Oppanna.com

ಮಾವಿನ ಮೆಡಿ ತಂಬ್ಳಿ

ಬರದೋರು :   ವೇಣಿಯಕ್ಕ°    on   08/07/2014    0 ಒಪ್ಪಂಗೊ

ವೇಣಿಯಕ್ಕ°

ಮಾವಿನ ಮೆಡಿ ತಂಬ್ಳಿ

ಬೇಕಪ್ಪ ಸಾಮಾನುಗೊ:

  • 2-3  ಸಾಧಾರಣ ಗಾತ್ರದ ಮಾವಿನ ಮೆಡಿ(ಉಪ್ಪಿಲ್ಲಿ ಹಾಕಿದ್ದು ಅಥವಾ ಮೆಡಿ ಉಪ್ಪಿನಕಾಯಿದು)
  • 3/4 ಕಪ್(ಕುಡ್ತೆ) ಕಾಯಿತುರಿ
  • 1 ಹಸಿಮೆಣಸು
  • ರುಚಿಗೆ ತಕ್ಕಸ್ಟು ಉಪ್ಪು
  • 3/4-1 ಕಪ್(ಕುಡ್ತೆ) ಚಪ್ಪೆ ಮಜ್ಜಿಗೆ
  • 1/2 ಚಮ್ಚೆ ಸಾಸಮೆ
  • 4-5 ಬೇನ್ಸೊಪ್ಪು
  • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:

ಮಾವಿನ ಮೆಡಿಯ ಉಪ್ಪು ನೀರಿಂದ/ಉಪ್ಪಿನಕಾಯಿಂದ ತೆಗದು ತೊಳದು, ಒಳಾಣ ಕೋಗಿಲೆ ತೆಗದು ಮಡುಗಿ.

ಮಿಕ್ಸಿ/ಗ್ರೈಂಡರಿಂಗೆ ಕಾಯಿ, ಮಾವಿನ ಮೆಡಿ, ಹಸಿಮೆಣಸನ ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ.  ಇದಕ್ಕೆ ಮಜ್ಜಿಗೆ, ಉಪ್ಪು ಹಾಕಿ ತೊಳಸಿ.(ನೀರು ಬೇಕಾದರೆ ರೆಜ್ಜ ಹಾಕುಲಕ್ಕು)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಂಬ್ಳಿಗೆ ಹಾಕಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×