- ಉದ್ದಿನ ಗೊಜ್ಜಿ - December 4, 2013
- ಕೆಸವಿನೆಲೆ ಚಟ್ನಿ - November 23, 2013
- ಕಣ್ಣಿಲಿ ಕುರು ಅಪ್ಪದಕ್ಕೆಮದ್ದು - November 11, 2013
ಇದೆಂತರಪ್ಪಾಳಿ ಗ್ರೇಶಿದಿರೋ…. ಮಾತ್ರೆ ಹೇಳಿರೆ ಕೊಡೆಯಾಲಲ್ಲಿ ಸಿಕ್ಕುತ್ತಾಂಗಿಪ್ಪ ಮಾತ್ರೆ ಅಲ್ಲ. ಕಾಂಬಲೆ ಹಾಂಗೆ ಇಪ್ಪ ಕಾರಣ, ಮತ್ತೆ ಮದ್ದುದೇ ಆಗಿಪ್ಪ ಕಾರಣ ಅಜ್ಜಿ ಹಾಂಗೆ ಹೇಳೊದು. ಕಾರ್ಲೆ ಬತ್ತದಕ್ಕೆ, ಹುಳಿತೇಗಿಂಗೆ, ಹೊಟ್ಟೆ ಸರಿ ಇಲ್ಲದ್ದಾಂಗಪ್ಪದಕ್ಕೆ ಎಲ್ಲ ಇದು ಲಾಯ್ಕಾವುತ್ತು. ಗಳಿಗೆಲಿ ಗುಣ ಕಾಣ್ತು.
ಒಂದು ಕಾಲು ಕಿಲ ಅಪ್ಪಷ್ಟು ಶುಂಟಿಯ ಒಕ್ಕಿ, ತೊಳದು ಸಣ್ಣ ಸಣ್ಣಕ್ಕೆ, ತೆಳೂವಿಂಗೆ ಕೊರವದು. ಅದಕ್ಕೆ ಒಂದು ದೊಡ್ಡ ನಿಂಬೆಹುಳಿ ಪೂರ್ತಿ ಹಿಂಡುದು. ಮತ್ತೆ ಒಂದು ಮುಷ್ಟಿಂದ ಒಂದ್ರಜ್ಜ ಕಮ್ಮಿ ಉಪ್ಪು ಹಾಕಿ, ಲಾಯ್ಕ ಬೆರುಸೆಕ್ಕು. ಅದರ ಬೆಶಿಲಿಲಿ ಒಣಗುಸಿರೆ ಶುಂಟಿ ಮಾತ್ರೆ ತಯಾರಾತು! ಪೇಟೆಲೆಲ್ಲ ಇದರ ಸಣ್ಣ ಕರಡಿಗೆಲಿ ಹಾಕಿ ಮಾರ್ತವಡಪ್ಪ. ಎಂತದಾ… ಅಂತೂ ಆರೋಗ್ಯಕ್ಕೆ ಒಳ್ಳೆದು. ಅಜ್ಜಿಯ ಬೇಗಿಲಿ ಏವಾಗಳೂ ಇಕ್ಕು. ಹೋದಲ್ಲಿ ಎಂತಾರು ಆರೋಗ್ಯ ವೆತ್ಯಾಸ ಆದರೆ ಬೇರೆ ಮದ್ದು ಮಾಡ್ಯೊಂಡು ಕೂಪದಾರು. ಪಕ್ಕನೆ ಇದರ ಒಂದೆರಡು ತಿಂದರೆ ಎಲ್ಲ ಸರೀ ಆವುತ್ತು.
salted ginger pieces can dried easily by placing them on v guard stabiliser used for fridge/tv.Two to three days of drying is necessary.
ಬಂಡಾಡಿ ಅಜ್ಜಿಯ ಮದ್ದುಗೊ ಲಾಯ್ಕಿದ್ದು 🙂 ಎನ್ನ ಅಜ್ಜಿಯುದೇ ಸುಮಾರೆಲ್ಲ ಮದ್ದು ಹೇಳಿಗೊಂಡಿತ್ತವು. ಆದರೆ ಈಗಾಣವಕ್ಕೆ ಅದಕ್ಕೆಲ್ಲಾ ಎಲ್ಲಿ ಪುರ್ಸೊತ್ತು? ಎಲ್ಲವೂ ಗಡೀಬಿಡಿಲಿ ಆಯಕ್ಕು !! ಶೀತ ಜ್ವರ ಬಂದರೆ ಸುಮ್ಮನಿದ್ದರೆ ಒಂದುವಾರ ಇದ್ದೇ ಹೋಪದು, ಮದ್ದು ತೆಕ್ಕೊಂಡ್ರೆ ಏಳೇ ದಿನಲ್ಲಿ ಮಾಯ!! ಇದರ ಅರ್ಥ ಮಾಡಿಗೊಂಬ ತಾಳ್ಮೆ ನವಗಿಲ್ಲೆ 🙁 ಅಂತೇ ಇಲ್ಲದ್ದೆ ಕಂಡ ಕಂಡ ಮಾತ್ರೆ ನುಂಗುದು, ಕೆಲವು ಜನಕ್ಕಂತೂ ಇಂಜೆಕ್ಷನ್ ಕೊಟ್ಟರೆ, ಗ್ಲುಕೋಸು ಹಾಕಿರೆ ಮಾಂತ್ರ ರೋಗ ಗುಣ ಅಪ್ಪದು ಹೇಳಿ ಭ್ರಾಂತು!! ಅದರ ಬದಲು ಹೆಚ್ಚಿನ ಅಸೌಖ್ಯಂಗೊಕ್ಕೆ ಹೀಂಗಿಪ್ಪ ಅಜ್ಜಿ ಮದ್ದು ಮಾಡಿರೆ ತುಂಬಾ ಒಳ್ಳೆದು.
Enage aa maathre elli sikkugu? eke helidare e4nna ajji sattu 40 varsha aatu.
ಆಯುರ್ವೇದ ಮೆಡಿಕಲಿಲಿ ಸಿಕ್ಕುತ್ತಡ ಒಪ್ಪಣ್ಣ ಹೇಳಿದ.
ಅಜ್ಜೀ ರಜ್ಜ ಮಾತ್ರೆ ಪಾರ್ಸೆಲ್ ಮಾಡಿರೆ ಒಳ್ಳೇದಿತ್ತು…
ಅಜ್ಜಿ ಎಂತ ಈ ಹೊಡೆಂಗೆ ಸುದ್ದಿಯೆ ಇಲ್ಲೆ.. ಶುಂಠಿ ಮಾತ್ರೆ ಕಳ್ಸುತ್ತಾ ಹೇಳಿ ಕಾದೋಂಡು ಇದ್ದೆ..
ಏ°….ಅದೆಂತರ….ಎನಗೆ ಪುಳ್ಳಿ ಮನ್ನೆ ಮಕೆ ಜಾತ್ರೆಂದ ತಂದುಕೊಟ್ಟ ಪರುಸು ಮಾಂತ್ರ ಗೊಂತಿಪ್ಪದು… ಅದರಲ್ಲಿ ಹಾಕಿರೆ ಬೈಗು ಪುಳ್ಯಕ್ಕೊ…ಅದಕ್ಕೇ ನಾರಾಯಣ ವೈದ್ಯರ ಚೂರ್ಣದ ಕರಡಿಗೆಲಿ ಹಾಕಿ ಮಡಗಿದ್ದೆ. ಅದರಿಂದ ಕೊಡ್ತೆ ಆತೊ…