ಬಾಳೆದಂಡಿನ ಪಾಯಸ
ಎನ್ನ ಫ್ರೆಂಡ್ ಗೊ ಯಾವಾಗಲೂ ನೆಗೆ ಮಾಡುಗು. ನಿಂಗೊಗೆ ಸಕ್ಕರೆಯಾ ಬೆಲ್ಲವೂ ಇದ್ದರಾತು ನಿಂಗೊ ಬಾಳೆದಂಡನ್ನೂ ಪಾಯಸ ಮಾಡುವಿ ಹೇಳಿ. ಶಾಲೆಗೆ ಹೋಪಗ ದೊಡ್ಡ ವಿಷಯ ಆಗಿತ್ತಿಲ್ಲೆ. ಆದರೆ ಈಗ, ಸೌಟು ಕೈಲಿ ಹಿಡದ ಮತ್ತೆಯೂ ಹಾಂಗೆ ನೆಗೆ ಮಾಡಿರೆ ಕೇಳಿಕೊಂಡು ಇಪ್ಪಲೆ ಎಡಿಗಾ ಹೇಳಿ?
ಅದಕ್ಕೆ ಸರಿಯಾಗಿ ಕೊರೊನಾ ಬಂದು ಎಲ್ಲವೂ ಮನೆಲೇ ಲಾಕ್ ಡೌನ್ ಆದ ಮೇಲೆ ಹಳ್ಳಿಯವರ ನೋಡುವ ದೃಷ್ಟಿ ಕೋನ ಬದಲಾಯಿದು. ನಿಂಗಳೇ ಲಕ್ಕಿ ಹೇಳಿ ಪೇಟೆಯವು ಹೇಳಲೆ ಶುರು ಮಾಡಿದವು. ಇಷ್ಟನ್ನಾರ ಹೊಟ್ಟೆ ಉರಿಸಿದ್ದರ ಮರಿಲಿದ್ದಾ? ತಕ್ಕ ಸಮಯ ಹೇಳಿ ಊರಿನವು ದಿನಕ್ಕೊಂದು ನಮೂನೆ ಅಡಿಗೆ ಮಾಡಿ Facebook, What’s up ಲ್ಲಿ ಪೋಸ್ಟ್ ಮಾಡಲೆ ಶುರು ಮಾಡಿದೆಯಾ. ಬಾಳೆಕಾಯಿ ,ಪೂಂಬೆ, ಬಾಳೆಹಣ್ಣು ಕೆಸು, ಊರಸೌತೆ, ಹಲಸಿನ ಕಾಯಿ, ಗೆಡ್ಡೆ ಗೆಣಸು , ತೊಂಡೆ ಗಳಿಂಲೇ, ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಎಲ್ಲಾ ನಮೂನೆಯದು ಮಾಡಿ ಫೋಟೋಗಳ ಹಾಕುದು ನೋಡಿ ಪೇಟೆಲಿ ಇಪ್ಪವು ಕೊದಿ ಬಿಡ್ಲೆ ಸುರು ಮಾಡಿದವು. ಯಾವಾಗಲೂ ವಾರವಾರ weekend party ಹೇಳಿ ಇದ್ದ ಬದ್ದ ಹೋಟ್ಲಿಗೆ ಹೋಗಿ ನಮೂನೆ ವಾರು ತಿಂಡಿಗಳ ಪೋಟೋ ತೆಗದು ಬಾಯಿಲಿ ನೀರು ಬಪ್ಪಹಾಂಗೆ ಮಾಡುವವು ಬಾಯಿಬಾಯಿ ಬಿಡುವ ಹಾಂಗಾತು ಕೊರೊನಾಂದಾಗಿ.
ಆನಂತು ಯಾವ ಛಾನ್ಸನ್ನು ಬಿಟ್ಟಿದಿಲ್ಲೆ. ಒಂದು ದಿನ ಒಂದು ಹಳೆಫ್ರೆಂಡ್ ಹೇಳಿತು ಕಾಯಿದೆ ಬೆಲ್ಲದೆ ಇದ್ದರೆ ಬಾಳೆ ದಂಡನ್ನು ಬಿಡೆ ನೀನು ಪಾಯಸ ಮಾಡಿ ಹಾಕುವೆ ಹೇಳಿ. ನೆಗೆ ಮಾಡತೆಯಾ ಎನ್ನ ಹೇಳಿ ಗ್ರೇಸಿ ಸುಮ್ಮನೆ ಕೂಯ್ಯದಿಲ್ಲೆ. ಎಲ್ಲಿಯೋ ಸಿಕ್ಕಿದ ರೆಸಿಪಿಯ ಅಣ್ಣಾ ಕಳಸಿತ್ತಿದ್ದ. ಸರಿ ಮಾಡುದೆ ಹೇಳಿ ಹೊರಟದ್ದೆ. ನೇಂದ್ರ ಗೊನೆ ಕಡ್ದಪ್ಪಗ ದಂಡುದೇ ಬೇಕು ಹೇಳಿ ತರ್ಸಿಕೊಂಡೆ. ಸಣ್ಣಕೆ ಹೋಳು ಮಾಡಿ ಹಸರು ಹೊರುದು ಬೇವಲೆ ಹಾಕಿದೆ. ಹಸರುದೇ, ಹೋಳನ್ನು ಕುಕ್ಕರಿಲ್ಲಿ ೨ ವಿಷಲ್ ಹಾಕಿ ಬೇಷಿಕೊಂಡೆ. ಬೆಂದ ಹೋಳಿಗೆ ಬೆಲ್ಲಹಾಕಿದೆ. ಚೂರು ಅಕ್ಕಿಹಿಟ್ಟಿನ ನೀರುಕಾಯಿಹಾಲಿಲ್ಲಿ ಕದಡಿ ಕೊದಿಸಿದೆ. ಚೂರು ಬಾದಾಮಿ ಹೊಡಿ , ಏಲಕ್ಕಿ ಹೊಡಿ ಎಲ್ಲಾ ಹಾಕಿದೆ. ಲಾಯ್ಕ ಮಿಶ್ರ ಆದ ಮೇಲೆ ದಪ್ಪ ಕಾಯಿಹಾಲು ಹಾಕಿ ಕೊದ್ದಪ್ಪಗ ಬೀಜದ ಬೊಂಡು, ದ್ರಾಕ್ಷಿ ಹಾಕಿದೆ, ಸಣ್ಣಗೆ ಕೊದೊಸಿ ಇಳುಗಿದೆ. ಲಾಯ್ಕ ಪಾಯಸ ಆತು. ಮೊದಲು ಫೋಟೋ ತೆಗದು ಎನ್ನ ಬಾಯಿಗೆ ಕೋಲು ಹಾಕಿದ ಫ್ರೆಂಡ್ ಗೆ ಕಳುಹಿಸಿದೆ. ಫಸ್ಟ್ ಆಯಿದು ಹೇಳಿ ಅದರ ಹೊಟ್ಟೆ ಉರುಸಿದೆ.
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಶಾರದಾ ನಿಲಯ
ಬಾಳಿಲ
ಸುಳ್ಯ ತಾಲ್ಲೂಕು
೫೭೪೨೧೨
Latest posts by ಶರ್ಮಪ್ಪಚ್ಚಿ (see all)
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಅಂತೂ ಪೇಟೆಲಿಪ್ಪೋರ ಮೇಲಾಣ ಕೋಪ ತೀರಿಸಿಕೊಂಡಿ ಹೇಳಿ ಆತು… ಆ ಲೆಕ್ಕಲ್ಲಿ ಪಾಯಸ ಒಂಚೂರು ಜಾಸ್ತಿಯೇ ಚೀಪೆ ಆದಿಕ್ಕಾಳಿ ಕಾಣ್ತು😀