Oppanna.com

ಕೆಲವು ಶಾಸ್ತ್ರ, ಆಚರಣೆ, ರೀತಿ – ಮಾಹಿತಿ-೧

ಬರದೋರು :   ವಿಜಯತ್ತೆ    on   24/06/2020    0 ಒಪ್ಪಂಗೊ

ಕೆಲವು ಶಾಸ್ತ್ರ, ಆಚರಣೆ, ರೀತಿ – ಮಾಹಿತಿ-೧

ನಮ್ಮದಲ್ಲಿ ಹಲವಾರು ಕಟ್ಟುಕಟ್ಟಳೆ ಶಾಸ್ತ್ರಂಗೊ. ಕೆಲವು ಕಠಿಣ, ಇನ್ನು ಕೆಲವು ಸುಲಭ!.ಕೆಲವು  ಆಚರುಸಲೇ ಬೇಕಾದ್ದು,ಇನ್ನು ಕೆಲವು ಆಚರುಸದ್ರೂ ನೆಡೆತ್ತು. ಹೀಂಗೆ ತರಹೇವಾರಿ ಇದ್ದು. ಎನಗೆ ಗೊಂತಿದ್ದರ,ನೆಂಪಾದ್ದರ ನಿಂಗಳ ಮುಂದೆ..

೧.ಇರುಳು ಬೇಗ ಮನುಗಿ, ಉದಿಯಪ್ಪಗ ಬೇಗ ಏಳೆಕ್ಕು.[ಈಗಿನ ಜನರೇಶನ್ ರಜ ಕಷ್ಟ ಹೇಳುಗು]

೨.ಹೆಮ್ಮಕ್ಕೊ ಉದಿಯಪ್ಪಗ ಎದ್ದಪ್ಪದ್ದು ಒಲೆಂದ ಬೂದಿತೋಡಿ[ಈಗ ಗ್ಯಾಸ್ಟೌವ್ ಹೊರತಾಗಿ ಎಲ್ಲಿಯೂ ಒಲೆಇಲ್ಲೆ] ಒಲೆಕ್ಕಟ್ಟೆಗೆ ಸಗಣನೀರು[ಗೋಮಯ]ತಳುದು ಉದ್ದಿ, ನೀರು ಬೆಶಿಮಾಡಿ,ಬೆಶಿನೀರಿಲ್ಲಿ ಮಂತು ಅದ್ದಿತೆಗದು ಮಸರು ಕಡವದು.

೩.ದನದ ಹಾಲು,ಮಜ್ಜಿಗೆ ವಗೈರೆ ದೇವರೊಳ. ಎಮ್ಮೆ ಹಾಲು-ಮಜ್ಜಿಗೆಲ್ಲ ಹೆರಾಣ ಸುತ್ತು. ಕೈಸಾಲೆ ಅಥವಾ ಅಡಿಗೆ ಒಳಾಣ ಜಾಗೆಲಿ.

೪.ಮಜ್ಜಿಗೆ ಆರಿಂಗಾರು ಕೊಂಡೋಪಲೆ ಕೊಡ್ತರೆ ಮದ್ಯಾಹ್ನಕ್ಕೆ ಮದಲೇ ಕೊಡೆಕು. ಮತ್ತೆ ಕೊಡ್ಳಾಗ. ಎಲ್ಯಾರೂ ಅತೀ ಅಗತ್ಯಾಳಿ ಕಂಡ್ರೆ ರಜ ಉಪ್ಪು ಹಾಕಿ ರಜ ನೀರೆರದು ಕೊಡೆಕು.

೫.ಮೂರ್ಸಂದಿಯಪ್ಪಗ ಹಾಂಗೂ ಮನೆಂದ ಆರಾರು ಹೆರ ಹೆರಡುವಗ, ನೆಂಟರು ಬಪ್ಪಾಗ ಕಸವು ಉಡುಗಲಾಗ, ಹಾಂಗೂ  ಹಿಡಿಸೂಡಿ ಎದುರು ಕಾಂಬಾಂಗೆ ಮಡಗಲಾಗ.

೬.ದೇವರೊಳ ದೀಪ ಹೊತ್ತುಸಿರೆ;ಅದು ಬೀರ್ಲಾಗ [ಅರ್ಥಾತ್ ಎಣ್ಣೆ ಆರಿ ಅದರಷ್ಟಕೇ ನಂದಲಾಗ]. ಈ ಆಚರಣೆ ಉತ್ತರಕನ್ನಡಲ್ಲಿ ವ್ಯತಿರಿಕ್ತ ಇದ್ದು. ಇದರ ಒಂದಾರಿ ಗುರುಗಳತ್ರೆ ಕೇಳುವಗ “ನಿಂಗೊ ಹೇಂಗೆ ಆಚರಣೆ ಮಾಡೆಂಡು ಬಯಿಂದೀರೋ ಹಾಂಗೇ ಮಾಡಿ” ಹೇಳಿದ್ದವು.

೭.ಅಶನಕ್ಕೆ ಅಕ್ಕಿ ಅಳವಗ ಅಳೆತ್ತ ಸಾಧನಲ್ಲಿ ಮೂರಾಗಿ ಹಾಕಲಾಗ,ಮತ್ತೊಂದೂ ಚೂರಾದರೂ ಹಾಕೆಕ್ಕು. ಹಾಂಗೇ ಅಶನ ಬಡುಸುವಾಗಲೂ ಮೂರು ಸೌಟು ಬಡುಸಲಾಗ. ಪ್ರತಿಯೊಂದರಲ್ಲೂ ಮೂರರ ಸಂಖ್ಯೆ ಅಪರ ಕ್ರಿಯೆಗೆ.

ಇರುಳು ಅಶನದ ಪಾತ್ರೆ ಖಾಲಿ ಮಾಡಿ ತೊಳವಲಾಗ. [ಇದು ಬಹುಶಃ ಈಗಣವಕ್ಕೆ ಕಷ್ಟ!!]

೮.ಬಂದವರ[ನೆಂಟ್ರು] ಮನೆ ಎಜಮಾನ  ಬಲದ ಬದಿಲಿ ಉಂಬಲೆ ಕೂರ್ಸೆಕ್ಕು.

೯.ಬರೇ ಬಾಳೆ ಅಥವಾ ಬಟ್ಳಿಂಗೆ ಅಶನ ಬಳುಸಲಾಗ. [ಇದು ಅಪರಕ್ರಿಯೆಗೆ ಬಳುಸುವದು]

೧೦.ಬಾಳೆಲಿ ಉಂಬ ಕ್ರಮ-ಉಂಬವನ ಬಲಬದಿಗೆ ಬಾಳೆಲೆಯ ಕಡೆ ಹಾಂಗೂ ಎಡಬದಿಗೆ ಕೊಡಿ ಬಪ್ಪಾಂಗೆ ಬಾಳೆ ಮಡಗುವ ಕ್ರಮ. ಬಲಬದಿ ಮೇಲೆ ಪಲ್ಯ, ಎಡಬದಿಕೊಡಿಲಿ ಉಪ್ಪಿನಕಾಯಿ, ಉಪ್ಪು. ಬಲಬದಿಯ ಕೆಳಾಣ ಅಶನಕ್ಕೆ ತುಪ್ಪ. ತುಪ್ಪಕ್ಕೆ ಪಲ್ಯ ಸೇರ್ಸಿ ಉಂಬಕ್ರಮ. ಅಥವಾ ಸಾರು ಅಥವಾ ಇತರ ವ್ಯಂಜನ. ಮತ್ತೆ ಸಾಂಬಾರು ಮುಂದೆ ಮೇಲಾರ [ಮಜ್ಜಿಗೆಹುಳಿ], ಆ ಮೇಲೆ ಪಾಯಸ,ಸ್ವೀಟ್, ಇತರ ಕರಿದ ತಿಂಡಿಗೊ,

೧೧.ಸೌದಿ ಒಲೆಲಿ ಕಿಚ್ಚು ಮುಂದೆ ಹಾಕುವಗ  ಕಾಲಿಲ್ಲಿ ದೂಡ್ಳಾಗ. ಹಾಂಗೇ ಕಡೆ-ಕೊಡಿ [ಹೊತ್ತಿದ ಭಾಗದ ವಿರುದ್ಧ]ಹೊತ್ತುಸಲಾಗ.

೧೨. ಹೆರಟು ಹೋಪಗ ತುಲಸಿ ಕಟ್ಟೆಯ ಬಲಬದಿಗಾಗಿ ಹೋಯೆಕ್ಕು. ಎಡಬದಿ ಹಾಕಿ ಹೋಪಲಾಗ. ಮಧ್ಯಾಹ್ನ ಮೇಲೆ ಅಪರಾಹ್ನ ತುಲಸಿ ಕೊಯಿವಲಾಗ.

೧೩.ಮೂರ್ಸಂದಿಯಪ್ಪಗ ಮನೆ ಉಡುಗಲಾಗ. ಅಂಬಗ ಲಕ್ಷ್ಮಿ ಒಳ ಬಪ್ಪ ಸಮಯ ಹೇಳುವ ಹೇಳಿಕೆ.

೧೪.ಕೊಟ್ಟ ಮಗಳಕ್ಕಳ ಮಂಗಳವಾರ, ಶುಕ್ರವಾರ ಗೆಂಡನ ಮನಗೆ ಕಳುಸಲಾಗ. ಹಾಂಗೇ ಬಂದು ಮೂರನೇ ದಿನಲ್ಲೂ ಕಳುಗಲಾಗ.

೧೫.ಕೂಸುಗೊ,ಹೆಮ್ಮಕ್ಕೊ ಮಂಗಳವಾರ,ಶುಕ್ರವಾರ ತಲಗೆ ಮೀವದು.

೧೬.ತಲಗೆ ವಸ್ತ್ರ ಕಟ್ಟೆಂಡು ಹೊಸ್ತಿಲಿಂಗಾಗಲೀ ದೇವರಿಂಗೆ,ಹೆರಿಯವಕ್ಕೆ ಹೊಡಾಡ್ಳೆ ಆಗ.

೧೭.ಮಾಣಿಯಂಗೊ, ಗೆಂಡುಮಕ್ಕೊ ಮಂಗಳವಾರ,ಶುಕ್ರವಾರ ಕುಚ್ಚಿ ತೆಗೆಶಲೆ[ ಕ್ಷೌರ] ಆಗ.

೧೮.ಮಂಗಳವಾರ, ಶುಕ್ರವಾರ, ಹೊಸ ಅಳಗೆ[ಮಣ್ಣಿಂದು]ತೆಗವಲಾಗ. ಹಾಂಗೇ ಶುಭಕಾರ್ಯ ನಿಜಮಾಡಿದ ಮತ್ತೆ ಅದು ಕಳಿವನ್ನಾರ ಹೊಸ ಮಣ್ಣಳಗೆ ತೆಗವಲಾಗ.

೧೯.ಮದುವೆ ನಿಜಮಾಡಿದ ಯಜಮಾನ[ವಧು, ವರನ, ಅಪ್ಪ-ಅಬ್ಬೆ] ಮದುವೆ ಕಳಿವನ್ನಾರ ಅಪರಕ್ರಿಯೆಗೆ ಹೋಪಲಾಗ.

೨೦.ದೇವಸ್ಥಾನಲ್ಲಿ ಕೈಮುಗುದಿಕ್ಕಿ ಹೆರಬಪ್ಪಾಗ  ಒಂದಾರಿ ತಿರುಗಿ ದೇವರಗುಡಿಗೆ ನೋಡಿಕ್ಕಿ;ಹೆರಬರೆಕು.

~~~***~~~

-ವಿಜಯಾಸುಬ್ರಹ್ಮಣ್ಯ,ಕುಂಬಳೆ.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×