- ಉದ್ದಿನ ಗೊಜ್ಜಿ - December 4, 2013
- ಕೆಸವಿನೆಲೆ ಚಟ್ನಿ - November 23, 2013
- ಕಣ್ಣಿಲಿ ಕುರು ಅಪ್ಪದಕ್ಕೆಮದ್ದು - November 11, 2013
ಹೋ ಶಿವನೇ.. ಬೈಲಿನ ಹೊಡೆಂಗೆ ಬಾರದ್ದೆ ಎಷ್ಟು ಸಮೆಯ ಆತಪ್ಪಾ… ಪುರುಸೊತ್ತಿಪ್ಪಾಗ ಕರೆಂಟಿರ.. ಕರೆಂಟು ಇಪ್ಪಾಗ ಎಂತಾರು ಅಂಬೆರ್ಪು ಇಕ್ಕು… ದೊಡ್ಡ ಪುಳ್ಳಿಗೆ ಪರೀಕ್ಷೆಯುದೇ ಹತ್ತರೆ ಬಂತಿದಾ.. ಆ ಕೇಯೀಬೀಯವಕ್ಕೆ ಈ ಸಮೆಯಲ್ಲೇ ಕರೆಂಟು ಮುಗಿತ್ತದಡ… ಮಕ್ಕ ಪರೀಕ್ಷೆಗೆ ಓದುಲಪ್ಪಾಗಳೇ ಕರೆಂಟು ತೆಗದಿಕಿತ್ತವು…
ಒಯಿಶಾಕ ಅಲ್ಲದೋ… ನೀರಿಲ್ಲದ್ದೆ ಕರೆಂಟು ಬತ್ತಿಲ್ಲೆಡ… ಉಮ್ಮ ನೀರಿಂದ ಹೇಂಗೆ ಕರೆಂಟು ತೆಗೆತ್ಸೋ… ಶರ್ಮಣ್ಣ ನೀರಿಂದ ಕರೆಂಟು ಮಾಡ್ತದು ಹೇಳಿಯಪ್ಪಗ ನಾಕು ದಿನ ನೀರು ಮುಟ್ಟುಲೆ ಹೆದರಿಕೆ ಆಗಿಯೊಂಡಿದ್ದತ್ತು, ಕರೆಂಟು ಬಡುದರೆ ಹೇಳಿಗೊಂಡು… ಹಾಂಗಾವುತ್ತಿಲ್ಲೆ ಹೇಳಿ ನಾಕು ನಾಕು ಸರ್ತಿ ವಿವರುಸಿಯಪ್ಪಗ ಅರ್ತ ಆತು ಅಂತೂ.. ನವಗೆ ಅದೆಲ್ಲ ಅರಡಿಗೋ…
ಹ್ಮ್.. ಅದಿರಳಿ… ಹೇಳಿದಾಂಗೆ ಈ ವಯಿಶಾಕಲ್ಲಿ ಮಾವಿನಹಣ್ಣು ಒಳ್ಳೆತ ಸಿಕ್ಕಿಕ್ಕಲ್ಲದೋ… ಒಳ್ಳೆ ಫಲ ಬಯಿಂದು ಈ ಸರ್ತಿಲಿ…
ಪುಳ್ಯಕ್ಕೊಗೆಲ್ಲ ಕೊಶಿಯೋ ಕೊಶಿ.. ಮಾವಿನಹಣ್ಣು ತಿಂದಷ್ಟೂ ಬೊಡಿಯ ಇದಾ… ಮತ್ತೆ ಅದರ ಗೊಜ್ಜಿ, ಸಾಸಮೆ, ರಸಾಯನ ಹೇಳಿಗೊಂಡು ಬೇಕಾದಷ್ಟು ವೈವಿಧ್ಯಂಗಳ ಮಾಡುಲಾವುತ್ತಲ್ಲದೋ… ತರವಾಡಿನ ಶಂಭಣ್ಣ ಹೇಳಿಗೊಂಡಿದ್ದಿದ್ದವದ, ಆಯಾಯ ಕಾಲಕ್ಕೆ ಆಯಾಯ ಫಲಂಗಳ ಸಿಕ್ಕುವಷ್ಟು ತಿನ್ನೇಕು ಹೇಳಿ…
ಮಾವಿನಹಣ್ಣಿಲೂ ಎಷ್ಟು ಬಗೆ ಇದ್ದಲ್ಲದೋ.. ನೆಕ್ಕರೆ, ಕಶಿ, ಕಾಟು, ತೋತಾಪುರಿ, ಹೊಳೆಮಾವು, ಜೀರಿಗೆ ಪರಿಮ್ಮಳದ್ದು ಅದು ಇದು ಹೇಳಿಗೊಂಡು.. ಒಂದೊಂದಕ್ಕೆ ಒಂದೊಂದು ರುಚಿ…
ಈಗ ಅದು ಸಿಕ್ಕೊಗ ಹಣ್ಣು ತಿಂಬಲಕ್ಕು.. ಮುಗುದ ಮತ್ತೆ ಬೇಕೂಳಿ ಆದರೆ ಎಂತರ ಮಾಡ್ತದು… ಅದಕ್ಕೇಳಿಯೇ ನಾವು ಮಾಂಬುಳ ಮಾಡಿ ಮಡುಗುತ್ತದಲ್ಲದೋ…
ಆನು ಮೊನ್ನೆಯೇ ಹೇಳೇಕು ಹೇಳಿ ಗ್ರೇಶಿಗೋಂಡಿದ್ದದು ಇದರ.. ಆತೇ ಇಲ್ಲೆ ಅದಾ…
ಮಳೆ ಸರೀ ಸುರು ಅಪ್ಪ ಮೊದಲು ಕೇಳಿಕ್ಕುವೊ ಹೇಳಿ ಪುರುಸೋತು ಮಾಡಿ ಬಂದದೀಗ…
ಓ ಮೊನ್ನೆ ಬಂಡಾಡಿಲೂ ರೆಜಾ ಮಾಂಬುಳ ಎರದಿತ್ತಿದು… ಅದರ ಮಾಡುಲೆ ಹಾಂಗೆ ದಣಿಯ ಬಂಙ ಎಂತ ಇಲ್ಲೆ ಇದಾ… ಲಾಯಿಕದ ಕಾಟು ಮಾವಿನಹಣ್ಣು ಇದ್ದರಾತು…
ಹಣ್ಣಿನ ಚೆಂದಕೆ ತೊಳದು, ತೊಟ್ಟು ಕೆತ್ತಿ, ಚೋಲಿ ತೆಗೆತ್ತದು.. ಮತ್ತೆ ಚೋಲಿಯನ್ನೂ, ಹಣ್ಣನ್ನೂ ಹಿಂಡಿ ಎಸರು ತೆಗವದು… ನೀರು ಸೇರುಸುಲಾಗ.. ಬರೇ ಹಣ್ಣಿನ ಎಸರು..
ತುಂಬ ಹಣ್ಣು ಇದ್ದರೆ ಪುರುಂಚಿ ಎಸರು ತೆಗವಗ ಕೈ ಬೇನೆ ಅಕ್ಕು.. ಹಾಂಗಿದ್ದರೆ, ಹಣ್ಣಿನ ರೆಜಾ ಕಡವಲಕ್ಕು.. ಸುಲಬ ಆವುತ್ತಿದಾ ಎಸರು ತೆಗವಲೆ…
ಹಾಂಗೆ ಹಿಂಡಿದ ಎಸರಿನ ಒಂದು ಒಸ್ತ್ರಲ್ಲಿ ಹರಡುದು.. ಕೆರಿಶಿಲಿಯೂ ಮಡುಗಲಕ್ಕು.. ಇಲ್ಲದ್ದರೆ ಮಣೆ ಮೇಗೆ ನಾಕು ಹೊಡೆಂಗೆ ಬಾಳೆದಂಡು ಮಡುಗಿ, ಅದರ ಮೇಗೆ ಲಾಯಿಕದ ಒಸ್ತ್ರ ಹಾಕಿ.. ಎಸರಿನ ಎರವದು… ಸುತ್ತ ಬಾಳೆದಂಡು ಇದ್ದುಗೊಂಡು ನಡುಕೆ ಗುಂಡಿ ಜಾಗೆ ಆವುತ್ತಿದಾ… ಕೆರಿಶಿಲಿ ಆದರೆ ಸೀತ ಒಸ್ತ್ರ ಹರಡಿ ಎರವಲಕ್ಕು.. ಕೆರಿಶಿಯೇ ಗುಂಡಿ ಇರ್ತನ್ನೇ…
ಅಡಿಯಂಗೆ ಬೇಕಾದರೆ ಒಂದು ಪ್ಲೇಶ್ಟಿಕು ಹಾಕಿಗೊಂಬಲಕ್ಕು…
ಹಾಂಗೆ ಎರದ್ದರ ಬೆಶಿಲಿಲಿ ಒಣಗುಸುತ್ತದು ಮತ್ತೆ… ಒಣಗಿದಷ್ಟೂ ಒಳ್ಳೆದು ಅದು.. ಒಳ್ಳೆತ ಒಣಗಿದರೆ ಒಳ್ಳೆ ಬಾಳಿಕೆ ಬತ್ತುದೇ… ಹತ್ತಿಪ್ಪತ್ತು ಬೆಶಿಲಿಲಿ ಒಣಗಿರೆ ಎರಡು ವರ್ಷಕ್ಕೆಲ್ಲ ಹಾಳಾಗದ್ದೇ ಒಳಿಗು…
ಆದರೆ ಒಂದು, ಒಣಗುಸುತ್ತ ಸಮೆಯಲ್ಲಿ ಎರುಗಿನ ಕಣ್ಣಿಂಗೆ ಬೀಳದ್ದಾಂಗೆಯೂ, ನೆಗೆಮಾಣಿಯ ಕಣ್ಣಿಂಗೆ ಕಾಣದ್ದಾಂಗೆಯೂ ಮಡುಗೇಕಾವುತ್ತು.. ಇಲ್ಲದ್ದರೆ ಅದು ಒಳಿವದು ಸಂಶಯವೇ..
ಹಾಂಗೆ ರೆಜ ಮಾಡಿ ಮಡುಗಿದ್ದದ ಮೊನ್ನೆ.. ಮತ್ತೆ ಎಡೆಡೆಲಿ ಮಳೆಯೂ ಬಂದುಗೊಂಡಿದ್ದತ್ತು.. ಹಾಂಗೆ ದಣಿಯ ಮಾಡ್ಳಾತಿಲ್ಲೆ.. ನಿಂಗಳೂ ಮಾಡಿದ್ದಿರೋ… ಲಾಯಿಕಕ್ಕೆ ಒಣಗಿತ್ತೋ..?
ಅಜ್ಜಿಗೂ ರೆಜ ಕೊಟ್ಟಿಕ್ಕಿ ಆತೋ ರುಚಿ ನೋಡುಲೆ…
bere mavinahannininda MAMBULA aagallave?????????????( Mambula can do in any other types of Mnago????)
ಅಕ್ಕಾ,
ಮಾ೦ಬಳ ಎಲ್ಲಾ ಮಾವಿನ ಹಣ್ಣಿನದ್ದಾದೀತು.
ಕಶಿ ಮಾವಿನ ಹಣ್ನುಗಳ ಮಾ೦ಬಳ ಮಾಡಿ ಅಸಲಾಗ ಮತ್ತೆ ಕಾಟು ಮಾವಿನ ಹಣ್ಣಿನ ಹುಳಿಮಿಶ್ರಿತ ರುಚಿ ಮಾ೦ಬಳಕ್ಕೆ ಹೇಳಿಯೇ ದೇವರು ತಯಾರು ಮಾಡಿದ್ದು..
ಒಣಗಿದ ಮಾ೦ಬಳ ಹಸೆ೦ದ ತೆಗವಗ ಕರೆಕರೇ೦ದ ತು೦ಡು ಮಾಡಿ ತಿನ್ನೆಕ್ಕದಾ.
ಅಜ್ಜೀ,ನೆಗೆಮಾಣಿ ತಿರುಗಿಗೊ೦ಡಿಪ್ಪಗ ಎರಡು ವರುಷ ಹಾಳಾಗದ್ದೆ ಒಳಿಗೋ?ಜೆ೦ಗ೦ದ ಮೆಲ್ಲ೦ಗೆ ಕಿಸೆಗೆ ತು೦ಬುಸಿ ಓಡುಗು,ಹಾ೦.
ಅದಾ… ಕಳುದೊರಿಶದ ಮಾಂಬುಳಲ್ಲಿ ಕರೆ ಕರೆ ಕಾಲಿ ಆದ್ದದು ಹಾಂಗೋ ಅಂಬಗ…
ಒಂದು ಮಾವಿನ ಹಣ್ಣು ಇದ್ದರೆ ಮತ್ತೆ ಊಟಕ್ಕೆ ಬೇರೆ ಯಾವ ಬೆಂದಿಗಳುದೇ ಬೇಕಾವುತ್ತಿಲ್ಲೆ.
ಲೇಖನ ಒಪ್ಪ ಆಯಿದು… 🙂
ಅಪ್ಪಪ್ಪು.. ಮಾವಿನ ಹಣ್ಣಿನ ಸಮೆಯಲ್ಲಿ ಉಪ್ಪಿನಕಾಯಿ ಬೇಕೇ ಆವುತ್ತಿಲ್ಲೆ… ಮಾವಿನಣ್ಣು ಹಾಕಿಯೊಂಡೇ ಉಂಡು ಹೋವುತ್ತದ…
ಅಜ್ಜೀ..
ಈ ವರ್ಷ ಮಾಂಬುಳ ಸಿಕ್ಕಿದ್ದೇ ಇಲ್ಲೆ..
ನಿಂಗ ಬರದ್ದದು ಓದಿ ಬಾಯಿಲಿ ನೀರು ಬಂತು..
ಇನ್ನೊಂದರಿ ಬೀರಂತಡುಕಕ್ಕೆ ಹೋಪಾಗ ಬಂಡಾಡಿಲಿ ಒಂದರಿ ತಿರುಗಿ ಬಂದಿಕ್ಕು… ಮಾಂಬುಳ ತೆಕ್ಕೊಂಡೋಪಲಕ್ಕದ…
ನಿಂಗಳ ಇಷ್ಟು ಹೇಳಿಕೆ ಅಜ್ಜೀ… ಖಂಡಿತಾ ಬತ್ತೆ… ಎಂತ ಮಾಡುದು? ಈ ಲೆಕ್ಕ ಹಾಕುದರ ಕಲಿವ ಎಡೆಲಿ ಪುರುಸೊತ್ತೇ ಸಿಕ್ಕುತ್ತಿಲ್ಲೆ.
ಎನಗೆ ಹೇಳಿ ಮಾಂಬುಳ ತೆಗದು ಮಡುಗಿ. ದೊಡ್ಡ ಪುಳ್ಳಿಯ ಕೈಲಿ ಕಳುಸಿರೂ ಆಗದ್ದೆ ಇಲ್ಲೆ..
ಅಕ್ಕ ತಂದು ಕೊಡುಗು..
ಮಾಂಬಳ ಲಾಯ್ಕ ಆದಿಕ್ಕು.ಬರೆದ್ದೂ ಲಾಯ್ಕ ಆಯಿದು.
ಬಂಡಾಡಿ ಅಜ್ಜಿ ಬೈಲಿಂಗೆ ಬಂದು ಒಂದು ಒಳ್ಳೆ ವಿಷಯ ಹೇಳಿ ಅಪ್ಪಗ ಕೊಶೀ ಆತಿದ. ಅಜ್ಜಿ, ಹಪ್ಪಳ, ಮಾಂಬಳ, ಸಾಂತಾಣಿ ಹೇಳಿ ತುಂಬಾ “ಬೆಶಿ”ಲಿ ಇತ್ತಿದ್ದಿರಾಯ್ಕು. ಆರೋಗ್ಯ ಹೇಂಗಿದ್ದಜ್ಜಿ. ಮಾಂಬಳ ಮಾಡ್ತರ ಬಗೆಲಿ ಬರದ್ದು ಲಾಯಕಾಯಿದು. ಪಟ ನೋಡಿ ಎಂಜಲು ನೀರು ಹರುದತ್ತು. ಎಂಗೊಗೆ ಒಂದು ಸಾಸಮೆ ಮಾಡ್ಳುದೆ ಸರಿಯಾದ ಹಣ್ಣು ಪೇಟೆಲಿ ಸಿಕ್ಕುತ್ತಿಲ್ಲೆ ಹೇಳಿ. ಇರಳಿ. ನಿಂಗೊ ಬರದ್ದರ, ನಿಂಗೊ ಮಾತಾಡ್ತ ರೀತಿಲಿ, ಹಾಂಗೇ ಓದಿದೆ ಅಜ್ಜಿ. ಅಜ್ಜಿಯ ಕಂಡು ಮಾತಾಡಿದ ಹಾಂಗೇ ಆತು.
ಬಂಡಾಡಿ ಹೊಡೇಂಗೆ ಬಂದಿದ್ದರೆ ಕೊಟ್ಟಿಕ್ಕಲಾವುತ್ತಿತ್ತದಾ.. ಮಾಂಬುಳ ಕೊಡುವೊ…
ಬಪ್ಪೊರಿಷ ಕಾಟು ಹಣ್ಣು ಕೊಟ್ಟು ಕಳುಸುತ್ತೆ ಆತೊ..
ಎಂಗಳ ಹೊಡೆಲಿ ಮಾರ್ಗ ಅಗಲ ಮಾಡ್ತ ಹೆಸರಿಲಿ ಇದ್ದ ಮಾವಿನ ಮರವ ಪೂರ ಕಡುದು ತೆಗೆದ್ದವು. ಮಾಂಬಳ ಬಿಡಿ, ಮೆಡಿಯ ಪರಿಮಳವೂ ಎನಗೆ ದಕ್ಕಿದ್ದಿಲ್ಲೆ ಅಜ್ಜಿ.ಮಾಂಬಳವ ಕಳುದ ವರ್ಷ ಕೊಟ್ಟವಕ್ಕೆ ಈಸರ್ತಿ ಕೊಟ್ಟಿಕ್ಕೆಡಿ , ಆ ಪಾಲು ಎನಗೆ ಇರ್ಲಿ. ನೆಗೆಮಾಣಿಯತ್ರೆ ಈ ಶುದ್ದಿ ಹೇಳಿಕ್ಕಡಿ ಮತ್ತೆ. ಎನಗೆ ಸಿಕ್ಕಿದ್ದೂ ದಕ್ಕದ್ದಾಂಗೆ ಅಕ್ಕು.
ಮನ್ನೆ ಉಪ್ಪಿನಕಾಯಿ ಕೊಟ್ಟದಕ್ಕೆ ಥಾಂಕ್ಸ್ ಅಜ್ಜಿ.
ಅಕ್ಕು ಧಾರಾಳ ಕೊಡುವೊ…
ಓ, ಇದಾರು ಬಂದದೂ!! 😉 ಎಂತಜ್ಜೀ, ಸೊಂಟ ಬೇನೆ ಹೇಳಿಗೊಂಡಿತ್ತಿದ್ದಿ, ಕಮ್ಮಿ ಆತೋ? ಬೈಲಿಂಗೆ ನಿಂಗ ಬಾರದ್ದೆ ನೆಗೆಮಾಣಿ, ಬೋಸಭಾವನೇ ಇತ್ಯಾದಿ ಬಿಂಗಿಮಾಣಿಯಂಗಳ ಬಿಂಗಿ ಕಂಡಾಬಟ್ಟೆ ಜಾಸ್ತಿ ಆಯ್ದು ಹೇಳಿ ಶ್ರೀ ಅಕ್ಕ ಮೊನ್ನೆ ಪರಂಚ್ಯೊಂಡಿದ್ದತ್ತು.. ಇಂಜೆಕ್ಷನ್ನು ಕೊಡ್ಲೆ ಡಾಗಟ್ರಕ್ಕಳೂ ಇಬ್ರುದೆ ನಾಪತ್ತೆ ಇದಾ! ನಿಂಗ ಬಂದದೊಳ್ಳೆದಾತು.. ನೆಗೆಮಾಣಿ ಕಾಯ್ತಾ ಇದ್ದ ಮಾಂಬ್ಳಕ್ಕೆ. ಎಂಗೊಗೆಲ್ಲ ತೆಗದುಮಡುಗಿ ಅವಂಗೆ ಕೊಡುದೊಳ್ಳೆದು ಆತೋ?
😉
ಎಲ್ಲಾ ಸರಿ, ಒಂದು ಅರ್ಥ ಆತಿಲ್ಲೆ, [ಕೆತ್ತಿ, ಚೋಲಿ ತೆಗೆತ್ತದು]
ಕಾಟುಮಾವಿನ ಮಾಂಬ್ಳಕ್ಕೆ ಕೆತ್ತಿ ಎಂತಕೆ? 😉 ಅದರ್ಲೂ ಕೆತ್ತಿಯ ಚೋಲಿ ತೆಗೆತ್ತದು ಹೇಂಗೆ! ಒಟ್ಟಾರೆ ಕಂಫ್ಯೂಸಾತೀಗ!
[ ತೊಟ್ಟು ಕೆತ್ತಿ, ಚೋಲಿ ತೆಗೆತ್ತದು ]
ಹೀಂಗೆ ಬರದ್ದದಲ್ಲದೋ ಮಾಣೀ… ನೀ ಎಂತ ತೊಟ್ಟಿನ ನುಂಗಿದ್ದದೋ… ಸೊನೆ ಇಕ್ಕು ಜಾಗ್ರತೆ ಎಂತ…
ತೊಟ್ಟು ರಜಾ ದೂರಲ್ಲಿತ್ತದಲ್ಲದೋ , ಕಂಡತ್ತಿಲ್ಲೆ ಇದಾ.. ಆದರುದೆ, ಮಾಂಬ್ಳ ಮಾಡ್ಲೆ ಕೆತ್ತಿ ಎಂತಕೆ ಹೇಳುದು ಅರ್ಥ ಆತಿಲ್ಲೆನ್ನೆಜ್ಜೀ, 😉
ಒಳ್ಳೆ ಕಾಟು ಮಾವಿನಹಣ್ಣುದೆ ಗಾ೦ಧಾರಿ ಮೆಣಸುದೆ ನುರುದು ಗೊಜ್ಜಿ ಮಾಡಿ ಅಶನಕ್ಕೆ ಕೂಡಿ೦ಡು ಉ೦ಡ ಕಾಲ ಮರತ್ತತ್ತು. ಈಗ ಮಾ೦ಬುಳ ಕೂಡ ಸಿಕ್ಕದ್ದೆ ವರ್ಷ ಸುಮಾರಾತು. ಇಪ್ಪ ಮರ೦ಗಳ ಪೂರ ಕಡಿವಲಾತು, ನೆಟ್ಟು ಬೆಳೆಶಲಿಲ್ಲೆ. ನೆಟ್ಟು ಬೆಳೆಶುತ್ತರುದೆ ಬೇಗನೆ ಫಲ ಕೊಡ್ತ ಹಾ೦ಗಿಪ್ಪ ಕಶಿ ಮಾವಿನ ಸೆಸಿಯನ್ನೆ ಅಲ್ಲದೊ ಬೆಳೆಶುವದು? ಈಗ ಇಪ್ಪ ಮರ೦ಗಳುದೆ ಮುಗುದರೆ ಮತ್ತೆ ಮಾ೦ಬುಳ ತಿನ್ನೆಕಾರೆ ಪೇಟೆ೦ದ ಪೇಕೇಟಿಲ್ಲಿ ಸಿಕ್ಕುತ್ತ ಮಾ೦ಬುಳದ ಪ್ರೇತವನ್ನೇ ತಿನ್ನೆಕ್ಕಷ್ಟೆ..
ಶೆ.. ಅಪ್ಪೋ..
ನಮ್ಮ ಊರಿನ ಹೊಡೆಲಿಯುದೇ ಸುಮಾರು ಮರಂಗಳ ಕಡುದ್ದವೀಗ… ಇಪ್ಪ ನಾಕು ಮರಕ್ಕೆ ಹತ್ತು ಮನೆಯವ್ವು ಕಾದುಗೊಂಡಿರ್ತವು ಹಣ್ಣು ಹೆರ್ಕಲೆ… ಇನ್ನು ರೆಜ ಸಮೆಯ ಕಳುದಪ್ಪಾಗ ಅದೂ ಇಲ್ಲೇಳಿ ಆವುತ್ತೋ ಏನೊ…
ಕಳುದೊರ್ಷ ನಿಂಗೊ ಕಟ್ಟಿ ಕೊಟ್ಟದು ಮಳೆಗಾಲಲ್ಲಿ ಬೂಸರು ಬಯಿಂದನ್ನೇಜ್ಜಿ! ನೆಗೆಗಾರ ಮಾಣಿ ನೆಗೆ ಮಾಣಿ ನೆಗೆ ಮಾಡಿಯೊಂಡಿತ್ತಿದ್ದ ಎನ್ನ ಕಣ್ಣಿಂಗೆ ಹುಗ್ಸಿ ಮಡಿಗಿದ್ದಕ್ಕೆ ಹಾಂಗೆ ಆಯೇಕು ಹೇದು. ಅದನ್ನೇ ಗೊಜ್ಜಿ ಮಾಡಿಪ್ಪಗ ಉಂಡಿಕ್ಕಿ ಲಾಯಕ ಆಯ್ದು ಮಾವ ಹೇಳಿದ್ದ ಕೂಡ!!
ಕೆರಿಶಿಲಿ ಎರದು ಮಡಗಿದ್ದದು.. ಫಟ ಕಂಡತ್ತು . ಲೊಟ್ಟೆ. ಅದು ವಸ್ತ್ರಲ್ಲಿ ಎರದು ಮಡುಗಿದ್ದು. ಅದೇ ಮಾವ ಹುಡಿಕ್ಯೊಂಡಿತ್ತವು ಎನ್ನ ವೇಷ್ಟಿ ಕಾಣುತ್ತಿಲ್ಲೆ ಹೇದು.!!
ಹೋ.. ಇಲ್ಲಿದ್ದದು ಲಾಯಿಕಿತ್ತನ್ನೇ… ಗಾಳಿ ಆಡದ್ದಾಂಗೆ ತೆಗದು ಮಡುಗಿದ್ದಿಲ್ಲೆಯೋ ಅಂಬಾಗ…
ಕೆರಿಶಿಯ ಮೇಗೆ ಒಸ್ತ್ರ ಹಾಕಿ ಎರವದಲ್ಲದೋ… ಬರದ್ದೆನ್ನೇ.. ಸೆಕೆಗೆ ಕನ್ನಡುಕ ತೆಗದು ಮಡಗಿ ಓದಿದ್ದೋ ಎಂತ್ಸೊ..
ಆನೇಳಿದ್ದು ಫಟದಡಿಲಿ ಬರದ್ದರ . ಓ…… ಲ ಲ ಲಾ.
ಅಜ್ಜಿ ನಿ೦ಗೊ ಬರದ್ದರ ಓದಿ ಎನಗೆ ತಿನ್ನೆಕ್ಕು ಹೆಳಿ ಆಶೆ ಆತು…ಅ೦ದೆಲ್ಲಾ ಎನ್ನ ಅಜ್ಜಿಗೆ ಮಾಡುಲೆ ಎಡಿವಾಗ ಎ೦ಗೊಗೆಲ್ಲ ಎಷ್ಟೂ ಮಾಡಿ ಕೊಡುಗು..ಈಗ ಹೆಸರು ಮಾತ್ರ ಕೆಳಕ್ಕಷ್ತೆ ಕಾ೦ಬಲೆ ಇಲ್ಲೆಃ-(. ಮತ್ತೆ ತಿನ್ನೆಕ್ಕು ಹೆಳಿ ಅಪ್ಪಗ ಅ೦ಗಡಿಲಿ ಸಿಕ್ಕುವ ರೆಡಿಮೆಡ್ ಮಾ೦ಬ್ಳು (naturo) ತ೦ದು ತಿ೦ಬದು.ಆದರೆ ಅದರಲ್ಲಿ ಅಜ್ಜಿಯ ಪ್ರೀತಿಯೂ ಇರ್ತಿಲ್ಲೆ ಆ ರುಚಿಯೂ ಇರ್ತಿಲ್ಲೆ.
ಅಪ್ಪೋ ದೀಪೀ… ಬಂಡಾಡಿಗೆ ಬಾ ಆತೋ ಪುರುಸೋತಿಲಿ.. ಕೊಡುವೊ ಬೇಕಾದಷ್ಟು…
ಆತು ಇ೦ನ್ನೊ೦ದರಿ ಬತ್ತೆ..ಇದಾ ಬೈಲಿಲಿ ನಿ೦ಗೊಳ ಮಾ೦ಬ್ಳಿ೦ಗೆ ತು೦ಬಾ ಡಿಮಾ೦ಡು ಇದ್ದ ಹಾ೦ಗೆ ಕಾಣ್ತು..ಆನು ಬಪ್ಪಗ ಒಳಿಗನ್ನೆ 😉