- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
“ಒಪ್ಪಣ್ಣನ ಬೈಲು” ಹವ್ಯಕ ಭಾಷಾ ಸಾಹಿತ್ಯ ಮನೆ ಮನೆಗೊಕ್ಕೆ ತಲುಪೆಕ್ಕು , ತನ್ಮೂಲಕ ಭಾಷೆ ಒಳಿಯೆಕ್ಕು,ಬೆಳೆಯೆಕ್ಕು ಹೇಳ್ತ ಸದುದ್ದೇಶಲ್ಲಿ ಬೈಲಿಲಿ ಪ್ರಕಟ ಆವುತ್ತಾ ಇಪ್ಪ ಶುದ್ದಿಗಳ ಪುಸ್ತಕರೂಪಲ್ಲಿ ಬಿಡುಗಡೆ ಮಾಡುತ್ತಾ ಬಯಿ೦ದು. “ಒಪ್ಪಣ್ಣನ ಒಪ್ಪ೦ಗೊ-ಒ೦ದೆಲಗ”,”ಹದಿನಾರು ಸ೦ಸ್ಕಾರ೦ಗೊ”,”ಅಟ್ಟಿನಳಗೆ”,”ಚೈನು” – ಇದಿಷ್ಟು ನಮ್ಮ ಈ ವರೆಗಾಣ ಪುಸ್ತಕ೦ಗೊ.
“ಅಷ್ಟಾವಧಾನ” ಡಿ.ವಿ.ಡಿ. ಮತ್ತೆ “ಕಾವ್ಯ ಗಾನ ಯಾನ” ಸಿ.ಡಿ.ಗಳೂ ನಮ್ಮ ಬೈಲಿ೦ದ ಪ್ರಕಟ ಆಯಿದು.
ನಮ್ಮ ಪುಸ್ತಕ೦ಗಳ ಓದಿದ ಸಾಹಿತ್ಯಾಭಿಮಾನಿಗೊ ಆಗಾಗ ಅವರ ಪ್ರತಿಕ್ರಿಯೆ, ವಿಮರ್ಶೆ, ಸಲಹೆಗಳ ಕೊಡುತ್ತಾ ಇದ್ದವು.
ಇತ್ತೀಚೆಗೆ ನಿವೃತ್ತ ಕನ್ನಡ ಪ್ರಾಧ್ಯಾಪಕರೂ, ನಮ್ಮ ಬೈಲಿನ ಹಿತೈಷಿಗಳೂ ಆದ ಪುತ್ತೂರಿನ ಪ್ರೊ. ಹರಿನಾರಾಯಣ ಮಾಡಾವು ಮಾವ “ಚೈನು” ಪುಸ್ತಕವ ಓದಿ ಹೀ೦ಗೆ ಪ್ರತಿಕ್ರಿಯೆ ಕಳುಸಿದ್ದವು.
” ನೆತ್ರಕೆರೆ ಶ್ಯಾಮಣ್ಣ ಬರದ -ಪೆನ್ಸಿಲು,ಚೈನು- ಎರಡು ಕತೆಗಳೂ,ಉದಯ ಮರಕಿಣಿ ’ಹಲಸಿನಕಾಯಿ ಹಪ್ಪಳಕ್ಕೆ ಎಣ್ಣೆ ಕಿಟ್ಟಿ ಕಾಯಿಹೋಳು ಸೇರಿಸಿ’ದ ಹಾ೦ಗೆ ರುಚಿ ಕೂಡುಸುದ ಮುನ್ನುಡಿಯೂ ಲಾಯಕ್ಕಾಯಿದು.ನಮ್ಮ ಭಾಷೆಲ್ಲಿ ಸೇರಿಗೊ೦ಡ ಇ೦ಗ್ಲಿಷ್ ಶಬ್ದ೦ಗೊ ಕೆಲವು ನಮ್ಮದೇ ಆಗಿ ಹೋಯಿದು ಹೇಳಿ ಎರಡೂ ಕತೆಗಳ ಹೆಸರೇ ಸಾರುತ್ತು.ಅಲ್ಲದ್ದೆ ಈ ಹೆಸರುಗೊ ಆಲೋಚನೆ ಮಾಡಿದಷ್ಟೂ ಬೇರೆ ಬೇರೆ ಅರ್ಥ೦ಗಳ ಹೇಳುವ ಹಾ೦ಗೆ ಸಾ೦ಕೇತಿಕವಾಗಿ( symbolic)ಯೂ ಇಪ್ಪದರ ನಾವು ಗಮನುಸೆಕ್ಕು.
ಕಡ್ಡಿಲಿ ಬರದ್ದರ ಉದ್ದಿ ತೆಗವಷ್ಟು ಸುಲಭಲ್ಲಿ ಪೆನ್ಸಿಲಿಲಿ ಬರದ್ದರ ಅಳುಶುಲೆಡಿಯನ್ನೆ?ಹಾ೦ಗೆ,ಪೆನ್ಸಿಲಿಲ್ಲಿ ಬರವಷ್ಟು ದೊಡ್ಡ ಆದ ನಾಣಿ ಊರಿಲ್ಲಿ ಸತ್ಯಾಗ್ರಹದ ಹೊಸ ಇತಿಹಾಸವನ್ನೇ ಬರದು ಕ್ರಾ೦ತಿ ಮಾಡಿದ ಕತೆಯೇ ಪೆನ್ಸಿಲು !
ಹಲವು ಘಟನೆಗಳ ಕೊ೦ಡಿ ಸೇರಿಗೊ೦ಡು chain reactionನ ಹಾ೦ಗೆ ಚೈನು ಕತೆ ರೂಪುಗೊ೦ಡಿದು.ಎರಡೂ ಒ೦ದೇ ಊರಿಲ್ಲಾದ ಕತೆ. ಎಲ್ಲಾ ಹೊಡೆಲಿ ನೆಡವ ಹಾ೦ಗಿಪ್ಪ ಕತೆ !
ಚಿತ್ರಣವೂ,ಚಿತ್ರ೦ಗಳೂ ಕಣ್ಣಿ೦ಗೆ ಕಟ್ಟುವ ಹಾ೦ಗಿದ್ದು.
ಲೇಖಕ ಶ್ಯಾಮಣ್ಣ೦ಗೆ,ಪ್ರಕಟಿಸಿದ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಸರ್ವ ಬ೦ಧುಗೊಕ್ಕೆ ಎನ್ನ ಅಭಿನ೦ದನೆಯನ್ನೂ ಶುಭಾಶಯವನ್ನೂ ತಿಳುಸಲೆ ಸ೦ತೋಷ ಆವುತ್ತು.“
ನಿ೦ಗೊ ಬೈಲಿನ ಪುಸ್ತಕ೦ಗಳ ತೆಕ್ಕೊ೦ಡಿದಿರೋ? ಇಲ್ಲದ್ರೆ ತೆಕ್ಕೊ೦ಡು ಓದಿ,ಅಭಿಪ್ರಾಯ ಕೊಡಿ. ಹವ್ಯಕ ಸಾಹಿತ್ಯದ ಸೆಸಿ ಬೆಳದು ವಿಶಾಲವೃಕ್ಷ ಆಗಿ,ಹೂಗು, ಹಣ್ಣು ,ನೆರಳು ಕೊಡುವಲ್ಲಿ ನಾವು ಕೈಜೋಡುಸುವ,ಬನ್ನಿ.
ಹರೇ ರಾಮ ಮಾಡವು ಮಾವಂಗೆ. ನಮಸ್ತೇ.
ಅಪ್ಪ ಬರದ ಪ್ರತಿಕ್ರಿಯೆ ಲಾಯಿಕಾಯಿದು.
ಇದೇ ಸಂದರ್ಭಲ್ಲಿ ಎನ್ನ ಮನಸ್ಸಿಲ್ಲಿ ಇಪ್ಪ ಬೇಜಾರವನ್ನುದೆ ಬರೆತ್ತೆ. ಅಪ್ಪಂಗೆ ಬೈಲಿನ ಮೇಲೆ ತುಂಬಾ ಪ್ರೀತಿ. ಹಾಂಗೆ ಬೈಲಿಂಗೊಂದು ಶುಭಾಶಯ ಇಪ್ಪ ಪದ್ಯ, ಅಪ್ಪನ ಪುಳ್ಳಿ ಮಡಿಗಿದ ಅಡ್ಡ ಹೆಸರುಗೋ, ಮತ್ತೆ ಇನ್ನೆರಡು ಲೇಖನಂಗಳ ೨ ವರ್ಷದ ಹಿಂದೆಯೆ ಬರದ್ದವು. ಅದರ ಇಲ್ಲಿ ಹಾಕುಲೆ ಹೇಳಿ ಎನ್ನ ಕೈಗೆ ಬಂದು ಕೂದ ಲೇಖನ, ಇನ್ನು ಕಂಪ್ಯೂಟರ್ ಲಿ type ಮಾಡಿ ಆಯಿದಿಲ್ಲೇ ಎನಗೆ. ಅಪ್ಪಂಗೆ ಹೇಳಿ e-mail id ಎಲ್ಲ ಮಾಡಿ ಮಡಿಗಿದ್ದೆ. ಒಪ್ಪಣ್ಣ ಅಪ್ಪಂಗೆ ಇಲ್ಲಿ ಬರವಳೇ ಹೇಳಿ ಒಂದು ಹೆಸರುದೆ ನಿಘಂಟು ಮಾಡಿದ್ದ. ಲೇಖನದ ಕೆಲಸ ಮುಂದೆ ಹೋಯಿದಿಲ್ಲೆ ಹೇಳಿ ಅಪ್ಪನ ಹತ್ರೆ ಬೇಜಾರ ಮಾಡಿಗೊಳ್ತೆ ಒಂದೊಂದರಿ. “ನಿನಗೆ ಎಡಿಗಪ್ಪಗ ಮಾಡು, ನಿನಗೆ ಅಷ್ಟೂ ಬೇಜಾರ ಆವ್ತರೆ ಎನ್ನ ಕೈಗೆ ಬಂದು ಇಂತಿಷ್ಟು ದಿನ ಆತು ಹೇಳು” ಹೇಳಿದವು.
ಮಕ್ಕಳ ದೂರುದಲ್ಲ, ಆದರೂ ಮಕ್ಕಳ ಕೆಲಸಂಗೊ ಮತ್ತೆ ಬೇರೆ ಕೆಲವು ಚಟುವಟಿಕೆಗೊ ಹೇಳಿ ಆ ಕೆಲಸ ಬಾಕಿಯೇ ಆಗಿ ಹೋಯಿದು 🙁
ಇದಾ ಈಗ ಇದರ ಬರವಗಳೂ ಒಂದರಿ ಮಕ್ಕೊ ಲೂಟಿ ಮಾಡಿ ಎನ್ನ ಬೊಬ್ಬೆ ಹೊಡಶಿದವು. ಬೇಗನೆ ಅಪ್ಪನ ಬರಹಂಗಳ ಇಲ್ಲಿ ಹಾಕುಲೇ ಪ್ರಯತ್ನ ಮಾಡ್ತೆ.
ಅಬ್ಬ! ಇಷ್ಟು ಹೇಳಿ ಒಂದರಿ ಸಮಾಧಾನ ಆತು, ಅದರೂ ಅಪ್ಪ ಬರದ ಅಷ್ಟು ಲಾಯಿಕದ ಬರಹ ಇಲ್ಲಿ ಬಪ್ಪಲೆ ಎನ್ನಂದಾಗಿ ತಡವು ಆವ್ತು ಹೇಳಿ ಬೇಜಾರ ಇದ್ದು…
ಚೈನು ಮತ್ತೆ ಪೆನ್ಸಿಲು ಬಗ್ಗೆ ಪ್ರತಿಕ್ರಿಯೆ ಬರದ್ದೆ ಹೇಳಿದ್ದವು ಅಪ್ಪ, ಅಂಬಗಳೂ ಮೇಲಾಣ ಬೇಜಾರಾದ ಉದ್ಗಾರ ತೆಗದ್ದೆ. ಹಾಂಗಿಪ್ಪ ಎನ್ನ ಕತೆ.
ಮಾಡಾವು ಮಾವನ “ಮಾಡಿ”ನೊಳಂದ ಅನುಭವದ ಧಾರೆ ಬೈಲಿಂಗೆ ಹರುದು ಬರಲಿ, ಆದಷ್ಟು ಬೇಗ.
ಪ್ರೊ. ಹರಿನಾರಾಯಣ ಮಾಡಾವು ಮಾವನ ಪ್ರತಿಕ್ರಿಯೆಗೆ ಎನ್ನ ಧನ್ಯವಾದಂಗೊ. 🙂