- ಉದ್ದಿನ ಗೊಜ್ಜಿ - December 4, 2013
- ಕೆಸವಿನೆಲೆ ಚಟ್ನಿ - November 23, 2013
- ಕಣ್ಣಿಲಿ ಕುರು ಅಪ್ಪದಕ್ಕೆಮದ್ದು - November 11, 2013
ಎಲ್ಲಿಗಾದರೂ ನೆಂಟ್ರು ಕಟ್ಟುಲೋ ಮಣ್ಣ ಇದ್ದರೆ ಆ ದಿನ ಕಾಪಿಗೆ ಉಂಡೆ ಮಾಡುದೂಳಿಯೇ ಲೆಕ್ಕ. ಮಾಡ್ಳೆ ಸುಲಾಬ ಇದಾ. ಆದರೆ ಹಿಟ್ಟು ಕಾಸುದು ಒಂದು ಮಾಂತ್ರ ರೆಜಾ ಬಂಙದ ಕೆಲಸ ಅಜ್ಜಿಗೆ. ಹಿಟ್ಟಿನ ಮೊಗಚ್ಚಲೆ ಎಡಿತ್ತಿಲ್ಲೆ, ಈ ಕೈ ಬೇನೆಲಿ. ಹಾಂಗೆ ಒಪ್ಪಣ್ಣನೋ, ಅಜ್ಜಕಾನ ರಾಮನೋ ಬಂದಿದ್ದರೆ ಅವರತ್ತರೆ ಒಂದರಿ ಕಾಸುಲೆ ಹೇಳುದು. ಮನೆಲಿ ಅಮ್ಮನತ್ತರೆ ಪರಂಚಿರೂ, ಅಜ್ಜಿ ಹೇಳ್ಯಪ್ಪಗ ಮಾಡ್ತಿಲ್ಲೇಳಿ ಹೇಳ್ತವಿಲ್ಲೆಪ್ಪ.
ಹಾಂಗೆ ಅಂಬೆರ್ಪಿಂಗೆ ಹೆರಡ್ಳೆ ಎಲ್ಲ ಇಪ್ಪಾಗ ಹೆಚ್ಚಿನ ಕಡೆಲಿ ಕಾಪಿಗೆ ಉಂಡೆ ಮಾಡುದು ಅಲ್ಲದೋ. ಕಾಸಲೆ ಬಂಙ ಅಪ್ಪ ಕಾರಣ ಅಜ್ಜಿದು ಇನ್ನೊಂದು ತಿಂಡಿ ಇದ್ದು. ಎಂತರ ಹೇಳಿರೆ, ನೀರ್ಪುಂಡಿ ಅತವಾ ನೀರುಂಡೆ (ನೀರು ಉಂಡೆ). ನಿಂಗೊಗೆ ತಿಂದು ಗೊಂತಿದ್ದೋ.. ಈಗ ಇದರ ಮಾಡೊದು ಕಮ್ಮಿ ಆಯಿದು ಮಾಂತ್ರ.
ಮಾಡುದು ಹೇಂಗೇಳಿರೆ, ಅಕ್ಕಿಯ ಗಟ್ಟಿಗೆ ಕಡೆಯೆಕ್ಕು. ಉಂಡಗೆ ಕಡದಾಂಗಲ್ಲ, ಅದರ್ಲಿ ಕಾಸುಲಿದ್ದನ್ನೆ. ಇದರಲ್ಲಿ ಇಲ್ಲೆ. ಬೆಶಿನೀರ ಕೊಟ್ಟಿಗೆಗೆಲ್ಲ ಕಡೆತ್ತಲ್ಲದೋ. ಹಾಂಗೆ ಕಡದು ಮಡುಗೆಕ್ಕು. ಉದಿಯಪ್ಪಗ ಒಂದು ಪಾತ್ರಲ್ಲಿ ಒಂದ್ರಜ ನೀರು ಕೊದಿವಲೆ ಮಡುಗೆಕ್ಕು (ಉಂಡೆ ಮುಳುಗುತ್ತಷ್ಟು..ಅದರಿಂದ ರಜ್ಜ ಜಾಸ್ತಿಯೇ ಮಡಗಲಕ್ಕು). ಕೊದಿವಲೆ ಸುರು ಅಪ್ಪಾಗ ಈ ಹಿಟ್ಟಿನ ಉಂಡೆ ಮಾಡಿ ಮಾಡಿ ಅದಕ್ಕೆ ಹಾಕೆಕ್ಕು. ಸರೀ ಕೊದಿಯೆಕ್ಕು ಅದು. ರಜ ಬೇವನ್ನಾರ ಸೌಟು ಹಾಕಲಾಗ ಆತೊ. ಒಡೆತ್ತು ಉಂಡೆ. ರಜ ಹೊತ್ತಪ್ಪಗ ಸೌಟು ಹಾಕಿ ತೊಳಸಿತ್ತು ಒಂದರಿ. ಸರೀ ಬೆಂದಪ್ಪಗ ಇಳುಗಿತ್ತು. ಅದರ ಮತ್ತೆ ಆ ತೆಳಿಯ ಒಟ್ಟಿಂಗೇ ಸೇರುಸಿ ತಿಂಬದು. ಭಾರೀ ಲಾಯ್ಕಾವುತ್ತು. ಮೇಲಾರವೊ ಮಣ್ಣ ಇದ್ದರೆ ಅದರ ಎಸರು ಸೇರುಸಿ ತಿಂಬಲೂ ಲಾಯ್ಕಾವುತ್ತು. ಇಲ್ಲದ್ರೆ, ಕಾರ ಬೇಕಾರೆ ಉಪ್ಪಿನಕಾಯಿ ಎಸರು ಹಾಯ್ಕೊಂಡು ತಿಂಬಲಕ್ಕು. ಮೊಸರು ಹಾಕಿಯೂ ತಿಂಬಲಕ್ಕು.
ಆನು ಮಾಡದ್ದೆ ಸುಮಾರು ದಿನ ಆತು ಮಾಂತ್ರ. ಓ ಮೊನ್ನೆ ಕೈರಂಗಳ ಅಕ್ಕನತ್ತರೆ ಕಾಪಿಗೆಂತರಾಳಿ ಕೇಳಿಯಪ್ಪಗ ನೀರ್ಪುಂಡಿ ಹೇಳಿತ್ತು. ಅಂಬಗ ನೆಂಪಾತಿದ. ಬೈಲಿನವಕ್ಕೆಲ್ಲ ಇದರ ಬಗ್ಗೆ ಹೇಳೆಕ್ಕೂಳಿ ಕಂಡತ್ತು. ಹಾಂಗೆ ಹೇಳ್ತಾ ಇದ್ದೆ ಇದ.
ಎನಗೆ ನಾಕು ದಿನಂದ ವಿಪರೀತ ಬೆನ್ನುಬೇನೆ. ಕಡಂಜದೆಣ್ಣೆಲಿ ಕಮ್ಮಿ ಆವುತ್ತಿಲ್ಲೆಯೋಳಿ.. ಕಿದೂರು ಮಾಣಿಯತ್ತರೆ ಕೇಳೆಕೊ ಕಡೆಗೆ… ಉಮ್ಮ ಎಂತದೊ ಗೊಂತಿಲ್ಲೆ..
ತುಂಬ ಹೊತ್ತು ಕೂಪಲೆ ಬಂಙ ಆವುತ್ತು. ನಾಳ್ತು ಕಾಂಬ ಆತೊ…
ನೀರ್ಪುಂಡಿ ಮಾಡಿ ನೋಡಿ, ತಿಂದು ಹೇಳಿಕ್ಕಿ. ರುಚಿ ನೋಡ್ಳೆ ಅಜ್ಜಿಗೂ ತಂದುಕೊಡಿ ಆತೊ….
ಅಜ್ಜಿ ಇತ್ತ ಹೊಡೆ ಸುದ್ದಿಯೆ ಇಲ್ಲೆ.. ಕೈಬೇನೆ ಜಾಸ್ತಿ ಆತೋ ಹೇಂಗೆ.. ಯೋಚಿಸಿಯೊಂಡಿಪ್ಪಗ ಕೆದೂರು ಡಾಕ್ಟ್ರು ಹೇಳಿದವು ಆನು ಮದ್ದು ಕೊಟ್ಟಿದೆ ಕಮ್ಮಿ ಆಯಿದೀಗ ಹೇಳಿ.. ಮತ್ತೆ ಗೊಂತಾತು ಅಜ್ಜಿಗೆ ಏಕೆ ಪುರುಸೋತ್ತಿಲ್ಲೆ ಹೇಳಿ.. “ಕೈರಂಗಳ ಕೂಸಿನ ಮದುವೆ ಅಲ್ದೊ ಹಾಂಗೆ ಬ್ಯುಸಿ ಅಡಾ”.. ಆಚೆಕರೆ ಮಾಣಿ ಮೊನ್ನೆ ಬೆಂಗ್ಳೂರಿಂಗೆ ಹೆರಟಪ್ಪಗ ಅಜ್ಜಿ ಸಿಕ್ಕಿ ಹೇಳಿದ ಸುದ್ದಿ ಬಂತು ಪುಟ್ಟಕ್ಕಂದ.. ಅಪ್ಪೋ ಹೇಂಗೆ???
ಅಪ್ಪು. ರೆಜ ಗಡಿಬಿಡಿ ಇದಾ. ಜವುಳಿ ತೆಗವದು ಅದು ಇದು ಹೇಳಿಯೊಂಡು ಕೆಲಸಂಗೊ ಇರ್ತನ್ನೆ ಸುಮಾರು… ಕೈಬೇನೆ ಕಮ್ಮಿ ಇದ್ದಪ್ಪಾ..
ಅಜ್ಜಿ, ನಿ೦ಗೊ ಇನ್ನು ಏವಗ ನೀರು೦ಡೆ ಮಾಡ್ತೀ…? ದಿನ ಮದಲೇ ಒಪ್ಪಣ್ಣ೦ಗೆ ತಿಳ್ಶಿರೆ ಎ೦ಗೊಗೆಲ್ಲ ಸುದ್ದಿ ತಿಳುಶುಗದಾ!ನಿ೦ಗಳ ಸುದ್ದಿ ಓದಿ……..ಎಕ್ಕ್………..ಕ್ಕ್…………..ಎಕ್ಕ್……………… ಏಕ್ಕ್…….ಏಕ್ಕ್……….ಎ………ಎಕ್ಕ್…………ಕ್ಕ್……. ……ಕ್ಕ್……..ಅ…….ಡ್…….ಅ…….ಎಕ್ಕಸಕ್ಕ ಎಕ್ಕುಡು…ಬತ್ತಾ……ಇದ್ದು……ಇದಕ್ಕೆ…ಎ೦ತ ಮಾಡಿರೂ ನಿಲ್ಲುತ್ತಿಲ್ಲೆ! ಇದಕ್ಕೆ ಎ೦ತ ಮದ್ದು ಹೇದು ಕೇದೂರು ಡಾಕ್ಟ್ರರಣ್ಣನ ಕೇಳೆಕಾತೋ ಹೇದು ತೋರ್ತು!ಅಲ್ಲ ಆಜ್ಜಿ, ಮಾಡಿ ಎಲ್ಲಾ ತಿ೦ದು ಮುಗುಶಿ, ಪಾತ್ರ ತೊಳದು ಕೌ೦ಚಿ ಮಡಗಿಕ್ಕಿ, ಸುದ್ದಿ ಹೇಳಿದ್ದೀರನ್ನೇ! ಪುಳ್ಯಕ್ಕೊ ಕೊದಿಪ್ಪಟಗಳಾ೦ಗೆ ಬಾಯಿಲಿ ನೀರು ಹರುಶ್ಯೊ೦ಡಿರಲಿ ಹೇದು ನಿ೦ಗಳ ಅ೦ದಾಜೆ ಹೇಳಿ ಕಾಣ್ತು! ಈ ಪುಳ್ಯಕ್ಕಳ ಅದು ಹೇ೦ಗೆ ಮರದಿಪ್ಪಿ ಹೇಳಿ. ನಿ೦ಗೊ ಹಾ೦ಗೆ ಮಾಡ್ತವಲ್ಲ ಹೇಳ್ವದು ನಿಗ೦ಟು. ಇರಲಿ ಬಿಡಿ ಪ್ರಾಯ ಅಪ್ಪಗ ಮರದು ಹೋಪದು ಸಹಜ;ಇನ್ನಾಣ ಸರ್ತಿ ಅಕ್ಕಿ ನೀರಿ೦ಗೆ ಹಾಕುವನ್ನ ಮದಲೇ ಹೀಳಿಕೆ ಮಾಡಿಕ್ಕಿ ಆಗದ?
ಎನ್ನಬ್ಬೆ- ಅಜ್ಜಿ ಎಲ್ಲ ಇಪ್ಪಗ, ಇದರ ಮಾಡಿ,ಸಣ್ಣಾಗಿಪ್ಪಗ ಸಜ್ಜಿಲೆ ತಿನ್ಸಿದ ನೆ೦ಪಾತು; ಸುದ್ದಿ ಓದಿದ ಕೊಶಿಲಿ ನಿ೦ಗಳ ಸುದ್ದಿ೦ಗೆ ಹೀ೦ಗೊ೦ದು ಒಪ್ಪ.
ನಮಸ್ತೇ…ಹರೇ ರಾಮ.
ದೊಡ್ದರ್ಧ ಎನಗೆ ಸಣ್ಣರ್ಧ?????????
ಎಂಗೊಗೆ ಸೇಂಪುಲು ನೋಡ್ಲೆ ಹೇಳಿ ಒಪ್ಪಣ್ಣನ ಹತ್ರ ಕೊಟ್ಟು ..ಎಲ್ಲರಿಂಗು ಹಂಚು ಹೇಳಿರೆ ಎಂಗೊಗೆ ತಿಂಡಿ ಸಿಕ್ಕ. ಅವನೇ ಎಲ್ಲ ತಿಂದು ಮುಗುಶಿರೆ ಕಷ್ಟ.
ಏ ಬಾವ..
ಇದಾ, ಮೊದಲೇ ಬಂಡಾಡಿ ಅಜ್ಜಿ ಎನ್ನ ಕೈಲಿ ಕೊಡ್ಳೆ ಹಿಂದೆಮುಂದೆ ನೋಡ್ತು.
ಇನ್ನು ನೀನು ಹೀಂಗೆಲ್ಲ ಹೇಳಿ ಕೆಮಿಗೆ ಗಾಳಿ ಹಾಕಿರೆ ಕೊಡ್ಳೇ ಕೊಡ.!
ನೀನು ಬಾರಿ ಹಂಚುತ್ತೆ ಆಯಿಕ್ಕು – ಮೊನ್ನೆ ಕಲ್ಮಡ್ಕ ಅತ್ತೆ ಕೊಟ್ಟ ನೇರಳೆಹಣ್ಣಿನ ನೀನೊಬ್ಬನೇ ತಿಂದು ಮುಗುಶಿದ್ದು ಬೈಲಿನವಕ್ಕೆ ಮರದ್ದಿಲ್ಲೆ ಆತಾ..?!
ಏ ಭಾವ
ಸನತನಣ್ಣ ನೇರಳೆಹಣ್ಣಿನ ಸುದ್ದಿಯೆ ಹೇಳಿದ್ದನಿಲ್ಲೆ ಎನಗೆ..
ಕೊಟ್ಟ ಎರಡು-ಮೂರು ನೇರಳೆ ಹಣ್ಣಿನ ಎಂತರಪ್ಪ ಹಂಚುದು.
ಒಂದೇ ಇದ್ದರು ಹಂಚಿ ತಿಂದರೆ ಸುಖವೇ ಬೇರೆ ಹೇಳಿ ಎಡಪ್ಪಾಡಿ ಅಣ್ಣ ಹೇಳುಗು..
ಎಂತಾರು ತಿಂಬದು ಇಪ್ಪಾಗ ಯಾರಿಂಗೂ ಕೊಡದ್ದೇ ಒಬ್ಬನೇ ತಿಂದರೆ ಇನ್ನೂ ಸುಖ ಹೇಳಿ ಎನ್ನ ಭಾವ ಒಬ್ಬ ಹೇಳುಗು.
ಎಂತ ಪುಳ್ಯಕ್ಕೊ ಎಲ್ಲ ಅಜ್ಜಿ ಜಾಲಿಂಗೆ ಬಂದು ಜಗಳ ಮಾಡುದೋ… ಏ°… ಅದಾ ಎಂತಾರು ತಿಂಬಗ ಎಲ್ಲೊರಿಂಗೂ ಕೊಟ್ಟು ತಿನ್ನೇಕೂಳಿ ಹೇಳಿದ್ದಲ್ಲದೋ… ಎಂತ ಪುಳ್ಳೀ…
ಆತಾತು.. ಕೊಡುವೊ ಆತೊ.. ಏ ಇಲ್ಲೆಪ್ಪ… ಅವ° ಒಪ್ಪಣ್ಣ ಅಲ್ಲದೋ… ಕೊಟ್ಟದರ ಒಂದರನ್ನಾದರೂ ಎತ್ತುಸುಗಪ್ಪ…
ಒಪ್ಪಣ್ಣ ಒಳ್ಳೆಯವನೆ ಅಪ್ಪ.. ಮೊನ್ನೆ ಕಲ್ಮಡ್ಕ ಅನಂತ ಗಣೇಶ ಬಾವಂಗೆ ಕಳುಸಿದ್ದ ಕಟ್ಟಿನ ಒಪ್ಪಣ್ಣ ಹಾಂಗೆ ತಂದು ಕೊಟ್ಟಿದನಡ
ಅಜ್ಜೀ, ನೀರು೦ಡೆ ಮಾಡುದರ ಓದಿಯಪ್ಪಗ ಬಾಯಿಲಿ ನೀರು ಬ೦ತು.
ಒ೦ದೆರಡು ಉ೦ಡೆ ಸೇ೦ಪುಲು ನೋಡ್ಲೆ ಇತ್ಲಾಗಿ ಕಳುಸಿರೆ ಬೆನ್ನು ಬೇನೆಗೆ ಇಪ್ಪ ಮದ್ದು ಹೇಳುವ°…
ಮದ್ದು ಹೇಳದ್ರೂ ತೊಂದರಿಲ್ಲೆಪ್ಪ… ನೀರುಂಡೆ ಮಾಡಿಕೊಡುವೊ..
ಅಜ್ಜಿಗೆ ಕೈಬೇನೆ, ಬೆನ್ನು ಬೇನೆ ಕಮ್ಮಿಯೆ ಅವುತ್ತಿಲ್ಲೆ ಹೇಳಿ ಕಾಣುತ್ತು.. ಶೇಡಿಗುಮ್ಮೆ ಇಂದಿರತ್ತೆಯತ್ರ ಹೇಳಿ ಮಜಲ್ಕರೆಗೆ ಕರ್ಕೊಂಡು ಹೋಪ ವ್ಯವಸ್ಥೆ ಮಾಡೆಕ್ಕೋ ಕಾಣ್ತು..
ಅಲ್ಲಿಗೆ ಹೋಗಿ ಆಯಿದಪ್ಪಾ… ಪ್ರಾಯ ಆದ ಮತ್ತೆ ಹೀಂಗೇ ಅಲ್ಲದೋ.. ಒಂದಲ್ಲದ್ದರೆ ಒಂದು ಮುಗಿವಲಿಲ್ಲೆ… ಎಂತರ ಮಾಡುದು…