Oppanna.com

ಕಾಲಕ್ಕೆ ತಕ್ಕ ಕೋಲ-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

ಬರದೋರು :   ಶರ್ಮಪ್ಪಚ್ಚಿ    on   02/06/2020    1 ಒಪ್ಪಂಗೊ

ಕಾಲಕ್ಕೆ ತಕ್ಕ ಕೋಲ
ಸುಮಾರು‌ ದಿನ ಆಗಿತ್ತು ಎಂತದೂ ಮಾಡದ್ದೆ. ಮಗ ಒಂದೇ ಸಮ ಪರೆಂಚಲೆ‌ ಶುರು ಮಾಡಿತ್ತಿದ್ದ. ಎಲ್ಲರಿಗೂ ‌ಪುರುಸೊತ್ತು ಆವುತು, ನಿನಗೆ ಮಾತ್ರ ಎಂತರ ಮಾಡಲೂ ಎಡಿತ್ತಿಲ್ಲೇ. ಸುಮ  ಅತ್ತೆಯ ಸ್ಟೇಟಸ್ ಲ್ಲಿ ನೋಡು ಆಲೂ ಪರೋಟವೂ ವೆಜ್ ಗ್ರೇವಿ, ಚಿನ್ನು ಚಿಕ್ಕಿ, ಕ್ಯಾರೆಟ್ ಹಲ್ವಾ ವಿದ್ದ್ ಐಸ್ ಕ್ರೀಮ್, ಉಷಾ ಅತ್ತೆಗೆ  ದಾಲ್ ಕಿಚಡಿ ಅಡ, ಇಂದು‌ಚಿಕ್ಕಿಗೆ ರೈಸ್ ಬಾತ್ ವಿದ್ದ್  ರಾಯತ, ರಾಜತ್ತೆ ಗೆ ನಾರ್ತ್ ಇಂಡಿಯನ್ ಕಿಚಡಿ ,  ಓಹ್  ನೋಡು ಎಲ್ಲವೂ ಹಾಕಿದ್ದವು. ಎನಗೆ ಮಾತ್ರ ಅದೇ ಬರಿಯಕ್ಕಿ ದೋಸೆ ನೀರುಳ್ಳಿ ಗೊಜ್ಜು, ಕುಸುಲುಬೆಳ್ತಿಗೆ, ಮಾವಿನಕಾಯಿ ಗೊಜ್ಜು. ಹೆಚ್ಚು‌ ಹೇಳಿರೆ  ಬಾಳೆಹಣ್ಣು ರಸಾಯನ. ಬೊಡುತ್ತು ತಿಂದು ತಿಂದು ಧಾರಾವಾಹಿಯ ಹಾಂಗೆ. ತಿಂದದ್ದನ್ನೇ ತಿಂದು. ಎಂತದೂ‌ ಮಾಡುತಿಲ್ಲೆ ಬೇರೆ.
ಅಪ್ಪನ್ನೇ, ಅವ ತಪ್ಪು ಹೇಳಿದ್ದಲ್ಲ. ಆನು ಮಾಡುದರನ್ನೇ ಹೇಳಿದ್ದು. ಎಲ್ಲರಷ್ಟು ಬೇಗ ಬೇಗ ಮಾಡಲೆ ಎಡಿತ್ತಿಲ್ಲೆ ಎನಿಗೆ. ಚೂರು ಲೇಟು ಮಾರಾಯ ಹೇಳಿ ಕಣ್ಣು ಉದ್ದಿಗೊಂಡೆ.  ಮಕ್ಕೊಗೆ ಹೇಂಗೆ ಅರ್ಥ ಅವುತು ಅಲ್ಲದಾ. ? ಎಂಗೊ ಸಣ್ಣಾದಿಪ್ಪಗಲೂ  ಅಮ್ಮನ ಹೀಂಗೇ ಗಿರ್ಗಾಣಿಸಿಕೊಂಡಿತ್ತಿದ್ದೆಯಾ. ಅಮ್ಮಂಗೆ  ಶಾಲೆಲ್ಲಿ ಪಾಠ ಮಾಡಿ ಮನೆ ಕೆಲಸವೂ ಮಾಡಿ ಬೊಡಿತ್ತಿತ್ತು. ಎಂಗೊ ಹೇಳಿದ್ದರೆಲ್ಲಾ ಮಾಡಿ ಕೊಡ್ಲೆ ಪುರುಸೊತ್ತಾವುತಿತ್ತಿಲ್ಲೆ. ರಜೆ ಇಪ್ಪಗ ಅದಕ್ಕೆ ಎಡಿಗಪ್ಪದರ ಮಾಡಿಕೊಡತಿತ್ತು. ಈಗ ಆನು ಮನೆಲೇ ಇಪ್ಪುದಾದರೂ ಎನಿಗೆ  ಮಗ ಹೇಳಿದ್ದರೆಲ್ಲಾ ಮಾಡಿಕೊಡಲ್ಲೆ ಎಡಿತ್ತಿಲ್ಲೆ.  ಅಮ್ಮಂಗಾದರೆ ಸಮಯ ಹೊಂದಿಸಿ ಕೊಂಬಲೆ  ಕಷ್ಟ ಆವುತಿತ್ತು. ಎನಿಗೆ ಹಾಂಗಲ್ಲ. ಅಮ್ಮನ ಹಾಂಗೆ ೮ ಗಂಟೆಗೆ ಎಲ್ಲಾ ಕೆಲಸ ಮಾಡಿ ಶಾಲೆಗೆ ಓಡೆಕ್ಕೂ ಹೇಳಿ ಇಲ್ಲೆ.  ಎಂತರ ಬೇಕಾರೂ ಮಾಡಲಕ್ಕೂ. ಸಮಯ ಇದ್ದು. ಸಾಮಾನು ಇದ್ದು, ಹಾಲು, ತುಪ್ಪ, ಮೊಸರಿಗೇನೂ ತೊಂದರೆ ಇಲ್ಲೆ. ಆದರೆ ಎಡಿತ್ತಿಲ್ಲೆ. ಸಮಯ ಹೊಂದಿಸಿಕೊಂಬಲ್ಲಿ ಆನು ಸೋಲುದೆ.
ಮನೆಲಿ ಅತ್ತೆಯವು ಯಾವಾಗಲೂ ಹೇಳುಗು ಅವರ ಯೌವನದ ಗೌಜಿಯ. ಸೆರಗು ಸೊಂಟಕ್ಕೆ ಸಿಕ್ಕಿಸಿರೆ ಈಗಲೂ ಅದೇ ಉಮ್ಮೇದು.  ಅಟ್ಟಲ್ಲಿ ಇಪ್ಪ ದೊಡ್ಡ ದೊಡ್ಡ ಭರಣಿ ತುಂಬಾ ಉಪ್ಪಿನಕಾಯಿ ಹಾಕುತ್ತಿದ್ದವಡ. ನಾಲ್ಕು ದೊಡ್ಡ  ಹೆಡಿಗೆ  ಮಾವಿನಕಾಯಿ ಮಿಡಿಗಳ ಉಪ್ಪಿಲಿ ಹಾಕಿ, ,ಚಿರಟಿಯಪ್ಪಗ  ಒಂದು ಹೆಡಿಗೆ  ಅವುತು. ಅದರ ಭರಣಿಲ್ಲಿ ಉಪ್ಪಿನಕಾಯಿ ‌ ಹಾಕುತ್ತಿದ್ದವಡ.  ಈಗ ಹಾಂಗೆ ಹಾಕುತ್ತಿಲ್ಲೆ, ತಿಂಬವು  ಇಲ್ಲೆ. ಇನ್ನೂ ೩ ಸೇರು ಗೋಧಿ ಹಾಲು ತೆಗದು ಹಲ್ವಾ ಮಾಡಿಕೊಂಡಿತ್ತವಡ. ಎನಗೆ ಈ ಸಂಗತಿಯ ಜಾನ್ಸುಲೂ ಎಡಿತ್ತಿಲ್ಲೆ. ಈಗಿನ ಹಾಂಗೆ ಮಿಕ್ಸಿ ಗ್ರೈಂಡರ್ ಕರೆಂಟು‌ ಇಲ್ಲದ್ದ ಕಾಲಲ್ಲಿ   ಅಷ್ಟೆಲ್ಲಾ ಮಾಡ್ತಿದ್ದವಲ್ಲದಾ ಹೇಳಿ ಆಶ್ಚರ್ಯ ವೂ ಆವುತು , ಅವರ ಉಮ್ಮೇದಿಗೆ  ಶಕ್ತಿಗೆ ತಲೆ ಬಾಗೆಕ್ಕಷ್ಟೆ. ಸೇರುಗಟ್ಟಲೆ  ಉಂಡ್ಲಕಾಳು, ರಾಶಿರಾಶಿ ಚಕ್ಕುಲಿ, ಜಿಲೇಬಿ, ತಂಬಿಟ್ಟು ಉಂಡೆ, ದೊಡ್ಡ ಉರುಳಿಲ್ಲಿ ಬಾಳೆಹಣ್ಣು ಹಲ್ವಾ,   ಸಾವಿರಗಟ್ಟಲೆ ಹಪ್ಪಳ   ಉಹ್ ಎನಿಗೆ ಅದರಲ್ಲೆ ಕೇಳುದರಲ್ಲೇ ಮನಸಿಗೆ ಖುಷಿಯಪ್ಪುದು. ಟಿ.ವಿ ಲ್ಲಿ ಎಣ್ಣೆಯ ಜಾಹಿರಾತು ಬಪ್ಪಗ  ರಾಶಿ ರಾಶಿ  ತಿಂಡಿಗಳ ತೋರುಸುತ್ತವಲ್ಲ್ದಾ ಅದೇ ಕಾಣುಗು . ಆನು ರಜ ರಜ ಮಾಡುವೆ ಅಷ್ಟೆ.  ಲೆಕ್ಕ ಮಾಡಿ ಮಾಡುವೆ. ಹೆಚ್ಚಿಗೆ ಮಾಡಲೆ ಹೆದರಿಕೆ ಅವುತು ಸರಿ ಆಗದ್ರೆ ಹೇಳಿ. ನೆಗೆ ಮಾಡಲಾಗನ್ನೇ ಹೇಳಿ.  ಆಗಾಣ ಕಾಲಲ್ಲಿ ಮನೆತುಂಬಾ ಜನ ಇತ್ತ್ತು . ಅವಕ್ಕೆ ಮೂರುಹೊತ್ತು ಮಾಡಿ ಹಾಕುದೇ ಹೆಮ್ಮಕ್ಕೊಗೆ ಮನರಂಜನೆ. ಮಳೆಗಾಲಲ್ಲಿ ಬೇರೆ ಎಂತ ಮಾಡ್ಲೂ ಎಡಿಯನ್ನೆ. ಹಾಂಗಾಗಿ ತಿಂಡಿ ಮಾಡುದು, ಹಪ್ಪಳ ಹೊರಿಯುವುದು, ಮಾಂಬಳ ಗೊಜ್ಜು , ಪಾಯಸ , ಸಾರು ಹೀಂಗೆ ಪ್ರಯೋಗಕ್ಕೆ ಮನಸೊಡ್ಡುದು. ಹೊಲಿಗೆ ಕಸೂತಿ ಹೀಂಗೆ ಹೊತ್ತು ಕಳಿಯುವುದು ಆವಾಗಾಣ  ಒಂದು ಮನರಂಜನೆ.
ಈಗ ಕಾಲ ಬದಲಾಯಿದು, ಮನಸುದೇ. ಆರಿಂಗೂ ಸಮಯ ಇಲ್ಲೆ. ಮಾತಾಡ್ಲೂ ಇಲ್ಲೆ. ಎಲ್ಲಿಗೆ ಹೋಪುಲೂ ಇಲ್ಲೆ.  ಕೈಲಿ ಮೊಬೈಲ್ ಫೋನ್ ಇದ್ದರೆ ಮೂರು ಲೋಕವೂ ಅದರಲ್ಲೇ  ಆತು. ಇಂದ್ರಾಣ  ಅತ್ತೆಯವಕ್ಕೆ  ದೊಡ್ಡ ತಲೆ ಬೆಷಿ ಎಂತ ಹೇಳಿರೆ ” ಕಾವಲಿಂದ ಎಳಕ್ಕದ್ದ ದೋಸೆಯೂ, ಕೈಯಿಂದ ಮೊಬೈಲ್ ಕೆಳ ಇಡದ ಸೊಸೆಯೂ!!!!!!!!!!!!!!!!!!!!!
~~~***~~~~
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ವಿಳಾಸ:
ಅಶ್ವಿನಿ ಕೆ.ಎನ್
ಶಾರದಾ ನಿಲಯ
ಬಾಳಿಲ
ಸುಳ್ಯ ತಾಲ್ಲೂಕು
೫೭೪೨೧೨
ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

One thought on “ಕಾಲಕ್ಕೆ ತಕ್ಕ ಕೋಲ-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×