ಬೈಲ ಓದುಗರಿಂಗೆ ಇಂದು ಹೊಸ ಲೇಖಕಿಯ ಪರಿಚಯಿಸುಲೆ ಇಷ್ಟಪಡ್ತೆ.
ಇವು ಮುಂಡತ್ತಜೆಲಿ ಇಪ್ಪ ಸಂಧ್ಯಾ ಶ್ಯಾಮ ಭಟ್, B.Com ಪದವೀಧರೆ.
ಕಲ್ಲಮಜಲು ಭೀಮಭಟ್ ಮತ್ತು ದಿ.ಲೀಲಾವತಿ ದಂಪತಿಗಳ ಪುತ್ರಿ ಆದ ಇವರ ಹವ್ಯಾಸಂಗೊ ಪುಸ್ತಕ ಓದುವುದು,ಆಧ್ಯಾತ್ದದ ಬಗ್ಗೆ ಒಲವು, ಕತೆ,ಕವನ, ಲೇಖನ,ಪ್ರಬಂಧ, ಲಲಿತಬರಹ,ಹೂತೋಟ ಮಾಡುವುದು, ಹೊಲಿಗೆ,ಕಸೂತಿ ಇತ್ಯಾದಿ
ಇವಕ್ಕೆ ಇಬ್ಬರು ಮಕ್ಕೊ. ವಿವೇಕ-ಚೆನ್ನೈ ಟಿ.ಸಿ.ಯಸ್ ಕಂಪೆನಿಲಿ ಇಂಜಿನಿಯರ್.ಪ್ರಸ್ತುತ ಸ್ವೀಡನ್ ಲ್ಲಿ ಕೆಲಸಲ್ಲಿ ಇಪ್ಪದು
ವಿಶಾಖ- ಬೆಂಗಳೂರು ಅಪ್ಲೈಡ್ ಮೆಟೀರಿಯಲ್ ಕಂಪೆನಿಲಿ ಇಂಜಿನಿಯರ್.
ಒಪ್ಪಣ್ಣ ನೆರೆಕರೆ ಪರ್ತಿಷ್ಠಾನ ಏರ್ಪಡುಸುವ ವಿಶುವಿಶೇಷ ಸ್ಪರ್ಧೆಲಿ ಕಳುದ ಐದು ವರ್ಷಂದ ಭಾಗವಹಿಸುತ್ತಾ ಇದ್ದವು, ಹಾಂಗೂ ಕಳುದ ವರ್ಷ ಲಘು ಬರಹಲ್ಲಿ ದ್ವಿತೀಯ ಬಹುಮಾನ ಬೈಂದು.
ಹವ್ಯಕ ಸಾಹಿತ್ಯಕ್ಷೇತ್ರಲ್ಲಿ ಇವರಿಂದ ಇನ್ನಷ್ಟು ಕೃಷಿಯಾಗಲಿ ಹೇಳಿ ಹಾರೈಸುವೊ°
ಇವರ ಲೇಖನಂಗಳ ಓದಿ, ಒಪ್ಪ ಕೊಟ್ಟು ಪ್ರೋತ್ಸಾಹಿಸುವೊ°
ಹಾಂಗೇ…ಸುಮ್ಮನೆ..
ನಿಂಗೊಗೆ ಇಂದೆಂತ ಮಾಡುಲೆ ಕೆಲಸ ಇಲ್ಲೆಯಾ? ಉದಿಯಪ್ಪಗಲೇ ಕಾಲು ಕುತ್ತ ಮಾಡಿ ಮನಿಕೊಂಡಿದಿ.ಎಂತರ ಅವಸ್ಥೆ ನಿಂಗಳದ್ದು? ಗೀತಾ ಮುಸುಡು ಬೀಗಿಸಿಗೊಂಡು ಕೇಳಿತ್ತು.
ಈಗ ನಿನಗೆಂತರ ಆಯೆಕಾದ್ದಪ್ಪಾ? ಆನು ಮನಿಕೊಂಡ್ರೆ ನಿನಗೆಂತ ಈ ನಮೂನೆ ಹುಳ್ಕು? ಈ ಹೆಮ್ಮಕ್ಕೊಗೆ ಹುಳ್ಕೊಂದು ಹೇಳಿಕೊಡದ್ದೇ ಬತ್ತು.ಅಲ್ಲಡ.ಹೇಳ್ಲಾಗ.ಬಂತು ಜಗಳ ಮಾಡದ್ರೆ ತಿಂದದು ಕರಗುದು ಹೇಂಗೆ? ಪರಂಚಿಗೊಂಡೇ ಶಂಕರ ಎದ್ದು ಕೂದು ತಿರುಗು ಬಾಣ ಬಿಟ್ಟ.
ಈಗ ನಾಟಿತ್ತದಾ…ಗೀತಂಗೆ
ಎನಗೆ ಇಲ್ಲಿ ಒಳ,ಹೆರ ಹೋಗಿ ಕಾಲು ಬಚ್ಚುಲೆ ಸುರುವಾತು.ಅಲ್ಲಡ..ಹೇಳ್ಲಾಗ.ಮಾಡ್ ಲಕ್ಕು.ಕೋಪ ಬಾರದ್ದೆ ಇಕ್ಕಾ? ಎನಗೆ ಮೆಾದಲಣಾಂಗೆ ಮಾಡ್ಲೆಡಿತ್ತಿಲ್ಲೆ ಈಗ.ಮತ್ತೆ ಹುಳ್ಕು ಹೇಳ್ತಿ.ಹುಳ್ಕಿಂಗೆ ಆನೆಂತ ಮಾಡಿದ್ದೆ ಈಗ ” ಕಣ್ಣಿಲಿ ಗಂಗಾ…ಯಮುನಾ….ನದಿಗೊ ಹರಿವಲೆ ಸುರು.ಕುಸು,ಕುಸು ಹೇಳಿ ಕೂಗಿದ್ದೇ…
ಅಯ್ಯೋ…. ರಾಮಾ…ನಾಲ್ಕು ಮಾತಾಡ್ರೆ ಹೆಚ್ಚಾತು.ಎರಡು ಮಾತಾಡ್ರೆ ಕಮ್ಮಿ ಆತು .ಪ್ರಶ್ನೆಯೂ ನಿನ್ನದೇ.ಉತ್ತರವೂ ನಿನ್ನದೇ..ಅಲ್ಲಡ… ಈಗ ಕಾಲು ಬಚ್ಚುದೆಂತ ಉದಿಯಪ್ಪಗಲೇ..?
ಕೋಪ ಬಂದರೆ ಗೋಡೆಗೆ ತಲೆಬಡ್ಕೊ..ಆರು ಬೇಡಾಳಿದ್ದವು? ಆನು ಐದು ಮಿನಿಟ್ ಮನುಗಿದ್ದು ನೋಡಿಯೇ ನಿನಗೆ ಈ ನಮೂನೆ ಬಚ್ಚುದು..ಎಬಾ…ಹುಳ್ಕಿನ ಮಂಡಗೆ ನೀನು.ನಿನ್ನ ಅಪ್ಪನ ಮನೆಯವು ಎಲ್ಲಾ ಹೀಂಗೇಳಿ ಅಂದಾಜು ಮಾಡಿದ್ದೆ ಆನು.ಅಲ್ಲಡ. ಬಂತು ದೊಡ್ಡ ಜೆನದಾಂಗೆ ಉದಿಯಪ್ಪಗಲೇ ತಾಂಟುಲೆ” ಶಂಕರ ಬಾಯಿಗೆ ಕೋಲು ಹಾಕುಲೆ ಭಾರೀ ಉಷಾರಿ.
ಇದಾ… ಎನ್ನಪ್ಪನ ಮನೆ ಸುದ್ದಿ ತೆಗೆಯೆಡಿ ಎಂತ? ಅವು ಅವರಷ್ಟಕೆ ಚೆಂದಕಿದ್ದವು.ಮಾತು,ಮಾತಿಂಗೂ, ನಿನ್ನಪ್ಪನ ಮನೇಳಿ ಮೊನ್ನೆಂದಲೇ ಸುದ್ದಿ ತೆಗೆತ್ತಾ ಇದ್ದಿ.
ನಿಂಗಳ ಅಪ್ಪ,ಅಮ್ಮನ ಸುದ್ದಿ ತೆಗದರೆ ನಿಂಗೊಗೆ ಪಿಸುರು ಬತ್ತಿಲ್ಲೆಯೋ? ಅಬ್ಬರಿಸಿದ್ದು ಮಾತ್ರ..ಮತ್ತೆ ಸ್ವರವೇ ಇಲ್ಲೆ ಗೀತಂದು
ಈಗ ಮೆಾದಲು ಮಾತಾಡಿ, ಕಾದುಲೆ ಬಂದದು ಆರು? ಅದರ ಮೆಾದಲು ಹೇಳು.ಎನ್ನಪ್ಪ,ಅಮ್ಮ ನಿನ್ನ ಮದ್ವೆ ಆಯೆಕಾರೆ ಹರಿಪಾದ ಸೇರಿಗೊಂಡಿದವು.ಪುಣ್ಯಾದಿಗರು ” ಶಂಕರನೂ ವಾದ ಮಾಡ್ಲೆ ಬಿರ್ಸನೇ.ಆರಿಂಗೆಂತ ಕಮ್ಮಿ ಇಲ್ಲೆ. ಮತ್ತೆ ಮೆಲ್ಲಂಗೆ ಇದು ಸದರ ಕೊಟ್ರೆ ತಲೆಮೇಲೆಯೇ ಕೂರುಗು ಹೇಳಿದ
ಅದೆಂತರ ಹಾಂಗೆ ನಿಂಗೊ ದೊಂಡೆಯೊಳಂದ ಮಾತಾಡುದು? ಗಟ್ಟಿ ಹೇಳಿ.ಎನಗೂ ಕೇಳಲಿ.ಹೆದರುದೆಂತಕೆ? ನಿಂಗೊ ಈ ನಮೂನೆ ವಾದ ಮಾಡುದರ ನೋಡಿಯೇ ಅವು ಪರಲೋಕ ಸೇರಿಗೊಂಡದು .ಅಂತೆ ಅಲ್ಲ..ಗೀತಾ ಬಿಡ್ತಿಲ್ಲೆ ಏನಾರೂ..ನೆಗೆ ಮಾಡ್ತು.
ಏ ಸುರ್ಪವೇ. ನಿನ್ನದು.ನೆಗೆ ಮಾಡುವ ತಮಾಸೇ? ನಿನ್ನ ಕೆಲಸ ಎಷ್ಚಿದ್ದೋ ಅಷ್ಚು ನೋಡಿಗೊ.ಮಧ್ಯಾಹ್ನಕೆಂತ ಉಂಬಲೆ ಮಾಡುವ ಅಂದಾಜು ಇಲ್ಲೆಯೋ? ಹೀಂಗೆ ವಾದ ಮಾಡಿ ಹೊಟ್ಟೆ ತುಂಬುಸುದಾ? ನಿನಗೆ ಕೈ ಮುಗಿತ್ತೆ ಒಂದರಿ ಒಳ ಹೋಗು ಮಾರಾಯ್ತಿ.ಕೈ ಮುಗಿತ್ತ.
ಹಾಂಗೆ ಬನ್ವಿ ದಾರಿಗೆ ಗೀತಂಗೆ ಒಳಂದಲೇ ಖುಷಿ
ಎನಗೆ ತೋಟಕ್ಕೋಗಿ ಸ್ಪಿಂಕ್ಲರ್ ಹಾಕುಲಿದ್ದು.ಮೇಗಣ ತೋಟಲ್ಲಿ ಪೈಪ್ ಒಡದ್ದು.ಸೆಸಿ ತೋಟಲ್ಲಿ ಪೈಪ್ ಒಂದೇ ಹಾಂಗೆ ಪೀಂಕುತ್ತು.ನಿನಗೆಂತ? ಅದೆಲ್ಲಾ ಬಂಙ ನಿನಗೆಂತ ಗೊಂತು? ತಂದು ಹಾಕುದರ ಬೇಶಿತ್ತು,ತಿಂದತ್ತು,ವಾದ ಮಾಡಿತ್ತು..ಮತ್ತೆ ತಿಂದದು ಕರಗುಲೆ ಬೇರೆಂತ ಕೆಲಸ ಇದ್ದು ಬೇಕನ್ನೆ? ನೀನು ಒಂದು ರಜಾ ಹೊತ್ತು ತೋಟಕ್ಕೆ ಬಂದರೆ ಉಪಕಾರ ಆವ್ತಿತ್ತು.ಗೀತನ ಮೋರೆಯೇ ನೋಡಿಗೊಂಡು ನಿಂದ.ಎಂತ ಉತ್ತರ ಬತ್ತು ಹೇಳಿ
ಹಾ…ಅಪ್ಪಪ್ಪು.ಆನು ಈಗ ತೋಟಕ್ಕೆ ಹೆರಟದೇ..ಲಾಯ್ಕು ಹೇಳ್ತಿ ನಿಂಗೊ.. ಇಲ್ಲಿ ಆರು ನಿಂಗಳ ಅಜ್ಜ ಬಂದು ಮಾಡ್ತಾಯ್ಕು ಮಧ್ಯಾಹ್ನಕ್ಕೆ ಬೂಸುಗುಟ್ಚುಲೆ? ಗೀತಾ ಒಳ ಹೋದ್ದೇ.
ಕೆಲಸ ಕಂಡು ..ಇದು.ಈಗ ಹೇಂಗೆ ಬೀಲ ಮಡ್ಚಿಗೊಂಡು ಒಳಹೋತು.ಅಲ್ಲಡ..ಶಂಕರ ಹೆಗಲಿಂಗೆ ಬೈರಾಸು ಹಾಕಿಗೊಂಡು ಜಾಲಿಂಗೆ ಇಳಿಯೆಕಾರೆ ಒಳಂದ ಬಂತು ಗೀತಾ..
ಇದರಾ..ಹೋದಿರಾ? ಅಕ್ಕಿ ಸೊರುಗೆಕಾತು.ಗೋಣಿ ಬಾಯಿಬಿಡ್ಸೆಕಷ್ಚೆ.ಕೊರೊನ…ಕೊ ರೊನ ಹೇಳಿ 1 ಕ್ವಿಂಟಾಲ್ ಅಕ್ಕಿ ತಂದು ಮಡುಗಿದ್ದಿ.ಬಂದು ಗೋಣಿ ಬಿಡ್ಸಿ.ಗೀತಾ ಬೊಬ್ಬೆಯೇ ಹೊಡದತ್ತು.
ಇಷ್ಚು ಹೊತ್ತು ಕಾಲಹರಣ ಮಾಡಿತ್ತು. ಈಗ ಬಂತು ಹಾಂಗೆ…ಆನು ತೋಟಕ್ಕೆ ಹೆರಟಿದೆ.ನಿನ್ನದು ಪಿರಿಪಿರಿ ಇದ್ದದೇ..ಶಂಕರಂಗೆ ಪಿತ್ತ ನೆತ್ತಿಗೇರಿತ್ತು.ಅಲ್ಲಿ ಪೈಪ್ ನಿನ್ನಪ್ಪ ಬಂದು ಹಾಕುತ್ತನಾ? ಅಲ್ಲಡ..
ಅದಾ..ಸುರುಮಾಡಿದಿ..ಎನ್ನಪ್ಪನ ಸುದ್ದಿ ಎಂತಕೆ ನಿಂಗೊಗೆ? ಅವಕೆಂತ ಇಲ್ಲಿ ಬಂದು ನಿಂಗಳ ಬುಟ್ಟಿ ಚಾಕರಿ ಮಾಡ್ಲೆ ತಲೆಗೆ ಕಲ್ಲು ಬಿದ್ದಿದಿಲ್ಲೆ.ಹೋಗಿ ನಿಂಗೊ. ಆನು ಹೇಂಗಾರೂ ಮಾಡಿಗೊಂಬೆ..ಕೋಪ ಅದಕ್ಕೂ ಬಂದದೇ.
ಅಪ್ಪನ ಮನೆ ಸುದ್ದಿ ತೆಗದು ಮಾತಾಡ್ರೆ ಆರೂ ಸಹಿಸವು.
ನಿಂಗೊಗೆ ಕೂಸು ಕೊಟ್ಟದೇ ಹೆಚ್ಚು.ಅಲ್ಲಡ. ದೊಡ್ಡ ಜೆನ ಆವ್ತವು ಇವು.ಗೀತ ಬಾಯಿ ಮಾಡಿತ್ತು
ಅಪ್ಪಪ್ಪು. ನೀನು ರಂಭೆ…ಎನಗೆ ಇಲ್ಲಿ ಕೂಸುಗೊ ಕ್ಯೂ ನಿಂದುಗೊಂಡಿತ್ತಿದ್ದವು.ಆದರೂ ನಿನ್ನ ಗುಣ ಒಳ್ಳೆದಿಕ್ಕು ಹೇಳಿ ದೊಡ್ಡ ಮನಸ್ಸು ಮಾಡಿ ಆದ್ದಾನು.ಕಪ್ಪಿದ್ದರೆಂತಾತು? ಅಲ್ಲದಾ? ಈಗ ನೋಡಿರೆ ಆಗದ್ರೆ ಒಳ್ಳೆದಿತ್ತು ಕಾಣ್ತಪ್ಪಾ…ಶಂಕರ ನೆಗೆ ಮಾಡಿಗೊಂಡು ಹೇಳ್ತ.
ಕಾಂಗು…ಕಾಂಗು.. ಕಾಣದ್ದೆಂತ? ಮೂರು ಹೊತ್ತು ಸಮಯಕ್ಕೆ ಸರಿಯಾಗಿ ಆಯೆಕ್ಕಾದ ಹಾಂಗೆ ಬೇಶಿಹಾಕುಲೆ ಜೆನ ಇಪ್ಪಗ ಹಾಂಗೆ ಕಂಡು ಹೋಪದರಲ್ಲಿ ತಪ್ಪಿಲ್ಲೆ.
ಹರಟೆ..ಸಾಕು.ನಿನ್ನ ಕೆಲಸ ನೋಡು ಹೋಗು ಹೇಳಿ ಅವ ತೋಟದ ಕಡೆ ನಡದರೆ ಇದು ಪರಂಚಿಗೊಂಡೇ ಒಳ ಹೋತು.
ರಚನೆ …ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ
2-301, ಮುಂಡತ್ತಜೆ ಮನೆ
ಬಾರೆಬೆಟ್ಟು ಅಂಚೆ
ಬಂಟ್ವಾಳ ತಾಲೂಕು, 574323
9480574343
***~~~***
Latest posts by ಶರ್ಮಪ್ಪಚ್ಚಿ (see all)
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಗೆಂಡ ಹೆಂಡತ್ತಿಯ ಸರಸ-ವಿರಸ ಸೊಗಸಾಗಿ ಬಯಿಂದು. ನೈಜವಾಗಿದ್ದು. ಸಂಧ್ಯಕ್ಕನ ಕತೆ ಕವನ ಶುದ್ದಿಗೊ ಒಪ್ಪಣ್ಣ ಬೈಲಿಂಗೆ ಬತ್ತಾ ಇರಳಿ.