Oppanna.com

ಸುಭಾಷಿತ – ೪೩

ಬರದೋರು :   ಪುಣಚ ಡಾಕ್ಟ್ರು    on   16/10/2018    0 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

 

ಪ್ರಿಯೋ ಭವತಿ ದಾನೇನಪ್ರಿಯವಾದೇನ ಚಾಪರಃ।
ಮಂತ್ರತಂತ್ರಬಲೇನಾನ್ಯೋ ಯಃ ಪ್ರಿಯಃ ಪ್ರಿಯ ಏವ ಸಃ।।

ಪದಚ್ಛೇದ:*
ಪ್ರಿಯಃ ಭವತಿ ದಾನೇನ ಪ್ರಿಯವಾದೇನ ಚ ಅಪರಃ।
ಮಂತ್ರತಂತ್ರಬಲೇನ ಅನ್ಯಃ ಯಃ ಪ್ರಿಯಃ ಪ್ರಿಯಃ ಏವ ಸಃ।

ಅನ್ವಯಾರ್ಥ:
ದಾನೇನ(ಕೊಡುವುದರಿಂದ)
ಪ್ರಿಯಃ ಭವತಿ(ಪ್ರಿಯನಾಗುತ್ತಾನೆ)
ಅಪರಃ(ಮತ್ತೊಬ್ಬ)
ಪ್ರಿಯವಾದೇನ(ನಲ್ಮಾತುಗಳನ್ನು ಆಡುವುದರಿಂದ)
(ಪ್ರಿಯಃ ಭವತಿ – ಪ್ರಿಯನಾಗುತ್ತಾನೆ)
ಮಂತ್ರತಂತ್ರಬಲೇನ(ಮಂತ್ರ ಉಪಾಯಾದಿಗಳ ಬಲದಿಂದ)
ಅನ್ಯಃ(ಬೇರೊಬ್ಬ)
(ಪ್ರಿಯಃ ಭವತಿ – ಪ್ರಿಯನಾಗುತ್ತಾನೆ)
ಯಃ(ಯಾವನು)
ಪ್ರಿಯಃ(ಪ್ರಿಯನೋ)
ಸಃ (ಅವನು)
ಪ್ರಿಯಃ ಏವ (ಪ್ರಿಯನೇ).

ಭಾವಾರ್ಥ:

ನೈಜಪ್ರೀತಿ ಹೇಳುದು ಕೊಡು ಕೊಳ್ಳುವ ವಸ್ತು ಅಲ್ಲ. ಅದು ಅಂತರಾಳದ ಭಾವ.
ಅದಕ್ಕೆ ಕಾರಣ ಬೇಡ.
ಕಾರ್ಯಕಾರಣಂದ ಉಂಟಾಗುವ ಶತ್ರುಮಿತ್ರಉದಾಸೀನಭಾವಂಗೊ ಸ್ಥಾಯೀ ಅಲ್ಲ. ಕಾರಣ ನಿವಾರಣೆ ಆದರೆ ಆ ಭಾವವೂ ಇಲ್ಲೆ.
ಏನನ್ನೋ ಕೊಡುದರಿಂದ ಕೆಲವರು ಪ್ರಿಯರಕ್ಕು . ಪ್ರೀತಿಯ ಮಾತಿಂದ ಕೆಲವರು ಪ್ರೀತಿಯ ಪಡೆಗು. ವಶೀಕರಣಾದಿ ಮಂತ್ರತಂತ್ರಂಗಳಿಂದಲೂ ಕೆಲವು ಸರ್ತಿ ಪ್ರೀತಿ ಹುಟ್ಟುಗು. ಆದರೆ ಅವು ನಿರಂತರವಾಗಿ ಒಳಿಯೆಕ್ಕಾದರೆ ನಿರಂತರವಾಗಿ ಕೊಡುತ್ತಾ ಪ್ರಿಯವಾದ ಮಾತು ಆಡುತ್ತಾ ಅಥವಾ ವಶೀಕರಣ ಮಾಡುತ್ತಾ ಇರಕ್ಕು.
ಆದರೆ ಕಂದಂಗೆ ಅಮ್ಮನಲ್ಲಿ ಅಮ್ಮಂಗೆ ಕಂದನಲ್ಲಿ ಉದಿಸಿದ ಪ್ರೀತಿ ಅದು ನಿಷ್ಕಾರಣ ನಿಷ್ಕಲಂಕ. ಅಮ್ಮ ಏನನ್ನೋ ಕೊಡುತ್ತು ಹೇಳುವ ಕಾರಣಕ್ಕೆ ಬಪ್ಪ ಪ್ರೀತಿಯಲ್ಲ ಅದು. ಬಡುದರೂ ಬೈದರೂ ಅದು ಅಂಟಿಗೊಂಬದು ಅಮ್ಮನನ್ನೇ.
ಆ ರೀತಿಯ ಹೃದಯದ ಅಂತರಾಳದ ಪ್ರೀತಿಯೇ ನಿಜವಾದ ಪ್ರೀತಿ.

ಅಂಥ ಪ್ರೀತಿ ನಮಗೆಲ್ಲೋರಿಂಗೂ ಮಹಾಮಾತೆ ಲಲಿತಾಂಬಿಕೆಯಲ್ಲಿ ಬರಲಿ. ನಿಷ್ಕಾರಣಾ ನಿಷ್ಕಲಂಕಾ ನಿರುಪಾಧಿಯಾದ ಆ ನಿರೀಶ್ವರಳ ಪ್ರೀತಿ ನವಗೆಲ್ಲೋರಿಂಗೂ ದೊರೆಯಲಿ

 

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×