Oppanna.com

ಒಂದು ಪ್ರಕರಣದ ಸುತ್ತ – ೧೭

ಬರದೋರು :   ಶರ್ಮಪ್ಪಚ್ಚಿ    on   10/09/2020    3 ಒಪ್ಪಂಗೊ

ಒಂದು ಪ್ರಕರಣದ ಸುತ್ತ – ೧೭

-ರಮ್ಯ ನೆಕ್ಕರೆಕಾಡು

ಅಂಜಲಿಗೆ ಯಾವುದೇ ತೊಂದರೆ ಇಲ್ಲೆ ಮನೆಗೆ ಹೋಪಲಕ್ಕು ಹೇಳಿ ಡಾಕ್ಟರ್ ಹೇಳಿದ ಕಾರಣ ಎಲ್ಲೋರು ಆಸ್ಪತ್ರೆಂದ ಹೆರಟವು. ” ವೀಣಾ.. ಅಂಜಲಿಯ ಕರಕ್ಕೊಂಡು ನೀನು ಮನೆಗೆ ಹೋಗು.. ಕಸ್ತಲೆ ಆತು.. ಇರುಳು ಎಷ್ಟೊತ್ತಾದರೂ ತೊಂದರಿಲ್ಲೆ. ಮದನನ ಹತ್ರಂದ ಪೂರಾ ಸತ್ಯ ಕಕ್ಸೆಕ್ಕು..” ಹೇಳಿ ಶರತ್ಚಂದ್ರ ಹೇಳಿಯಪ್ಪಗ, “ಮಾವ ಈ ಸಂಧರ್ಭಲ್ಲಿ ಎಂಗಳೂ ಅಲ್ಲಿ ಇರೆಕ್ಕು.. ಸತ್ಯಾಂಶ ಎಂತಾಳಿ ಎಂಗೊಗೂ ಗೊಂತಾಯೆಕ್ಕು.. ಎಂಗಳೂ ಸ್ಟೇಷನಿಂಗೆ ಬತ್ತೆಯ..” ಹೇಳಿ ಅಂಜಲಿ ಹೇಳಿಯಪ್ಪಗ ಕೇಶವಂದೆ ವೀಣಾಂದೆ ಅಪ್ಪು ಹೇಳಿ ತಲೆ ಆಡ್ಸಿದವು. ಆಸ್ಪತ್ರೆಂದ ಜೀಪು ಸೀದಾ ಸ್ಟೇಷನಿಂಗೆ ಹೋತು. ಈ ಒಂದು ಪ್ರಕರಣದ ಸುತ್ತ ಆರಿಂದೆಲ್ಲ ಕೈ ಇದ್ದು ಎಂತ ಕತೆ ಹೇಳುವ ಕಾತುರದಿಂದ ಎಲ್ಲರೂ ದೂರ ದೂರ ಹೆಜ್ಜೆ ಮಡಿಕ್ಕೊಂಡು ಸ್ಟೇಷನಿನ ಒಳಂಗೆ ಹೋದವು. ಶರತ್ಚಂದ್ರ ಸ್ಟೇಷನಿಂಗೆ ನುಗ್ಗಿದವನೇ ಸೀದಾ ಹೋಗಿ ಮದನನ ಕಾಲರ್ ಹಿಡ್ದು ಕೋಪಲ್ಲಿ ಸೆಲ್ಲಿಂದ ಹೆರ ಅಂಜಲಿ ಮತ್ತೆ ಕೇಶವನ ಕಾಲ ಬುಡಕ್ಕೆ ನೂಕಿ ಹಾಕಿದ. ” ಇಪ್ಪ ಸತ್ಯ ಪೂರಾ ಮರ್ಯಾದೆಲಿ ಬಾಯಿ ಬಿಡು.. ಗೋಪಾಲಣ್ಣನ ಕೊಂದದು ನೀನೆ ಅಲ್ದ..?? ಅಂಜಲಿಯ ಹೆಣ ಹೇಳಿ ಗ್ರೇಶುಲೆ ಹುಗುದ್ದು ಆರಿನ ಹೆಣವ..?? ಬಾಯಿ ಬಿಡು ರಾಸ್ಕಲ್..” ಹೇಳಿ ಶರತ್ಚಂದ್ರ ಮದನನ ಹಿಡ್ದು ಏಳ್ಸಿದ. ಮದನ, ” ಎನಗೆಂತ ಗೊಂತಿಲ್ಲೆ.. ಎನ್ನತ್ರೆಂತ ಕೇಳೆಡಿ..” ಹೇಳಿಯಪ್ಪಗ ಶರತ್ಚಂದ್ರಂಗೆ ಉರಿ ದರ್ಸಿತ್ತು. ಮಾತೃ ಸ್ವರೂಪಿಯಾದ ಅಕ್ಕನ ಹೆಣ, ಇಷ್ಟು ದಿನ ಬಂದ ಬಂಙ ಎಲ್ಲ ಒಂದರಿಯಂಗೆ ಕಣ್ಣೆದುರೆ ಹಾದು ಹೋತು. ಚಟಕ್ಕನೆ ಮದನನ ಕೆಪ್ಪಟೆಗೊಂದು ಮಡುಗಿದ. ಶರತ್ಚಂದ್ರ ಕೊಟ್ಟ ಪೆಟ್ಟಿಂಗೆ ಮದನನ ಕೆಮಿ “ಟೀ…” ಹೇಳಿತ್ತು. ಕೆಪ್ಪಟೆಲಿ ಐದು ಬೆರಳಿನ ಅಚ್ಚು ಚಿತ್ರ ಬಿಡ್ಸಿದ ಹಾಂಗೆ ನಿಂದತ್ತು. ಸ್ಟೇಷನಿಲಿಪ್ಪವು ಪೂರಾ ಕಣ್ಣು ಬಾಯಿ ಬಿಟ್ಟುಗೊಂಡು ನೋಡಿಯೇ ಬಾಕಿ. ನಾಗರಾಜಂಗೆ ಶರತ್ಚಂದ್ರನ ಈ ವರ್ತನೆ ಮೊದ್ಲಣ ಎ ಒನ್ ಆಫಿಸರ್ ಗಜವದನನ್ನೇ ನೆಂಪು ಮಾಡ್ಸಿತ್ತು. ಶರತ್ಚಂದ್ರ ಮುಂಗೋಪಿ ಹೇಳಿ ವೀಣಾಂಗೆ ಗೊಂತಿದ್ದರೂ ಅದು ಇಷ್ಟರ ಮಟ್ಟಿಂಗೊರೆಗೆ ಇರ್ತು ಹೇಳಿ ಇಂದೇ ಗೊಂತಾದ್ದು. ಶರತ್ಚಂದ್ರನ ಕೋಪ ತಣ್ಣಂಗಾಯ್ದೇಲ್ಲೆ. ಮದನನ ಮೇಜಿನ ಮೇಲೆ ನೂಕಿ ಹಾಕಿ, ಪಿಸ್ತೂಲು ತೆಗೆದು, ” ಸುಳ್ಳು…. ಎನ್ನತ್ರೆ ಲೊಟ್ಟೆ ಹೇಳೆರೆ ಇದ್ದನ್ನೆ.. ಹಿಂದೆ ಮುಂದೆ ನೋಡೆ.. ಡೈರೆಕ್ಟ್ ಎನ್ಕೌಂಟರ್..!!! ಒಂದು ಗುಂಡು ಸಾಕು ನಿನ್ನ ಜೀವ ಹೋಯೆಕ್ಕಾರೆ..” ಹೇಳಿ ಮದನನ ಹಣೆ ಹತ್ರೆ ಪಿಸ್ತೂಲು ಮಡುಗಿದ. ಆಗಣ ಪೆಟ್ಟಿಂಗೆ ಹೆದರಿ ನಡುಗಿದ ಮದನ, ಪಿಸ್ತೂಲು ಕಂಡಪ್ಪದ್ದೇ ಬೆಗರಿ ಚೆಂಡಿ..!! ಕೂಡ್ಲೇ, “ಏ..ಏ.. ಬೇಡ.. ಬೇಡ… ಎನ್ನ ಕೊಲ್ಲೆಡಿ.. ಹೇಳ್ತೆ ಅಪ್ಪನ ಆನು ಕೊಂದದು ಅಪ್ಪು..” ಹೇಳಿ ಸತ್ಯ ಒಪ್ಪಿಗೊಂಡ. ” ಛೀ… ನಾಲಾಯಕ್ ಮನುಷ್ಯ.. ಗೋಪಾಲಣ್ಣನ ನೀನು ಕೊಂದದಾದಿಕ್ಕು ಹೇಳಿ ಊಹೆ ಇದ್ದರುದೇ, ಮನಸ್ಸಿನ ಒಂದು ಮೂಲೆಲಿ ಅಪ್ಪನ ಎಲ್ಲ ಕೊಲ್ಲುವಷ್ಟು ಕಟುಕ ಆಗಿರೆ ನೀನು ಹೇಳಿ ಆಯ್ಕೊಂಡಿತ್ತು.. ಆದರುದೆ ನಿನ್ನ ಮೋರೆಲಿ ಪಶ್ಚಾತಾಪ ಕಾಣ್ತಿಲ್ಲನ್ನೆ.. ನಾಚಿಗೆ ಆಯ್ಕು ನಿನ್ನ ಮುಸುಡಿಂಗೆ.. ಹೇಳು ಎಂತಕೆ, ಹೇಂಗೆ ಕೊಂದದು ಪೂರಾ ಹೇಳು..” ಹೇಳಿ ಶರತ್ಚಂದ್ರ ಮದನನ ಮೇಜಿಂದ ಹಿಡ್ದು ಏಳ್ಸಿದ. ಮದನ ಒಂದು ರಜ್ಜ ಸುದಾರ್ಸಿಗೊಂಡು, ಇಪ್ಪ ಘಟನೆಯ ವಿವರ್ಸುಲೆ ಸುರು ಮಾಡಿದ.
” ಆನು ಬಡವ ಆಗಿ ಹುಟ್ಟಿದ್ದೇ ತಪ್ಪಾದ್ದು.. ಸಣ್ಣದಿಪ್ಪಗಳೇ ಲಕ್ಸುರಿ ಲೈಫ್ ನ ಕನಸು ಕಂಡವ. ಸಿನೆಮಾಲ್ಲಿ ತೋರ್ಸುವ ಶ್ರೀಮಂತರಾಂಗೆ ಕೈ ಕಾಲಿಂಗೆ ಆಳುಗ, ದೊಡ್ಡ ಬಂಗ್ಲೆ, ದಿನಕ್ಕೊಂದು ಡ್ರೆಸ್, ನಿಲ್ಸುಲೆ ಜಾಗೆ ಇಲ್ಲದ್ದಷ್ಟು ವಾಹನ, ಹುಗಿವಷ್ಟು ಆಸ್ತಿ ಹೀಂಗೆ ಆನುದೆ ಇರೆಕ್ಕು ಹೇಳಿ ಹರ್ಕಟೆ ಹಸೆಲಿ ಮನಿಕ್ಕೊಂಡು ದಿನಾಗ್ಳು ಗ್ರೇಶಿಗೊಂಡಿತ್ತಿದೆ.  ಶಾಲೆಲಿ ಆಗಲಿ ಕಾಲೇಜಿಲಿ ಆಗಲಿ ಆರತ್ರೂ ಆನು ಮಿಡ್ಲ್ ಕ್ಲಾಸ್ ಫ್ಯಾಮಿಲಿಯವ ಹೇಳಿ ಹೇಳಿದ್ದೂ ಇಲ್ಲೆ, ತೋರ್ಸಿಗೊಂಡಿದೂ ಇಲ್ಲೆ. ಎನ್ನ ಫ್ರೆಂಡ್ಸ್ ಎಲ್ಲಾ ಕಾಲೇಜಿಂಗೆ ತರ ತರದ ಹೊಸ ನಮೂನೆಯ ಕಾರು- ಬೈಕಿಲಿ ಎಲ್ಲ ಬಪ್ಪಗ ಎನಗೂ ಹೀಂಗೆಪ್ಪ ಹೈ ಫೈ ಲೈಫ್ ಬೇಕು ಹೇಳಿ ಆಗಿಯೊಂಡಿದ್ದತ್ತು. ಬಡವ ಆಗಿ ಹುಟ್ಟಿದು ತಪ್ಪು ಅಲ್ಲಡ, ಬಡವ ಆಗಿ ಸಾವದು ತಪ್ಪಡ… ಹಾಂಗೆ ಕಲ್ತಾಗಿ ಒಳ್ಳೆ ಕೆಲಸ ಸಿಕ್ಕುಲೆ ಸುಮಾರು ಅಸಬಡ್ದೆ.. ಎಲ್ಲಿ ಹೋದರೂ ಜಾಸ್ತಿ ಹೇಳ್ರೆ ಹತ್ತು ಹದ್ನೈದು ಸಾವಿರ ಸಂಬಳ ಇಪ್ಪ ಕೆಲಸ ಮಾತ್ರ ಇತ್ತದು. ಹೀಂಗೆಪ್ಪ ಕೆಲಸಕ್ಕೆ ಸೇರೆರೆ ತಿಂಗಳಿಲಿ ಲಕ್ಷಗಟ್ಲೆ ದುಡಿವ ಎನ್ನ ಕನಸು ಕನಸಾಗಿಯೇ ಒಳಿಗು ಹೇಳಿ ಕೈಗೆ ಬಂದ ಕೆಲಸವ ಪೂರಾ ರಿಜೆಕ್ಟ್ ಮಾಡಿದೆ. ಕಲ್ತು ಎರಡು ವರ್ಷ ಊರಿಲಿಯೇ ಕೆಲಸಕ್ಕೇ ಹೇಳಿ ನಟ್ಟತಿರುಗಿದೆ. ಮೊದಲೇ ಮಿಡ್ಲ್ ಕ್ಲಾಸ್ ಫ್ಯಾಮಿಲಿಯವ, ಕೈಲಿ ಕೆಲಸವೂ ಇಲ್ಲೆ ಹೇಳಿಯಪ್ಪಗ ಸಮಾಜ ನಮ್ಮ ಹೇಂಗೆ ನೋಡ್ತು ಹೇಳಿ ನಿಂಗೊಗೇ ಗೊಂತು.. ಆನು ಹೇಳಿ ಆಗೆಡ.. ಈ ಟೈಮಿಲಿ ಎನ್ನ ಒಬ್ಬ ಫ್ರೆಂಡ್ ಫಾರಿನಿಲಿ ಕೆಲಸ ತೆಗೆಶಿ ಕೊಟ್ಟ.. ತುಂಬಾ ದೊಡ್ಡ ಕೆಲಸ ಅಲ್ಲದ್ರೂ ಎನ್ನ ಜೀವನಕ್ಕೆ ಬೇಕಾಷ್ಟು ಆಗಿತ್ತು ಆ ಕೆಲಸ. ಫಾರಿನಿಂಗೆ ಹೋದ ಮತ್ತೆ ಎನ್ನ ಸ್ಟಾರ್ ಚೇಂಜಾತು. ಫಾರಿನಿಲಿತ್ತ ಅಷ್ಟು ಸಮಯ ಬೇಕಾದಾಂಗೆ ಬದುಕಿದೆ. ಮನೆ ಖರ್ಚಿಂಗೆ ಅಪ್ಪನ ಬ್ರೋಕರ್ ಕೆಲಸಲ್ಲಿ ಬಪ್ಪ ಪೈಸೆ ಸಾಕು ಹೇಳಿ ಮನೆಗೆ ಪೈಸೆ ಕಳ್ಸಿಗೊಂಡಿತ್ತಿಲ್ಲೆ. ಬಂದ ಸಂಬಳ ಕೈಲಿ ನಿಂದುಗೊಂಡೂ ಇತ್ತಿಲ್ಲೆ. ಅಲ್ಲಿ ಇಲ್ಲದ್ದ ಚಟ ಪೂರಾ ಸುರಾತು, ಡ್ರಿಂಕ್ಸ್- ಪಬ್-ಬಾರ್ ಇದೆಲ್ಲ ಸಾಮಾನ್ಯ ಆತು. ಒಂದರಿ ಅಮ್ಮಂಗೆ ಸೀರಿಯಸ್ ಇದ್ದು ಅರ್ಜೆಂಟ್ ಪೈಸೆ ಬೇಕು ಹೇಳಿ ಅಪ್ಪನ ಫೋನು ಬಂತು.. ಇಷ್ಟು ದಿನ ಹುಷಾರಿದ್ದ ಅಮ್ಮಂಗೆ ಸಡನ್ನು ಸೀರಿಯಸ್ ಅಪ್ಪದು ಹೇಂಗೆ.. ಅಪ್ಪ ಎನ್ನತ್ರೆ ಪೈಸೆ ಪೀಂಕ್ಸುಲೆ ಪ್ಲಾನ್ ಮಾಡಿದ್ದೋಳಿ ಗ್ರೇಶಿ ಆಚೊಡೆಂಗೆ ತಲೆ ಹಾಕಿದ್ದೇಲ್ಲೆ. ಮತ್ತೊಂದು ದಿನ ಅಮ್ಮ ತೀರಿಹೋತು ಹೇಳಿ ಅಪ್ಪ ಹೇಳಿಯಪ್ಪಗಳೇ ಸತ್ಯಾಂಶ ಗೊಂತಾದ್ದು. ಅದಾದ ಮತ್ತೆ ಮನಸ್ಸಿಂಗೆ ನೆಮ್ಮದಿಯೇ ಇಲ್ಲೆ.. ಅಮ್ಮ ಅಂಬಗಂಬಗ ಬಂದು ಕೆಮಿ ಹತ್ರೆ, “ಎನ್ನ ಕೊಂದೆಯ ಮದನೋ..” ಹೇಳಿದಾಂಗಪ್ಪದು. ಸರಿ ಕೆಲಸಕ್ಕೂ ಹೋಪಲೆಡಿಗಾತಿಲ್ಲೆ. ಒಂದು ದಿನ ಕೆಲಸಂದ ತೆಗೆದು ಹಾಕಿದವು. ಮತ್ತೆ ದಿನಲ್ಲಿ ಒಂದರಿ ತಿಂಬಲೆ ಸಿಕ್ಕೆರೆ ಹೆಚ್ಚು ಹೇಳುವಷ್ಟಕ್ಕೆ ಬಂತು ಪರಿಸ್ಥಿತಿ.. ಇದಕ್ಕಿಂತ ಊರಿನ ಜೀವನ ಎಷ್ಟೋ ಒಳ್ಳೆದು ಹೇಳಿ ಅಂಬಗ ಕಾಂಬಲೆ ಸುರಾತು. ಆದರೆ ಇತ್ಲಗಿ ಬಪ್ಪಲೆ ಕೈಲಿ ನಯಾ ಪೈಸೆ ಇತ್ತಿಲ್ಲೆ.. ಅಕೇರಿಗೆ ಪಿಕ್ ಪಾಕೆಟ್ ಮಾಡಿ ಹೇಂಗೋ ಊರಿಂಗೆ ಬಂದು ಬಿದ್ದೆ.. ಹೀಂಗೆಲ್ಲಾ ಆದ ಮತ್ತೆ ನಾಕು ಜನರ ನಡುಕೆ ಹೇಂಗೆ ತಲೆ ನೆಗ್ಗಿ ಬದುಕುದು ಹೇಳಿ ಬೇರೆ ಹಳ್ಳಿಲಿ ಸಣ್ಣ ಮನೆ ಮಾಡಿ ಕೂದ್ದು.. ಎನ್ನ ಖರ್ಚಿಂಗೆ ಅಪ್ಪನತ್ರೆ ಪೈಸೆ ಕೇಳುಲೆ ಸುರು ಮಾಡಿದೆ..” ಹೇಳಿಯಪ್ಪಗ ಶರತ್ಚಂದ್ರ, ” ಎಷ್ಟು ಸುಲಭಲ್ಲಿ ಕತೆ ಹೇಳಿದಾಂಗೆ ಹೇಳ್ತೆ.. ನಿನ್ನ ಅಂತಸ್ತಿಂಗೆ ತಕ್ಕ ಹಾಂಗೆ ಬದುಕುತ್ತಿದ್ದರೆ ಇಂದು ಇಷ್ಟೆಲ್ಲಾ ಆವ್ತಿತ್ತಾ..??  ದೂರಂದ ಕಾಂಬದು ಎಲ್ಲವೂ ಚಂದವೇ ಹಾಂಗೇಳಿಗೊಂಡು ನಮಗೆ ಅದು ಸಿಕ್ಕೆಕ್ಕು ಹೇಳಿ ಬಲಾತ್ಕಾರಂದ ಅದರ ಗಿಟ್ಟಿಸಿಗೊಂಬಲಾಗ.. ಒಂದು ಹಣೆಬರಹ ಹೇಳಿ ಇದ್ದನ್ನೇ ಎಲ್ಲಾ ಅದರ ಹಾಂಗೆ ಅಪ್ಪದು.. ಇದಕ್ಕೆಲ್ಲ ಆರು ಕಾರಣ?? ನೀನಾ, ನಿನ್ನ ಪ್ರಾಯವ, ಅಲ್ಲ ನೀನು ಒಬ್ಬನೇ ಮಗ ಹೇಳಿ ಕೊಂಡಾಟಲ್ಲಿ ಸಾಂಕಿದ ಅಪ್ಪ ಅಮ್ಮಂದ, ಅಲ್ಲ ನಿಂಗೊಗೆ ಮಧ್ಯಮ ಕುಟುಂಬದವು ಹೇಳಿ ಹೆಸರು ಕೊಟ್ಟ ಸಮಾಜದ್ದ??? ಎಲ್ಲರೂ ತಪ್ಪಿತಸ್ಥರೇ.. ಇನ್ನು ಇದೆಲ್ಲಾ ‌ಹೇಳಿ ಎಂತ ಬಂತು.. ಅಪ್ಪದು ಪೂರಾ ಆಗಿ ಹೋತು.. ಅಷ್ಟಕ್ಕೂ ಅಪ್ಪನನ್ನೇ ಕೊಲ್ಲುವಷ್ಟು ದ್ವೇಷ ಎಂತ ಇತ್ತು ನಿನಗೆ..” ಹೇಳಿಯಪ್ಪಗ ಮದನ, “ಆನು ಅಪ್ಪನ ಕೊಂದದಪ್ಪು ಆದರೆ ಅದು ಉದ್ದೇಶ ಪೂರ್ವಕವಾಗಿ ಕೊಂದದಲ್ಲ..” ಹೇಳಿ ಆ ದಿನದ ಘಟನೆಯ ವಿವರ್ಸುಲೆ ಸುರು ಮಾಡಿದ.
ತಿಂಗಳಿಂಗೊದರಿಯಾ ಮಣ್ಣೊ ಮದನ ಗೋಪಾಲಣ್ಣನತ್ರೆ ಪೈಸೆ ಕೇಳುಲೆ ಕದ್ದು ಮುಚ್ಚಿ ಇರುಳು ಹೋಪದು. ಆದರೆ ಆ ದಿನ ಎಂತದೋ ಅಗತ್ಯ ಬಂದು ಮದನ ಹೊತ್ತೋಪಗಳೇ ಗೋಪಾಲಣ್ಣನತ್ರೆ ಪೈಸೆ ಕೇಳುಲೆ ಹೋತ. ” ಮದನೋ… ಇಂದು ಎನ್ನತ್ರೆ ಒಂದು ಪೈಸೆ ಇಲ್ಲೆ ಮಗ.. ಇನ್ನೊಂದು ವಾರಲ್ಲಿ ಹೊಂದುಸಿ ಕೊಡ್ತೆ..” ಹೇಳಿಯಪ್ಪಗ ಮದನ, “ನಿಂಗೊಗೆ ಮಗ ಹೇಳ್ತ ವಾತ್ಸಲ್ಯ ಚೂರಾದರೂ ಇದ್ದಾ..?? ಯಾವಾಗಾದರು ಒಂದರಿ ಕೇಳುದು ಅದರನ್ನುದೇ ಸರಿ ಕೊಡ್ಲೆಡಿತ್ತಿಲ್ಲೆ.. ಪೈಸೆ ಇರದ್ದೆ ಎಲ್ಲಿಗೆ ಹೋತು ನೋಡೆಕ್ಕೆನಗುದೇ..” ಹೇಳಿ ಕವಾಟಿನ ಬಾಗಿಲು ತೆಗೆದು ಯಾವಗ್ಳೂ ಪೈಸೆ ಮಡುಗುವ ಜಾಗೆ ನೋಡಿಯಪ್ಪಗ ಅಲ್ಲಿ ಗೋಪಾಲಣ್ಣ ಹೇಳಿದ ಹಾಂಗೆ ಪೈಸೆ ಇತ್ತಿಲ್ಲೆ.. ಮದನ ಆದರೂ ಬಿಟ್ಟಿದನೇಲ್ಲೆ. ಎಂತಾರು ಸಿಕ್ಕುತ್ತಾ ಹೇಳಿ ಅರಟ್ಟಿದವನ ಕಣ್ಣಿಂಗೆ ಬಿದ್ದದು ಅಬ್ಬೆಯ ಚಿನ್ನ..!!  ಗೋಪಾಲಣ್ಣ ಕೂಡ್ಲೇ ಕವಾಟಿಂಗೆ ಅಡ್ಡ ಬಂದು, “ಬೇಡ ಮದನೋ.. ಇದಕ್ಕೊಂದು ಬಗೆ ಕೈ ಹಾಕೆಡ.. ನಿನ್ನ ಅಬ್ಬೆಯ ಚಿನ್ನ… ಹಾಳು ಮಾಡೆಡ ಮಗ.. ಅದರ ಕಡೆಗಾಲಲ್ಲಿ ಮಗನ ಮದುವೆಗೆ ಹೇಳಿ ಅದುವೇ ಕಟ್ಟಿ ಮಡುಗಿದ್ದು.. ಇಷ್ಟರ ವರೆಗೆ ನೀನು ಹೇಳಿದ್ದಕ್ಕೆ ಇಲ್ಲೆ ಹೇಳಿದ್ದಿಲ್ಲೆ.. ಇದೊಂದು ಸರ್ತಿ ಹಠ ಮಾಡೆಡ..” ಹೇಳಿ ಗೋಪಾಲಣ್ಣ ಮದನಂಗೆ ಕೈ ಮುಗುದ. ” ಎಂತ… ಎನ್ನ ಮದುವೆಯ??? ಅದರ ಬಗ್ಗೆ ನಿಂಗ ಮಂಡೆಬೆಶಿ ಮಾಡುವಾಂಗೆ ನಾಟಕ ಮಾಡೆಕ್ಕೋಳಿ ಇಲ್ಲೆ.. ಈ  ಚಿನ್ನಕ್ಕೆ ನಾಕಾಣೆ ಸಿಕ್ಕುತ್ತಾ ಇಲ್ಲೆಯಾ.. ಅದರ ಈಗ ಕೊಡದ್ರೆ ಆ ಚಿನ್ನದ ಪೈಸೆ ಎನ್ನ ಬೊಜ್ಜಕ್ಕೆ ಖರ್ಚಾಕ್ಕು ಜಾಗ್ರತೆ..” ಹೇಳಿ ಗೋಪಾಲಣ್ಣನತ್ರೆ ಕಣ್ಣು ಹೊರಳ್ಸಿದ.. ಗೋಪಾಲಣ್ಣ, “ಹಾಂಗೆಲ್ಲ ಹೇಳೆಡ ಮಗ.. ಹೊಟ್ಟೆಗೆ ಪೀಶಕತ್ತಿ ಹಾಕಿದ ಹಾಂಗೆ ಆವ್ತು… ನೀನೆಂತ ಮಾಡೆರೂ ಈ ಚಿನ್ನವ ಮಾತ್ರ ಮುಟ್ಟುಲೆ ಬಿಡೆ..” ಹೇಳಿಯಪ್ಪದ್ದೆ ಮದನನ ಕೋಪ ನೆತ್ತಿಗೇರಿತ್ತು. ಇಪ್ಪ ಶಕ್ತಿ ಪೂರಾ ಹಾಕಿ ಗೋಪಾಲಣ್ಣನ ಕವಾಟಿನ ಹತ್ರಂದ ಎಳದ್ದು ನೂಕಿದ. ಮದನ ನೂಕಿದ ಪೋರ್ಸಿಂಗೆ ಗೋಪಾಲಣ್ಣನ ತಲೆ ಗೋಡೆಗೆ ಹೆಟ್ಟಿ ಗೋಪಾಲಣ್ಣ ನೆಲಕ್ಕೆ ಬಿದ್ದವು. ಮದನಂಗೆ ಚಿನ್ನ ಬಿಟ್ಟು ಕಣ್ಣಿಂಗೆ ಬೇರೆಂತದೂ ಕಂಡಿದಿಲ್ಲೆ.. ಚಿನ್ನವ ಪೂರಾ ಕಿಸೆಗೆ ತುಂಬ್ಸಿ ಇತ್ಲಗಿ ನೋಡುವಾಗ ಗೋಪಾಲಣ್ಣ ಕಣ್ಣು ಬಾಯಿ ಒಡದು ನೆಲಕ್ಕೆ ಬಿದ್ದುಗೊಂಡಿದ್ದವು. ಗೋಪಾಲಣ್ಣನ ಪ್ರಾಣಪಕ್ಷಿ ಹಾರಿ ಹೋಗಿತ್ತು.
“ಛೇ… ಎಂತ ತಪ್ಪು ಮಾಡದ್ದ ಗೋಪಾಲಣ್ಣನ ಜೀವ ಅನ್ಯಾಯವಾಗಿ ಬಲಿ ಆತನ್ನೇ.‌‌..” ಹೇಳಿ ಕೇಶವ ಕಣ್ಣ ನೀರು ಹಾಕಿದ. ಶರತ್ಚಂದ್ರ, “ಸಮಾಧಾನ ಮಾಡಿಗೊಳ್ಳಿ ಭಾವ… ಈ  ಜನಕ್ಕೆ ಚೂರುದೇ ಪಶ್ಚಾತಾಪ ಇಲ್ಲೆನ್ನೇ.. ಅದುವೇ ಕಾಂಬದು ಎನಗೆ.. ಅದೆಲ್ಲ ಸರಿ ಆದರೆ ಅಂಜಲಿಯ ಕಿಡ್ನಾಪ್ ಮಾಡಿದ್ದೆಂತಕೆ?? ನಿನ್ನೊಟ್ಟಿಂಗೆ ಇದ್ದ ಇನ್ನೊಂದು ಜನ ಆರು?? ಆ ಹೆಣ ಆರಿಂದು??” ಹೇಳಿ ಕುತೂಹಲಲ್ಲಿ ಕೇಳಿಯಪ್ಪಗ ಮದನ ಕೇಶವನ ಮೋರೆ ನೋಡಿ, “ಅದಕ್ಕೆಲ್ಲ ಕಾರಣ ಈ ಕೇಶವ ಇದ..” ಹೇಳಿದ. ಎಲ್ಲರೂ ಕೇಶವನ ಮೋರೆಯನ್ನೇ ನೋಡಿದವು.

  -ಮುಂದುವರೆತ್ತು…

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

3 thoughts on “ಒಂದು ಪ್ರಕರಣದ ಸುತ್ತ – ೧೭

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×