Oppanna.com

ಮೆಂತೆ- ಬಾಳೆಹಣ್ಣು ಇಡ್ಲಿ-ರೂಪಾಪ್ರಸಾದ್ ಕೋಡಿಂಬಳ

ರೂಪಾಪ್ರಸಾದ್ ಕೋಡಿಂಬಳ.

ಬರದೋರು :   ಶರ್ಮಪ್ಪಚ್ಚಿ    on   09/06/2020    2 ಒಪ್ಪಂಗೊ

ಕೃಷಿಕರ ಮನೆಲಿ ಬಾಳೆಗೊನೆ  ತಪ್ಪ. ಒಂದೊ,ಎರಡೊ ಗೊನೆಗೊ   ಒಳವೋ,ಅಡುಗೆ ಮನೆಲಿಯೋ ನೇಲಿಕೊಂಡಿಪ್ಪದು  ಮಾಮುಲಿ. ಮನೇಲಿ ಕಾಟಂಗೋಟಿ ಮಾಡಿದ್ದು ಮುಗುದಪ್ಪಗ ಅರ್ಜೆಂಟಿಂಗೆ ಹೊಟ್ಟೆ ತಂಪು ಮಾಡುದು ಬಾಳೆಹಣ್ಣೇ.
ಎಂಗಳಲ್ಲಿ ಮಂಗಂಗಳ ಹಾವಳಿ ಇಪ್ಪ ಕಾರಣ ಇತ್ತೀಚೆಗೆ ಬಾಳೆಹಣ್ಣಿಂಗೂ ಬರ ಹೇಳ್ಳಕ್ಕು. ಮೊನ್ನೆ ಲಾಕ್ಡೌನ್ ನ ಸಮಯಲ್ಲಿ ಮಂಗಂಗಳ ಕಣ್ಣು ತಪ್ಪಿಯೋ ಅಥವಾ ಬಡಪಾಯಿಗೊ ತಿಂದುಕೊಳ್ಳಲಿ ಹೇಳಿ ಬಿಟ್ಟದೋ , ಎರಡು- ಮೂರು ಕೊನೆ ಒಟ್ಟಿಂಗೆ ಸಿಕ್ಕಿತ್ತು. ಹಾಂಗೆ ಕೊಶಿಲಿ ಹಾಣ್ಣಾಗಲಿ ಹೇಳಿ ಕಟ್ಟಿ ನೇಲ್ಸಿದೆ.
  ಒಂದುವಾರಲ್ಲಿ ಮೂರು ಕೊನೆಯೂ ಒಟ್ಟಿಂಗೆ ಹಣ್ಣಾತು. ಚೂರು ಕಾಸಿ ಹಲ್ವ ಮಾಡಿದೆ. ಪಾಯಸ,ರಸಾಯನ ಮಾಡಿ ತಿಂದಾತು.ಬೇಕಪ್ಪಗ ತೆಗದು ಪಾಯಸ ಮಾಡ್ಲಕ್ಕು ಹೇಳಿ ಸಕ್ಕರೆ  , ಚೂರು ತುಪ್ಪ ಹಾಕಿ ಕಾಸಿ ತಣಿಶಿ ಕರಡಿಗೆಲಿ ತುಂಬಿಸಿ ಫ್ರಿಜ್ ಲಿ ಮಡುಗಿಯೂ ಅತು. ಒಂದೆರಡು ದಿನ ದೋಸೆ ಮಾಡಿಯಪ್ಪಗ  ,ಮಗ  “ಅಮ್ಮಾ ನಾಳೆ ಬೇರೆ ಎಂತಾರು ಮಾಡು ” ಹೇಳಿ ಮೋರೆ ಊದಿಸಿದ. ಇನ್ನೆಂತ ಮಾಡುದಪ್ಪಾ ಹಣ್ಣಿನ ಹೇಳಿ ತಲೆಬೆಶಿ ಅತು. ಕೆಲವು ಹಣ್ಣುಗಳ  ತೆಳು ತೆಳು ಕೊರದು  ಹಾಳೆಲಿ ಒಪ್ಪಕೆ ರಂಗೋಲಿ ಹಾಕಿದ ಹಾಂಗೆ ಒಂದರ ಹತ್ರೆ ಒಂದರ ಮಡುಗಿ ಬೆಶಿಲಿಲಿ ಒಣಗುಲೆ ಮಡುಗಿದೆ ( ಡ್ರೈ ಫ್ರುಟ್ ನ ಹಾಂಗೆ ತಿಂಬಲೆ ಭಾರಿ ರುಚಿ ಆವುತ್ತು)
ಮರುದಿನ  ಮಕ್ಕಳ ಪರೀಕ್ಷೆ ವಿಷಯದ ಬಗ್ಗೆ ಫೋನಿಲಿ  ರಮ್ಯತ್ತಿಗೆ ಹತ್ರೆ ಮಾತಾಡುವಾಗ ಕಾಫಿಗೆಂತರ ಕೇಳಿದ್ದಕ್ಕೆ ‘ಮೆಂತೆ- ಬಾಳೆಹಣ್ಣು ಇಡ್ಲಿ ‘ ಹೊಸ ಪ್ರಯೋಗ ಮಾಡಿದ್ದೆ ಹೇಳಿತ್ತು.
 ಅತ್ತಿಗೆ ಕೈಯಿಂದ  ರೆಸಿಪಿ ಕೇಳಿ ಮರುದಿನ ಮಾಡಿದ ಮೆತ್ತಂಗೆ ಬೆಶಿಬೆಶಿ ಮೆಂತೆ – ಬಾಳೆಹಣ್ಣು ಇಡ್ಲಿ ಎಂಗಳ ಮನೆಲಿ ಮೆಚ್ಚುಗೆ ಗಳಿಸಿತ್ತು.
ನಿಂಗೊಗೂ ಹೇಳಿಕೊಡ್ತೆ ….
ಮೆಂತೆ – ಬಾಳೆಹಣ್ಣು ಇಡ್ಲಿ
ಬೇಕಪ್ಪ ಸಾಮಾಗ್ರಿಗೊ :: 2 ಪಾವು ಬೆಳ್ತಿಗೆ ಅಕ್ಕಿ, 2 ಚಮಚ ಮೆಂತೆಕಾಳು, 8-10 ಬಾಳೆಹಣ್ಣು, ಕಾಯಿಸುಳಿ ಅರ್ಧ ಗ್ಲಾಸು,ರುಚಿಗೆ ತಕ್ಕಷ್ಟು ಉಪ್ಪು.(ಬೇಕಾದರೆ ಬೆಲ್ಲ  ಎರಡು ಚಮಚ)
  ಮಾಡುವ ವಿಧಾನ : ಅಕ್ಕಿಯ  ,ಮೆಂತೆ ಒಟ್ಟಿಂಗೆ ಹಾಕಿ ಮೂರುಗಂಟೆ ನೆನೆಸಿ ಅದಕ್ಕೆ ಸಣ್ಣಕೆ ತುಂಡುಮಾಡಿದ ಬಾಳೆಹಣ್ಣು, ಮೆಂತೆ  ಕಾಯಿಸುಳಿ,ಉಪ್ಪು( ಬೇಕಾದರೆ ಚೂರು ಬೆಲ್ಲ) ಎಲ್ಲಾ ಒಟ್ಟಿಂಗೆ ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಡದು ಇರುಳು ಮಡುಗುದು.
ಮರುದಿನ ಇಡ್ಲಿ ಗಿಣ್ಣಾಲಿಂಗೆ ಪಸೆ ಮಾಡಿ ಇಡ್ಲಿ ಎರದು ಇಪ್ಪತ್ತು ನಿಮಿಷ ಬೇಶಿ.ಬೆಶಿ ಬೆಶಿ  ಇಡ್ಲಿ ತುಪ್ಪ, ಚಟ್ನಿ ,ಅನಾನಸ್ ಜ್ಯಾಮ್ ನೊಟ್ಟಿಂಗೆ ತಿಂಬಲೆ ಲಾಯ್ಕಾವುತ್ತು.
ಬಾಳೆಹಣ್ಣು ಒಟ್ಟಿಂಗೆ ಹಾಣ್ಣಾದಪ್ಪಗ ಹೀಂಗೆ ಒಂದೊಂದು ದಿನ ಇಡ್ಲಿ,ದೋಸೆ ಹೇಳಿ ಬದಲಿಸಿ ಮಾಡಿರೆ ಮಕ್ಕೊ ತಿಂತವು.
~~~***~~~
-ರೂಪಾಪ್ರಸಾದ್ ಕೋಡಿಂಬಳ
ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಮೆಂತೆ- ಬಾಳೆಹಣ್ಣು ಇಡ್ಲಿ-ರೂಪಾಪ್ರಸಾದ್ ಕೋಡಿಂಬಳ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×