Oppanna.com

ಜೆಂಬ್ರದ ಗೌಜಿ – ಎಬಿ ಭಾವ

ಬರದೋರು :   ಎಬಿ ಭಾವ    on   02/06/2019    3 ಒಪ್ಪಂಗೊ

ಜೆನವರಿಂದ ಮಳೆಗಾಲ ಸುರವಪ್ಪೊರೇಗೆ ನಮ್ಮಲ್ಲಿ ಜೆಂಬ್ರದ ಗೌಜಿಯೋ ಗೌಜಿ. ಮನೆಲಿ ಒಬ್ಬಂಗೆ ಜೋಡು ಪೀಂಕುಸಲೂ ಎಡೆ ಇಲ್ಲದ್ದಟ್ಟು ಜೆಂಬ್ರಂಗೊ 😅. ಮುಕ್ಕೋಟಿ ದೇವರ ಒಂದೊಂದು ಹೆಸರಿಲ್ಲಿ ಅರ್ಚಿಸುವ ಒಂದೊಂದು ಪೂಜಗೊ, ಕೂಸೋ ಮಾಣಿಯೋ ಸಿಕ್ಕಿದವರಲ್ಲಿ ಬದ್ಧ, ನಾಂದಿ, ಮದುವೆ ಸಟ್ಟುಮುಡಿಗೊ, ದಿಂಡು-ಕೋಡಿ, ಪುಣ್ಯಾಯ ಬಾರ್ಸಂಗೊ, ಸ್ವರ್ಗಸ್ಥರಾದವರಲ್ಲಿ ಶುದ್ಧ, ಬೊಜ್ಜ, ಷಪಿಂಡಿ ಪತಂಗ, ಮಾಸಿಕ, ಮೂರೂವರೆ ಮಾಸಿಕ-ಅರೆಮಾಸಿಕ, ವರ್ಷಾಂತ, ತಿಥಿ. ಅದರೆಡೆಲಿ ಮಕ್ಕೊಗೆ ತ್ರೈಮಾಸಿಕ ಅರೆ ವಾರ್ಷಿಕ, ವಾರ್ಷಿಕ ಪರೀಕ್ಷೆಗೊ 🤷🏻‍♂.
ನಾಕು ಅಡಕ್ಕೆ ಮರ ಇದ್ದವಂಗೆ ತೋಟಕ್ಕೆ ನೀರಿಪ್ಪನ್ನಾರ ಕರೆಂಟಿಪ್ಪಗ ಮೋಟ್ರು ಸಿಚ್ಚಾಕುತ್ತ ಕೆಲಸವೂ. ಒಬ್ಬಂಗೂ ಪುರ್ಸೋತ್ತಿಲ್ಲೆ. ಕೆಲವು ವಾರಿ ದಿನಕ್ಕೆ ಮೂರೋ ನಾಕೋ ಜೆಂಬ್ರಂಗೊ. ಕಾಪಿಗೆ, ಊಟಕ್ಕೆ, ಚಾಯಕ್ಕೆ ಪುನಃ ಇರ್ಳು ಊಟಕ್ಕೆ ಹೇದು ಹೋದರೂ ಮುಗಿತ್ತಿಲ್ಲೆ. ಹೋಗದ್ರೆ ಏಕೆ ಬೈಂದಿಲ್ಲೆ, ಕಂಡತ್ತಿಲ್ಲೆ ಹೇಳಿ ಚೋದ್ಯಂಗೊ. ಹೋದವನ ಬಿಟ್ಟು ಹೋಗದ್ದವರ ಅಂಬಗ ಅದು ಬೈಂದಿಲ್ಯೋ, ಅವ ಬೈಂದಾಯಿಲ್ಯೋ ಹೇಳಿ ವಿಚಾರಣೆಯೂ. ಒಂದೊಂದು ಜೆಂಬ್ರಲ್ಲಿ ಒಂದೊಂದು ಗೌಜಿ. ಉದ್ಯಪ್ಪ ಕಾಪಿಗೆ ಸೇಮಗೆ, ಮೂಡೆ ಕೊಟ್ಟಿಗೆ ರಸಾಯನ, ಅಟ್ಟಿ ದೋಸೆ, ಊಟಕ್ಕೆ ಬಗೆ ಬಗೆ ಭಕ್ಷ್ಯಂಗೊ. ಕುಜುವೆ ಬಿಡ್ಲೆ ಸುರಾದ ಲಾಗಾಯ್ತು ಹಲಸಿನಣ್ಣು ಕೊಳದು ಗಂಡಿಗೆ ಇಡ್ಕುವಲ್ಯೊರೇಗೆ ಅದರದ್ದೊಂದು ಭಕ್ಷ್ಯ ಬಾಳೆ ಕರೇಲಿ ಖಾಯಾಂ. ಮಾಯ್ನಮರ ಹೂಗೋಪಲ್ಲಿಂದ ಹಿಡುದು ಹಣ್ಣು ತಿಂಬೋರಿಲ್ಲದ್ದೆ ಕೌಳಿ ಹಾರ್ಲೆ ಸುರುವಪ್ಪನ್ನಾರ ಅದಕ್ಕೂ ಬಾಳೆಲಿ ಒಂದು ಜಾಗೆ ಮೀಸಲು.
ಮಾಯ್ನಣ್ಣು ಸಾಸಮೆ‌ ಮಾಡಿದರೆ ಮತ್ತೆ ಒಲಿಂಪಿಕ್ಸಿಲ್ಲಿ ಕೂಡಾ ಇಲ್ಲದ್ದಟ್ಟು ಸ್ಪರ್ಧೆಲಿ ಕೊರಂಟು ಚೀಪುತ್ತದೋ, ಜಗಿತ್ತದೋ ಮಾಡ್ತ ಜನಂಗೊ. ಈ ಸಾಸಮೆ ಇದ್ದ ಜೆಂಬ್ರಲ್ಲಿ ಬಾಳೆ ಎಳವಲೆ ಸಿಕ್ಕಿದವನ ಬಂಙ ಹೇದರೆ ಅಟ್ಟಿಟ್ಟಲ್ಲಾತೋ… ಮಾರ್ಗಕ್ಕೆ ಡಾಮಾರು ಹಾಕುಲೆ ಹಾಕಿದ ಜಲ್ಲಿ ರಾಶಿಯಾಂಗೆ ಕೊರಂಟುಗೊ ಬಾಳೆಲಿ 😂. ಬಾಳೆ ಎಳವಗ ಒಂದು ಕೊರಂಟು ಆ ಹೊಡೆ,‌ಇನ್ನೊಂದು ಈ ಹೊಡೆ ಹೇದು ಅತ್ತಿತ್ತೆ ಹೋಗಿ ಬಾಳೆ ಎಳೆತ್ತವನ ಮಳೆಗಾಲ ಸುರೂವಿಲ್ಲಿ ಡೆಂಜಿ ಹುಡ್ಕುತ್ತವರಾಂಗೆ ಕಾಣ್ತು.
ಆರೆಂತದೇ ಹೇಳಲಿ, “ಬ್ರಾಹಣ ಭೋಜನ ಪ್ರಿಯ” ಹೇಳಲಿ, “ಬಹು ಜನ ಪ್ರಿಯ” ಹೇಳಲಿ. ನಮ್ಮಲ್ಯಾಣ ಜೆಂಬ್ರದಟ್ಟು ಗೌಜಿ‌, ಸಂಭ್ರಮ ಬೇರೆಲ್ಯೂ ಇಲ್ಲೆ. ಈ ಹಾಳು ಮೊಬೈಲಿಲ್ಲಿ ಗುರುಟುದು ಬಿಟ್ಟು ನಾಕು ಅತ್ತಾಳ/ಮೇಲಾರಕ್ಕೆ ಕೊರವದಕ್ಕೆ, ಜೆಂಬ್ರಕ್ಕೆ ಹೋಗಿ ಬಳ್ಸುತ್ತದು ಉಣ್ತದಕ್ಕೆ ಎಲ್ಲ ಸೇರಿ ಗೌಜಿ ಮಾಡಿ. ಜೀವನಲ್ಲಿ ಅದೊಂದು ಆಸ್ತಿ. ಕಳಕ್ಕೊಳೆಡಿ… 😊

 

3 thoughts on “ಜೆಂಬ್ರದ ಗೌಜಿ – ಎಬಿ ಭಾವ

  1. ಜಂಬ್ರದ ಗೌಜಿ ಜೋರಿದ್ದು.
    ಈ ಹಾಳು ಮೊಬೈಲಿಲ್ಲಿ ಗುರುಟುದು ಬಿಟ್ಟು ನಾಕು ಅತ್ತಾಳ/ಮೇಲಾರಕ್ಕೆ ಕೊರವದಕ್ಕೆ, ಜೆಂಬ್ರಕ್ಕೆ ಹೋಗಿ ಬಳ್ಸುತ್ತದು ಉಣ್ತದಕ್ಕೆ ಎಲ್ಲ ಸೇರಿ ಗೌಜಿ ಮಾಡಿ. ಜೀವನಲ್ಲಿ ಅದೊಂದು ಆಸ್ತಿ. ಕಳಕ್ಕೊಳೆಡಿ… ಸಕಾಲಿಕ ಸಲಹೆ

  2. ಊರು ಬಿಟ್ಟು ಬಂದಮತ್ತೆ ಇದೆಲ್ಲ ಅಪರೂಪ,ಊರಿಲಿಪ್ಪಗ ಮಾಡಿದ್ದೆಲ್ಲ ನೆಂಪಾತು.ಬರದ್ದು ಲಾಯಕ ಆಯಿದು.ಒಳ್ಳೆ ಒಂದೊಪ್ಪ.

  3. ಗೌಜಿಯ ಬರದ್ದು ಲಾಯಿಕಾಯಿದು, ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×