Oppanna.com

“ಆದರೆ ಹೋದರೆ ಹತ್ತೀ ಬೆಳದರೆ ಅಜ್ಜಿಗೊಂದು ಪಟ್ಟೆಸೀರೆ”-(ಹವ್ಯಕ ನುಡಿಗಟ್ಟು-80)

ಬರದೋರು :   ವಿಜಯತ್ತೆ    on   23/02/2017    5 ಒಪ್ಪಂಗೊ

“ಆದರೆ ಹೋದರೆ ಹತ್ತೀ ಬೆಳದರೆ,ಅಜ್ಜಿಗೊಂದು ಪಟ್ಟೆಸೀರೆ”-(ಹವ್ಯಕ ನುಡಿಗಟ್ಟು-80)

ಮದಲಿಂಗೆ ಕೂಡು ಕುಟುಂಬವೇ ಜಾಸ್ತಿ. ಒಂದೊಂದು ಮನಗಳಲ್ಲಿ ಹತ್ತಿಪ್ಪತ್ತು, ಮೂವತ್ತು ಜೆನ ಇಕ್ಕು. ಬರೇ ಕೃಷಿಯನ್ನೇ ನಂಬಿ ಅವರ ಬದುಕ್ಕು. ಹೀಂಗಿದ್ದಲ್ಲಿ ’ತಲಗೆಳದರೆ ಕಾಲಿಂಗಿಲ್ಲೆ,ಕಾಲಿಂಗೆಳದರೆ ತಲಗಿಲ್ಲೆ’ ಹೇಳಿಪ್ಪವೇ ಜಾಸ್ತಿ. ಮನೆಲಿಪ್ಪ ಜೆನಂಗೊಕ್ಕೆ ಅತೀ ಅಗತ್ಯದ ಊಟ,-ವಸ್ತ್ರ ಇದೆರಡು, ಮನೆ ಎಜಮಾನ ಹೊಂದುಸಿ ಕೊಡೆಕಾದ್ದು ಅವನ ಕರ್ತವ್ಯ.ಆದರೆ ಏವಗಳೂ ಒಂದೇರೀತಿ ಇರ್ತಿಲ್ಲೆ. ಮನೆಲಿದ್ದ ಮಾಣಿಯಂಗಳ ಉಪನಯನವೋ  ಕೂಸುಗಳ ಮದುವೆಯೋ ನಿಜ ಆದರೆ ಕೇಳುದೇ ಬೇಡ!.

ತುಂಬಿದ ಸಂಸಾರದ ಹೀಂಗಿದ್ದ ಮನೆಯೊಂದರಲ್ಲಿ ಮದುವೆ ನಿಜಾತು. ಮದುವೆ ಹೇಳಿದ ಮತ್ತೆ ಜವುಳಿ ಬೇಕನ್ನೆ. ಎಲ್ಲೋರಿಂಗೂ ಜವುಳಿಯೂ ಬಂತು.ಮದುವಗೆ ತಂದ ಜವುಳಿ ಬಿಡುಸಿ ನೋಡುದೂಳಿರೆ ಅದೊಂದು ಸಂಬ್ರಮ. ಆ ಗೌಜಿಲಿ ಮಕ್ಕಳೂ ಅಬ್ಬೆಕ್ಕಳೊಟ್ಟಿಂಗೆ ಅವರವರ ಡ್ರೆಸ್ಸ್ ನೋಡ್ಳೆ ಸೇರಿದೊವು. ಮಕ್ಕೊಗೆಲ್ಲ ಅಂಗಿ, ಚಡ್ಡಿ, ಲಂಗ ದಾವಣಿ ಚೀಟು, ಹೆಮ್ಮಕ್ಕೊಗೆ ಪಟ್ಟೆ{ರೇಶ್ಮೆ}ಸೀರೆ,ಎಲ್ಲಾ ಎಜಮಾನ ಕೊಟ್ಟದೂ ಅವು ತೆಕ್ಕಂಡದೂ ಆತು. ಅಕೇರಿಗೆ ಅಜ್ಜಿಗಿದ್ದ ಸೀರೆಯ ಕೊಟ್ಟ ಅಜ್ಜಿಯ ಮಗ ಅರ್ಥಾತ್ ಮನೆ ಎಜಮಾನ. ಅಜ್ಜಿಗೆ ನೂಲಿನ ಸೀರೆ!.ಅಜ್ಜಿ ಮಾತಾಡದ್ದೆ ತೆಕ್ಕಂಡತ್ತು!!.

ಅಂದಿರುಳು ಅಜ್ಜಿ ಕತೆ ಹೇಳ್ತ ಹೊತ್ತಿಂಗೆ ಮಕ್ಕೊಲ್ಲ ಅಜ್ಜಿಯ ಬುಡಲ್ಲಿ ಸೇರಿದೊವು. “ಅಜ್ಜೀ.., ಅಬ್ಬೆ, ಕಿರಿಯಬ್ಬೆ, ದೊಡ್ಡಬ್ಬೆವಕ್ಕೆಲ್ಲಾ ಪಟ್ಟೆಸೀರೆ ತಯಿಂದವು ಅಪ್ಪ ನಿನಗೆ ಮಾಂತ್ರ ಎಂತ ಈ ನೂಲಿನ ಸೀರೆ!!?” ಅಜ್ಜಿಯ ಪುಟ್ಟ ಪುಳ್ಳಿಯ ದೊಡ್ಡ ಯೋಚನೆ!!!.

“ಅದೊ ಮಗಾ.., ಅಜ್ಜಿಗೆ ಪಟ್ಟೆ ಸೀರೆ ತರೆಕಾರೆ, ನಿನ್ನಪ್ಪ ಹತ್ತಿ ಗೆಡು ನೆಟ್ಟು, ಅದಲ್ಲಿ ಹತ್ತಿ ಬೆಳದರೆ,ನೂಲು ತೆಗದು ಸೀರೆ ಮಾಡುವಗಳೇ  ಈ ಅಜ್ಜಿಗೊಂದು ಪಟ್ಟೆ ಸೀರೆ ಅಕ್ಕು ಮಿನಿಯಾ”

“ಹತ್ತಿ ಬೆಳದರೆ ಅದಲ್ಲಿ ನೂಲಿನ ಸೀರೆ ಅಲ್ಲೊ ಅಪ್ಪದು!. ಪಟ್ಟೆ ಸೀರೆ ಅಪ್ಪದೇಂಗೆ?”ದೊಡ್ಡ ಪುಳ್ಳಿಯ ಬಾಯಿಲಿ ಪುಟ್ಟ ಪ್ರಶ್ನೆ.

“ಅಪ್ಪು ರೇಶ್ಮೆ ಸೀರಗೆ ರೇಶ್ಮೆ ನೂಲು ಬೇಕು. ರೇಶ್ಮೆ ಹುಳುಗಳ ಸಾಂಕುವ ಕ್ರಮ, ಅದರಿಂದ ತೆಗದ ನೂಲಿಲ್ಲಿ ಶಾಲು,ಸೀರೆ ತಯಾರುಸುವ ಪಾಠ ಮಾಡಿದ್ದೊವು ಮಾಸ್ಟ್ರು”. ರಜ ದೊಡ್ಡಪುಳ್ಳಿಯ  ಶಾಲಿಲಿ ಕಲ್ತ ವರದಿ ಬಂತು.

“ಅಪ್ಪು ಮಕ್ಕಳೇ ಇದು ಆಗದ್ದ ಹೋಗದ್ದ ಪಂಚಾಯಿತಿಗೆ. ಎನ ಪಟ್ಟೆ ಸೀರೆ ಬೇಡ. ನೂಲಿನ ಸೀರೆಯೇ ಸಾಕು. ನಿಂಗಳ ಅಬ್ಬೆಕ್ಕೊಗೆ ಸುಧರಿಕೆ ಮಾಡುವಗ  ಫಳ-ಫಳ ಮಿಂಚುವ ಪಟ್ಟೆಸೀರೆ ಬೇಕದ.ನಿಂಗೊ ಆರೂ ಬೇಜಾರು ಮಾಡೆಡಿ”. ಅಜ್ಜಿಯ ಬಾಯಿಲಿ ಬಂದ ಈ ಮಾತು ಬೇಜಾರಲ್ಲಿಯೋ ಆತ್ಮ ತೃಪ್ತಿಲಿಯೋ.”  ಆದರೆ ನವಗದು ಒಂದು ರೀತಿ ಹೊಟ್ಟೆಲಿ ಸಂಕಟ ಎಂತ ಹೇಳ್ತಿ?

ಅಂತೂ ಆಗದ್ದ ಹೋಗದ್ದ ಕಾರ್ಯಕ್ಕೆ; ’ಆದರೆ ಹೋದರೆ ಹತ್ತೀ ಬೆಳದರೆ,ಅಜ್ಜಿಗೊಂದು ಪಟ್ಟೆಸೀರೆ’ ಹೇಳುವ ಮಾತು ಹುಟ್ಟಿತ್ತು.

                        ——–೦——–

5 thoughts on ““ಆದರೆ ಹೋದರೆ ಹತ್ತೀ ಬೆಳದರೆ ಅಜ್ಜಿಗೊಂದು ಪಟ್ಟೆಸೀರೆ”-(ಹವ್ಯಕ ನುಡಿಗಟ್ಟು-80)

  1. ಹರೇರಾಮ, ಈ ನುಡಿಗಟ್ಟಿನ ಇಲ್ಲಿಂದ ತೆಗದು ಎಸ್,ಗಣಪತಿ ಭಟ್ಟ ಹೇಳುವವು ಫ್ರೆಂಡ್ಸ್ ಗ್ರೋಪಿಲ್ಲಿ ಹಾಕಿ ವಾಟ್ಸ್ ಅಪ್ಪಿಲ್ಲಿ ಅವರ ಹೆಸರಿಲ್ಲಿ ಹಾಕಿ ಅವಕ್ಕೆ ಲೈಕ್ ಕೊಟ್ಟಂಡು ಓಡಾಡಿಗೊಂಡಿದ್ದತ್ತು. ಆನು ಆಗ್ರೂಪಿಲ್ಲಿದ್ದ ಕಾರಣಂದ ಎನಗೆ ಕಂಡು ವಿಚಾರ್ಸುವಗ ಎನಗೆ ಬೇರೆಯವರಿಂದ ಫೋರ್ವರ್ಡ್ ಬಂದದು ಹೇಳ್ತವು. ಆರುದೆ ಇಲ್ಲಿಂದ ತೆಗೆತ್ತರೆ ಲೇಖಕರ ಅನುಮತಿ ಕೇಳೆಕ್ಕೂಳಿ ಇದ್ದನ್ನೆ!. ತೆಗದು ಹಾಕುತ್ತರೆ ಲೇಖಕರ ಹೆಸರೂ ಕಾಣಿಸಿ.ಕೃತಿಚೌರ್ಯ ಖಂಡಿತ ಮಾಡೆಡಿ.

  2. ನಿನ್ನ ಚಿಂತನೆ ಸರಿಯಾಗಿದ್ದು ನವೀನ . ಹೀಂಗಿದ್ದ ಮನೋಭೂಮಿಕೆ ಇದ್ದರೇ ನಮ್ಮದು ಒಳುದು ಬೆಳಗಷ್ಟೆ. ಧನ್ಯವಾದಂಗೊ.

  3. Nudikattu mattu adare vivarane bhari laayaka iddu. Yennanthaha yuvajanakke havyaka bhashellippa nudikattugala bagge gonthayakkare mattu mundana talemaringe gonthayekkare idara ondu sanchi aayekku.Doddammana ee kelasa shlaghaniya.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×