾಯಿಲಿ ಮಾಂತ್ರ ಒಳುದ್ದಷ್ಟೇ ಹೊರತು, ಈಗಾಣ ಕಾಲಕ್ಕೆ ಅದು ಅನ್ವಯ ಆವುತ್ತಿಲ್ಲೆ.
ಏಕೆ? ಏಕೇದರೆ, ಪರಿಸರದ ಬದಲಾವಣೆ.
~
ಅಪ್ಪು, ಮದಲಿಂಗೆ ಕಾಲಕಾಲಕ್ಕೆ ಸರಿಯಾಗಿ ಮಳೆ ಬೆಳೆ ಬಂದುಗೊಂಡಿತ್ತು ಅಲ್ದೋ. ಕೆರೆ ತೋಡುಗಳಲ್ಲಿ ನೀರು ಇದ್ದುಗೊಂಡಿತ್ತು. ತೋಟಲ್ಲಿ ಬೆಳೆ ಇದ್ದುಗೊಂಡಿತ್ತು, ಗುಡ್ಡೆಲಿ ಮುಳಿ ಇದ್ದುಗೊಂಡಿತ್ತು.
ಈಗೀಗ ಎಲ್ಲವುದೇ ಕಾಣೆ.
ತೋಟಲ್ಲಿ ಬೆಳೆ ಇಲ್ಲೆ, ಗುಡ್ಡೆಲಿ ಮುಳಿ ಇಲ್ಲೆ, ಅಲ್ಲಲ್ಲ – ಗುಡ್ಡೆಯೇ ಇಲ್ಲೆ; ಮತ್ತೆಲ್ಲಿಗೆ ಕೆರೆ ತೋಡಿಲಿ ನೀರಿಪ್ಪದು!?
ಅಪ್ಪು; ಎಲ್ಲವೂ ಒಂದಕ್ಕೊಂದು ಸಂಬಂಧ.
ಕಾಡಿಲಿಪ್ಪ ಮರ ಕಡುದು ಗುಡ್ಡೆ ಮಾಡಿದವು;
ಆ ಮರಂಗೊ ನೀರು ಹಿಡುದು ಮಳೆ ಕೊಡ್ಸು ಕಮ್ಮಿ ಆತು;
ಮಳೆ ಕಡಮ್ಮೆ ಅಪ್ಪದ್ದೇ ನೀರು ಒರತ್ತೆ ಕಡಮ್ಮೆ ಆತು; ನೀರು ಆರಿತ್ತು.
ನೀರು ಕಡಮ್ಮೆ ಅಪ್ಪಗ ಬೋರು ಹೋಡದರೂ ಸಾಕಾಯಿದಿಲ್ಲೆ.
ಅಷ್ಟಪ್ಪಗ ಹಸುರು ಕಡಮ್ಮೆ ಆತು.
ಮಳೆಗಾಲ ಕಡಮ್ಮೆ ಆದಪ್ಪದ್ದೇ – ಸೆಖೆ ಜಾಸ್ತಿ ಆತು.
ಇದರಿಂದ ಛಳಿ ಕಡಮ್ಮೆ ಆತು.
ಚಳಿ ಕಡಮ್ಮೆ ಆದರೆ ಮೈಂದು ಕಡಮ್ಮೆ ಆತು; ಫಲಪುಷ್ಪಂಗೊ ಕಡಮ್ಮೆ ಆದವು.
ಎಲ್ಲವುದೇ ಮನುಷ್ಯ ಒಂದು ಸರ್ತಿ ಏರುಪೇರು ಮಾಡ್ಳೆ ಹೆರಟಪ್ಪಗ ಹೀಂಗಾತು ಹೇಳ್ತದು ನಾವು ಗೊಂತುಮಾಡಿಗೊಳೆಕ್ಕು.
~
ಮದಲಿಂಗೆ ಶಿವರಾತ್ರಿ ಒರೆಂಗೂ ಹಳ್ಳಲ್ಲಿ ನೀರು ಇಕ್ಕು; ಊರಿಲಿ ಛಳಿ ಇಕ್ಕು.
ಈಗ ದಶಂಬ್ರದ ಎರಡು ವಾರ ಬಿಟ್ರೆ ಸರಿಗಟ್ಟು ಛಳಿಯೂ ಇಲ್ಲೆ.
ದಶಂಬ್ರ ಕಳಿವಗಳೇ ನೀರುದೇ ಇರ್ತಿಲ್ಲೆ.
ಇದೆಲ್ಲ ನೋಡುವಾಗ – ಹೀಂಗೇ ನೆಡದರೆ ಮುಂದೆ ಎಲ್ಲಿಗೆ ಎತ್ತುಗು – ಹೇಳ್ತ ವೇದನೆ ಒಪ್ಪಣ್ಣನ ಮನಸ್ಸಿಂಗೆ ಅನುಸುತ್ತು.
ಊರಿಡೀ ಬೆಶಿ ಏರಿರೆ ಮತ್ತೆ ನಿಂಬಲೂ ಎಡಿಯ.
ಈಗಳೇ ಬೈಲಿಲಿ ಹಲವೂ ಗೆದ್ದೆಗೊ ಕಾಲಿ ಆಯಿದು. ಇನ್ನು ಮುಂದೆ ಹೀಂಗೇ ಹೋದರೆ ಉಂಬಲೆ ತಿಂಬಲೆ ಅಕ್ಕಿಯುದೇ ಚೀನಾದೋರು ಕಳುಸಿಕೊಟ್ಟದೇ ಆಯೇಕಟ್ಟೆ – ಹೇದು ಗ್ರೇಶಿ ಹೆದರಿಕೆ ಆವುತ್ತು.
ಅಲ್ದೋ?

~

ಒಂದೊಪ್ಪ: ಲೋಕ ಇಡೀ ಬೆಶಿ ಅಪ್ಪದು ಕಾಂಬಗ ಶಿವನೇ ಕಣ್ಣುಬಿಟ್ಟನೋ – ಹೇದು ಅನುಸುತ್ತು.

3 thoughts on “ಶಿವರಾತ್ರಿ ಬಪ್ಪ ಮೊದಲೇ ಸೆಖೆ ಸುರು ಆತು..!!!

  1. ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ ಸೆಕೆಯನ್ನು ತಾಳಲಾರೆ ಕಾಪಾಡೆಯಾ !! ಹೇಳುವನೊ ?

  2. ಎನ್ನಪ್ಪ ಹೇಳುಗು “ಚಳಿ ಬೇಕು. ಅದು ಮಳೆಯ ಹೂಗು” ಚಳಿಲಿ ಹೂಗುಬಿಟ್ಟು,ಸೆಕೆಲಿ ಕಾಯಾಗಿ ,ಮತ್ತೆ ಹಣ್ಣಾಗಿ ಮಳೆಯಾಗಿ ಉದುರುದಡ.ಇದೊಳ್ಳೆ ಚಿಂತನೆ ಅಲ್ಲೊ ಎಂತ ಹೇಳ್ತಿ?

  3. ಕಣ್ಣು ಬಿಡಲಿ ಶಿವ …ಮೂರನೇ ಕಣ್ಣಲ್ಲ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×