Oppanna.com

ಒಂದು ಪ್ರಕರಣದ ಸುತ್ತ -೩ : ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   04/06/2020    5 ಒಪ್ಪಂಗೊ

ಒಂದು ಪ್ರಕರಣದ ಸುತ್ತ -೩ 

-ರಮ್ಯ ನೆಕ್ಕರೆಕಾಡು

ಮಗಳ ಮನೆಲೆಲ್ಲಿಯೂ ಕಾಣದ್ದೇ ಇಪ್ಪಗ, ಶಾಂತಂಗೂ, ಕೇಶವಂಗೂ ಕೈಕಾಲೇ ಹಂದ!! ಹೀಂಗೆಪ್ಪ ಇಕ್ಕಟ್ಟಿನ ಪರಿಸ್ಥಿತಿಲಿ ಅವಕ್ಕೆ ಶರತ್ಚಂದ್ರನ ಬಿಟ್ಟು ಮತ್ತಾರನ್ನೂ ನೆಂಪಾಯ್ದಿಲ್ಲೆ.ಕೂಡ್ಲೇ ಶಾಂತ, ಶರತ್ಚಂದ್ರಂಗೆ ಫೋನು ಮಾಡಿತ್ತು.” ಹಲೋ…ಚಂದ್ರ..ಅಂಜಲಿಯ ಮನೆಲಿ ಎಲ್ಲಿದೇ ಕಾಣ್ತಾ ಇಲ್ಲೆ..ಎಂಗೊಂಗೆ ಇಲ್ಲಿ ಎಂತ ಮಾಡೆಕ್ಕು ಹೇಳಿ ಗೊಂತಾವ್ತಾ ಇಲ್ಲೆ..” ಹೇಳಿಯಪ್ಪದ್ದೇ, ಅತ್ಲಾಗಿ ಶರತ್ಚಂದ್ರಂಗೂ ಒಂದರಿಯಂಗೆ ಗಾಬರಿ ಆತು. ಶರತ್ಚಂದ್ರ ಹೀಂಗೆಪ್ಪ ಎಷ್ಟೋ ಕೇಸುಗಳ ಕಂಡರುದೇ, ಈ ಪ್ರಕರಣ ಮಾತ್ರ ರಜ ಗಾಬರಿ ಅಪ್ಪಾಂಗಿಪ್ಪದೇ..ಎಂತಕೇಳ್ರೆ ಅಂಜಲಿ ಸ್ವಂತ ಅಕ್ಕನ ಮಗಳನ್ನೇ.. ಈಗಂತೂ ಅಕ್ಕ ಇಪ್ಪ ಊರಿಂಗೇ ಟ್ರಾನ್ಸ್ಫರ್ ಆದ ಕಾರಣ ಈ ಪ್ರಕರಣ ಹ್ಯಾಂಡಲ್ ಮಾಡುವ ಜವಾಬ್ದಾರಿದೆ ಶರತ್ಚಂದ್ರಂಗೆ ಸಿಕ್ಕುತ್ತು..ಮತ್ತೆ ತಡವು ಮಾಡದ್ದೇ, ವೀಣಾ ನನ್ನುದೇ ಕರ್ಕೊಂಡು ಅಕ್ಕನ ಮನೆಗೆ ಹೆರಟ. ಇತ್ಲಾಗಿ ಕೇಶವ ಶಾಂತನ ಸಮಾಧಾನ ಮಾಡಿಕ್ಕಿ ಸುತ್ತಮುತ್ತ ವಿಚಾರ್ಸಕ್ಕಿ ಬತ್ತೆ ಹೇಳಿ ಗೇಟಿನತ್ರಂಗೆ ಎತ್ತಿಯಪ್ಪದ್ದೇ, ಶರತ್ಚಂದ್ರನ ಬೈಕು ಬಂದು ನಿಂದತ್ತು. ಕೇಶವ ಕೂಡ್ಲೇ,” ಭಾವ..ಅಂಜಲಿ….!!” ಹೇಳಿ ಎಲ್ಲಿಯೂ ಇಲ್ಲೆ ಹೇಳುವಾಂಗೆ ಅಂಗೈಯ ತಿರುಗ್ಸಿ ತಲೆ ಆಡ್ಸಿದ. ಶರತ್ಚಂದ್ರ ಕೇಶವನ ಕೈ ಹಿಡ್ಕೊಂಡು,” ಎಂತಕೂ ಒಳ ಬನ್ನಿ…ಮಾತಾಡುವೋ..” ಹೇಳಿದ. ಎಲ್ಲ ಮನೆಯೊಳಂಗೆ ಹೊಕ್ಕಿದವು. ಶಾಂತ ಸೆರಗಿನ ಕಣ್ಣಿಂಗೊತ್ತಿಗೊಂಡು, ಗೋಡೆಗೆರಗಿ ಕೂದು ಕೂಗಿಗೊಂಡಿತ್ತು. ಇದರ ಕಂಡ ಕೂಡ್ಲೇ ವೀಣಾಂಗೆ “ಅಯ್ಯೋ” ‌ಹೇಳಿ ಆತು. ವೀಣಾಂಗೆ ಹೆತ್ತಬ್ಬೆಯ ಸಂಕಟ ಅನುಭವ ಇಲ್ಲದ್ರೂ, ಹೆಮ್ಮಕ್ಕಳ ಸಂಕಟ ಹೇಂಗಿರ್ತು ಹೇಳ್ತ ಕಲ್ಪನೆ ಇತ್ತು. ಕೂಡ್ಲೇ ಶಾಂತನತ್ರೆ ಹೋಗಿ,” ಎಂತತ್ತಿಗೆ… ಅಂಜಲಿ ಮನಲಿಲ್ಲೆ ಹೇಳ್ರೆ ಕಾಣೆ ಆತೋಳಿಯೇ ಲೆಕ್ಕವಾ?? ಕಲ್ತ ಕೂಸುಗೋಕ್ಕೆ ಅವರದ್ದೇ ನೂರೆಂಟು ವ್ಯವ‌ಹಾರ ಇರ್ತು..ಅದರ ಫ್ರೆಂಡ್ಸತ್ರೆ ಆರತ್ರಾದ್ರೂ ವಿಚಾರ್ಸಿದಿರಾ…?” ಹೇಳಿದಕ್ಕೆ ಶಾಂತ ಇಲ್ಲೆ ಹೇಳಿ ತಲೆ ಆಡ್ಸಿತ್ತು. ಅದಕ್ಕೆ ಕೇಶವ,” ಅದು ಕೋಣೆಂದ ಹೆರ ಬಪ್ಪ ಪರಿಸ್ಥಿತಿಲಿಯೇ ಇತ್ತಿಲ್ಲೆ..” ಹೇಳಿಗೊಂಡು ಇಪ್ಪಗಳೇ, ಶಾಂತ “ಎಲ್ಲ ಮಾಡಿದ್ದು ಇವ್ವೇ ಇದಾ…ಎನ್ನ ಪುಟ್ಟು ಬೇಡ ಬೇಡಾಳಿ ಹೇಳಿತ್ತು..ಎಂಗ ಊರ ಬಾಯಿಗೆ ಹೆದರಿ ಈ ನಿರ್ಧಾರಕ್ಕೆ ಬಂದದು…” ಹೇಳಿ ಒಗಟು ಒಗಟಾಗಿ ಮಾತಾಡಿ ವೀಣಾನನ್ನುದೇ, ಶರತ್ಚಂದ್ರನನ್ನುದೇ ಗೊಂದಲದ ಬಲೆಲಿ ಸಿಕ್ಸಿ ಹಾಕಿತ್ತು. ಕೇಶವ ಚಪ್ಪೆ ಮೋರೆ ಮಾಡಿ ಶಾಂತನ ನೋಡಿ ತಲೆ ತಗ್ಸಿದ. ಶರತ್ಚಂದ್ರ ಗೊಂದಲಲ್ಲಿಯೇ,” ಎನಗೆ ಎಂತದೂ ಅರ್ಥ ಆವ್ತಾ ಇಲ್ಲೆ..ಆರಾರೊಬ್ಬ ವಿಷಯ ಎಂತಾಳಿ ಬಿಡ್ಸಿ ಹೇಳಿ..” ಹೇಳಿಕ್ಕಿ ಕೇಶವನ ಮೋರೆ ನೋಡಿದ. ಕೇಶವ ಅಲ್ಲಿಯೇ ಸೋಫಾಲ್ಲಿ ಕೂದುಗೊಂಡು ಸುದಾರ್ಸಿಕ್ಕಿ ವಿಷಯ ಎಲ್ಲ ವಿವರ್ಸಿಕ್ಕಿ,” ಎಲ್ಲಾ ಎನ್ನಂದಾಗಿಯೇ ಆದ್ದು..ಈ ಪೈಸೆ ಆಸ್ತಿ ಹೇಳಿಗೊಂಡು, ಎರಡ್ನೇ ಸಂಬಂಧ ಹೇಳಿದೇ ನೋಡದ್ದೆ, ಎನ್ನ ಒಪ್ಪಕ್ಕನ ಭವಿಷ್ಯವ ಹಾಳು ಮಾಡ್ಲೆ ಹೆರಟ ಪಾಪಿ ಆನು. ಈ ಒಂದು ವಾರಲ್ಲಿ ಮನಸ್ಸಿನ ಬೇನೆ ಆರತ್ರೂ ಹೇಳಿಗೊಂಬಲೆ ಎಡಿಯದ್ದೆ ಭಾರೀ ಬಂಙ ಬಂತು ಎನ್ನ ಮಗಳು…ಎಂತ ಅನಾಹುತ ಮಾಡಿಗೊಂಡಿರದ್ರೆ ಸಾಕಪ್ಪ..” ‌ಹೇಳಿ ಅಸಹಾಯಕತೆಲಿ ಜೋರು ಕೂಗಿದ.  ಶರತ್ಚಂದ್ರ,” ಛೇ…ಒಬ್ಬ ಅಪ್ಪ ಆಗಿ, ಕೇವಲ ಪೈಸೆಯ ಆಶೆಗಾಗಿ ನಿಂಗ ಹೀಂಗೆ ಮಾಡಿದ್ದು ಭಾರೀ ಆಶ್ಚರ್ಯ ಕಾಣ್ತು ಭಾವ… ಪಾಪ ಆ ಕೂಸಿನ ಸೀದಾ ಎಣ್ಣೆಪಳಂದ ಕಿಚ್ಚಿಂಗೇ ನೂಕಿ ಹಾಕಿದಿ ನಿಂಗ….ಹ್ಞ್ಂ..ಆರಿನ ಹೇಳಿ ಎಂತ ಪ್ರೇಜನ?? ಎಲ್ಲರದ್ದೂ ತಪ್ಪಿದ್ದು..ಮೊನ್ನೆ ಆನು ಮದುವೆ ವಿಷಯ ಎತ್ತದ್ರೆ ಪರಿಸ್ಥಿತಿ ಇಂದು ಇಷ್ಟು ಹಳಸುತಿತ್ತಿಲ್ಯೋ ಏನಾ..” ಹೇಳಿಯಪ್ಪಗ ವೀಣಾ,” ನಿಂಗ ಎಲ್ಲಾ ಈಗ ಹೀಂಗೆ ಆಗಿ ಹೋದ ವಿಷಯವ ಒಕ್ಕೆರೆ, ಮನಸ್ಸಿಂಗೆ ಬೇನೆ ಅಪ್ಪದಷ್ಟೇ ಹೊರತು ಬೇರೆ ಎಂತ ಪ್ರೇಜನ ಇಲ್ಲೆ..ಈಗ ಮುಂದೆ ಮಾಡೆಕ್ಕಾದ್ದೆಂತಾಳಿ ಯೋಚನೆ ಮಾಡಿ..” ಹೇಳಿ ಸಂದರ್ಭಕ್ಕೆ ತಕ್ಕ ಹಾಂಗೆ ಮಾತಾಡಿತ್ತು. ಶರತ್ಚಂದ್ರ ವೀಣಾನ ಮಾತಿಂಗೆ ಅಸ್ತು ಹೇಳಿದ.
ಅವ ಒಬ್ಬ ಪೋಲಿಸ್ ಅಧಿಕಾರಿ ಆದ ಕಾರಣ ಅವನ ರೀತಿಲಿಯೇ ಮನೆ, ಮನೆಯ ಸುತ್ತಮುತ್ತ ಎಲ್ಲ ಒಂದರಿ ತನಿಖೆ ಮಾಡಿಕ್ಕಿ ಬಂದ. ಮತ್ತೆ ಒಳ ಬಂದು” ಎನಗೆ ಎಂತದೂ ತಲೆಗೆ ಹೋವ್ತಾ ಇಲ್ಲೆ..ಅಂಜಲಿಗೆ ಅರವಿಂದನೊಟ್ಟಿಂಗೆ ಮದುವೆ ನಿಘಂಟು ಮಾಡುದು ಹೇಳಿ ಮಾತಾದ ಮತ್ತೆ ಅಂಜಲಿ ಕಂಗಾಲಾದ್ದಕ್ಕೆ ಒಂದು ಅರ್ಥ ಇದ್ದು..ಆದರೆ ಮದುವೆಯೇ ಬೇಡಾಳಿ ಪಟ್ಟು ಹಿಡ್ದು ಕೂದ್ದೆಂತಕಪ್ಪಾ?? ಆನು ಹೀಂಗೆ ಕೇಳ್ತೆ ಹೇಳಿ ತಪ್ಪು ತಿಳ್ಕೊಳ್ಳೆಡಿ..ತನಿಖೆ ಮಾಡುವಾಗ ಎಲ್ಲವನ್ನೂ ವಿಚಾರ್ಸೆಕ್ಕಾವ್ತು…ಅಂಜಲಿಗೆ ಆರೊಟ್ಟಿಂಗಾರು ಪ್ರೀತಿ ಪ್ರೇಮ ಎಂತಾರು ಇದ್ದತ್ತೋ…” ಹೇಳಿ ಪೋಲೀ‌ಸು ಭಾಷೆಲಿಯೇ ಪ್ರಶ್ನೆ ಮಾಡಿದ. ಅಷ್ಟೊತ್ತು ಕೆಳ ಕೂದು ಕಣ್ಣಿರು ಹಾಕಿಂಗೊಡಿತ್ತ ಶಾಂತ ಕೂಡ್ಲೇ ಎದ್ದಿಕ್ಕಿ,” ಚಂದ್ರ…ನೀನು ಪೋಲೀಸು ಅಪ್ಪ ಮೊದಲು ಅಂಜಲಿಗೆ ಮಾವ…ನೀನು ಅಂಜಲಿಯ ತುಂಬಾ ಹತ್ತರಂದ ನೋಡಿದ್ದಿಲ್ಲೆ  ಒಪ್ಪಿಗೊಳ್ತೆ. ಆದರೆ ಮಾವ ಆಗಿ ನಿನಗೆ ಅದರ ನಡವಳಿಕೆಯ ಬಗ್ಗೆ ಸಂಶಯವಾ..ಅದು ಕಲ್ತದಕ್ಕೆ ತಕ್ಕ ಒಳ್ಳೆ ಕೆಲಸ ಸಿಕ್ಕಿ ರಜ ಸಮಯ ಸ್ವತಂತ್ರಲ್ಲಿ ಇರೆಕ್ಕು ಹೇಳ್ತ ಕಾರಣಕ್ಕೆ ಅದು ಮದುವೆಗೆ ಒಪ್ಪಿಗೊಂಬಲೆ ತಯಾರಿತ್ತಿಲ್ಲೆ..” ಹೇಳಿ ತಮ್ಮನ ಮೇಲೆ ಹಾರಿತ್ತು. ಪಾಪ ಶರತ್ಚಂದ್ರ ಕೇಳಿದ್ದರಲ್ಲಿ ತಪ್ಪೆಂತ ಇದ್ದು?? ಅವನ ಅಷ್ಟೂ ವರ್ಷದ ಅನುಭವಲ್ಲಿ ಅಂಜಲಿಯ ಪ್ರಾಯದ ಕೂಸುಗ ಅಂಜಲಿಯ ಹಾಂಗೆ ಕಾಣೆ ಆದ ಪ್ರಕರಣ ಎಷ್ಟೋ ಬೈಂದು..ನೂರರಲ್ಲಿ ತೊಂಬತ್ತೊಂಬತ್ತು ಕೇಸುಗಳೂ ಪ್ರೀತಿ ಪ್ರೇಮ ಹೇಳಿ ಓಡಿ ಹೋದವರ ವಿಷಯವೇ ಆಗಿತ್ತು. ಹಾಂಗಿಪ್ಪಗ ಶರತ್ಚಂದ್ರನ ಸಂಶಯವುದೇ ಸರಿಯನ್ನೇ..ಆದರೆ ಶಾಂತನ ಮಾತೃ ವಾತ್ಸಲ್ಯ ಈ ವಾದವ ಒಪ್ಪಿಗೊಂಬಲೆ ತಯಾರಿತ್ತಿಲ್ಲೆ.. ಇದರ ಎಲ್ಲಾ ಅರ್ಥ ಮಾಡಿಗೊಂಡ ಕೇಶವ,” ಶಾಂತ..ಶರತ್ಚಂದ್ರ ಅವನ ಕರ್ತವ್ಯ ಮಾಡ್ತಾ ಇದ್ದ ಅಷ್ಟೆ… ನಾವು ಈ ಸಮಯಲ್ಲಿ ತಾಳ್ಮೆ ಕಳಕ್ಕೊಂಬಲಾಗ….ಭಾವ ಎಂಗೊಂಗೆ ತಿಳ್ದ ಮಟ್ಟಿಂಗೆ ಅಂಜಲಿಗೆ ಆರೊಟ್ಟಿಂಗೂ ಸ್ನೇಹ ಇತ್ತಿಲ್ಲೆ. ನಿನಗೆ ಹೆಚ್ಚಿಗೆ ವಿವರಣೆ ಬೇಕಾರೆ ನಾವೊಂದರಿ ಅಂಜಲಿಯ ಕ್ಲಾಸ್ಮೇಟು ಸಹನಾನ ಮನೆಗೆ ಹೋಯ್ಕೊಂಡು ಬಪ್ಪ..” ಹೇಳಿದ. ಕೇಶವನ ಮಾತಿಲಿ ಮಗಳ ಮೇಲಿನ ನಂಬಿಕೆ ಎದ್ದು ಕಂಡುಗೊಂಡಿತ್ತು.
” ಅದೊಳ್ಳೆದು ಭಾವ…ಈ ವಿಷಯಲ್ಲಿ ಸಹನಾಂದ ಎಂತಾರೂ ಸಹಾಯ ಅಪ್ಪಲೂ ಸಾಕು..” ‌ಹೇಳಿ  ಶರತ್ಚಂದ್ರ ಕೇಶವನೊಟ್ಟಿಂಗೆ ಸಹನಾನ ಮನೆಗೆ ಹೋಪಲೆ ತಯಾರಾಗಿ,”ವೀಣಾ..ಎಂಗ ಹೋಗಿ ಬತ್ತೆಯ..ಅಕ್ಕಂಗೆ ರಜ ಸಮಾಧಾನ ಮಾಡಿಕ್ಕು..” ಹೇಳಿಕ್ಕಿ ಸಹನಾನ ಮನೆಗೆ ಬೈಕಿಲಿ ಹೋದವು. ಇವಕ್ಕೆ ಅನುಕೂಲ ಅಪ್ಪಹಾಂಗೆ ಮನೆಗೆ ಹೋಯ್ಕಾರೆ ಸಹನಾ ಎದುರೇ ವಸ್ತ್ರ ಒಗೆಕ್ಕೊಂಡಿತ್ತು. ಶರತ್ಚಂದ್ರ ತಡವು ಮಾಡದ್ದೇ ಸಹನಾನ ದಿನಿಗೇಳಿ,” ಸಹನಾ….ನಿನ್ನಂದ ಒಂದು ಸಹಾಯ ಆಯೆಕ್ಕಿತ್ತು. ಅಂಜಲಿಯ ವಿಷಯವಾಗಿ ನಿನ್ನತ್ರೆ ಮಾತಾಡ್ಲೆ ಬಂದದು… ಇಂದು ಉದಿಯಪ್ಪಗಂದಿತ್ತೆ ಅಂಜಲಿಯ ಕಾಣ್ತಾ ಇಲ್ಲೆ..ಎಲ್ಲಿ ಹೋಯ್ದೋಳಿ ಇಲ್ಲೆ!! ” ಹೇಳಿ ಶರತ್ಚಂದ್ರ ಮಾತಾಡಿ ಮುಗಿಶೆಕ್ಕಾರೆ ಸಹನಾನ ಎದೆ ಜೋರು ಬಡ್ಕೊಂಬಲೆ ಸುರಾತು. ಹೆದರಿ ಜೊಗುಳಿ ನುಂಗಿದ ಸಹನಾನ ಮೋರೆ ಇಡೀ ಬೆಗರಿ ಕೈಕಾಲು ನಡುಗುಲೆ ಸುರಾತು…

                            -ಮುಂದುವರೆತ್ತು>>>>

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

5 thoughts on “ಒಂದು ಪ್ರಕರಣದ ಸುತ್ತ -೩ : ರಮ್ಯ ನೆಕ್ಕರೆಕಾಡು

  1. ಕಥೆ ಭಾರೀ ಕುತೂಹಲಂದ ಮುಂದುವರಿತ್ತಾ ಇದ್ದು..ಖುಷಿ ಆತು..ಧನ್ಯವಾದಂಗ.

  2. Prathi episode na full suspense point li nilsidde.. Jasthi kaysadde bega bega next episodes haku😅😝😁

  3. Next entha akku Heli kutuhala avta iddu…..😊anjali alle elladaru irali….😐..katheya barada shaili ista athu👌👌😍

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×