Oppanna.com

ಕೆಂಬುಡೆ ಹೂಗಿನ ಚಟ್ನಿ…

ಬರದೋರು :   ಬಂಡಾಡಿ ಅಜ್ಜಿ    on   30/11/2012    3 ಒಪ್ಪಂಗೊ

ಹಬ್ಬ ಎಲ್ಲ ಗವುಜಿಯೋ..? ಗೋಪೂಜೆ, ತೊಳಶಿ ಪೂಜೆ ಎಲ್ಲ ಮಾಡಿದಿರನ್ನೆ..? ನೆಗೆಮಾಣಿ ಎಷ್ಟು ಪಟಾಕಿ ಬಿಟ್ಟಿದ ಹೇಳಿ ಗೊಂತಿಲ್ಲೆ. ಮಾಣಿಯ ಕಾಣದ್ದೆ ಸುಮಾರು ಸಮೆಯ ಆತು..ಅದಿರಳಿ..

ಓ ಅಲ್ಲಿ ಜಾಲ ತಲೇಲಿ ನಾಕು ಕೆಂಬುಡೆ ಬಳ್ಳಿ ಇದ್ದದ.. ಏಳೆಂಟು ನೆಣೆ ಬಿಟ್ಟದರಲ್ಲಿ ಒಂದು ನಾಕು ಕೆಂಬುಡೆ ಆಯಿದು.. ಈಗೀಗ ನೆಟ್ಟಿಕಾಯಿ ಏವದುದೇ ಬರ್ಕತ್ತಪ್ಪದು ಹೇಳಿ ಇಲ್ಲೆ.. ಎಂತಾರು ರೋಗ ಬಂದೊ, ಹುಳು ತಿಂದೊ ಹಾಳಾಗಿ ಹೋವುತ್ತತ್ಲಾಗಿ.. ಅದರ ದಣಿಯ ಪೋಚಕಾನ ಮಾಡ್ಳುದೇ ಎಡಿತ್ತಿಲ್ಲೆ ಹೇಳುವೊ… ಅಪ್ಪಷ್ಟು ಆವುತ್ತು ಹೇಳಿ ಸಮಾದಾನ ಮಾಡಿಗೊಳ್ಳೆಕ್ಕಟ್ಟೆ.. ಅಲ್ಲದೋ..?

ಕೆಂಬುಡೆ ಹೂಗು

ಹೇಳಿದಾಂಗೆ ಕೆಂಬುಡೆ ಬಳ್ಳಿಲಿ ಸುಮಾರು ಗೆಂಡು ಹೂಗುಗೊ ಇದ್ದತ್ತು.. ಹಾಂಗೆ ಒಂದೆರಡರ ಕೊಯಿದು ಚಟ್ನಿ ಮಾಡುವೊ ಹೇಳಿ ಕಂಡತ್ತು ಅಜ್ಜಿಗೆ.. ರಜೆಲಿ ಬಂದಿದ್ದ ಪೇಟೆಪುಳ್ಯಕ್ಕೊಗೆ ಬಾರೀ ಕೊಶಿ. ಮನಾರಕ್ಕೆ ಉಂಡವದ. ಅವಕ್ಕೆ ಹಾಂಗಿಪ್ಪದೆಲ್ಲ ಕಂಡು ಅರಡಿಯ ಇದಾ.. ಕೆಂಬುಡೆ ಬಳ್ಳಿಲಿ ಅಪ್ಪದೋ, ಗೆಡುವಿಲಿ ಅಪ್ಪದೋ ಹೇಳಿಯೂ ಗೊಂತಿರ ಈಗಾಣ ಮಕ್ಕೊಗೆ.. ಹೀಂಗಿರ್ತದರ ಎಲ್ಲ ನಾವು ಮಾಡಿಕೊಟ್ಟರೇ ಅಲ್ಲದೋ ಅವಕ್ಕೂ ಗೊಂತಪ್ಪದು.. ಆರೋಗ್ಯಕ್ಕುದೇ ಒಳ್ಳೆದು..

ಅದಿರಳಿ, ಈಗ ಕೆಂಬುಡೆ ಹೂಗಿನ ಚಟ್ನಿ ಮಾಡುದು ಹೇಂಗೇಳಿ ನೋಡುವೊ.. ಸುರೂವಿಂಗೆ ಹೂಗಿನ ಕೊಯಿದು ತಂದು ತೊಳವದು. ಮತ್ತೆ ಅದರ ಕುಸುಮ ತೆಗದು, ತೊಟ್ಟಿನ ನಾರು ತೆಗದಾಕಿ, ಎಸಳುಗಳ ರೆಜ ನೀರಾಕಿ ಬೇಶುದು. ಅದು ಗಳಿಗ್ಗೆಲಿ ಹಸಿ ಮಾಸುತ್ತು. ಇನ್ನು ಕಾಯಿ ಕೆರದು ಅದಕ್ಕೆ ಉದ್ದಿನ ಬೇಳೆ, ಮೆಣಸು ಹೊರುದು ಹಾಕಿ, ಬೇಶಿದ ಹೋಗಿನ ಸೇರುಸಿ, ಉಪ್ಪು, ಹುಳಿ ಎಲ್ಲ ಹಾಕಿ ಗಟ್ಟಿಗೆ ಕಡವದು. ಮತ್ತೆ ಒಂದು ಒಗ್ಗರಣೆ ಕೊಟ್ಟರೆ ಹೂಗಿನ ಚಟ್ನಿ ಉಂಬಲೆ ಕೂಪದೇ… ಬೆಶಿ ಬೆಶಿ ಅಶನಕ್ಕೆ ತುಪ್ಪ ಹಾಕಿ, ಈ ಚಟ್ನಿ ಬೆರುಸಿ ಉಂಡರೆ ಬಾಳೆಲಿ ಅಶನ ಮುಗುದ್ದದೇ ಗೊಂತಾಗ.. ನಿಂಗಳೂ ಮಾಡಿ ಉಂಡು ನೋಡಿ.. ಆತೊ..?

3 thoughts on “ಕೆಂಬುಡೆ ಹೂಗಿನ ಚಟ್ನಿ…

  1. ಅದಪ್ಪು,ಈ ಚಟ್ನಿ ಇದ್ದರೆ ಅಶನದೊಟ್ಟಿಂಗೆ ಬೇರೆಂತ್ಸೂ ಬೇಕಾವ್ತ್ತಿಲೆ ಅಜ್ಜಿ.
    ನೆಗೆಮಾಣಿ ಬಿಟ್ಟ ಪಟಾಕಿಗೆ ಮಾಡಾವಿಲಿ ಬಟ್ಯನ ಮಾಡು ಹರುದು ಬಿದ್ದಿದಡ. ಅಪ್ಪೋ ಇದು ಪೆಂಗಣ್ಣ..?

  2. ಎನ್ನ ಅಜ್ಜ ಎಂಗೊ ಏಳೇಕಾರೆ ಮದಲೇ ನೆಟ್ಟಿಸಾಲಿಂಗೆ ನೀರರದಿಕ್ಕಿ ಬಪ್ಪಗ ಈ ಹೂಗ ಹಾಳೆಲಿ ಮಡಿಗಿ ತಂದ್ಸು ನೆಂಪಾತು., ಅದರ ಅಜ್ಜಿ ಇಪ್ಪಗ ಮಾಡಿಕೊಟ್ಟದರ ನಾವು ತಿಂದದು ನೆಂಪಿದ್ದು. ಮತ್ತೆ ನೆಟ್ಟಿಸಾಲಿಲಿ ಕಂಡ ನೆಂಪು ಮಾಂತ್ರ.

    ಈಗ ಬಂಡಾಡಿ ಅಜ್ಜಿ ಹೇಳಿಯಪ್ಪಗ ಇದೆಲ್ಲ ನೆಂಪಾತಿದಾ ಅಜ್ಜೀ… ಹರೇ ರಾಮ.

  3. ತುಂಬಾ ಲಾಯಿಕ ಅಪ್ಪ ಚಟ್ನಿ ಇದು. ಎನಗೆ ತುಂಬಾ ಪ್ರೀತಿ. ಈಗ ಮಾತ್ರ ತಿನ್ನದ್ದೆ ತುಂಬಾ ವರ್ಷ ಆತು.
    ಆಶೆ ಆವ್ತನ್ನೆ ಅಜ್ಜಿ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×