Oppanna.com

ಅಸಕ್ಕಪ್ಪಗ ತಿಂಬಲೆ ಬೆಶಿ ಬೆಶಿ ಪೋಡಿಗೊ..

ಬರದೋರು :   ಬಂಡಾಡಿ ಅಜ್ಜಿ    on   04/11/2012    19 ಒಪ್ಪಂಗೊ

ಬೈಲಿನ ಹೊಡೆಂಗೆ ಬಾರದ್ದೆ ದಿನ ಸುಮಾರಾತದ.. ಓ ಆ ಪೆರಿಯಡುಕ ಹೊಡೇಣ ಮಾರ್ಗ ಸರಿ ಮಾಡ್ತ ಗವುಜಿಲಿ ಪೋನಿನ ಬಳ್ಳಿಗಳ ಪೂರ ಕಡುದು ಇಡುಕ್ಕಿದ್ದವಡ.. ಪೋನು ಬಾರದ್ದರೆ ಈ ಕರೆಂಟಿನ ಪುಸ್ತಕಲ್ಲಿ ಬೈಲು ಕಾಣುತ್ತಿಲ್ಲೆಡ ಅಪ್ಪೊ.. ಉಮ್ಮಪ್ಪ. ಪುಳ್ಳಿ ಹಾಂಗೆ ಹೇಳಿತ್ತು. ಅದಾಗಿ ಪೋನು ಸರಿ ಆದರುದೇ ಈ ಬೈಲಿಂಗೆ ಬಪ್ಪಲೆ ಸರಿಗಟ್ಟು ಪುರುಸೊತ್ತು ಆಗಿಯೊಂಡಿತ್ತಿಲ್ಲೆ. ಅದರೆಡಕ್ಕಿಲಿ ಆ ನೆಗೆಮಾಣಿ ಒಬ್ಬ°.. ಕನ್ನಡುಕ ಹುಗ್ಗುಸಿ ಮಡಗಿರೆ ಮತ್ತೆ ನಾಕು ದಿನಕ್ಕೆ ಪರಂಚುದು ಬಿಟ್ಟರೆ ಮತ್ತೆಂತೂ ಹರಿತ್ತಿಲ್ಲೆ ನಮ್ಮಂದ.. ಅಂತೂ ಈಗ ರೆಜ ಕಾಲುನೀಡಿ ಕೂದು ಬೈಲು ನೋಡುಲೆ ಎಡೆ ಆತಿದ.

ಹೇಳಿದಾಂಗೆ ನಿನ್ನೆ ಹೊತ್ತೊಪ್ಪಾಗ ಕಾಪಿಗೆ ಸಾಮ್ರಾಣಿ ಸೊಪ್ಪಿನ ಪೋಡಿ ಮಾಡಿತ್ತಿದ್ದೆ.”ಅಜ್ಜೀ.. ಎನಗೆ ಅಸಕ್ಕಾವುತ್ತು.. ಎಂತಾರು ತಿಂಡಿ ಮಾಡಿಕೊಡಿ” ಹೇಳಿ ಪುಳ್ಳಿ ಕೇಳಿತ್ತು. ಅದಕ್ಕೆ ಅಸಕ್ಕಾವುತ್ತು ಹೆಳಿತ್ತುಕಂಡ್ರೆ ಎಂತಾರು ಎಣ್ಣೆತಿಂಡಿ ತಿನ್ನೆಕ್ಕೂಳಿ ಆಯಿದು ಹೇಳಿ ಲೆಕ್ಕ. ಎಣ್ಣೆತಿಂಡಿ ಹೇಳಿರೆ ಕೊದಿ ಜಾಸ್ತಿ ಇದ.. ಹಾಂಗೆ ಮಾಡಿದ್ದದು.. ಎನಗೆ ಎಣ್ಣೆಪಸೆ ದಣಿಯ ತಿಂಬಲಾಗ ಹೇಳಿ ಡಾಗುಟ್ರು ಹೇಳ್ತವು.. ಅಪುರೂಪಕ್ಕೆ ರೆಜ ರೆಜ ತಿಂದರೆ ತೊಂದರೆ ಇಲ್ಲೆನ್ನೆ.. ಏವುದನ್ನಾದರು ತಿಂಬಲಾಗ, ಪತ್ಯ ಹೇಳಿ ಅಪ್ಪಗಳೇ ಅದರ ಜಾಸ್ತಿ ತಿನ್ನೇಕು ಹೇಳಿ ಕಾಂಬದಿದ ಮನಿಶ್ಶಂಗೆ.

ಅದಿರಳಿ, ಈಗ ಪೋಡಿಯ ಶುದ್ದಿಗೆ ಬಪ್ಪೊ. ಹಾಂಗೆ ನಿನ್ನೆ ಸಾಮ್ರಾಣಿ ಸೊಪ್ಪಿನ ಪೋಡಿ ಮಾಡಿಯಪ್ಪಗ ಬೈಲಿನ ಪುಳ್ಳಿಯಕ್ಕೊಗೂ ಹಂಚುವೊ ಹೇಳಿ ಕಂಡತ್ತು.

ಪೋಡಿ ಸಾಮಾನ್ಯ ಎಲ್ಲೊರಿಂಗೂ ಇಷ್ಟ ಅಪ್ಪ ತಿಂಡಿಯೇನ್ನೆ.ಸಾಮ್ರಾಣಿ ಸೊಪ್ಪಿನ ತಂಬುಳಿಯೊ ಮತ್ತೊ ಮಾಡಿರೆ ಪುಳ್ಯಕ್ಕೊ ಉಣ್ಣವು. ಹಾಂಗೆ ಅದರ ತಿನ್ನುಸುಲೆ ಈ ಪೋಡಿ ಮಾಡುವ ಕೆಣಿ ಇದಾ..

ಪೋಡಿ ಬೆಂದತ್ತು..

ಪೋಡಿಯ ಹಿಟ್ಟು ಮಾಡುಲೆ ಅರಡಿಗನ್ನೆ.. ಅದು ತುಂಬ ಸುಲಾಬ. ಕಡ್ಳೆಹೊಡಿಗೆ ರೆಜ ಮೆಣಸಿನ ಹೊಡಿ, ಉಪ್ಪು, ಇಂಗು ಎಲ್ಲ ಹಾಕಿ ನೀರಾಕಿ ಕಲಸಿರೆ ಆತು. ಮತ್ತೆ ಲಾಯಿಕಕ್ಕೆ ತೊಳದು ಮಡಗಿದ ಸಾಮ್ರಾಣಿ ಎಲೆಯ ಒಂದೊಂದೆ ತೆಕ್ಕೊಂಡು, ಎರಡು ಹೊಡೆದೆ ಹಿಟ್ಟಿಲಿ ಮುಳುಗುಸಿ ಎಣ್ಣೆಲಿ ಹೊರಿವದು. ನಸುಕೆಂಪಪ್ಪಗ ಎಣ್ಣೆಂದ ತೆಗದರೆ ಸಾಮ್ರಾಣಿ ಪೋಡಿ ಆತದ.. ಹೀಂಗೆಯೇ ಬಸಳೆ ಸೊಪ್ಪಿನ ಪೋಡಿ, ಹರುವೆ ಸೊಪ್ಪಿನ ಪೋಡಿಯೂ ಆವುತ್ತು. ರುಚೀ ಆವುತ್ತು ತಿಂಬಲೆ. ಹೇಳಿದಾಂಗೆ ನಾವು ತಿಂತ ಎಲೆದುದೇ ಪೋಡಿ ಆವುತ್ತು.. ಅದ, ಸುಬಗ ಪಕ್ಕನೆ ಎಲೆತಟ್ಟೆಯ ಹುಗ್ಗುಸಿ ಮಡುಗುಗು ಈ ಸಂಗತಿ ಕೇಳಿರೆ..ಹ್ಹೆ ಹ್ಹೆ.. ಹಾಂಗೆ ಈ ಅಜ್ಜಿಯ ಎಲೆತಟ್ಟೆಲೂ ಇದ್ದನ್ನೆ ಬೇಕಾಷ್ಟು ಎಲೆ.. ಎಲೆತಟ್ಟೆಂದ ಎಲೆ ತೆಗೇಕೂಳಿ ಇಲ್ಲೆಪ್ಪ. ಎಲೆಬಳ್ಳಿಲಿ ಬೇಕಾಷ್ಟು ಇದ್ದನ್ನೆ. ನಾಕು ಎಲೆ ಕೊಯ್ಕೊಂಡು ಬಂದು, ಲಾಯಿಕ ತೊಳದು, ಒಂದು ಎಲೆಯ ಎರಡು ತುಂಡು ಮಾಡಿ ಪೋಡಿ ಹಿಟ್ಟಿಂಗೆ ಅದ್ದಿ ಪೋಡಿ ಮಾಡ್ತದು. ಇದುದೇ ಬಾರೀ ರುಚಿ ಆವುತ್ತು.

ಇನ್ನು ಬಾಳೆಣ್ಣು ಪೋಡಿ, ಬಾಳೆಕಾಯಿ ಪೋಡಿ,ಗೆಣಂಗಿನ ಪೋಡಿ, ಬಟಾಟೆ ಪೋಡಿ, ಬದನೆ ಪೋಡಿ, ದಾರ್ಲೆ ಪೋಡಿ, ದೀಗುಜ್ಜೆ ಪೋಡಿ ಎಲ್ಲ ನವಗೆ ಗೊಂತಿಪ್ಪದೇನ್ನೆ. ದಾರ್ಲೆ ಪೋಡಿ ಮಾಡುಲೆ ಅದರ ಚೋಲಿಯ ಮೇಲಂದ ರೆಜ ಕೆರಸಿದಾಂಗೆ ತೆಗದು, ಮತ್ತೆ ಉರುಟುರುಟಿಂಗೆ ಕೊರೆತ್ತದು. ಚೋಲಿಯ ಇಡುಕ್ಕೊದು ಬೇಡ, ಚಟ್ನಿ ಮಾಡುಲಕ್ಕದ. ಹಾಂಗೆ ಉರೂಟಿಂಗೆ ಕೊರದ ದಾರ್ಲೆ ತುಂಡುಗಳ ಪೋಡಿಟ್ಟಿಂಗೆ ಅದ್ದಿ ಪೋಡಿ ಮಾಡ್ತದು.

ಕಾರ ಅಕ್ಕಾದವಕ್ಕೆ ಮೆಣಸಿನ ಪೋಡಿಯುದೇ ಆವುತ್ತದ. ಪೋಡಿಮೆಣಸು ಹೇಳಿಯೇ ಒಂದು ಇದ್ದನ್ನೆ.. ಅದು ದಣಿಯ ಕಾರ ಇರ. ಬೆಳದ್ದಾದರೆ ರೆಜ ಕಾರ ಇಕ್ಕು. ದಣಿಯ ಕಾರ ಇದ್ದೂಳಿ ಆದರೆ ಅದರ ಎರಡು ಸಿಗುದು, ಬಿತ್ತು ತೆಗದು ಒಳಾಂಗುದೇ ಹಿಟ್ಟು ತುಂಬುಸಿ ಹೊರುದರಾತು. ತಿಂಬಲೆ ರುಚಿ ಆವುತ್ತೂಳಿ ರಾವುಕಟ್ಟಿ ತಿಂಬಲಾಗ. ಮತ್ತೆ ಹೊಟ್ಟೆಉರಿ ಬಕ್ಕು..

ಅಸಕ್ಕಪ್ಪಗ ತಿಂಬಲೆ ಪಕ್ಕನೆ ಏವದಾರು ಒಂದು ಪೋಡಿ ಮಾಡುಲಕ್ಕದ.. ಹೊತ್ತೊಪ್ಪಾಗಾಣ ಕಾಪಿಗೆ ಎಂತೂ ಇಲ್ಲೇಳಿ ಅಪ್ಪಗ ನಾಕು ಪೋಡಿ ಮಾಡಿ ತಿಂಬಲಕ್ಕು. ಏವದುದೇ ಲೆಕ್ಕಂದ ಹೆಚ್ಚು ತಿನ್ನದ್ದರೆ ಆತು. ಅಲ್ಲದೋ? ಏ°..

19 thoughts on “ಅಸಕ್ಕಪ್ಪಗ ತಿಂಬಲೆ ಬೆಶಿ ಬೆಶಿ ಪೋಡಿಗೊ..

  1. ಅಮೇರಿಕಲ್ಲಿಪ್ಪವು ಹೇಂಗೆ ಪೋಡಿ ಮಾಡುದು??? ಅಲ್ಲಿ ಅದೆಂತದೋ ಹೊಗೆ ಕಂಡು ಹಿಡಿತ್ತ ಮಿಶನು ಮಾಡಿಂಗೆ ಸಿಕ್ಸಿರ್ತವಡಾ… ಈ ಎಣ್ಣೆ ಕಾದು ಹೊಗೆ ಎದ್ದರೆ ಪೋಲೀಸುಗ ಬತ್ತವಡಾ ಅಪ್ಪಾ ….?

  2. ಯ್ಯೋ ರಾಮಾ.. ಎನಗೆ ಪೋಡಿ ತಿನ್ನದ್ದೆ ಆದ್ದಕ್ಕಿ೦ತಲೂ ಜಾಸ್ತಿ ಅಸಕ್ಕ ಅಜ್ಜಿಯ ಕಾಣದ್ದೆ ಆತನ್ನೆ..
    ಕಾಣದ್ದೆ ಸುಮಾರು ದಿನ ಅಪ್ಪಗ ಎ೦ತ ಸವಿಕ್ಯ ಇಲ್ಲದ್ದೆಯೋ ಮತ್ತೋ ಆತೋ ಹೇಳಿ ಹೆದರಿಕೆಯೂ ಆವ್ತು ಇದಾ.. ಬ೦ದೊ೦ಡಿರಿ, ನಿ೦ಗೊ ಹೀ೦ಗೆ ಹೇಳಿ ಕೊಟ್ರೆ ಅಲ್ಲದಪ್ಪ ಎನ್ನ ಹಾ೦ಗಿರ್ತವಕ್ಕೆ ಎ೦ತಾರು ಬಾಯಿಗೆ ರುಚಿ ರುಚಿಯಾಗಿ ಮಾಡಿ ತಿ೦ಬಲೆ ಅಪ್ಪದು..

  3. ಹ್ಹೆ ಹ್ಹೆ ಬೈಲಿನವಕ್ಕೆಲ್ಲ ಮಾಡಿಕೊಡುಲಕ್ಕಪ್ಪ.. ಓ ಅಲ್ಲಿ ಮನೆ ಹಿಂದಾಣ ಜೆಗಿಲಿಯ ಮಾಡನೀರು ಬೀಳ್ತಲ್ಲಿ ಬೇಕಾಟ್ಟು ಸಾಮ್ರಾಣಿ ಗೆಡುಗೊ ಇದ್ದದ..

    1. ಅಜ್ಜಿ ಮಳೆ ಕಮ್ಮಿ ಅಪ್ಪಗ ನೀರು ಹಾಕಿ ಬೈಲಿನವು ಹೇಳದ್ದೆ ಬಕ್ಕು ಅಂಬಗ ಕೊಇದು ಮಾಡಿ ಕೊದಡೆಕ್ಕಕ್ಕು..

  4. ಪೋಡಿಯ ಪರಿಮಳ ಬಡಿತ್ತು…ಎಲ್ಲೊವಕ್ಕು ಅಪ್ಪಷ್ಟು ಇದ್ದನ್ನೆ ಅಜ್ಜಿ?? ಹಬ್ಬದ ಸೀಸನ್ ಹೊಸ ಕನ್ನದಕ ಮಾಡಿದರಾತು ಡಿಸ್ಕೌಂಟ್ ಇದ್ದಡ…

  5. ಅಪ್ಪೋ ಅಜ್ಜಿ, ನಮ್ಮ ಪೆಂಗಣ್ಣನೋ, ಮತ್ತೊಬ್ಬನೋ ಎಲ್ಯಾರು ನಿಂಗಳತ್ಲಾಗಿ ಸುಳುದ್ದವೋ.? ಅವಕ್ಕೆ ‘ಪೋಡಿ’ ಹೇಳಿಯಪ್ಪದ್ದೆ ಮೂಗಿನ ಕೊಡಿಲಿ ನೆಳವು ಕೂರ್ತಡ.

  6. ಅಜ್ಜಿ ಹೇಳರೆ ಅಜ್ಜಿಯೇ…
    ಭಯಂಕರ ಆತ ನಿಂಗ 🙂 ನೋಡೋ° ಮಾಡಿ ನೋಡ್ತೆ, ಆತಿಲ್ಲೆ ಹೇಳಿ ಆದರೆ ಸರ್ತ ಎದ್ದೊಡು ಅಜ್ಜಿ ಇಪ್ಪಲ್ಲಿಗೆ 🙂

    1. ದಾರಾಳ ಬಪ್ಪಲಕ್ಕಪ್ಪ.. ಮೊನ್ನೆ ಮಾಡಿದ್ದದು ಬೆಶಿ ಬೆಶಿಯೇ ಮುಗುದ್ದು. ನೀ ಬಂದಪ್ಪಗ ಇನ್ನೊಂದರಿ ಮಾಡುವೊ ಸಾಮ್ರಾಣಿ ಪೋಡಿ.. ಎಂತ?

  7. ಅಜ್ಜಿಯ ಬಿಟ್ಟರೆ ಕಮ್ಯೂನಿಷ್ಟ್ ಗಿಡದ ಏಲೆದೂ, ಬಜಕ್ಕರೆ ದೂ ಪೊಡಿ ಮಾಡುಗು ಹೇಳಿ ನೆಗೆಮಾಣಿ ಹೇಳ್ಯೊಂಡು ಇತ್ತಿದ್ದ. ಅಪ್ಪೋ ಅಜ್ಜಿ?

  8. ಬಂಡಾಡಿ ಅಜ್ಜಿಯ ಪುನಃ ಬೈಲಿಲ್ಲಿ ಕಂಡು ಭಾರೀ ಕೊಶಿ ಆತು. ಸೊಪ್ಪಿನ ಪೋಡಿಯ ಪರಿಚಯ ಮಾಡಿದ್ದು ಒಳ್ಳೆದಾಯಿದು.
    ಹೊಸ ಪ್ರಯೋಗ ಮಾಡಿ ನೋಡೆಕು.
    ಮಸಾಲೆ ಹಾಕಿರೆ, ಉರುಸಣಿಗೆ ಪೋಡಿಗುದೆ ಒಳ್ಳೆ ಡಿಮಾಂಡ್ ಇಕ್ಕೋ ಹೇಳಿ. ತಮಾಶಗೆ ಹೇಳಿದೆ ಅಜ್ಜಿ.

  9. ಹೋ..!! ಬೈಲಿಲಿ ಅಜ್ಜಿಯ ಕಾಣದ್ದೆ ಸುಮಾರು ಸಮಯ ಆತಿದಾ…
    ಬಪ್ಪಗ ಬೆಶಿ ಬೆಶಿ ಪೋಡಿ ತಂದು ಮಡಿಗಿದ್ದೂ ಕೊಶಿ ಆತಿದಾ. ಅಜ್ಜಿ ಹೇಳಿದ ಎಲ್ಲ ಪೋಡಿಗಳ ಒಟ್ಟಿಂಗೆ ಮಾಡಿರೆ ಇನ್ನೂ ಲಾಯಕ ಆವ್ತು ‘ಮಿಕ್ಸೆಡ್ ಪೋಡಿ’ . ಹಾಂಗೆ ಬೀನ್ಸ್, ಕ್ಯಾರೆಟ್, ಬೀಟುರೂಟು, ಹಾಗಲ ಇತ್ಯಾದಿ ಎಲ್ಲ ತರಕಾರಿಗಳನ್ನೂ ತೊಳದು ಕೊರದು ಕಡ್ಲೆಹಿಟ್ಟಿಲ್ಲಿ ಅದ್ದಿ ಎಣ್ಣೆಲಿ ಕಾಸಿ ತೆಗದರೆ ‘ಸ್ಪೆಶಲ್ ಮಿಕ್ಸೆಡ್ ಪೋಡಿ’ ಪ್ರಯೋಗ ಮಾಡಿದ್ದು ಸಕ್ಸಸ್ ಆಯ್ದು ಅಜ್ಜಿ. ಸೊಪ್ಪಿನ ಪೋಡಿ ಇದುವೇ ಸುರು ಕೇಟದು.

    ಅಜ್ಜೀ… ಬಂದುಗೊಂಡಿರಿ ಆತ.

  10. ಬಕಾಸುರ ,ಬ೦ಡಿಲಿ ಪೋಡಿ ಇದ್ದಾ ಹೇಳಿ ಮದಾಲು ನೋಡಿತ್ತಿದಡ,ಅಪ್ಪ-ಅಲ್ಲದೋ ತಿಳುದು-ತಿ೦ದವು ಹೇಳಕ್ಕಶ್ಟೇ?

  11. ಈ ಅಜ್ಜಿ ಎಲ್ಲಿ ಹೋದವು ಇಷ್ಟು ದಿನ? ಪೋಡಿಗಳ ಹೆಸರು ಕೇಳಿರೇ ಸ್ಥೂಲ ಶರೀರದ ಎನ್ನ ಹಾಂಗಿಪ್ಪವಕ್ಕೆ ಪೋಡಿ[ಹೆದರಿಕೆ] ಅಕ್ಕು!ಆಗಲಿ ಅಜ್ಜಿ ಮತ್ತೆ ಮತ್ತೆ ಆಗಾಗ ಬರಲಿ; ಕನ್ನಡಕ ಹುಗ್ಗಿಸಿ ಮಡುಗುವ ಪೋಕ್ರಿ ಮಾಣಿಂಗಳ ಜಾಲ ಕರೆಂದಲೇ ಓಡಿಸಿ ಬಿಡಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×