Oppanna.com

ಒಂದು ಪ್ರಕರಣದ ಸುತ್ತ -೪ : ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   11/06/2020    1 ಒಪ್ಪಂಗೊ

ಒಂದು ಪ್ರಕರಣದ ಸುತ್ತ -೪

-ರಮ್ಯ ನೆಕ್ಕರೆಕಾಡು

ಜೊಗುಳಿಯ ನುಂಗಿಕೊಂಡು,” ಅಂಜಲಿಯ ವಿಷಯ ಎನ್ನತ್ರೆ ಎಂತ ಕೇಳೆಕ್ಕಾದ್ದು..??” ಹೇಳಿಕ್ಕಿ ಸಹನಾ ಹಣೆಲಿ ಸಾಲು ಕಟ್ಟಿತ್ತ ಬೆಗರಿನ ಹನಿಗಳ ಮೊಣಕೈಲಿ ಉದ್ದಿಗೊಂಡತ್ತು. ಒಬ್ಬ ದಕ್ಷ ಪೋಲೀಸು ಅಧಿಕಾರಿ ಆಗಿತ್ತ ಶರತ್ಚಂದ್ರಂಗೆ ಸಹನಾನ ವರ್ತನೆ ಸಂಶಯಾಸ್ಪದವಾಗಿ ಕಂಡತ್ತು. ಸಹನಾ ಹತ್ತರೆ ಅನುಮಾನಲ್ಲಿಯೇ,” ಅಂಜಲಿ ಕಾಣೆ ಅಪ್ಪ ವಿಷಯವಾಗಿ ನಿನಗೆ ಎಂತಾರು ಗೊಂತಿದ್ದಾ..?” ಹೇಳಿಯಪ್ಪದ್ದೇ ಸಹನಂಗೆ ಎದೆ ಬಡಿತ ಜೋರಾತು. ” ಇ..ಇಲ್ಲೆ..ಎನಗೆಂತ ಗೊಂತಿಲ್ಲೆ..” ಹೇಳಿ ಸಹನಾ ತೊದಲಿಗೊಂಡು ಮಾತಾಡುದರ ಕಂಡಪ್ಪಗ ಶರತ್ಚಂದ್ರಂಗೆ ಎಂತದೋ ಸರಿ ಇಲ್ಲೆ ಹೇಳಿ ಕಂಡತ್ತು. ಶರತ್ಚಂದ್ರ ಕೇಶವನ ನೋಡಿಗೊಂಡು,” ಇದು ಮಕ್ಕಳಾಟ ಅಲ್ಲ..ಆರೇ ಆಗಲಿ ಅವಕ್ಕವಕ್ಕೆ ಗೊಂತಿಪ್ಪ ವಿಷಯವ ಹೇಳೆರೆ ಒಳ್ಳೆದು..ಮತ್ತೆ ಪರಿಸ್ಥಿತಿ ಗಂಭೀರ ಆಗಿಗೋಂಡು ಹೋದರೆ ಕಷ್ಟ..” ಹೇಳಿ ಸಹನಾಂಗೆ ಟಾಂಟ್ ಕೊಟ್ಟು ಮಾತಾಡಿದ. ಸಹನಾ ಎಂತರನ್ನುದೇ ಬಾಯಿ ಬಿಟ್ಟಿದಿಲ್ಲೆ. ಮತ್ತೆ ಶರತ್ಚಂದ್ರ,” ವಾಟೆವರ್..ಆನು ಕೇಳೆಕ್ಕಾದ ವಿಷಯಕ್ಕೆ ಬತ್ತೆ ಸಹನಾ…ಈ ಅಂಜಲಿಗೆ ಆರಾರೂ ಬಾಯ್ ಫ್ರೆಂಡ್ ಅಥವಾ ಈ ಪ್ರೀತಿ ಪ್ರೇಮ ಹೇಳಿ ಪೀಡ್ಸುವವು ಆರಾರು ಇತ್ತಿದವ..?” ಹೇಳಿ ನೇರ ವಿಷಯಕ್ಕೆ ಬಂದ. ಸಹನಾ ಕೈಯ ನೆಟ್ಟಿ ತೆಗಕ್ಕೊಂಡು,” ಇಲ್ಲೆ..ಅಂಜಲಿ ಎಂಗಳ ಕ್ಲಾಸಿಲಿಪ್ಪ ಹುಡುಗರತ್ರೇ ಮಾತಾಡುದೇ ಇಂತಿಷ್ಟೋಳಿ ಇದ್ದು..ಆನುದೇ ಅಂಜಲಿದೆ ಒಟ್ಟಿಂಗೆ ಕಾಲೇಜಿಂಗೆ ಹೋಗಿ ಬಂದುಗೊಂಡಿತ್ತದು..ಎನಗೆ ಗೊಂತಿಪ್ಪ ಹಾಂಗೆ ಅದಕ್ಕೆ ಪೀಡೆ ಕೊಡುವವು ಆರೂ ಇತ್ತಿದವೇಲ್ಲೆ..” ಹೇಳಿ ಗೊಂತಿಪ್ಪ ವಿಷಯವ ಹೇಳಿತ್ತು. ಶರತ್ಚಂದ್ರ,” ಸರಿ..ಇನ್ನೆಂತಾರೂ ವಿಷಯ ತಿಳ್ಕೊಳ್ಳೆಕ್ಕಾರೆ ಪುನಃ ಬತ್ತೆಯ.. ಅಥವಾ ನಿನ್ನ ದಿನಿಗೇಳ್ತೆಯ..ಆಗದೋ..” ಹೇಳಿದ್ದಕ್ಕೆ ಸಹನಾ “ಅಕ್ಕು” ಹೇಳಿ ತಲೆ ಆಡ್ಸಿತ್ತು. ಸಹನಾ ಆಗ ನಡಕ್ಕೊಂಡ ರೀತಿಂದಾಗಿ ಶರತ್ಚಂದ್ರಂಗೆ ಅದರ ಮೇಲೆ ಎಂತದೋ ಅನುಮಾನ ಬಂತು. ಸಮಯ ಬಂದಪ್ಪಗ ವಿಚಾರ್ಸೆಕ್ಕು ಹೇಳಿ ಗ್ರೇಶಿಗೊಂಡು ಬೈಕ್ಕಿಲಿ ಹತ್ತಿ ಕೂದಿಕ್ಕಿ, ಪುನಃ ಒಂದರಿ ಸಹನಾನ ನೋಡಿದ. ಅಷ್ಟೊತ್ತು ಅವನನ್ನೇ ನೋಡಿಗೊಂಡಿತ್ತ ಸಹನಾ, ಕೂಡ್ಲೇ ದೃಷ್ಟಿ ತಪ್ಸಿತ್ತು. ಅಂಬಗ ಶರತ್ಚಂದ್ರಂಗೆ ಎಂತದೋ ವಿಷಯ ಇದ್ದು ಹೇಳಿ ನಿಗಾಂಟಾತು. ಮತ್ತೆ ಕೇಶವನತ್ರೆ,”ಭಾವ..ನಿಂಗ ಒಂದರಿ ಸ್ಟೇಷನಿಂಗೆ ಬಂದು, ಅಂಜಲಿ ಕಾಣೆ ಆಯ್ದು ಹೇಳಿ ಕಂಪ್ಲೇಂಟು ಕೊಡೆಕ್ಕಾವ್ತು.. ಎನಗೆ ಅಂಜಲಿಯ ಕೇಸು ಹ್ಯಾಂಡಲ್ ಮಾಡ್ಲೆ ಕಂಪ್ಲೇಂಟು ಬೇಡ..ಆದರೆ ಒಂದು ಪ್ರೊಸಿಜರ್ ಇದ್ದನ್ನೇ..ಅದಕ್ಕಾರು ಬಂದು ಹೋಗಿ..” ಹೇಳಿಕ್ಕಿ ಬೈಕಿನ ಸ್ಟೇಷನ್ ಹೊಡೆಂಗೆ ತಿರುಗ್ಸಿದ. ಸ್ಟೇಷನಿಂದ ಮತ್ತೆ ಇಬ್ರುದೇ ಹೊಟ್ಟೆಗೆ ಅಶನ ನೀರಿಲ್ಲದ್ದೇ, ಹೊತ್ತಪ್ಪಗಂಗೊರೆಗೆ ಅಂಜಲಿಯ ಹುಡ್ಕಿಗೊಂಡು ನಟ್ಟತಿರುಗಿದವು. ಬಾಡಿದ ಮೋರೆ ಹೊತ್ತುಗೊಂಡೇ ಇಬ್ರುದೇ ಮನೆಗೆ ಬಂದವು. ಶಾಂತಿ ಓಡಿಗೊಂಡು ಬಂದು,” ಚಂದ್ರೋ… ಅಂಜಲಿ..??” ಹೇಳಿ ಸಣ್ಣ ಮಕ್ಕ ಅಪ್ಪ ಪೇಟೆಂದ ಬಪ್ಪಗ ಚಾಕ್ಲೇಟು ಕೇಳಿದಾಂಗೆ ಕೇಳಿತ್ತು. ಶರತ್ಚಂದ್ರಂಗೆ ಶಾಂತನ ಕಂಡು “ಅಯ್ಯೋ” ಹೇಳಿ ಆತು. ಉದಿಂದ ಹೊತ್ತಪ್ಪಗಂಗೊರೆಗೆ ಕೂಗಿ ಕೂಗಿ ಒಂದೇ ದಿನಲ್ಲಿ ಶಾಂತನ ರೂಪವೇ ಬದಲಾಗಿತ್ತು. ಮೋರೆ ಇಡೀ ಬೆಳ್ಚೆ ಆಗಿತ್ತು..”ಚ್ಲ್….ಎಲ್ಲಿ ಹೋತೋಳಿ..?” ಹೇಳಿ ಕೇಶವ ಅಲ್ಲಿಯೇ ನೆಲಕ್ಕೆ ಕಾಲುನೀಡಿ ಕೂದ. ಶರತ್ಚಂದ್ರ,”ನಿಂಗ ಈಗಳೇ ಆಶೆ ಕಳೆಕ್ಕೊಂಡರೆ ಹೇಂಗೆ..ಅಕ್ಕಂಗೆ ರಜ ಧೈರ್ಯ ತುಂಬಿ…ವೀಣಾ ಎನಗೆ ಸ್ಟೇಷನಿಲಿ ಸುಮಾರು ಕೆಲಸ ಬಾಕಿ ಇದ್ದು..ಮುಗಿವಗ ನಡುಇರುಳಪ್ಪಲೂ ಸಾಕು..ನೀನು ರಜ ಸಮಯ ಇಲ್ಲಿಯೇ ಇಪ್ಪದೊಳ್ಳೆದು..ಅಕ್ಕಂಗೆ ಪಾಸಾಡಿಗಾತು..ಬಾ ನಿನಗೆ ಬೇಕಾದ ಸರಬ್ರಾಯಂಗಳ ಪೂರಾ ಮನೆಂದ ತೆಕ್ಕೊ.. ಆನು ನಿನ್ನ ಬಿಟ್ಟಿಕ್ಕಿ ಮತ್ತೆ ಹೋತೆ..”ಹೇಳಿದ. ವೀಣಾ ಶರತ್ಚಂದ್ರನ ಮಾತಿಂಗೆ ನಕಾರ ತೆಗೆಯದ್ದೇ ಅವನೋಟ್ಟಿಂಗೆ ಹೋತು.
ಗಂಟೆ ಎಂಟಾತು.ವೀಣಾ ಒಂದು ಬ್ಯಾಗಿನ ತೆಕ್ಕೊಂಡು ಬಂತು. ಮನೆಲಿ ಒಂದು ಬೆಣ್ಚಿ ಇಲ್ಲೆ. ಹಾಂಗೆ ಪರಡಿಗೊಂಡು ಹೋಗಿ ಬಲ್ಬಿನ ಸ್ವಿಚ್ಚಾಕಿತ್ತು. ನೋಡೆರೆ ಕೇಶವಂದೇ ಶಾಂತಂದೇ ಕೂದ ಜಾಗೆಂದ ಹಂದಿತ್ತಿದವೇಲ್ಲೆ..ವೀಣಾ ಬ್ಯಾಗಿನ ಕೆಳ ಮಡುಗಿ,” ಚೆಕ್ ಎಂತ ಅತ್ತಿಗೆ ಇದು..ಸೂತಕದ ಮನೆಯ ಹಾಂಗೆ ಒಂದು ಬೆಣ್ಚಿ ಇಲ್ಲೆ..ಸೂತಕದ ಮನೆಲಿಯಾದರೂ ಒಂದು ದೀಪ ಹೊತ್ತಿಸಿ ಮಡುಗುತ್ತವು. ಹೆರಂದ ನೋಡೆರೆ ಇಲ್ಲಿ ಒಂದು ಮನೆ ಇದ್ದು ಹೇಳಿ ಆರುದೇ ಹೇಳವು…ಅಣ್ಣಾ..ನಿಂಗೊಗಾದರೂ ಗೊಂತಾವ್ತಿಲ್ಲೆಯಾ??” ಹೇಳಿ ಕೇಶವನ ಮೋರೆ ನೋಡಿತ್ತು. ಕೇಶವ ಎದುರೆ ಇಪ್ಪ ಗೋಡೆಯನ್ನೇ ನೋಡಿಗೊಂಡು,” ಹ್ಞ್ಂ..ಮಕ್ಕ ಇಲ್ಲದ್ದ ಮನೆ ಒಂದು ಲೆಕ್ಕಲ್ಲಿ ಸೂತಕದ ಮನೆಯೇ..” ಹೇಳಿಯಪ್ಪಗ ಮಕ್ಕ ಇಲ್ಲದ್ದ ವೀಣಾಂಗೆ ಕೂಡ್ಲೇ ಎರಡು ಕಣ್ಣಿಲಿದೇ ನೀರು ತುಂಬಿತ್ತು. ವೀಣಾಂಗೆ ಕೇಶವ ಅಂಜಲಿಯ ವಿಚಾರವಾಗಿ ಮಾತಾಡಿದ್ದಷ್ಟೇ ಹೊರತು ಎನಗೆ ಬೇನೆ ಆಯ್ಕು ಹೇಳ್ತ ಉದ್ದೇಶಂದ ಅಲ್ಲ..ಹೇಳಿ ಗೊಂತಿತ್ತು. ಈ ಸಂಧರ್ಭಲ್ಲಿ ಆನುದೇ ಇವರಾಂಗೆ ಕಣ್ಣೀರು ಹಾಕಿಗೊಂಡು ಕೂದರಾಗ ಹೇಳಿ,” ನಿಂಗ ಇಬ್ರುದೇ ಉದಿಯಪ್ಪಗಂದ ಲಾಗಾಯ್ತಿ ಎಂತ ತಿಂದಿದಿಲ್ಲಿ..ಆನೆಂತಾರು ಬೇಶಿ ಹಾಕುತ್ತೆ..”ಹೇಳಿ ವೀಣಾ ಅಟ್ಟೊಂಬಳಕ್ಕೆ ಹೋತು.
ಕೇಶವ ಮನಸ್ಸಿಲ್ಲದ್ರೂ ಪುಚ್ಚೆ ಉಂಡಾಂಗೆ ರಜ ಉಂಡ. ಶಾಂತ ತಿಪ್ಪರ್ಲಾಗ ಹಾಕೆರೂ ಉಂಡಿದಿಲ್ಲೆ..” ಅಂಜಲಿ ಈಗ ಉಂಡಿಕ್ಕಾ..ಪಾಪ ಅದಕ್ಕೆ ಹಶು ಕಟ್ಟಿ ಕೂಪಲೆಡಿತ್ತಿಲ್ಲೆ..ಅಡಿಗೆ ಅಪ್ಪದು ರಜ ತಡವಾದರುದೇ, ಅಮ್ಮ ಹಶುವಾವ್ತು..ಹೇಳಿ ರಾಗ ಎಳಕ್ಕೊಂಡು, ಇದ್ದಬದ್ದ ಕರಡಿಗೆ ಪೂರಾ ಅರಟ್ಟಿ, ಎಂತಾರು ಕಾಟಂಗೋಟಿ ತಿಂದಾರೂ ಹೊಟ್ಟೆ ತುಂಬ್ಸುಗು..ಹಾಂಗಿಪ್ಪ ಎನ್ನ ಪುಟ್ಟು ಈಗ ಎಂತರ ತಿಂದಿಕ್ಕು..?ಅದು ಇಂದಿರುಳು ಎಲ್ಲಿ ಮನುಗುಗು?? ಅದಕ್ಕೆ ಇರುಳು ಚಳಿಯಾಗದ ವೀಣಾ..ಹೇಂಗಿದ್ದ ಬೇಸಗೆಲಿದೇ ಅದಕ್ಕೆ ಗುಡಿಹೆಟ್ಟಿ ಒರಗೆಕ್ಕು..ಈಗ ಹೊದಕ್ಕೆ ಬಿಡು ಮನುಗುಲೆ ಜಾಗೆ ಇಕ್ಕ ಅದಕ್ಕೆ..? ಹೇಳಿ ಸಾವಿರ್ದೊಂದು ಪ್ರಶ್ನೆ ಹಾಕಿತ್ತು ಶಾಂತ.
“ವೀಣಾ…ಅಂಜಲಿಗೆ ಹತ್ತು ವರ್ಷ ಆಗಿತ್ತು. ಎಂತಕೋ ಅರ್ಗೆಂಟು ಮಾಡಿತ್ತು ಹೇಳಿ ಇವು ಅದಕ್ಕೆ ಸಮಾ ಬಿಗುದವು. ಮೊದಲೇ ಅದಕ್ಕೆ ಕೋಪ ಜಾಸ್ತಿ, ಅಪ್ಪ ಪೆಟ್ಟುಕೊಟ್ಟವನ್ನೇ ಹೇಳಿ ಕೋಪಲ್ಲಿ ಎಲ್ಲಿಗೋ ಹೋತು. ಆ ದಿನವುದೇ ಹೀಂಗೆ ಎಲ್ಲಿ ಹುಡ್ಕೆರೂ ಇಲ್ಲೆ!! ಸುಮಾರು ಅರ್ಧ ದಿನ ಹುಡ್ಕಿದ್ದೆಯ..ಮತ್ತೆ ಕಡೇಂಗೆ ಮನೆ ಹಿಂದಣ ಕಾಯಿ ರಾಶಿ ಹಾಕುವ ಕೊಟ್ಟಗೆಲಿ ಮೂಲೆಲಿ ಕೂದುಗೊಂಡತ್ತು. ಎಂಗ ಮದಲೇ ಅಲ್ಲಿ ಹುಡ್ಕಿತ್ತಿದೆಯ..ಅದು ಮತ್ತೆ ಬಂದು ಕೂದ್ದ, ಅಲ್ಲ ಎಂಗೊಗೆ ಗೋಷ್ಠಿ ಆಗದ್ದದಾಳಿ ಗೋಂತಿಲ್ಲೆ ಪುಣ್ಯಕ್ಕೆ ಚಾಮಿ ಕೈ ಬಿಟ್ಟಿತ್ತಿದನೇಲ್ಲೆ..ಅಂದ್ರಣ ಹಾಂಗೆ ಇಂದುದೇ ಅಲ್ಲಿ ಬಂದು ಕೂದಿಕ್ಕಾಳಿ…ಆನೊಂದರಿ ನೋಡಿಕ್ಕಿ ಬತ್ತೆ…” ಹೇಳಿ ಶಾಂತನ ಕರುಳು ಅದರ ಹೀಂಗೆ ಮಾತಾಡ್ಸಿತ್ತು. ಅಂಬಗ ಕೇಶವ,” ಶಾಂತ ನೀನು ಸುಮ್ಮನೆ ಕೂರೊಂದರಿ..ಇದು ಆಗಂದ ಮೂರ್ನೆ ಸರ್ತಿ ನೀನು ಹೋಪದು..” ಹೇಳಿದ. ಒಂದುಜಾತಿ ಮಗಳ ಗ್ರೇಶಿ ಗ್ರೇಶಿ ಕೂಗುವ ಶಾಂತನ ಸಂಕಟ ನೋಡಿ ವಿಣಾಂಗೆ ಕೂಗದ್ದೇ ಇಪ್ಪಲೆ ಎಡಿಗಾಯ್ದಿಲ್ಲೆ..ಅಂತೂ ಶಾಂತನ ಹೇಂಗಾರು ಮಾಡಿ ಮಂಕಡ್ಸಿಕ್ಕಿ ಒಂದುನಾಕು ತುತ್ತು ಉಣ್ಸಿತ್ತು. ಅಂಜಲಿಯ ಗ್ರೇಶಿ ಕಣ್ಣೀರರಿಶಿಗೊಂಡಿತ್ತ ಈ ಮನೆಯ ಹೊಡೆಂಗೆ ಒರಕ್ಕು ಸುಳಿದ್ದೇಲ್ಲೆ…

-ಮುಂದುವರೆತ್ತು >>>

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

One thought on “ಒಂದು ಪ್ರಕರಣದ ಸುತ್ತ -೪ : ರಮ್ಯ ನೆಕ್ಕರೆಕಾಡು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×