Oppanna.com

ಹಾಂಗೇ…ಸುಮ್ಮನೆ ..ಭಾಗ. 2, ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ

ಬರದೋರು :   ಶರ್ಮಪ್ಪಚ್ಚಿ    on   01/05/2020    1 ಒಪ್ಪಂಗೊ

ಹಾಂಗೇ…ಸುಮ್ಮನೆ ..ಭಾಗ. 2
-ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ
ಇದಾ…ಇಂದು ಉದಿಯಪ್ಪಗಲೇ ಕಾಲು ಕುತ್ತ ಮಾಡಿ ಮನುಗೆಕ್ಕೋಳಿಲ್ಲೆ.ಮೊದಲೇ ಹೇಳಿದ್ದೆ.ಮತ್ತೆ ಅಮ್ಮ,ಅಪ್ಪ ಹೇಳಿ ಸುದ್ದಿ ತೆಗದು ರಾದ್ದಾಂತ ಮಾಡುದೆಲ್ಲಾ ಬೇಡ…ಗೀತನ ಆಜ್ಞೆ ಆಯಿದು
ಆತಪ್ಪಾ..ಮಾರಾಯ್ತಿ…ಇಂದು ನೀನು ಹೇಳಿದ ಹಾಂಗೆ ಕೇಳ್ತೆ.ಎಂತ ಆಯೆಕ್ಕಾದ್ದು ನಿನಗೆ?ಇಂದು ನಿನ್ನ ಕೆಲಸ ಮುಗುಶಿಯೇ ಆನು ತೋಟಕ್ಕೋಪದು…ಶಂಕರ ಒಳ್ಳೆ ಮೂಡಿಲಿದ್ದ ಇಂದು.. ಕಾರಣವೂ ಇದ್ದು ಅದಕ್ಕೆ. ನಿನ್ನೆ ಸೊಯ್ಪಿದ್ದಲ್ಲದಾ ಮಳೆ.. ಎಂತಾ ಮಳೆ? ಎಂತಾ ಮಳೆ?
ಇಂದೆಂತ ಸೂರ್ಯ ಪಶ್ಚಿಮ ದಿಕ್ಕಿಲಿ ಹುಟ್ಟಿದ್ದಾ? ಗೀತ ಬಾಯಿಗೆ ಕೋಲು ಹಾಕುತ್ತು.
ಸೂರ್ಯ ಪೂರ್ವಲ್ಲೇ ಹುಟ್ಟಿದ್ದು.ಇಂದೆಂತರ ನಿನ್ನ ಅಸಂಬದ್ದ ಪ್ರಶ್ನೆಗೊ? ಶಂಕರಂಗೆಂತ ಗೊಂತಾಗದ್ದೆ ಅಲ್ಲ.ಬಿಗುಮಾನ ಬಿಡದ್ದೆ ಕೇಳಿದ.
ಎಂತ ಇಲ್ಲೆಪ್ಪಾ…
ಇಂದು ಎಂತ ನಿಂಗೊ ಸಮಾಧಾನಲ್ಲಿದ್ದಿ?ಎನಗೆ ಆಶ್ಚರ್ಯ ಆತಷ್ಟೇ  ಗೀತ ಹೇಳಿತ್ತು.
ಎಬ್ಬಾ ..ಈ ಹೆಮ್ಮಕ್ಕಳ ಅರ್ಥ ಮಾಡಿಕೊಂಬದೇ ಕಷ್ಟ.ಹೇಂಗೆ ನಡಕೊಂಡ್ರೂ ಅದಕೊಂದು  ಪ್ರಶ್ನೆ ರೆಡೀ ಇರುತ್ತು.ಕಷ್ಚಪ್ಪಾ…ಕಷ್ಟ…
ಈಗ ಅಂತಾ ಕಷ್ಚ ಎಂತಾತು ಬೇಕನ್ನೆ? ಗೀತ ಮೋರೆ ತಿರ್ಪಿಸಿ ಕೇಳ್ತು.
ಮತ್ತೆಂತರ? ಕೂದರೆಯಾ..ಕೂದ್ದೆಂತ? ನಿಂದತ್ತೋ…ನಿಂದದಾ ನಿಂಗೊ…ಳಿ ರಾಗ…ತಡವಾಗಿ ಮನೆಗೆ ಬಂದತ್ತೋ…ಬಿಡಿ…ಇಂದೆಂತ. ತಡ? ಎಲ್ಲೆಲ್ಲಾ ಸುತ್ತಿಕ್ಕಿ ಬಯಿಂದಿ? ಆತನ್ನೆ? ಬೇಗ ಮನೆ ಸೇರಿರೆ ಅವಗಾರೂ ತಳಿಯದ್ದೆ ಕೂರುತ್ತವಾ? ಉಹುಾಂ… ಇಂದೆಂತ ನಿಂಗೊ ಭಾರೀ ಬೇಗ ಮನೆ ಸೇರಿಗೊಂಡದು? ಎಂತ ಕತೆ? ಕೇಳುಲಾತು.ಮತ್ತೆ ಕೋಪ ಆರಿಂಗಾರೂ ಬಾರದ್ದೆ ಇಕ್ಕಾ? ಅನುಮಾನವಾ? ಜಗಳಕ್ಕೆ ಹೊಣವದಾ? ಎಂತಾಳಿಯೇ ಆ ದೇವರೇ ಬಲ್ಲ.ಶಂಕರ ಕೈ ಮೇಗೆ ಮಾಡಿದ.
ಆತಾ ಅಧ್ಯಕ್ಷರ ಭಾಷಣ? ಆನೆಂತ ಇಲ್ಲಿ ಸಭೆಗೆ ದಿನಿಗೇಳಿದ್ದಲ್ಲ.ಕೆಲಸ ನಾಯಿ ತಿಂತು ಅಲ್ಲಿ.ಇವಕ್ಕೆ ಕುಶಾಲು..ಇಂದು,ನಿಂಗೊ ತಂದ ದಿನಸಿ ಸಾಮಾನುಗಳ ಎಲ್ಲಾ ಕರಡಿಗೆಗೆ ತುಂಬುಸೆಕ್ಕು.ರಜಾ ಸಹಾಯ ಮಾಡೆಕ್ಕು.ಎಂತ? ಗೆಂಡನ ಮೋರೆಯೇ ನೋಡ್ತು.
ಆತಪ್ಪಾ..ಅದು ದೊಡ್ಡ ವಿಷಯವೇ ಅಲ್ಲ.ಮಾಡ್ಲಕ್ಕು..
ಹೇಂಗೂ ನಿನ್ನೆ ಮಳೆ ಸಮಕ್ಕೆ ಸೈೂಪಿದ್ದು.ತೋಟಕ್ಕೆ ನೀರುಹಾಕುವ ಕೆಲಸವೊಂದು ಇದ್ದತ್ತು.ಇನ್ನು 15 ದಿನಕ್ಕೆ ನೀರು ಬೇಕಾಗ.ಮತ್ತೆ ಒಂದೊಂದೇ ಮಳೆ ಸುರುವಾವ್ತಿಲ್ಲೆಯಾ? ” ರಾಗ ಎಳದತ್ತು ಗೀತ.
ಆತಪ್ಪಾ ಆತು.ನಿನ್ನ ಕೆಲಸ ಮಾಡಿರೆ ಆತನ್ನೆ? ಆದರೆ ಎಡೆಲಿ ಬಾಯಿ ಹಾಕುಲೆ ಮಾತ್ರ ಬರಡ ನೀನು.ಅದೊಂದು ಬಗೆ ಎನಗೆ ಆವ್ತೇ ಇಲ್ಲೆ.ಎಡೇಲಿ ನಿನ್ ಪಿಟ್ ಕಾಯನ ಮಣ್ಣಾ ಸುರು ಆಯೆಕ್ಕು…ಆನು ಅರ್ಧಲ್ಲೇ ಬಿಟ್ಟಿಕ್ಕಿ ಹೋಪೆ.ಹೇಳಿದಿಲ್ಲೇಳಿ ಬೇಡ.” ಶಂಕರ ಕಂಡೀಷನ್ ಹಾಕಿದ.
ಅಷ್ಟೆಲ್ಲಾ ಪೀಠಿಕೆ ಬೇಡ.ಆನು ಪಕ್ಕ ಲೀಲಕ್ಕನ ಮನೆಗೆ ಹೋಯಿಕ್ಕಿ ಬಸಳೆದೇ,ನಾಲ್ಕು ಕಾಟು ಮಾವಿನಹಣ್ನು ತೆಕ್ಕೊಂಡು ಬತ್ತೆ.ನಿಂಗೊ ಕೆಲಸ ಸುರುಮಾಡಿ.ಆನು ಬಪ್ಪಗ ಎಲ್ಲಾ ಹಾಕಿಮಡುಗಿ ಆಯೆಕ್ಕು.” ಗೀತ ಆಜ್ಞೆಮಾಡಿತ್ತು.
ಹೋ.. ಈಗ ನಿನ್ನ ಸವಾರಿ ಆ ಪಟಾಕಿ ಲೀಲಕ್ಕನ ಮನೆಗಾ? ಆತದು.ಅಲ್ಲಿ ಹೋಗಿ, ನೀನು ಪಟ್ಟಾಂಗ ಹಾಕಿ ಕೂದರೆ ಊರು ಮುಳುಗಿರೂ ಗೊಂತೇ ಆಗ.ಬೇಗ ಬಾ ಇನ್ನು.ಆನು ಸಾಮಾನು ತುಂಬುಸಿ ಮಡುಗುದು ಮಾತ್ರ.ಅಡಿಗೆ ಮಾಡ್ಲೆ ಎನ್ನಂದಾಗ.” ಶಂಕರ ಹೇಳಿದ.
ಆನು ಹೀಂಗೆ ಹೋಗಿ,ಹಾಂಗೆ ಬತ್ತೆ. ನಮ್ಮ ಮನೆಹಿಂದಾಣ ಸೆಸಿತೋಟದ ಮೂಲೆಗೋಗಿ ದೊಡ್ಡಕೆ ಕೂ…ಹೇಳಿ ಕೂಕುಳು ಹಾಕಿರೆ ಅದಕ್ಕೆ ಕೇಳುಗು..ಪಕ್ಕ ಹೋಯಿಕ್ಕಿ ಬತ್ತೆಪ್ಪಾ..ಗೀತ ಜಾಲಿಂಗಿಳುದು,ಕಾಲಿಂಗೆ ಜೋಡು ಸಿಕ್ಸಿ ಹೆರಟತ್ತು.
ಇತ್ಲಾಗಿ ಶಂಕರನೂ ಸಾಮಾನುಗಳ ಹರಗಿ ಹಾಕಿಗೊಂಡು ಕೂಯಿದ.
ಓ..ಇದು ಕಡ್ಲೆಬೇಳೆ.ಪಾಯಸಮಾಡುಲಕ್ಕು ಹೇಳಿ ಆನೇ ತಂದದು.ಈ ಜೆನ ಯಾವಾಗ ಮಾಡ್ಲೆ? ಈ ಕೊರೊನಂದಾಗಿ ಏವ ಅನುಪತ್ಯವೂ ಇಲ್ಲೆ. ತಿಥಿ ಪರದಿನವೂ ಇಲ್ಲೇಳಿ.ಕಾಕೆಗೆ ಅಶನಮಡುಗಿರೆ ಆತು.ಕಾಕೆ ಆದರೂ ಎಲ್ಲಿದ್ದು ಬೇಕನ್ನೆ?.ಎಲ್ಲಿಂದ ಎಲ್ಲಿಗೆ ಪರಿಸ್ಥಿತಿ ಬಂತು? ಕಲಿಕಾಲ..ಗ್ರೇಶಿ ಗೊಂಡೇ ಒಂದು ಕರಡಿಗೆಲಿ ರಜ ಇದ್ದ ಬೇಳೆಯೊಟ್ಟಿಂಗೆ ಈ ಕಟ್ಟನ್ನುದೇ ಸೊರುಗಿದ.ಹಿಡಿತ್ತಿಲ್ಲೆಯಾ..ಹೇಳಿಗೊಂಡು ಕರಡಿಗೆಯ ಕುರ್ ಕುಸಿ ಹಿಡಿಸಿದ ಹೇಂಗಾರೂ.
ಇನ್ನು ಅವಲಕ್ಕಿ,ಸಜ್ಜಿಗೆ, ರಾಗಿ,ಬಾರ್ಲಿ,ಸಾಸಮೆ,ಸಾಗು ,ಹೊಡಿ ಉಪ್ಪು..ಹೀಂಗೆ ಸುಮಾರು ಸಾಮಾನುಗೊ ಎಲ್ಲಾ ತುಂಬುಸುಲೆ ಇದ್ದತು.ಒಂದೊಂದಾಗಿಯೇ ನೋಡಿ ತುಂಬ್ಸಿ ಆತು.
ಇನ್ನು ಗೀತ ಬಪ್ಪಲಾತಾಯಿಕ್ಕು.ಬಚ್ಚುತ್ತು.ರಜ ಅಡ್ಡಬೀಳ್ತೆ.ಹೇಳಿಗೊಂಡು ಶಂಕರ ಮನುಗಿದ.
ಎಷ್ಟು ಹೊತ್ತು ವರಗಿದಾಳಿ ಅವಂಗೆ ಗೊಂತಿಲ್ಲೆ.ಗೀತನ ಬೊಬ್ಬೆಗೆ ಗಡಿಬಿಡಿಲಿ ಎದ್ದ ಕಣ್ಣುದ್ದಿಗೊಂಡೇ..ನೋಡ್ತ
ಗೀತ ಬಪ್ಪಗ ತಡ ಆತು.ಬಸಳೆ ತೆಕ್ಕೊಂಡೇ ಬಯಿಂದು.ಮಾವಿನಹಣ್ನು ಮಾತ್ರ ಸಿಕ್ಕಿದ್ದಿಲ್ಲೆ.
ಬೇಗ ಅಡಿಗೆ ಮಾಡ್ತೇಳಿ ಹೆರಟತ್ತು.ಸಾಸಮೆ ಹೊರುದು ಮೆಣಸು ಹೊರುದು ಕಾಯಿ ಕಡದು ಬಸಳೆ ಬೆಂದಿ ಆತು.ಒಂದೇ ಬಗೆ ಅಪ್ಪದಕ್ಕೆ ಟೊಮೆಟೋ ಸಾರೊಂದು ಮಾಡಿಕ್ಕುವ ಹೇಳಿ ತೊಗರಿ ಬೇವಲೆ ಕುಕ್ಕರಿಲಿ ಮಡುಗಿತ್ತು.ಬೆಂದಪ್ಪಗ ಮಂದ,ಮಂದ ಆಗಿ ಒಂದು ನಮೂನೆ ಕಂಡತ್ತು. ಬಾರ್ಲಿ ಗಂಜಿ ಕುಡಿಯಕ್ಕು ಹೇಳಿ ಬಾರ್ಲಿ ಕರಡಿಗೆ ತೆಗದು ಹಾಳೆಗೆ ಸೊರುಗಿತ್ತು.ಇಂದೆಂತರ ಸಾಗು,ಬಾರ್ಲಿ ಮಿಕ್ಸ್ ಆದ ಹಾಂಗೆ ಕಾಣ್ತು.ಇರಲಿ ಕರೆಲಿ. ಮತ್ತೆ ನೋಡಿಕೊಂಬ.ರಜ ಮಾವಿನಕಾಯಿ ಭಾಗ ಇದ್ದು.ಮೆಣಸಿನ ಅರಪ್ಪು ಮೊದಲೇ ಮಾಡಿಮಡುಗಿದ್ದೆ.ಸಾಸಮೆ ಹೊಡಿಮಾಡೆಕ್ಕು.ಈಗ ಕರೆಂಟ್ ಇಪ್ಪಗಲೇ ಆ ಕೆಲಸ ಒಂದು ಆಯೆಕ್ಕು.ಬೇಗ,ಬೇಗ ಹೊಡಿಮಾಡ್ತು.ಮತ್ತೆ ಉಪ್ಪುನೀರಿಲಿ ರಜ. ತಿರುಗಿಸಿಗೊಂಡತ್ತು.ಅದರ ಕಡದ ಮೆಣಸಿನ ಅರಪ್ಪಿಂಗೆ ಮಿಕ್ಸ್ ಮಾಡಿ ಕಡದತ್ತು.ಉಪ್ಪಿನಕಾಯಿ ಅರಪ್ಪು ಪರಿಮಳವೇ ಬತ್ತಿಲ್ಲೆ.
ಅಷ್ಟಪ್ಪಗ ಪಕ್ಕ ಆಲೋಚನೆ ಆತು.ಇದು ಆನು ಕಡದ್ದು ರಾಗಿ ಹೇಳಿ.ಅವಸ್ಥೆ..ಅಂಬಗ ಆನು ಬಸಳೆಬೆಂದಿಗೂ ಹೊರುದ್ದು ಈ ಕರಡಿಗೆಂದಲೇ ತೆಗದ್ದು.
ತಲೆತಿರುಗಿ ನಿತ್ರಾಣ ಅಪ್ಪದಕ್ಕೆ ಅಲ್ಲೇ ಇದ್ದ ಗ್ಲುಕೋಸ್ ಹೊಡಿ ತೆಗದು ಬಾಯಿಗೆ ಹಾಕುತ್ತು.
ಹೆಕ್.ತೆಕ್..ಬಾಯಿಡೀ ಉಪ್ಪುಪ್ಪು.ಕೋಪ ಬಂದು ತಡೆಯ ಅದಕ್ಕೆ..ಹೊಡಿಉಪ್ಪಿನ ಇದಕ್ಕೆ ತುಂಬುಸಿದ್ದವಂಬಗ.ಆತದು.ಆನೇ ಉಪ್ಪಿನ ಕರಡಿಗೆ ಖಾಲಿ ಆದ್ದರ ಚೆಂದಕೆ ತೊಳದು ಗ್ಲುಕೋಸ್ ತುಂಬುಸಿದ್ದು.ರಜ ಗ್ಲುಕೋಸ್ ಹೊಡಿ ಇದ್ದತ್ತುದೇ.ಇವು ಅದು ಉಪ್ಪು ಹೇಳಿ ಗ್ರೇಶಿ ಅದಕ್ಕೆ ತುಂಬುಸಿದವಾಯ್ಕು
ಪಿತ್ತ ನೆತ್ತಿಗೇರಿತ್ತು ಗೀತಂಗೆ.ಎಲ್ಲಾ ಕೆಲಸ ಹಾಳಾಗಿಹೋತು.ಬರ್ಕತಿಂದು ಒಂದುದೇ ಇಲ್ಲೆ.
ಅಯ್ಯೋ ರಾಮಾ… ಳಿ ದೊಡ್ಡಕೆ
ಬೊಬ್ಬೆ ಹೊಡದತ್ತದು.ಪರಂಚುಲೆ ಸುರುಮಾಡ್ತು.
ಎಬ್ಬಾ…ಎಂತಾತು ಹೇಳಿಯೇ ಅರಡಿಯ.ಆಕಾಶ ತಲೆಮೇಲಂಗೆ ಬಿದ್ದತ್ತಾ? ಕೇಳಿದ ಅವ.
ಗೀತಾ ಆದ ಅವಾಂತರ ಹೇಳಿ ಅಪ್ಪಗ ಶಂಕರ ನೋಡಿಯೇ ಬಾಕಿ ಪಿಳಿಪಿಳಿ ಕಣ್ಣುಬಿಟ್ಟುಗೊಂಡು.ಮತ್ತೆ ಜೋರು ಕಟ…ಕಟ..ಹೇಳಿ ನೆಗೆಮಾಡಿದ ಹೊಟ್ಟೆಹುಣ್ಣಪ್ಪಾಂಗೆ.
ಮತ್ತೆ ಹೇಳಿದ.ಎಲ್ಲದರಂದ ಖುಷಿ ಆದ್ದು.ನೀನು ಉಪ್ಪು ಬಾಯಿಗೆ ಸೊರುಗಿದ್ದು..ಹ್ಹೆ…ಹ್ಹೆ…ಹ್ಹೆ..
ಗೀತಂಗೆ ಅವ ನೆಗೆಮಾಡ್ಯಪ್ಪಗ‌ ಮರ್ಯಾದೆ ಹೋದಾಂಗೆ ಆಗಿ ಕೋಪವೂ ಬಂದು ,ಎಂತ ಮಾಡೆಕ್ಕು ಅರಡಿಯದ್ದೆ ಕೂಗುಲೆ ಸುರುಮಾಡ್ತು. ಗೆಂಡ ನೆಗೆಮಾಡುದರ ನೋಡಿ ಅದಕ್ಕೂ ಜೋರು ನೆಗೆ ಬಂತು. ಅವಸ್ಥೆ…
ಇಂದು ಇಡೀ ಅಡಿಗೆಯೇ ಹಾಳಾತು.ಇನ್ನು ಮುಂದೆ ಎಷ್ಚು ಬಂಘ ಆದರೂ ಸಾಮಾನುಗಳ ಆನೇ ತುಂಬುಸಿಗೊಂಬೆ.ಉಸ್ಸಪ್ಪಾಳಿ ಅಲ್ಲೇ ಕೂದತ್ತು.
ಬೇಕಾ ಸಾಮಾನು ತುಂಬುಸುಲೆ ಹೇಳುವ ಕೆಲಸ? 🙆🙆🙆
~~~***~~~
ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ
ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

One thought on “ಹಾಂಗೇ…ಸುಮ್ಮನೆ ..ಭಾಗ. 2, ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ

  1. ಗೀತಾ-ಶಂಕರ ಜೋಡಿ ಲಾಯಕಿದ್ದು. ಒಳ್ಳೆ ಮುದ್ದಣ ಮನೋರಮೆಯರ ಸರಸ-ಸಲ್ಲಾಪದ ಹಾಂಗೆ ರೈಸುತ್ತು. ಹಾಂಗೇ ಸುಮ್ಮನೆ ಹೇಳಿದರುದೆ, ಸುಮ್ಮನೆ ಅಲ್ಲ ಮಿನಿಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×