- ಉದ್ದಿನ ಗೊಜ್ಜಿ - December 4, 2013
- ಕೆಸವಿನೆಲೆ ಚಟ್ನಿ - November 23, 2013
- ಕಣ್ಣಿಲಿ ಕುರು ಅಪ್ಪದಕ್ಕೆಮದ್ದು - November 11, 2013
ಓ ಮೊನ್ನೆ ಹೊತ್ತೊಪ್ಪಾಗ ಚಿಟ್ಟೆಕರೇಲಿ ಕೂದುಗೊಂಡು ಸೋಗೆ ಕೆರಸಿಗೊಂಡಿತ್ತಿದ್ದೆ ಅದಾ… ಸುಮಾರು ಲಾಯಿಕ ಲಾಯಿಕದ ಸೋಗೆ ಕಾಂಬಗ ಮನಸ್ಸು ಕೇಳುತ್ತಿಲ್ಲೆ… ಹಿಡಿ ಮಾಡಿ ಮಡುಗಲಕ್ಕನ್ನೆ ಹೇಳಿ ಅಪ್ಪದು. ಕಳುದ ಸರ್ತಿ ಕೊಡೆಯಾಲಲ್ಲಿಪ್ಪ ಅಂಬಿಕೆ ಕೊಂಡೋಗಿದ್ದತ್ತು, ನಾಕು ಹಿಡಿಸೂಡಿ. ಅಲ್ಲಿ ಅವಕ್ಕೆ ಕ್ರಯ ಕೊಟ್ಟು ತೆಕ್ಕೊಳೆಕ್ಕಾವುತ್ತಡಪ್ಪ. ಉಮ್ಮ ಈ ಹಿಡಿಗೂ ಎಂತರ ಕ್ರಯ ಕೊಡುತ್ತದೊ… ಅಂತೆ ಎಂತಕೆ ಪಯಿಸೆ ಹಾಳು ಮಾಡ್ತದು ಹೇಳಿ ಈ ಸರ್ತಿಯೂ ಇಲ್ಲಿಂದಲೇ ಕೊಂಡೋಪಲೆ ಹೇಳಿದ್ದೆ…
ಹಾಂಗೆ ಸೋಗೆ ಕೆರಸಿಗೊಂಡಿಪ್ಪಾಗ ಓ ಅಲ್ಲೆ ನೆಗೆಮಾಣಿ ಬಪ್ಪದು ಕಂಡತ್ತು… ಹೆಗಲಿಲಿ ಒಂದು ಸಣ್ಣ ಗೋಣಿಯ ಕಟ್ಟವೂ ಇದ್ದತ್ತು.. ಈ ಮಾಣಿ ಪದ್ಯ ಹೇಳಿ ಎಲ್ಲೊರ ಮರುಳು ಮಾಡಿ ಎಂತಾರು ಹೊತ್ತೊಂಡು ಬಂದನೋ ಹೇಳಿ ಆತೊಂದರಿ… ಜಾಲತಲೆಂದಲೇ ಬೊಬ್ಬೆ ಹೊಡಕ್ಕೊಂಡು ಬಂದ ಅದ.. “ಅಜ್ಜೀ.. ಮಾವಿನ ಮೆಡಿ ತಯಿಂದೇ…. ಎನಗೆ ಪಾಯಸ ಮಾಡಿಕೊಡೀ…” ಹೇಳಿ… ಎಲಾ… ಮಾವಿನ ಮೆಡಿದು ಎಂತರಪ್ಪ ಪಾಯಿಸ ಹೇಳಿ ಗ್ರೇಶಿಗೊಂಡಿಪ್ಪಾಗಳೇ ಹೇಳಿದ – “ನಿಂಗೊಗೆ ಉಪ್ಪಿನಕಾಯಿಗೆ ಮೆಡಿ.. ಎನಗೆ ತಂದುಕೊಟ್ಟದಕ್ಕೆ ಪಾಯ್ಸ” ಹೇಳಿಗೊಂಡು…
ಆತನ್ನೆ ಕತೆ… ಆಗಲಿ, ಇಷ್ಟು ಸಮೆಯಲ್ಲಿ ಇದುವೇ ಸುರು ಒಂದು ಒಳ್ಳೆ ಕೆಲಸ ಮಾಡಿದ್ದದು…. ಆರ್ಲ ಸತ್ಯಣ್ಣನಲ್ಲಿಂದ ತಂದದೋ ಕಾಣ್ತು.. ಸುಮಾರು ನೆಡಕ್ಕೊಂಡು ಬಂದಿರೇಕು ಪಾಪ… ಆತೂ ಹೇಳಿದೆ…
ಭಾರೀ ಲಾಯ್ಕಿತ್ತು ಮೆಡಿ… ಘಮ್ಮನೆ ಪರಿಮ್ಮಳ… ನಮ್ಮ ತೋಟದ ಕರೆಲಿ ಅಂದು ಇತ್ತು ಇದೇ ನಮುನೆದರ ಮರ.. ಮತ್ತೆ ತೋಟಕ್ಕೆ ನೆರಳು ಹೇಳಿ ಕಡುದ್ದದು… ಚೆ ಬೇಜಾರವುತ್ತು ಗ್ರೇಶೊಗ…
ಹ್ಮ್.. ಎಂತರ ಮಾಡುದು.. ಈಗ ಇದು ರಜ್ಜ ಸಿಕ್ಕಿತ್ತನ್ನೆ… ಮತ್ತೆ ಶಾಂತಕ್ಕನೊ ಮಣ್ಣ ಕೊಡುಗು ಇದ್ದರೆ ಹೇಳಿಗೊಂಡು ಸಮಾದಾನ ಮಾಡಿಗೊಂಡದು…
ಮತ್ತೆ ಉಪ್ಪಿನಕಾಯಿ ಹಾಕುತ್ತ ಗವುಜಿ… ಈ ಸರ್ತಿ ಅದರನ್ನೇ ಮಾತಾಡುವೊ ಆಗದೋ…
ಉಪ್ಪಿನಕಾಯಿ ಮೆಡಿಯೂ ಹಾಕಲಕ್ಕು. ರಜ ಬೆಳದಿದ್ದರೆ ಹಸಿಕೆತ್ತೆಯೋ, ಹೊರುದು ಕೂಡಿಯೊ ಹಾಕಲಕ್ಕು…
ಮೆಡಿಹಾಕುತ್ತ ಕ್ರಮ:
ಮೊದಾಲಿಂಗೆ ಮೆಡಿಯ ಲಾಯ್ಕ ಉದ್ದಿ, ತೊಟ್ಟು ತೆಗದು ಉಪ್ಪಿಲಿ ಹಾಕಿ ಮಡುಗೆಕ್ಕು… ಉಪ್ಪು ಅಂದಾಜಿಂಗೆ ಹಾಕುದು. ಜಾಸ್ತಿ ಆದ ಉಪ್ಪು ಅಡೀಲಿ ನಿಂದಿರ್ತು…
ಒಂದು ಇನ್ನೂರು ಮೆಡಿಗೆ ಒಂದು ಸೇರು ಉಪ್ಪು ಬೇಕಕ್ಕು…. ಬರಣಿಲಿ ಹಾಕಿ ಮಡುಗುದು… ಈಗ ಪ್ಲೇಶ್ಟಿಕು ಕರಡಿಗೆ, ಡ್ರಮ್ಮು ಎಲ್ಲ ಬಯಿಂದದ… ಮತ್ತೆ ಈಗಾಣ ಬರಣಿಗಳೂ ಮೊದಲಾಣದ್ದರ ನಮುನೆ ಬರ್ಕತ್ತು ಇರ್ತಿಲ್ಲೆ… ಬಂಡಾಡಿ ಜೆಂಗಲ್ಲಿ ನಾಕು ಹಳೇ ಬರಣಿಗೊ ಇದ್ದದಾ… ಶಾಂತಕ್ಕನತ್ರವೂ ಇದ್ದೋಳಿ ಕಾಣ್ತು… ಕಾನಾವಿನ ಅಕ್ಕನತ್ರ ಇದ್ದೋ ಗೊಂತಿಲ್ಲೆ… ಗೋಪಾಲಣ್ಣನ ಮನೆಲಿ ಇಕ್ಕೇ ಇಕ್ಕು…
ಹ್ಮ್.. ಅದಿರಳಿ… ಉಪ್ಪಿಲಿ ಹಾಕಿ ಒಂದು ವಾರ ಮಡುಗೇಕು… ಅದಕ್ಕೆ ಎರಡು ದಿನಕ್ಕೊಂದರಿ ಕೈ ಹಾಕಿ ಮೊಗಚ್ಚಿಗೋಂಡು ಬೇಕು… ಇಲ್ಲದ್ದರೆ ಕಪ್ಪಾವುತ್ತು… ಮತ್ತೆ ಕೆಲವು ಮೆಡಿ ಕಪ್ಪಪ್ಪದು ಆಗಿಯೇ ಆವುತ್ತು ಹೇಳುವೊ.. ಎಂತ ಮಾಡುಲೂ ಎಡಿಯ….
ಒಂದು ವಾರ ಕಳುದ ಮತ್ತೆ ಹೊರಡಿ ಕೂಡುಲಕ್ಕದ…
ಉದೀಯಪ್ಪಗಳೇ ಉಪ್ಪಿಂದ ತೆಗದು ಬೆಳೀ ಬೈರಾಸಿಲಿ ಬಿಡೂಸಿ ಮಡುಗುದು… ಪಸೆ ಒಣಗಲೆ… ಉದಿಯಪ್ಪಾಗ ತೆಗದು ಮಡಿಗಿರೆ ಮದ್ಯಾನ್ಮೇಲೆ ಹೊರಡಿ ಬೆರುಸಲಕ್ಕು…
ಹೊರಡಿ ಮಾಡುಲೆ : ಸಾಸಮೆಯ ತೊಳದು ಲಾಯಿಕ ಒಣಗುಸುದು… ಮತ್ತೆ ಹೊಡಿ ಮಾಡಿ ಮಡಿಕ್ಕೊಂಬದು… ಅರಿಶಿನ ಗುದ್ದಿ ಹೊಡಿಮಾಡಿ ಮಡಿಗಿದ್ದು ಇದ್ದನ್ನೇ… ಮನೆಲೇ ಆದ ಅರಿಶಿನ ಆದರೆ ಬಾರಿ ಒಳ್ಳೆದು… ಪೇಟೆಂದ ತಂದದು ಲಾಯಿಕ ಇರ್ತಿಲ್ಲೆ… ಕೆಲವು ಸರ್ತಿ ಪರಿಮ್ಮಳವೇ ಇರ್ತಿಲ್ಲೆ… ಎಂತ ಹೊಡಿ ಕೊಡುತ್ತವೋ….
ಹ್ಮ್.. ಮತ್ತೆ ಊರ ಮೆಣಸನ್ನುದೇ ಲಾಯಿಕ ಒಣಗುಸಿ ಹೊಡಿಮಾಡುದು…. ಪ್ರಮಾಣ ಅಂದಾಜಿಂಗೆ ಹೇಳೆಕಾರೆ – ಒಂದು ಸಾವಿರ ಮೆಡಿಗೆ ೩ ಸೇರು ಒಣಗುಸಿದ ಮೆಣಸು, ಒಂದು ಸೇರು ಸಾಸಮೆ, ಒಂದು ಪಾವು ಅರಿಶಿನ ಹೊಡಿ ಬೇಕಕ್ಕು….
ಒಳ್ಳೆ ಮೆಡಿ ಆದರೆ ಹೊರಡಿಗೆ ಅದರ ಅದ್ದಿಮಡಗಿದ ಉಪ್ಪುನೀರನ್ನೇ ಸೇರ್ಸಲಕ್ಕು… ಇಲ್ಲದ್ದರೆ ಬೇರೆ ಮಾಡುದು… ಒಂದು ಎರಡು ಚೆಂಬು ನೀರಿಂಗೆ ಅರ್ದ ಸೇರು ಉಪ್ಪು ಹಾಕೆಕ್ಕಾವುತ್ತು… ಉಪ್ಪುನೀರು ಮಾಡಲೆ ಗೊಂತಿದ್ದನ್ನೆ… ಮೊದಲಿಂಗೆ ನೀರಿನ ಕೊದಿಶುತ್ತದು.. ಅದು ಕೊದುದಪ್ಪಗ ಉಪ್ಪಿನ ಹಾಕಿ ತೊಳಸುದು… ಒಳ್ಳೆ ಕೊದುದಪ್ಪಗ ಅದರ ಮೇಗಂದ ಬಾವೆಯಾಂಗೆ ಬತ್ತು ಉಪ್ಪು… ಅದರ ತೆಗದು ಮಡಿಗಿರೆ ಮೆಡಿಯ ಮೇಲೆ ಹಾಕಿ ಮುಚ್ಚಿಮಡುಗುಲೆ ಬೇಕಾವುತ್ತದು…
ಸಾಸಮೆ ಹೊಡಿ, ಮೆಣಸಿನ ಹೊಡಿ, ಅರಿಶಿನ ಹೊಡಿ ಮೂರನ್ನೂ ಉಪ್ಪುನೀರಿಲಿ ಗಟ್ಟಿಗೆ ಬೆರುಸಿ ಹೊರಡಿ ಮಾಡಿ ಮಡುಗುದು…
ಮೊದಲೇ ಮಾಡಿಮಡುಗಿರೆ ಬೇಕಾದಪ್ಪಾಗ ಉಪ್ಪಿನಕಾಯಿ ಬೆರುಸುಲಕ್ಕದ….
ಬೇಕಪ್ಪಷ್ಟು ಹೊರಡಿಗೆ ರಜ ರಜವೇ ಮೆಡಿ ಹಾಕಿ, ಉಪ್ಪು ನೀರು ಹಾಕಿ ಬೆರುಸುದು.. ಎಲ್ಲ ಆದ ಮತ್ತೆ ಬರಣಿಲಿ ತುಂಬುಸಿ, ಮೇಗಂದ ಬೇಕಾರೆ ಆಗ ತೆಗದು ಮಡುಗಿದ ಬಾವೆ ಹಾಕಿ, ಸಣ್ಣ ಬೆಳಿ ವಸ್ತ್ರದ ತುಂಡು ಮಡಿಗಿ ಮುಚ್ಚಿತ್ತು…
ಮೆಡಿ ಉಪ್ಪಿನಕಾಯಿ ಹಾಕಿ ಆತದ… ಇನ್ನು ಹದಿನೈದು ದಿನ – ಒಂದು ತಿಂಗಳು ಕಳುದು ಉಂಬಲಕ್ಕು ಹೊಸಾ ಮೆಡಿ…
ಹೊರುದು ಕೂಡಿದ್ದು:
ಇದರ ಹೊರಡಿ ಮಾಡುಲೆ : ಜೀರಿಗೆ, ಮೆಂತೆ, ರಜ ಇಂಗು, ಸಾಸಮ್ಮೆ, ಎಣ್ಣೆ ಎಲ್ಲ ಹಾಕಿ ಹೊರಿವದು ಮೊದಾಲಿಂಗೆ. ಮತ್ತೆ ಮೆಣಸು ಹೊರಿವದು.. ಎಣ್ಣೆ ಹಾಕಿಯೂ ಹೊರಿವಲಕ್ಕು, ಹಾಕದ್ದರೂ ಅಕ್ಕು…
ಮೆಣಸು ಹೊರುದಾದ ಕೂಡ್ಳೆ ಇಳಿಶಿ ಮಡಿಗಿ ಅರಿಶಿನ ಹೊಡಿ ಬೆರುಸುದು… ಮತ್ತೆ ಎಲ್ಲ ಒಟ್ಟಿಂಗೆ ಹೊಡಿ ಮಾಡಿಕ್ಕಿ ಉಪ್ಪು ನೀರು ಬೆರುಸಿದರೆ ಹೊರಡಿ ತಯಾರಾತು..
ಮಾವಿನಕಾಯಿಯ ನಾಕು ಸೀಳಿ ಕೊರದು ಸೆಕೆ ಬರುಸೇಕು.. ಸೆಕೆ ಬರುಸುದು ಗೊಂತಿದ್ದನ್ನೇ… ನೆಗೆಮಾಣಿ ಬೆಗರಾ ಹೇಳಿ ಕೇಳುಗು ಈಗ…
ಹ್ಮ್… ನೀರಿನ ಕೊದಿವಲೆ ಮಡುಗಿ, ಕೊದುದಪ್ಪಗ ಉಪ್ಪಾಕಿ ಕರಡುಸುದು… ಒಂದು ಚೆಂಬು ನೀರಿಂಗೆ ಎರಡು-ಮೂರು ಮುಷ್ಟಿ ಉಪ್ಪು ಬೇಕಕ್ಕು… ಅದು ಸರೀ ಕರಗಿ ಕೊದಿಯೆಕ್ಕು.. ಅಷ್ಟಪ್ಪಾಗ ಅದಕ್ಕೆ ಕೊರದು ಮಡುಗಿದ ಕೆತ್ತೆಯ ಹಾಕುದು… ಅದು ಹಸಿಮಾಸಿಯಪ್ಪಗ ಇಳುಗಿತ್ತು…
ಮತ್ತೆ ತಣಿವಲೆ ಬಿಡೆಕ್ಕು ಅದರ… ಒಳ್ಳೆತ ತಣುದಪ್ಪಾಗ ಹೊರಡಿ ಬೆರುಸುದು… ಕೆತ್ತೆಲಿ ಇದ್ದ ಉಪ್ಪುನೀರೇ ಅಕ್ಕು ಬೆರುಸಲೆ…
ಈ ಉಪ್ಪಿನಕಾಯಿಯ ಅಂಬಗಳೇ ಉಂಬಲಕ್ಕು….
ಹಸಿಕೆತ್ತೆ:
ಇದಕ್ಕೆ ಮೆಡಿಗೆ ಮಾಡಿದ ಹೊರಡಿಯನ್ನೇ ಬೆರುಸುತ್ತದು..
ಮಾವಿನಕಾಯಿಯ ನಾಕುಬಾಗ ಮಾಡಿ ಉಪ್ಪು ಬೆರುಸಿ ಮಡುಗುದು…. ಇಲ್ಲದ್ರೆ ಉಪ್ಪುನೀರಿಲಿ ಹಾಕಿ ಮಡಿಗಿರೂ ಅಕ್ಕು… ಅದರ ಹಸಿಕರ್ದಪ್ಪಾಗ ಹೊರಡಿ ಬೆರುಸಿರಾತು… ಉಪ್ಪುನೀರಿಲಿ ಆದರೆ ಎರಡು ದಿನಲ್ಲಿ ಹಸಿಕರಿತ್ತು… ಬರೇ ಉಪ್ಪುಬೆರುಸಿ ಮಡುಗಿದ್ದಾದರೆ ಮೂರು-ನಾಕು ದಿನ ಬೇಕಕ್ಕು….
ಇದರ ಹೊರಡಿ ಕೂಡಿದ ಒಂದು ವಾರಲ್ಲಿ ಉಂಬಲಕ್ಕು…
ಹಾಂಗೆ ಉಪ್ಪಿನಕಾಯಿಗಳಲ್ಲಿ ಸುಮಾರು ಬಗೆಗೊ ಇದ್ದಪ್ಪಾ… ಈಗ ಮಾವಿನ ಮೆಡಿಯ ಸಮೆಯ ಅಲ್ಲದೋ.. ಹಾಂಗೆ ಇದರ ಬರದ್ದದು… ಒಳುದ್ದದರ ಎಲ್ಲ ಇನ್ನೊಂದರಿ ಬರವೊ….
ಮೆಡಿ ಸಿಕ್ಕಿರೆ ನಿಂಗಳೂ ಹಾಕಿ.. ಅಜ್ಜಿಗೂ ಕಳುಸಿ ರೆಜ ರುಚಿ ನೋಡುಲೆ… ದಣಿಯ ಕಾರ ತಿಂಬಲಾಗಡ… ಅಂದರೂ ಉಪ್ಪಿನಕಾಯಿ ತಿನ್ನದ್ದೆ ಇಪ್ಪಲೆಡಿಗೋ… ಏ°?
‘ಸುಮಾರು ನೆಡಕ್ಕೊಂಡು ಬಂದಿರೇಕು ಪಾಪ’ – ಅಜ್ಜಿಗೆ ಮೆಡಿ ಕಂಡಪ್ಪಗ ಆಸರಿಂಗೆ ಕೇಳ್ಳೂ ಮರದತ್ತು!
‘ಮೆಡಿ ಕಪ್ಪಪ್ಪದು ಆಗಿಯೇ ಆವುತ್ತು ಹೇಳುವೊ.. ಎಂತ ಮಾಡುಲೂ ಎಡಿಯ….’ – ಅಜ್ಜೀ, ಮೆಡಿ ತಂಬುಳಿ ?!
‘ಸಾಸಮೆಯ ತೊಳದು ಲಾಯಿಕ ಒಣಗುಸುದು…’ – ಸಾಸಮೆ ದೊಡ್ಡದೋ ಸಣ್ಣದೋ?!!
‘ಎಣ್ಣೆ ಎಲ್ಲ ಹಾಕಿ ಹೊರಿವದು’ – ಯಾವ ಎಣ್ಣೆ ಗೊಂತಾಯ್ದಿಲ್ಲೆ.
ಹೀಂಗಿರ್ತ ಮೆಡಿಯೇ ಅಯೇಕು ಹೇಳಿ ಇದ್ದೋ ಅಲ್ಲಾ ಕೈಗೆ ಸಿಕ್ಕಿದ ಮೆಡಿ ಹಾಕಲಕ್ಕೋಪ?!
“ಮೆಡಿ ಸಿಕ್ಕಿರೆ ನಿಂಗಳೂ ಹಾಕಿ.. ” ಎನಗೆ ಮೆಡಿ ಸಿಕ್ಕಿದ್ದಿಲ್ಲೆ. ಬರಣಿ ಹಿಡ್ಕೊಂಡು ಬಪ್ಪೋದೇ ನಿಂಗಳಲ್ಲಿಗೆ ಅಜ್ಜಿ ಆಗದೋ ಏ.
ಅಜ್ಜೀ, ನಿಂಗಳ ಮೆಡಿ ಉಪ್ಪಿನಕಾಯಿ ಮಾಡ್ತ ವಿವರ ಲಾಯಕಾಯಿದು. ಈಗಾಣ ಕಾಲದವಕ್ಕೆ ಹೇಳಿ ಮಾಡುಸಿದ ಲೇಖನ. ಇದರ ಓದಿ ಅಪ್ಪಗ ಎನ್ನದೊಂದು ಕವನ ನೆಂಪಾವುತ್ತಾನೆ.
ಮಂಗಳೂರು ಹುಡುಗಿಯರೇನು ಮಹಾ ಬಿಡಿ,
ನನ್ನ ಅಜ್ಜಿ ಯೂ ಹಾಕುತ್ತಾಳೆ, ಮಿಡಿ………
ಮಿಡಿ ಉಪ್ಪಿನಕಾಯಿ.
(ಬಂಡಾಡಿ ಅಜ್ಜಿಯೊ, ಉಮ್ಮಪ್ಪ). ಅದು ಹಾಂಗಿರಳೀ.
ಆನಂಬಗ ಒಂದು ತಿಂಗಳು ಬಿಟ್ಟು ಬತ್ತೆ ನಿಂಗಳಲ್ಲಿಗೆ, ಈಗಳೇ ಬಂದರೆ, ಹೊರಡಿ ಮೆಡಿ ಒಟ್ಟಿಂಗೆ ಸರೀ ಸೇರಿ ಬಂದಿರ.
ಮೆಡಿ ಉಪ್ಪಿನ ಕಾಯಿಯ ತಂಬುಳಿ ಮಾಡಿರೆ ಲಾಯಕಾವುತ್ತು ಅಲ್ಲದೊ ಅಜ್ಜಿ. ಎಂಗೊ ಎಲ್ಲ ಸಣ್ಣ ಇಪ್ಪಗ, ಕಾರ ಆವುತ್ತಕ್ಕೆ ಬೇಕಾಗಿ ಮೆಡಿ ಉಪ್ಪಿನಕಾಯಿಯ ತೊಳದು ತಿಂದೊಂಡು ಇದ್ದಿದ್ದೆಯೊ. ಎಲ್ಲಾ ನೆಂಪಾವುತ್ತ ಹಾಂಗೆ ಮಾಡಿದಿ. ಅದರ ಒಳಾಣ ಹೂಂಗು (ಕೋಗಿಲೆ ಹೇಳ್ತವು ಕೆಲವು ಜೆನ) ತಿಂಬಲುದೆ ಭಾರಿ ಲಾಯಕಾವುತ್ತು. ಧನ್ಯವಾದಂಗೊ ಅಜ್ಜಿ.
ಉಪ್ಪಿನಕಾಯೈ ಭಾರಿ ಲಾಯಿ ಕಆಯಿದು
firstaaydu uppinakayi.
ರಜ ಪ್ರಿ೦ಟು ಮಿಶ್ತೇಕು ಆತದ ಹೊರುದು ಹೊರಡಿಹೇಳಿ ಆಯೇಕು ಹಾ೦ಗೆ ಖಾರ ಹೆಳ್ತದು ಆರ ಹೇಳಿ ಆಯಿದದ. ಭೂಪಣ್ಣ೦ಗೆ ಹೇಳಿ ಓದಿಯೋಳಿ.ಪ್ರಾಯ ಆತದ ಹಾ೦ಗಾಗಿ ಹಿ೦ಗೆಲ್ಲ ಆವುತ್ತಿದ.ಒಪ್ಪ೦ಗಳೊಟ್ಟಿ೦ಗೆ.
ಈ ವರ್ಷ ಮೆಡಿಯೂ ಇದ್ದು ಅಜ್ಜಿ ಬೈಲಿನೋರಿ೦ಗೆ ಹೇಳಿಯೂ ಕೊಟ್ಟತ್ತು ಉಪ್ಪಿನಕಾಯಿ ಸಮ್ರುದ್ದಿ ಆಗಲಿ.ಮತ್ತೆ ಬೋಸಭಾವ೦ಗೆ ಹೊರುದು ಹೊರದಿದ್ದೆ ಅಕ್ಕು.ಆ ನೆಗೆಗಾರ ಮಾಣಿಗೆ ಮೆಡಿ ಕೊಡುವಾಗಾ ತೊಳದೊ ಕೊಟ್ಟಿಕ್ಕಿ ಇಲ್ಲದ್ರೆ ಮತ್ತೆ ಆರ ಆತು ಹೇಳಿ ಐಸುಕ್ರೀಮೊ ಮತ್ತು ಕೇಳುಗು.ಭೂಪಣ್ಣ೦ಗ್ರಎ ರಜೆ ಹಾಕಲೂ ಆಚಮನೆ ರಾಧಕ್ಕನತ್ರೆ ಮಾತಾಡ್ಲೆ ಕಾರಣವೂ ಸಿಕ್ಕಿತ್ತದ.ಒಪ್ಪ೦ಗಳೊಟ್ಟಿ೦ಗೆ.
ಉಪ್ಪಿನಕಾಯಿ ಈ ವರ್ಷ ತುಂಬಾ ಹಾಕೆಕ್ಕಕ್ಕು ಅಜ್ಜಿ.
ಎಲ್ಲರೂ ಕೇಳುತ್ತವನ್ನೆ?
ಉತ್ತಮ ಲೇಖನ.
ಅಜ್ಜೀ…
ಆಹಾ.. ಉಪ್ಪಿನಕಾಯಿ ಲೇಖನ ಓದುವಗ ಒಟ್ಟಿ೦ಗೆ ಉಪ್ಪಿನ ಕಾಯಿ ಚಿತ್ರವೂ ನೋಡಿ ಅಪ್ಪಗ ಊರಿ೦ಗೆ ಹೋಗಿ ಉ೦ಡ ಹಾ೦ಗೆಯೆ ಆತು. ಲೇಖನ ಮೆಡಿ ಉಪ್ಪಿನ ಕಾಯಿಯ ಹಾ೦ಗೆಯೆ ಲಾಯಿಕ ಆಯಿದು…
ಮನೆಲಿ ಹಾಕಲೆ ಹೇಳಿ ಭೂಪಣ್ಣ, ಮತ್ತೆ ಆ ವಾರಲ್ಲಿ ಐದು ದಿನವೂ ರಜೆ ಮಾಡ್ಳಕ್ಕು 😉
ಕಾರಣ ಇದ್ದೊಂಡೇ 😉
ಅದು ಸರಿ,ಮೋರೆ ಮೋರೆ ನೋಡ್ಯೊ೦ಡು ಪದ್ಯ ಹೇಳಿರಾತೊ?
ಬೆಂಗುಳೂರಿಲಿ ಮೆಡಿ ಸಿಕ್ಕುತ್ತೋ..? ಹಾಕಿದ್ದೋ ಉಪ್ಪಿನಕಾಯಿ ಅಲ್ಲಿ..?
ಅಜ್ಜಿ, ‘ಇಡಿಕ್ಕಾಯಿ’ ಹಾಕುತ್ತದರ ಹೇಳ್ಳೆ ಬಿಟ್ಟೋತೋ?
ಇಡಿಕ್ಕಾಯಿಗೆ ಮಾವಿನಕಾಯಿ ಬೆಳೆಯೆಡದೋ?
ಅದಪ್ಪಪ್ಪಾ..
ಅಜ್ಜಿ ಮಾಂಬ್ಳ ಎರವಲೆ ಹೇಳಿಕೊಡುವ ಮದಲು ಇಡಿಕ್ಕಾಯಿ ಹಾಕಲೂ ಹೇಳಿಕೊಡ್ಳಿ ಹೇಳಿ ಅಜ್ಜಿಗೆ ನೆಂಪು ಮಾಡಿದ್ದು ಅಷ್ಟೆ 🙂
ಅದೇ ಈಗ ಮಾವಿನಕಾಯಿ ಬೆಳದ್ದಿಲ್ಲೆ ಅಲ್ಲದೋ.. ಮತ್ತೆ ಇಡಿಕ್ಕಾಯಿ ಹಾಕುವೊ….
ಉಪ್ಪಿನಕಾಯಿ ಬಗ್ಗೆ ಹೆಚ್ಚು ಅಭಿರುಚಿ ಇಲ್ಲದ್ದ ಎನ್ನ ಬಾಯಿಲಿ ನೀರೂರಿಸಿತ್ತು ಈ ಲೇಖನ.
ಧನ್ಯವಾದಂಗೊ
ಅಪ್ಪಡ ಭಾವಾ..
ಕೆಲವು ಅಜ್ಜಿಯಕ್ಕೊ ಮೆಡಿ ತೊಟ್ಟು ಮುರಿವಗ ರಟ್ಟುವ ಸೊನೆಯ ಒಂದು ಕರಟಲ್ಲಿಯೊ ಮಣ್ಣೊ ಸಂಗ್ರಹಮಾಡಿ ಮತ್ತೆ ಅದರ ಹೊರಡಿಯೊಟ್ಟಿಂಗೆ ಸೇರ್ಸುಗಡ!
ಭಾರೀ ಕಡ್ಪ್ಪದ ಅಜ್ಜಿಯಕ್ಕೊ ಆಗಿಕ್ಕು..
ಮೆಡಿ ಕೊಯ್ಶಿದ್ದೂ ಉಪ್ಪಿನಕಾಯಿಯ ಮಾಡುವ ವಿಧಾನ ಸಿಕ್ಕಿದ್ದೂ ಒಟ್ಟಿ೦ಗೆ ಆದ್ದದೇ ವಿಶೇಷ ಹೇಳಿ ಹೇಳುವ ಹಾ೦ಗೆ,ಸಕಾಲಿಕ.ಅಜ್ಜೀ,ಮೆಡಿಯ ಸೊನೆಗೆ ಕಿಚ್ಚು ಕೊಟ್ಟು ಗುಣ ನೋಡೆಕ್ಕಡ ಅಲ್ಲದೋ?
ಸೊನೆ ಒಳ್ಳೆತ ಇದ್ದರೆ ಒಳ್ಳೆ ಮೆಡಿ ಹೇಳಿ ಲೆಕ್ಕ ಅದಾ.. ಈಗ ಹಾಂಗೆಲ್ಲ ನೋಡಿಗೊಂಡು ಕೂದರೆ ಮೆಡಿ ಹಾಕಲೇ ಇಲ್ಲೆ ಹೇಳಿ ಅಕ್ಕು…
ಪೂರ ಮರ ಕಡುದೋ, ಕೆಲವು ಫಲ ಬಾರದ್ದೆಯೋ ಒಟ್ಟಾರೆ ಮೆಡಿ ಸಿಕ್ಕುದೇ ಅಪುರೂಪ ಆಯಿದು…
ಅಜ್ಜೀ, ಒಳ್ಳೆ ಸಮಯಕ್ಕೇ ಉಪ್ಪಿನಕಾಯಿ ಶುದ್ದಿ ಹೇಳಿದ್ದಿ. ಲಾಯ್ಕಾಯಿದು. ಬೇರೆ ಬೇರೆ ಉಪ್ಪಿನ ಕಾಯಿಗಳನ್ನೂ ಬೈಲಿಂಗೆ ಹೇಳಿ ಕೊಡಿ ಅಜ್ಜೀ.. ಅನುಭವಸ್ಥರಂದ ಬಂದರೇ ಗೊಂತಪ್ಪದು ವಿಷಯಂಗ, ಬೇಗ ಅರ್ತ ಅಪ್ಪದುದೇ!!
ನಿಂಗೋ ಹೀಂಗೆ ಅಂಬಗಂಬಗ ತಿಂಬಲೆ ಬಗೆ ಬಗೆ, ಬೇಕಾದ ಹಾಂಗೆ ಮಾಡಿ ಕೊಟ್ಟು ನೆಗೆಮಾಣಿಯ ಉರುಟು ಮಾಡ್ತಾ ಇದ್ದಿ. 🙂 😉
ಅವ° ಈಗ ಮಾಷ್ಟ್ರುಮಾವನ ಮನೆ ಹೊಡೆಂಗೇ ತಲೆ ಹಾಕಿದ್ದಾ ಇಲ್ಲೆ ಇಂಗ್ಳೀಶು ಕಲಿವಲೆ!! ನಿಂಗೊ ಬೈದ ಹಾಂಗೆ ಮಾಡುದು ಮಾಂತ್ರ ಹೇಳಿ ಗೊಂತಾಯಿದು ಅವಂಗೆ!! 😉 🙂
{ ನಿಂಗೊ ಬೈದ ಹಾಂಗೆ ಮಾಡುದು ಮಾಂತ್ರ ಹೇಳಿ ಗೊಂತಾಯಿದು ಅವಂಗೆ }
ಇಲ್ಲೆಲ್ಲೆ, ಗೊಂತಾಯಿದಿಲ್ಲೆ 😉 😉
ಶ್ಶ್..!!
ಅಪ್ಪು ನೀನು ಹೇಳಿಯಪ್ಪಗಳೇ ನೆನಪ್ಪಾದ್ದದ ನೆಗೆಮಾಣಿಯ ಕಲಿತ್ತ ಶುದ್ದಿ…
ನೆನಪ್ಪು ಮಾಡಿದ್ದದು ಒಳ್ಳೆದಾತು….
ಅಜ್ಜೀ..
ಒಂದು ಭರಣಿ ಉಪ್ಪಿನಕಾಯಿ ಎನಗೆ…
ಮೆಡಿ ತಪ್ಪಲೆ ಆನಾಯೆಕ್ಕು, ಭರಣಿ ತೆಕ್ಕೊಂಡೋಪಲೆ ತೆಕ್ಕುಂಜೆ ಕುಮಾರಣ್ಣನಾ?
ಮತ್ತೆ ಎನ್ನ ಖೆಣಿಯ ಹೇಳಿ ಬೈವಲೆ! 🙁
ಅದಾಗ. ಆರಿಂಗೆ ಕೊಟ್ರೂ ಈ ಅಣ್ಣಂಗೆ ಈ ಒರಿಶ ಕೊಡ್ಳಿಲ್ಲೆ.
ಬಪ್ಪೊರ್ಶ ಮೆಡಿ ತರ್ಲಿ, ಬರಣಿ ತೆಕ್ಕೊಂಡೋಗಲಿ ಬೇಕಾರೆ 😉
ಈಗ ಹಾಕಿದ್ದಷ್ಟರಲ್ಲಿ ಒಂದು ಭರಣಿ ಕೊಡ್ತಷ್ಟೆಲ್ಲ ಇಲ್ಲೆಪ್ಪಾ… ಇನ್ನೊಂದು ನಾಕು ಸರ್ತಿ ಹಾಕಿದರೆ ಕೊಡುಲಕ್ಕು…
ಭರಣಿ ಬಪ್ಪ ವರ್ಶ ಕೊಡಿ( ಖಂಡಿತ..), ಆದರೆ ನಾಲ್ಕು ಮೆಡಿ, ಬಾಡಂಗಟೆದು ಆದರೂ ಅಕ್ಕು, ಈ ನಗೆಗಾರ ಮಾಣಿಯ ಬಿಟ್ಟ ಬಾಯಿ ಒಳಂಗೆ ತುಂಬುಸುಲೆ ಬೇಕಾತು. ಸಿಕ್ಕುಗೊ ಅಜ್ಜಿ….
ಮೆಡಿ ಉಪ್ಪಿನ ಕಾಯಿಯ ಚಿತ್ರಲ್ಲಿ ನೋಡಿಯಪ್ಪಗಳೇ ಬಾಯಿಲಿ ನೀರು ಬತ್ತು …………
ಅಪ್ಪೋ ಅಜ್ಜಿ,ಉಪ್ಪಿನಕಾಯಿ ಮಾಡುವಾಗ ಮೆಡಿ ಚಿರುಟೆಕ್ಕಾರೆ ಅದರ ಮೇಗೆ ಏನಾರೂ ಭಾರ ಮಡಗೆಕ್ಕು ಹೇಳ್ತದು ಅಪ್ಪೋ?
{ಅದರ ಮೇಗೆ ಏನಾರೂ ಭಾರ ಮಡಗೆಕ್ಕು}
ಹ್ಮ್, ಭರಣಿಯ ಮೇಗೆ ಕಡವಕಲ್ಲು ಮಡುಗುದೊಳ್ಳೆದು! 😉
ಆನು ಮಡುಗಿರೆ ಎನ್ನ ಬೆನ್ನು ಚಿರುಟುಗು, 🙁
ನಿಂಗೊ ನೋಡಿ ಬೇಕಾರೆ 😉
ಕಡವಕಲ್ಲು ಈಗ ಸಿಕ್ಕುತ್ತಿಲ್ಲೆನ್ನೆಪ್ಪಾ,ಗ್ರೈಂಡರ್ ಅಕ್ಕೋ ಏನೋ?
ಕೇಜಿ ಮಾವಾ,
ಗ್ರೈ೦ಡರ್ ಆಗದ್ದೆ ಇಲ್ಲೆ,ಅ೦ಬ್ರೇಪಿಲಿ ಸ್ವಿಚ್ಚು ಹಾಕಿ ತಿರುಗ್ಸಿರೆ ಭರಣಿ ಹೊಡಿ ಅಕ್ಕೂ..ಹಾ೦..
ಕಡವಕಲ್ಲು ಎಲ್ಲಿಗೇ..? ಸುಮ್ಮನೇ ಪೆರಟ್ಟು ಮಾತಾಡ್ತದು… ಭರಣಿ ಮೇಗಂದ ಮಡಗಿರೆ ಭರಣಿ ಒಳಿಗೋ…
ಅಲ್ಲ, ನಿನಗೆ ಕಡವಕಲ್ಲು ಹಂದುಸಲಾದರೂ ಎಡಿಗೋ..?
ಅಪ್ಪಪ್ಪು.. ಅದು ಹೇಳುಲೆ ಮರದತ್ತದ… ಉಪ್ಪಿಲಿ ಹಾಕಿ ಮಡುಗುವಾಗ ಅದರ ಮೇಗಂದ ಬಾಳೆ ಕೀತು ಮಡಿಗಿ ಒಂದು ಕಲ್ಲು ಮಡುಗುತ್ತದು.. ಬಾದಿ ಇಪ್ಪಂತದ್ದು…
ಈ ಉಪ್ಪಿನಕಾಯಿ ಶುದ್ದಿ ಮಾತಾಡುವಗಳೆ ಬಾಯಿಲಿ ನೀರು ಬತ್ತು.ಸೇಮಗೆ+ತೆಂಗಿನೆಣ್ಣೆ+ಮೆಡಿ ಉಪ್ಪಿನಕಾಯಿ ಎಸರು -ಒಳ್ಳೆ ಕೋಂಬಿನೇಶನ್. ೩೦ ವರ್ಷ ಹಿಂದೆ ಆನು ಉಡುಪಿಲಿಪ್ಪಗ ಏಲ್ಲಾ ತರದ ಉಪ್ಪಿನಕಾಯಿ ಮಾಡಿಗೊಂಡಿತ್ತಿದ್ದೆ. ಬೆಂಗ್ಳೂರಿಂಗೆ ಬಂದ ಮತ್ತೆ ಊರಿನ ಉಪ್ಪಿನಕಾಯಿಗೆ ಊರೆ ಗತಿ. ಅಂಬಗ ನೀರು ಮಾವಿನಕಾಯಿ, ಉಪ್ಪಿನಕಾಯಿ, ಸೊಳೆ ಹಾಕಿಗೊಂಡಿದ್ದ ನಾಲ್ಕೈದು ಭರಣಿಗಳ ತೆಕ್ಕೊಂಡು ಬಂದು, ಬಾಡಿಗೆ ಮನೆ ಬದಲಿಸಿದಲ್ಲಿಗೆಲ್ಲಾ ಕಟ್ಟಿಗೊಂಡು ಬಂದು ಮನೆಲಿ ತಮಾಷೆ ಮಾಡ್ಸಿಗೊಂಡೆ. ಎಂತಗಿಪ್ಪದದು! ಕಾಲಿ ಭರಣಿ ಹೊತ್ತುಗೊಂಡು ತಿರುಗುದು? ಹೇಳಿ. ಈ ಭರಣಿ ಮಾತ್ರ ಅಲ್ಲ, ಕಡವ ಕಲ್ಲು, ಮೆಟ್ಟುಕತ್ತಿ, ಸೇಮಗೆ ಮುಟ್ಟು. ಕಂಚಿನ ಉರುಳಿ ಎಲ್ಲ ಉಪಯೋಗ್ಸುತ್ತೋ ಇಲ್ಲೆಯಾ ಎಲ್ಲ ಬೇಕೆನಗೆ. ಈ ಬಂಡಾಡಿ ಅಜ್ಜಿಯ ಉಪ್ಪಿನಕಾಯಿ, ಭರಣಿ ಎಲ್ಲ ನೋಡಿಯಪ್ಪಗ ನೊಸ್ಟೆಲ್ಜಿಯಾ ಹೇಳಿಯೋ ಎಂತದೋ ಹೇಳ್ತವಲ್ಲದಾ ಹಾಂಗಾತೆನಗೆ. ಈ ಸರ್ತಿ ಸಿಟಿ ಮಾರ್ಕೆಟಿಂಗೆ ಹೋಗಿ ಮೆಡಿ ಹುಡ್ಕಿ ತಂದು ಈ ಭರಣಿಗೊಕ್ಕೆ ಒಂದು ಗತಿ ಕಾಣ್ಸೆಕ್ಕೆನಗೆ. ಈ ಒಪ್ಪ ಬಾರಿ ಉದ್ದ ಅತೋ ಹೇಳಿ. ಹಾಂಗಾರೆ ಕಾಂಬೊ. ಬೈಲಿನವಕ್ಕೆಲ್ಲ ನಮಸ್ಕಾರ.
ಆಗಲಿ ಅಕ್ಕೊ… ಈ ಸರ್ತಿಲಿ ಉಪ್ಪಿನಕಾಇ ಹಾಕಿ ಅಜ್ಜಿಗೂ ರೆಜ ಕೊಟ್ಟಿಕ್ಕು…
ಲೇಖನ ಒಪ್ಪ ಆಯಿದು.
{ಸಾಸಮೆ ಹೊಡಿ, ಮೆಣಸಿನ ಹೊಡಿ, ಅರಿಶಿನ ಹೊಡಿ ಮೂರನ್ನೂ ಉಪ್ಪುನೀರಿಲಿ ಗಟ್ಟಿಗೆ ಬೆರುಸಿ ಹೊರಡಿ ಮಾಡಿ ಮಡುಗುದು…}
ಸುಮ್ಮನೆ ಹೊರಡಿಯ ಕೈಲಿ ಬೆರುಸುದರ ಬದಲು ರಜ್ಜ ಮಿಕ್ಸಿಲಿ ಹಾಕಿ ತಿರುಗಿಸಿದರೆ ಇನ್ನುದೆ ರುಚಿ ಆವ್ತು….
ಅಕ್ಕೋ ಏನೊ.. ಮಿಸ್ಕಿ ತಿರುಗುಸಲೆ ಒಪ್ಪಕ್ಕ ಬರೆಕಷ್ಟೆ ಇದಾ… ಅದಕ್ಕೆ ಶಾಲೆ ಕೆಲಸ ಜೋರೋ ಕಾಣ್ತು..
ಅಜ್ಜಿ, ಉಪ್ಪಿನಕಾಯಿ ಕಾಂಬಗ ತಿನ್ನೆಕು ಹೇಳಿ ಆಶೆ ಆವುತ್ತು. ವ್ಹಾ…. !!! ಭಾರೀ ಫಸ್ಟ್ ಇದ್ದು… ಉಪ್ಪಿನಕಾಯಿ ಮಾಡು ವಿವರಿಸಿದ್ದುದೆ ಫಸ್ಟಾಯಿದು. ಧನ್ಯವಾದಂಗೊ ಅಜ್ಜಿ. ಆನು ಬಂಡಾಡಿಗೆ ಬಂದರೆ ಎಂತ ಹೇಳಿ ಇದ್ದೆ, ರುಚಿ ರುಚಿಯಾದ ಉಪ್ಪಿನಕಾಯಿಯ ಸವಿಯಲೆ. ಃ)ಃ)
ನಿಂಗಳಲ್ಲಿ ಹಾಕಿದ್ದೋ..?
ಬಂಡಾಡಿಗೆ ಬಪ್ಪಲಕ್ಕು… ಬೇಕಾದಷ್ಟು ಕೊಡುವೊ.. ಆತೊ..?
ಹಾ.. ಹಾ.. ಹಾ….!!!
ಒಟ್ಟಿ೦ಗೆ ಮೊಸರನ್ನ, ಹಸಿ ಮೆಣಸು ಉಪ್ಪು ಹಾಕಿದ ಕಾರ ಮಜ್ಜಿಗೆ ಒ೦ದು ಲೋಟ.. ಈ ಉಪ್ಪಿನ ಕಾಕಿ ಹಾಕಿ ಕಲಸಿ ತಿ೦ದರೇ..!! 😛
ಹಾ..!! ಆ ರುಚಿಯೇ ಬೇರೆ.. 😉
ನಮ್ಮ ಗುರಿಕ್ಕಾರಿ೦ಗೆ ಭಾರಿ ಪ್ರೀತಿ ಅಡ ಮೊಸರನ್ನ 😀 .. ಪೆ೦ಗಣ್ಣ ಹೇಳಿದ..
ಯೇ ನೆಗೆಗಾರ ಮಾಣೀ.. ರಜ ದೂರ ನಿಂದಂಡು ಬಾಯಿ ನೀರರುಶು. ಪಸೆ ತಾಗಿರೆ ಉಪ್ಪಿನಾಯಿ ಹಾಳಕ್ಕು.
ಅಜ್ಜಿ ಪಾಯಸ ಕೊಟ್ಟಿದಿಲ್ಲೇಳಿ ಬೇಜಾರು ಮಾಡ್ಡ. ಒಂದೈನೂರೊ ಸಾವಿರವೊ ‘ಊಚು’ ಮೆಡಿ ಸಂಪಾದುಸಿ ಎಂಗಳಲ್ಲಿಗೆ ಕೊಂಡ. ನಿನಗೆ ಪಾಯಸವೊ ಹೋಳಿಗೆಯೊ- ಬೇಕಾದ್ದು ಕೊಟ್ಟು ಸಮ್ಮಾನ ಮಾಡುವೊ.
( ಅಲ್ಲದ್ರು, ನಿನಗೊಂದು ‘ಸಮ್ಮಾನ’ ಮಾಡೆಕ್ಕು ಹೇಳಿ ಎಂಗೊ ಕಾವದು ಹನಿಯ ಕಾಲ ಆತು ಮಿನಿಯ.. 😉 )
ಅಜ್ಜೀ, ಉಪ್ಪಿನಕಾಯಿ ಶುದ್ದಿ ಚೀಪೆಚೀಪೆ – ಪಷ್ಟಾಯಿದು. ಪಟ ನೋಡಿರೆ ಬಾಯಿಲಿ ನೀರು ಬತ್ತು 🙁
{ ನಿಂಗೊಗೆ ಉಪ್ಪಿನಕಾಯಿಗೆ ಮೆಡಿ.. ಎನಗೆ ತಂದುಕೊಟ್ಟದಕ್ಕೆ ಪಾಯ್ಸ }
– ಇದಕ್ಕೆ ಉತ್ತರ ಎಂತೂ ಇಲ್ಲೆನ್ನೆ ಶುದ್ದಿಲಿ? ಪಾಯ್ಸ, ಪಾಯ್ಸ? 😉
ಮೋಸ..! ಬಂಡಾಡಿ ಅಜ್ಜೀ, ಈ ಉಂಡಾಡಿ ನೆಗೆಮಾಣಿ ಬರೇ ಮೋಸ!!
ಲಾಯ್ಕದ ಮೆಡಿ ಹೇಳಿ ಕೊಯ್ವಗ ಬಿದ್ದ;ಬಾಡ್ಕಟೆ ಮೆಡಿಯನ್ನೂ ಸೇರ್ಸಿ ತಂದು ನಿಂಗೊಗೆ ‘ಹಿಡುಶಿದ್ದ’!
ನೋಡಿ ಬೇಕಾರೆ- ಉಪ್ಪಿಂದ ತೆಗದು ಮಡುಗಿದ ಮೆಡಿ ಅರೆವಾಶಿಯೂ ಕಪ್ಪಾಯಿದು. ಅದರ ಇನ್ನು ಬಲುಗಿ ಇಡ್ಕೆಕ್ಕಷ್ಟೆ.
{ ಬಿದ್ದ;ಬಾಡ್ಕಟೆ ಮೆಡಿಯನ್ನೂ ಸೇರ್ಸಿ }
ಕೊಕ್ಕೆಲಿ ಒಂದೊಂದೇ ಕೊಯ್ಯೆಡದ, ಅಷ್ಟು ಕೊಯಿದಪ್ಪಗ ಕಸ್ತಲೆ ಕಸ್ತಲೆ ಆತು.
ಹಾಂಗೆ ಮತ್ತೆ ಇರುಳಪ್ಪ ಮೊದಲೇ ತಂದುಕೊಡ್ಳೆ ಹೇಳಿ ಬೇಗಬೇಗ ಹೆರ್ಕಿದ್ದು.
😉
ಅಜ್ಜಿಗೆ ಅದೆಲ್ಲ ಕಂಡಿದಿಲ್ಲೆ, ಹಾಂಗಾರೆ ಇದರ ತೆಕ್ಕುಂಜೆ ಕುಮಾರಣ್ಣಂಗೆ ಕೊಡುವೊ, ಆಗದಾ? 😉
ಒಳ್ಳೆ ಜೀರಕ್ಕಿಮೆಡಿದು ಬೇರೆ ಇದ್ದು, ಅದು ನವಗಾತು 😉
ಏ ಮಾಣಿ.. ಅದು ಮರಕ್ಕೆ ಹತ್ತಿ ಕೊಯಿದು ಇಳುಶಿದ್ದದು ಅಲ್ಲದೋ ಅಂಬಗ..?
ಆನು ನಿನ್ನ ನಂಬಿ ಮೆಡಿಹಾಕಿದೆನ್ನೇ…. ಹಾಳಾದರೆ ಚಪ್ಪೆ ಪಾಯಸ ಮಾಡಿಕೊಡೊದು ಮತ್ತೆ.. ಹಾ…
ಅದಾಗ… ನಿನಗೆ ಪಾಯ್ಸ ತಿಂಬವಂಗೆ ಉಪ್ಪಿನಕಾಯಿ ಎಂತಕೆ ? ನೀನು ಪಾಯ್ಸ ತಿನ್ನು, ಉಪ್ಪಿನಕಾಯಿ ಎನಗೆ ಇರ್ಲಿ..
ಮಾಡಿಕೊಡುವೊ… ಮೆಡಿ ಸಿಕ್ಕಿದ ಕೊಶಿಲಿ ನಿನ್ನ ಕಲ್ಲಿತ್ತ ಶುದ್ದಿ ಕೇಳುಲೆ ಮರದತ್ತದ… ಎಲ್ಲಿಗೆತ್ತಿತ್ತು ಕಲಿವದು…?
ಉಪ್ಪಿನಕಾಯಿಯ ಪಟ ನೋಡಿಯಪ್ಪಗಳೇ ಲಾಯ್ಕ ಕಾಣ್ತು..ಇನ್ನು ರುಚಿಯಂತೂ ತುಂಬಾ ತುಂಬಾ ಲಾಯ್ಕಿಕ್ಕು. ಬೇಸಗೆ ರಜೆಲಿ ಬಂಡಾಡಿ ಅಜ್ಜಿಯಲ್ಲಿಗೆ ಹೋಗಿ ಉಪ್ಪಿನಕಾಯಿ ರುಚಿ ನೋಡೆಕು 😉
ಓ ಧಾರಾಳ ಬಪ್ಪಲಕ್ಕಪ್ಪ…