Oppanna.com

ಮನದ ಮಲ್ಲಿಗೆ (ಕಥಾ ಸಂಕಲನ- ಪ್ರಸನ್ನಾ ವಿ. ಚೆಕ್ಕೆಮನೆ)

ಬರದೋರು :   ಶರ್ಮಪ್ಪಚ್ಚಿ    on   09/10/2018    2 ಒಪ್ಪಂಗೊ

ಮನದ ಮಲ್ಲಿಗೆ (ಕಥಾ ಸಂಕಲನ- ಪ್ರಸನ್ನಾ ವಿ. ಚೆಕ್ಕೆಮನೆ)
ಪ್ರಸನ್ನಾ ವಿ.ಚೆಕ್ಕೆಮನೆ
ಪ್ರಸನ್ನಾ ವಿ.ಚೆಕ್ಕೆಮನೆ

ಗಡಿನಾಡ ಕನ್ನಡ ಲೇಖಕಿಯರ ಸಾಲಿಲ್ಲಿ ಅಗ್ರಗಣ್ಯ ಸ್ಥಾನಲ್ಲಿ  ನಿಂಬವರಲ್ಲಿ ಒಬ್ಬರಾದ ಶ್ರೀಮತಿ ಪ್ರಸನ್ನಾ.ವಿ.ಚೆಕ್ಕೆಮನೆ ಇದೀಗ “ಮನದ ಮಲ್ಲಿಗೆ” ಹೇಳ್ತ ತನ್ನ  ಕಥಾಸಂಕಲನವ ಮೈಸೂರಿನ ಅಪರಂಜಿ ಪ್ರಕಾಶನದ ಮೂಲಕ ಬಿಡುಗಡೆಗೊಳಿಸಿದ್ದು ಹೆಮ್ಮೆಯ ವಿಷಯ. ಗೃಹಿಣಿಯಾಗಿ ತನ್ನ ಜವಾಬ್ದಾರಿಗಳ ನಿರ್ವಹಿಸುತ್ತಾ, ಕನ್ನಡ ಸಾರಸ್ವತ ಲೋಕಕ್ಕೆ ಸಮಯವನ್ನೂ ಹೊಂದಿಸಿಗೊಳ್ಳುತ್ತಾ  ಸರಸ್ವತೀ ಸೇವೆಯ ಮಾಡುತ್ತಾ ಇಪ್ಪ ಇವರ ಹಲವಾರು ಲೇಖನಂಗೊ, ಕಥೆಗೊ, ಕವನಂಗೊ ಹಾಂಗೂ ವೈಚಾರಿಕ ಲೇಖನಂಗೊ ವಿವಿಧ ನಿಯತಕಾಲಿಕಂಗಳಲ್ಲಿ ಪ್ರಕಟವಾಯಿದು. ಇವು ಬರದ ಕಥೆ “ಚುಕ್ಕೆ ತಪ್ಪದ ರಂಗೋಲಿ” ಇತ್ತೀಚೆಗೆ “ತರಂಗ” ವಾರ ಪತ್ರಿಕೆಲಿ ಪ್ರಕಟ ಆಯಿದು. ೨೦೧೨ ರ ಸಾಲಿನ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದವು ಏರ್ಪಡಿಸಿದ ಕಥಾ  ಸ್ಪರ್ಧೆಲಿ ದ್ವಿತೀಯ ಬಹುಮಾನ ,  ೨೦೧೫ ರ ಸಾಲಿನ ಕೊಡಗಿನ  ಗೌರಮ್ಮಪ್ರಶಸ್ತಿ   ಇವರ ಸಾಧನೆಗೆ ಸಂದ ಗೌರವಂಗೊ ಆಗಿರ್ತು. ಕರ್ನಾಟಕ ಪುಸ್ತಕ ಪ್ರಾಧಿಕಾರದ ಮೂಲಕ ಪ್ರಕಟವಾದ ಇವರ ಕವನ ಸಂಕಲನ “ಇನಿದನಿ”  ಜನಮನವ ಗೆದ್ದಿದು ಹಾಂಗೂ ಇವರ ಕವನ “ನನ್ನ ಕೃಷಿ” ಕೇರಳ ಸರ್ಕಾರದ ಎರಡನೇ ಕ್ಲಾಸಿನ  ಕನ್ನಡ ಪಠ್ಯಪುಸ್ತಕಲ್ಲಿ ಪಠ್ಯವಾಗಿ ಸೇರಿಗೊಂಡಿಪ್ಪದು ಇವರ ಸಾಹಿತ್ಯ ಪ್ರೌಢಿಮೆಗೆ ಸಾಕ್ಷಿಯಾಗಿದ್ದು.

ಈ ಕಥಾ ಸಂಕಲನಕ್ಕೆ ಮುನ್ನುಡಿ ಬರದ ಉಮೇಶ್ ಕುಮಾರ್ ಶಿಮ್ಲಡ್ಕ (ಹಿರಿಯ ಪತ್ರಕರ್ತ, ಬೆಂಗಳೂರು) ಹೀಂಗೆ ಹೇಳ್ತವು:-

“ಜೀವನ ಚಿತ್ರ”ವನ್ನು ಓದುಗನ ಮನಸ್ಸಿಗೆ ನಾಟುವಂತೆ ಅಕ್ಷರಗ ಮೂಲಕಕಟ್ಟಿಕೊಡುವುದೇ “ಕಥೆ”. ಈ ರೀತಿ ಕಥೆ ಕಟ್ಟುವ ಕೆಲಸ ಎಲ್ಲರಿಂದಲೂ ಸಾಧ್ಯವಾಗದು. ಇದು ಬರವಣಿಗೆಯ ಕೆಲಸವಾದ್ದರಿಂದ ಸ್ವಲ್ಪ ತಾಳ್ಮೆ ಹೆಚ್ಚೇ ಬೇಕಾಗುತ್ತದೆ. ಅಷ್ಟಿದ್ದರೆ ಸಾಲದು, ಕಲ್ಪನಾ ಶಕ್ತಿಯೂ ಚೆನ್ನಾಗಿದ್ದು, ಅದನ್ನು ಬರವಣಿಗೆ ರೂಪಕ್ಕೆ ಇಳಿಸುವ ಸಾಮರ್ಥ್ಯವೂ ಬೇಕು. ಇಂಥಹ ಒಂದು ಸಾಹಸಕ್ಕೆ ಮುಂದಾಗಿ ಚೊಚ್ಚಲ ಕಥಾಸಂಕಲನ ಹೊರತರಲು ಹದಿನೆಂಟು ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ ಉದಯೋನ್ಮುಖ ಕಥೆಗಾರ್ತಿ ಪ್ರಸನ್ನ ವಿ ಚೆಕ್ಕೆಮನೆ.
.………… ಇಂಥ ನೂರಾರುಕಥಾ ಸಂಕಲನ ಮೂಡಿಬರಲಿ, ಕನ್ನಡ ಕಥಾ ಲೋಕಕ್ಕೆ ಇನ್ನಷ್ಟು ಹೊಸತನ,ಹುರುಪನ್ನು  ತುಂಬಲಿ, ಶುಭವಾಗಲಿ.

 ಲೇಖಕಿ ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ ಇವು ಈ ಕಥಾ ಸಂಕಲನವ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂಗೆ ಸಮರ್ಪಣೆ ಮಾಡಿ ಫಲ ಮಂತ್ರಾಕ್ಷತೆಯನ್ನು ಪಡಕ್ಕೊಂಡಿದವು.

ತಾರೀಕು 23/09/2018 ರಂದು ಕುಂಬಳೆ ಸಮೀಪದ ನಾರಾಯಣ ಮಂಗಲಲ್ಲಿಪ್ಪ ಸಾಹಿತಿ ಶ್ರೀ ವಿ.ಬಿ. ಕುಳಮರ್ವ ಇವರ ನಿವಾಸ “ಶ್ರೀನಿಧಿ” ಲಿ ಮುಳ್ಳೇರಿಯ ಮಂಡಲ ಸಭೆಯಂದುಸಾರ್ವಜನಿಕವಾಗಿ  ಬಿಡುಗಡೆ ಮಾಡಿದವು. ನೂರಕ್ಕೂ ಮಿಕ್ಕಿ ಸೇರಿದ ಈ ಸಭೆಲಿ ಮಂಡಲದ ಪ್ರಮುಖರು,  ಮಂಡಲಾಂತರ್ಗತ ವಲಯ ಪದಾಧಿಕಾರಿಗೊ ಹಾಂಗೂ ಸಾಹಿತ್ಯಾಸಕ್ತರೂ ಹಾಜರಿತ್ತಿದ್ದವು.  ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಶೀಮತಿ ಲಲಿತಾ ಲಕ್ಶ್ಮೀ ಕುಳಮರ್ವ ಇವು ಪುಸ್ತಕ ಬಿಡುಗಡೆ ಮಾಡಿದವು. ಪುಸ್ತಕದ ಕಥೆಗಳ ಬಗ್ಗೆ ಪರಿಚಯವ ಮಾಡಿಕೊಟ್ಟವು ಹಿರಿಯ ಸಾಹಿತಿ ಶ್ರೀ ವಿ.ಬಿ ಕುಳಮರ್ವ. ಶುಭ ಹಾರೈಸಿದವು ಶ್ರೀಮತಿ ವಿಜಯಾ ಸುಬ್ರಹ್ಮಣ್ಯ (ಕೊಡಗಿನ ಗೌರಮ್ಮದತ್ತಿ ನಿಧಿ ಕಥಾಸ್ಪರ್ಧೆಯ ಸಂಚಾಲಕಿ), ಶ್ರೀಕೃಷ್ಣ ಹಳೆಮನೆ (ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಅಧ್ಯಕ್ಷರು).
ತನ್ನ ಅನಿಸಿಕೆಗಳ ಲೇಖಕಿ ಪ್ರಸಸ್ನ್ನಾ ವಿ.ಚೆಕ್ಕೆಮನೆ ಒಂದೆರಡು ಮಾತಿಲ್ಲಿ ಹೇಳಿದವು.

ಯಾವದೇ ಕೃತಿಗೊ ಆಗಲಿ, ಅದರ ಓದಿ ವಿಮರ್ಷೆ ಮಾಡಿ ಪ್ರೋತ್ಸಾಹವ ಕೊಟ್ಟರೆ ಮಾತ್ರ  ಮುಂದೆಯೂ ಅವರಿಂದ ಒಳ್ಳೊಳ್ಳೆ ಸಾಹಿತ್ಯ ರಚನೆ ಅಪ್ಪಲೆ ಸಾಧ್ಯ. ಸಾಹಿತ್ಯ ಕ್ಷೇತ್ರ ಸಮೃಧ್ಧಿ ಆಯೆಕ್ಕಾದರೆ ಓದುಗರ ಪ್ರೋತ್ಸಾಹ ಅತೀ ಅಗತ್ಯ.  ಆ ಕೆಲಸವ ನಾವು ಮಾಡುವೊ°. ಈ ಕಥಾ ಸಂಕಲನವ  ನಿಂಗೊ ಪಡಕ್ಕೊಂಬಲೆ ಕಥಾ ಲೇಖಕಿ ಪ್ರಸನ್ನಾ ವಿ. ಚೆಕ್ಕೆಮನೆ ಇವರ ಸಂಪರ್ಕಿಸಲೆ ಅಕ್ಕು.

ದಾರಿ ದೀಪ, ಕೊಡಗಿನ ಗೌರಮ್ಮ ಪ್ರಶಸ್ತಿ ಪಡದ ಕತೆ

೨೦೧೨ ರ ವಿಷು ವಿಶೇಷ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡದ ಕತೆ ಕಾಮನಬಿಲ್ಲು ಕಂಡತ್ತು

ಪುಸ್ತಕದ ವಿವರ:-

Size: 1/8th Demmy
Pages 160 + iv
Price 130/=

ಸಂಪರ್ಕಿಸಲೆ ಬೇಕಾದ ವಿಳಾಸ:-

Prasanna V.Chekkemane
W/o Venakatakrishna C.H
Chekkemane Neriya
Post DHARMATHADKA 671324

Cell: 09656757944,  09497840607

~~~***~~

                                                                                  
ಮನದ ಮಲ್ಲಿಗೆ-ಪ್ರಸನ್ನಾ ವಿ. ಚೆಕ್ಕೆಮನೆ                  ಮನದ ಮಲ್ಲಿಗೆ, ಕಥಾ ಸಂಕಲನ, ಪ್ರಸನ್ನಾ ವಿ. ಚೆಕ್ಕೆಮನೆ

 

                                                 
ಮನದ ಮಲ್ಲಿಗೆ ಬಿಡುಗಡೆ ಕಾರ್ಯಕ್ರಮ                     ಶ್ರೀ ಶ್ರೀ ರಾಘವೇಶ್ವರ ಮಹಾಸ್ವಾಮಿಗಳವರಿಂದ ಪುಸ್ತಕ                                                                                                                                                                             ಬಿಡುಗಡೆ,    ಮಂತ್ರಾಕ್ಷತೆ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಮನದ ಮಲ್ಲಿಗೆ (ಕಥಾ ಸಂಕಲನ- ಪ್ರಸನ್ನಾ ವಿ. ಚೆಕ್ಕೆಮನೆ)

  1. ಪ್ರಸನ್ನನ ಪುಸ್ತಕ ಮನದ ಮಲ್ಲಿಗೆ ಪ್ರಕಟಗೊಂಡು ನಮ್ಮ ಊರಿಲ್ಲಿಯೇ ಬಿಡುಗಡೆಗೊಂಡು ಓದುಗರ ಕೈ ತಲಪಿದ್ದು ಸಂತಸ ತಂತು.ಇದು ಪ್ರಸನ್ನನ ಮನದಮಗಳು ಹೇಳಿ ವಿಶ್ಲೇಷಣೆ ಕೊಡ್ತೆ. ಏಕೆ ಕೇಳಿರೆ, ಒಂದು ಸಾಹಿತ್ಯ ರೂಪುಗೊಡು ಹೀಂಗೆ ಸಂಕಲನ ರೂಪಕ್ಕೆ ಬರೆಕಾರೆ ಅದರ ಕಷ್ಟ ಮಕ್ಕಳ ಜನ್ಮನೀಡಿದಷ್ಟೇ ಕಷ್ಟ.ಹಾಂಗೇ ಅದು ಸಾಹಿತ್ಯಲೋಕಲ್ಲಿ ಬೆಳಗೀರೆ ಮಕ್ಕೊ ಬೆಳಗಿದ ಆನಂದ. ಈ ಸಂತೋಷ ಪ್ರಸನ್ನಂಗೆ ಇನ್ನೂ ಬರಲಿ ಹೇಳಿ ಹಾರೈಕೆ.

    1. ನಿಂಗಳ ತುಂಬು ಮನದ ಮಾತುಗೊ ಎನಗೆ ಸದಾ ಸ್ಪೂರ್ತಿ ದೀಪ ವಿಜಯಕ್ಕಾ.. ತುಂಬಾ ಕೊಶಿಯಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×