Oppanna.com

ಸಮಸ್ಯೆ 109 : ಕುಡುದು ಬೀಳುವವಕ್ಕೆ ಹೊಸತು ವರುಷ

ಬರದೋರು :   ಸಂಪಾದಕ°    on   02/01/2016    12 ಒಪ್ಪಂಗೊ

ಈ ವಾರದ ಸಮಸ್ಯೆ ಈಗಾಣ ಹೊಸ ವರ್ಷಾಚರಣೆ.ಅಪ್ಪು ಇದೇ ಒ೦ದು ಸಮಸ್ಯೆ,ಬೈಲಿಲಿ ಪರಿಹಾರ ಖ೦ಡಿತಾ ಸಿಕ್ಕುಗು,ಅಲ್ಲದೋ ?

ಸಮಸ್ಯೆ : ಕುಡುದು ಬೀಳುವವಕ್ಕೆ ಹೊಸತು ವರುಷ

 

ಚೌಪದಿಲಿ ಪೂರಣ೦ಗೊ ಬರಳಿ..

 

12 thoughts on “ಸಮಸ್ಯೆ 109 : ಕುಡುದು ಬೀಳುವವಕ್ಕೆ ಹೊಸತು ವರುಷ

  1. ವರ್ತಮಾನ
    ಗಡಿ ಕಾವ ಯೋಧಂಗೆ ಹಗಲಿರುಳು ಕಠಿಣ ಸಜೆ
    ಗುಡಿ ಕಾವ ದೇವಂಗೆ ವಿಧ ವಿಧದ ಪೂಜೆ
    ದುಡಿವ ಬಡ ವಂಗಿಕ್ಕು ನಿತ್ಯವೂ ಹೊಸ ಹರುಷ
    ಕುಡುದು ಬೀಳುವವಕ್ಕೆ ಹೊಸತು ವರುಷ

    1. ದುಡಿತ್ತವಕ್ಕೆ ನಿತ್ಯವುದೆ ಹೊಸವರುಷ. ಸರಿಯಾದ ಮಾತು. ಲಾಯಕಾಯಿದು ಪದ್ಯ.

  2. ಬುಡ ಕಡುದ ಬಾಳೆಗೆಡು ತೋಡಿನೊಳ ಬಿದ್ದಾ೦ಗೆ
    ನೆಡುವಿರುಳು ಬಿದ್ದಿದವು ಪೇಟೆ ಹೊ೦ಡಲ್ಲಿ
    ಮಡುಗೆಕ್ಕು ಹುಳಿಯಡರಿಲೆರಡು ಚೊಕ್ಕಕೆ ಕಳ್ಳು
    ಕುಡುದು ಬೀಳುವವಕ್ಕೆ , ಹೊಸತು ವರುಷ ||

    1. ವಾಹ್ ! ಸರಿಯಾಗಿಯೇ ಹೇಳಿದ್ದೆ ಭಾವಯ್ಯ. ಹೊಸವರುಷದ ಇರುಳು ಅಸಬಡಿತ್ತವರ ಸರಿಯಾಗಿಯೇ ವರ್ಣಿಸಿದ್ದೆ.

  3. ಶೈಲಜಕ್ಕಾ ,
    ಅಲ್ಲಲ್ಲಿ ಸಣ್ಣ ಯತಿ ಸಮಸ್ಯೆಗೋ ಕಾಣುತ್ತು. ಹೀಂಗೆ ಸರಿ ಮಾಡುಲಕ್ಕು.

    ಹೆಡಗೆಯಡಕೆಯ ಬಿಟ್ಟು ಸುಲಭಕ್ಕೆ ಪೇಟೆಕಡೆ
    ನೆಡದಾತು ಬೊಡುದಿನ್ನು ಖೊಷಿಯ ಹುಡುಕಿ|
    ತಡವಿರುಳು ಬಾರಿನೊಳ ಕೊಣುದು ಜನವರಿಲಿಯೇ
    ಕುಡುದು ಬೀಳುವವಕ್ಕೆ ಹೊಸತು ವರುಷ ||

  4. ಹೆಡಗೆ ಹೊತ್ತು ದುಡಿವ ಕೆಲಸ ಬಿಟ್ಟು ಪೇಟೆಕಡೆ
    ನಡದರಲ್ಲಿ ಬೊಡುದು ಖೊಷಿಯ ಹುಡುಕಿರೆ|
    ತಡ ಇರುಳು ಬಾರು ಸೇರಿ ಕೊಣುದು ಜನವರಿಲಿಯೆ
    ಕುಡುದು ಬೀಳುವವಕ್ಕೆ ಹೊಸತು ವರುಷ ||

  5. ಅಡಿಗೆ ಮಾಡಿದಮೇಲೆ ಹೆಂಡತಿಯು ಊಟಕ್ಕೆ ದಿನಿಗೇಳೆ
    ಬಡುದನ್ನೆ ರಪರಪನೆ ಬೆನ್ನಿಂಗೆ ಗೆಂಡ
    ಹೊಡದುಬಂದರೆ ಹೆಂಡ ಲೋಕಕಾಣುಗೊ ಮತ್ತೆ , ಎಂತಕ್ಕೆ
    ಕುಡುದು ಬೀಳುವವಕ್ಕೆ ಹೊಸತು ವರುಷ ||

    1. ಅತ್ತೆ ,
      ಒಂದು ಮತ್ತೆ ಮೂರನೇ ಸಾಲಿಲಿ ಪಂಚಮಾತ್ರಾಗಣ ಒಂದೊಂದು ಹೆಚ್ಚಿದ್ದು .

      ಅಡಿಗೆ ಮಾಡಿದಮೇಲೆ ಊಟಕ್ಕೆ ದಿನಿಗೇಳೆ
      ಬಡುದನ್ನೆ ಹೆಂಡತಿಯ ಬೆನ್ನಿಂಗೆ ಗೆಂಡ
      ಹೊಡದು ಹೆಂಡವ ಪ್ರಾಣಿಯಪ್ಪದೆಂತಕೆ ? ಬೇಕೊ
      ಕುಡುದು ಬೀಳುವವಕ್ಕೆ ಹೊಸತು ವರುಷ ||

      ಹೇಳಿ ಮಾಡ್ಲಕ್ಕು .

      1. ಸರಿ…ಥ್ಯಾಂಕ್ಸ್ ..ಚೌಪದಿ ಬರೆಯದ್ದೆ ಸುಮಾರು ದಿನ ಆಗಿ ಮರದೇ ಹೋಯಿದು ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×