Oppanna.com

ಪಿತ್ತ ಕೆದರಿತ್ತೋ, ಇಲ್ಲಿದ್ದು ಹುಳಿ ಶರ್ಬತ್ತು

ಬರದೋರು :   ಬಂಡಾಡಿ ಅಜ್ಜಿ    on   15/04/2013    10 ಒಪ್ಪಂಗೊ

ಕುಂಞಿ ಪುಳ್ಳಿಗೆ ಪರೀಕ್ಷೆ ಆವುತ್ತಾ ಇದ್ದದ. ನೆಡಿರುಳು ಒರೇಂಗೆ ಓದಿರೂ ಪುಸ್ತಕ ಮುಗಿತ್ತಿಲ್ಲೆ ಹೇಳಿ ಬೊಬ್ಬೆ ಹೊಡೆತ್ತು. ಪಾಪ, ಮಕ್ಕೊಗೆ ಅಷ್ಟು ದಪ್ಪ ದಪ್ಪ ಕೊಟ್ಟಿಗೆಯ ಹಾಂಗಿರ್ತ ಪುಸ್ತಕ ಎಂತಗೆ ಮಡುಗುತ್ತವೊ. “ಓದಿದ್ದು ಸಾಕು, ಇನ್ನು ಒರಗು” ಹೇಳಿ ಹೇಳಿರೆ ಕೇಳ್ಳೆಂತ ಅದು ನೆಗೆ ಮಾಣಿಯೊ… ಅವ° ಆದರೆ ಅಷ್ಟು ಮಾತು ಬಾಯಿಂದ ಹೆರ ಬೀಳೇಕಾರೇ ಹೋಗಿ ಗುಡಿಹೆಟ್ಟಿ ಒರಗಿಕ್ಕುಗು.. ಮತ್ತೆ ಉದಿಯಪ್ಪಗ  ಎಂಟಂಟೆ ಆದರೂ ಏಳ°, ಬೋಚನ ಹಾಂಗೆ..

ಅದಿರಳಿ. ಈಗ ಕತೆ ಎಂತರ ಹೇಳಿರೆ, ಮೊನ್ನೆ ಪುಳ್ಳಿಗೆ ಹೀಂಗೆ ಒರಕ್ಕೆಟ್ಟು ಓದಿ ಮರದಿನ ಪಿತ್ತಕೆದರಿ, ಕಾರಿ, ಕಂಗಾಲು. ಮತ್ತೆ ಪುಸ್ತಕ ಕರೆಂಗೆ ಮಡುಗಿ ಮನುಗಿದ್ದದೆ. ಅಷ್ಟಪ್ಪಗ ಈ ಹುಳಿ ಶರ್ಬತ್ತು ಮಾಡಿ ಕೊಟ್ಟೆ ಇದ.

ಹೇಳಿದಾಂಗೆ ಈ ಸರ್ತಿ ಮನೆಕರ್ಚಿಂಗೆ ತಕ್ಕಿತ ಹುಳಿ ಆಯಿದು. ಬಾಬುವತ್ತರೆ ಕೊಯಿಶಿ, ಚೋಲಿ, ಬಿತ್ತು ಎಲ್ಲ ತೆಗದು ಒಣಗುಸಿ ಮಡುಗಿದ್ದದ. ಹುಳಿಬಿತ್ತಿನ ತೊಳದು ಮಡುಗಿ ಬೇಕಪ್ಪಗ ಪುಳಿಂಕೊಟೆ ಮಾಡ್ತದು, ಅಸಕ್ಕಪ್ಪಗ ಬಾಯಿ ಆಡ್ಸಲೆ.. ಅಲ್ಲದೋ? ನಿಂಗಳಲ್ಲಿಯೂ ಹುಳಿ ಆಯಿದೊ..?

ಹುಳಿ ಶರ್ಬತ್ತು
ಹುಳಿ ಶರ್ಬತ್ತು

ಆತು, ಈಗ ಹುಳಿ ಶರ್ಬತ್ತಿನ ಶುದ್ದಿಗೆ ಬಪ್ಪೊ. ಪಿತ್ತಕ್ಕೆ ಹಳೆಹುಳಿ ಶರ್ಬತ್ತು ಬಾರೀ ಒಳ್ಳೆದು. ಮಾಡೆಕ್ಕಾರೆ ಏನು ದೊಡ್ಡ ಕುಮ್ಮೇರುಕಡಿಯೇಕು ಹೇಳಿ ಇಲ್ಲೆ… ಸುಲಾಬ. ಮೊದಾಲು ಒಂದು ರೆಜ ಹಳೆಹುಳಿಯ ತೆಕ್ಕೊಂಡು ಕುಡಿವ ನೀರಿಲಿ ಬೊದುಲ್ಲೆ ಹಾಕಿತ್ತು. ಒಂದರ್ದ ಗಂಟೆ ಬಿಟ್ಟಿಕ್ಕಿ ಅದರ ಲಾಯಿಕಕ್ಕೆ ಪುರುಂಚಿತ್ತು. ಮತ್ತೆ ಅದಕ್ಕೆ ನಾಕು ಜೀರಿಗೆ ಗುದ್ದಿ ಹಾಕಿತ್ತು. ಸೀವಿಂಗೆ ಬೇಕಾಷ್ಟು ಶೆಕ್ಕರೆ ಹಾಕಿ ಕರಗುಸಿರೆ ಶರ್ಬತ್ತು ಆತದ. ತಲೆಬೇನೆಗುದೆ ಆವುತ್ತು ಇದು. ಅಂತೆ ಹೀಂಗೆ ಕುಡಿವಲೂ ಅಕ್ಕು ಹೇಳುವ. ಆರೋಗ್ಯಕ್ಕೆ ಒಳ್ಳೆದೇ ಇದ. ಆ ಪೇಟೆಯ ಕೊಕ್ಕ ಕೋಲ ಅದು ಇದು ಹೇಳಿ ಕುಡುದು ಹೊಟ್ಟೆ ಹಾಳು ಮಾಡ್ತದರ ಬದಲು ಮನೆಲೇ ಎಂತಾರು ಶರ್ಬತ್ತು ಮಾಡಿ ಕುಡಿಯಲಕ್ಕನ್ನೆ…

ಮತ್ತೆ ಪಿತ್ತಕ್ಕೆ ನಿಂಬೆಳಿ ಶರ್ಬತ್ತು, ಪುನರ್ಪುಳಿ ಶರ್ಬತ್ತುದೇ ಒಳ್ಳೆದೇ. ಈ ಸರ್ತಿ ಬಂಡಾಡಿಲಿ ನಿಂಬೆಳಿಯೂ, ಪುನರ್ಪುಳಿಯೂ ಮರಲ್ಲಿ ಫಲ ಒಳ್ಳೆತ ಹಿಡುದ್ದು. ಮಂಗಂಗೊ ಮುಟ್ಟದ್ದೆ ಒಳಿಶಿರೆ ನವಗೆ ಸಿಕ್ಕುಗದ.. ಆರಿಂಗಾರು ಪುನರ್ಪುಳಿ ಬೇಕಾರೆ ಕೊಕ್ಕೆ ತೆಕ್ಕೊಂಡೋಗಿ ಕುರುವೆ ತುಂಬ ಕೊಯಿವಲಕ್ಕು ಆತೊ… ಏ°..

ಹಾಂಗೆ ಮತ್ತೆ ಮೊನ್ನೆ ಹಳೆಹುಳಿ ಶರ್ಬತ್ತು ಮಾಡಿಕೊಟ್ಟಪ್ಪಗ ಪುಳ್ಳಿಗೆ ರೆಜ ಸಮದಾನ ಆಗಿ, ಪುಸ್ತಕ ಒಪಾಸು ಕೈಗೆ ಬಂತು.. ಮರದಿನ ಪರೀಕ್ಷೆ ಲಾಯಿಕಕ್ಕೆ ಕಳುದತ್ತು…

10 thoughts on “ಪಿತ್ತ ಕೆದರಿತ್ತೋ, ಇಲ್ಲಿದ್ದು ಹುಳಿ ಶರ್ಬತ್ತು

  1. ಸೊಂಟ ಬೇನೆಗೆ ,ಮೈ ಕೈ ಬೇನೆಗೆ ಶರಬತ್ತು ಇದ್ದೊ ಅಜ್ಜಿಯ ಹತ್ತರೆ?

  2. ಅಜ್ಜಿ, ಸೀವಿಂಗೆ ಶಕ್ಕರೆಯ ಬದಲು ಬೆಲ್ಲ ಲಾಯಿಕಕ್ಕಲ್ಲದ? ಸೊಂಟ ಬೇನೆಗೆ ವಿಲೆಜೋಲ್ ಹೇಳ್ತ ಒಂದು ಸಿಕ್ಕುತ್ಫ್ತು. ನೋಡ್ಲಕ್ಕು.

    1. ಓ ಧಾರಾಳ ಹಾಕಲಕ್ಕಪ್ಪ. ಎನ್ನ ಪುಳ್ಳಿಗೆ ಬೆಲ್ಲಂದ ಶಕ್ಕರೆಯೇ ಹತ್ತರೆ.. ಕಾಪಿಯೂ ಬೆಲ್ಲ ಕಾಪಿ ಕುಡಿಯ ಅದು, ಶಕ್ಕರೆ ಹಕಿದ ಕಾಪಿಯೇ ಆಯೇಕು ಅದಕ್ಕೆ… ಹಾಂಗೆ ಆನು ಶಕ್ಕರೆಯೇ ಹಾಕುದು ಇದಾ..

      ಸೊಂಟಬೇನೆಗೆ ಅದೆಂತರ ಮುಲಾಮೋ..? ಪುಳ್ಳಿಯತ್ತರೆ ತಪ್ಪಲೆ ಹೇಳುತ್ತೆ ನೋಡೊ..

  3. ಇದ್ದೆ ಇದ ಹಾಂಗೆಯೆ.. ನಾಳೆ ಸೊಂಟಬೇನಗೆ ಮದ್ದಿಂಗೆ ಹೋಯೇಕು.. ಕಡಂಜದೆಣ್ಣೆ ಕಿಟ್ಟಿ ಕಮ್ಮಿ ಆಯಿದಿಲ್ಲೆ..

    ಬೈಲಿಂಗೆ ಹೀಂಗೆ ಪುರುಸೋತಪ್ಪಗ ಬಪ್ಪದಿದ..

  4. ಶರ್ಬತ್ತು ಏವಾಗ ಕೊಟ್ರೂ ಆನು ಕುಡಿವೆ ಅಜ್ಜಿ.

    ಅಜ್ಜಿ ಹೇಂಗಿದ್ದಿ ಮತ್ತೆ? ಬೈಲಿಲಿ ಕಾಣದ್ದೆ ಅಲ್ಪ ದಿನ ಆತಪ್ಪೋ.

  5. ಪಿತ್ತದ ಶರ-ಬತ್ತು
    ನೆತ್ತಿಯ ಕುತ್ತಿತ್ತು
    ಮತ್ತೇರುವ ಹಾ೦ಗೆ ಕುಡೀ ಹುಳಿಸೀವ್ ಶರ್ಬತ್ತು !

    1. ಅದ… ಈ ಪದ್ಯ ಬರವವ್ವು ಶರ್ಬತ್ತನ್ನೂ ಬಿಡವು…

  6. ಪುನರ್ಪುಳಿ ಶರ್ಬತ್ತು ಲಾಯಕ್ಕಾಗುತ್ತು. ಪುನುರ್ಪುಳಿ ಸಿಪ್ಪೆಯ ಕೊದಿಸಿ ಅದರ ನೀರಿನ ಒಂದು ಬಾಟಲಿಲಿ ಹಾಕಿ ಫ್ರಿಜ್‌ಲಿ ಇರಿಸಿಕೊಂಡರೆ ಬೇಕಾದಾಗ ಅದರಿಂದ ಎರಡು ಮೂರು ಚಮಚ ತೆಗದು ನೀರು ಸೇರಿಸಿ ಶರ್ಬತ್ತು ಮಾಡಲಾಗುತ್ತು. ಆನು ಯಾವಾಗಲೂ ಕುಡಿತ್ತೆ. ಕೆಲವೊಂದರಿ ಆಪೀಸಿಂಗೂ ಬಾಟಲಿಲಿ ಹಾಕಿ ತತ್ತೆ.

  7. ಒಳ್ಳೆ ಲೇಖನ ಅಜ್ಜೀ.. ಎಂತಾ ಸೆಕೆ ಯಬಾ ತಡವಲೆಡಿತ್ತಿಲ್ಲೆ ಎನಗೊಂದು ಗ್ಲಾಸು ಶಬ೯ತ್ತು ಮಾಡಿಕೊಡ್ತೀರಾ:-P

    1. ಓ ಧಾರಾಳ ಮಾಡಿ ಕೊಡುಲಕ್ಕಪ್ಪ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×