Oppanna.com

ಸಮಸ್ಯೆ 114 : ಮೋಡಲ್ಲಿ ಹನಿ ಹನಿಯ ನೀರಿದ್ದರೂ ||

ಬರದೋರು :   ಸಂಪಾದಕ°    on   12/03/2016    15 ಒಪ್ಪಂಗೊ

ಆಕಾಶಲ್ಲಿ ಮುಗಿಲು ಕಾಣುತ್ತು,ಸೆಕೆಲಿ ಬೆಗರಿ ಚೆ೦ಡಿಯೂ ಆತು,ಮಳೆ ಬಪ್ಪ ಲಕ್ಷಣ ಕಾಣುತ್ತಿಲ್ಲೆ ..

ಈ ವಾರ ಕುಸುಮ ಷಟ್ಪದಿಲಿ ಬೇಸಿಗೆಕಾಲದ ಒ೦ದು ಸಮಸ್ಯೆ .

ಸಮಸ್ಯೆ  : ಮೋಡಲ್ಲಿ ಹನಿ ಹನಿಯ ನೀರಿದ್ದರೂ ||

15 thoughts on “ಸಮಸ್ಯೆ 114 : ಮೋಡಲ್ಲಿ ಹನಿ ಹನಿಯ ನೀರಿದ್ದರೂ ||

  1. ಗೂಡಿಲಿಯೆ ಕೂದು ಪರ
    ದಾಡುಗು ಚಕೋರ೦ಗೊ
    ಮೂಡುತಿ೦ಗಳ ಬೆಣ್ಚಿ ಸುಧೆ ಕುಡಿವಲೆ |
    ತೋಡಿನೊರತೆಯು ಬೇಡ
    ನೋಡವವು ತೇಲುತ್ತ
    ಮೋಡಲ್ಲಿ ಹನಿ ಹನಿಯ ನೀರಿದ್ದರೂ ||

  2. ಹವ್ಯಕ ಭಾಷೆಲಿ ಉಪಮೆಗಳ ಮಳೆ ಈ ಸರ್ತಿಯಾಣ ಸಮಸ್ಯಾಪೂರಣಲ್ಲಿ . ನಮ್ಮ ಭಾಷೆಲಿ ಸಮೃದ್ಧ ಸಾಹಿತ್ಯ ಸಾಧ್ಯ ಇದ್ದು ಹೇಳ್ತದಕ್ಕೆ ಈ ರಚನೆಗಳೇ ಸಾಕ್ಷಿ . ಎಲ್ಲೋರಿಂಗೂ ಅಭಿನಂದನೆ .

  3. ಪಾಡಿ ಪೊಗಳುವ ಶಿವನ
    ಪಾದದಡಿ ಸೇರುತ್ತೊ
    ಕಾಡಲ್ಲಿ ಅರೆಬಿರಿದ ಹೂಗಿದ್ದರೂ
    ಬಾಡಿ ಬಸವಳುದಿಪ್ಪ
    ಭೂದೇವಿ ತಂಪಾವ್ತೊ
    ಮೋಡಲ್ಲಿ ಹನಿಹನಿಯೆ ನೀರಿದ್ದರೂ.

    1. ದೇವರ ಪಾದ ಸೇರದ್ದ ಕಾಡಿಲಿ ಅರಳುವ ಹೂಗು – ಭೂದೇವಿಯ ತಂಪು ಮಾಡದ್ದ ಹನಿಯಿಪ್ಪ ಮೋಡ .. ಭರ್ಜರಿ ಉಪಮೆ ಅಕ್ಕ .

    2. ರೇವತಿ … ಲಾಯಕ ಆಯಿದು ನಿನ್ನ ಸಮಸ್ಯಾಪೂರಣ …

  4. ಗಾಢವಾದರು ಮುಗಿಲು
    ಜಾಡು ಕಂಡಿದೆಯಿಲ್ಲೆ
    ಮೋಡಲ್ಲಿ ಹನಿಹನಿಯ ನೀರಿದ್ದರೂ
    ಬಾಡಿಹೋಯಿದು ತೋಟ
    ಬೇಡುತ್ತು ಜಲಮೂಲ
    ಪಾಡುಎಂತಾವುತ್ತೊ ಕೃಷಿಕರದ್ದು ||

    1. ಈ ಸರ್ತಿಯ ಬೇಸಗೆಲಿ ಪಾಡು ಎಂತಾವುತ್ತೋ !! ಒಳ್ಳೆ ಪೂರಣ ಅತ್ತೆ .

  5. ನಾಡಿಲ್ಲಿ ಎತ್ತರಕೆ
    ಬೀಡುಗಳ ಕಟ್ಟುಲೆಯೆ
    ಕಾಡಿಲ್ಲಿ ಬಗೆಬಗೆಯ ಮರ ಕಡುದವೂ
    ಕೇಡಿಪ್ಪ ಮನುಜಂಗೆ
    ಮಾಡಿಳಿವ ಮಳೆಯಿಲ್ಲೆ
    ಮೋಡಲ್ಲಿ ಹನಿಹನಿಯ ನೀರಿದ್ದರೂ ||

    1. ಕಾಂಕ್ರೀಟು ಕಾಡು ಬೆಳೆಶಿರೆ ಸಿಕ್ಕುವ ಫಲ .. ಲಾಯ್ಕ ಆಯಿದು ಶೈಲಜಕ್ಕಾ .

  6. ಕಾಡೆಲ್ಲ ನಿರ್ನಾಮ
    ಮಾಡಿಯಾಯಿದು ನವಗೆ
    ರೋಡು ಬೇಡದೊ ಭಾವ ಕಾರೋಡಲೆ ?
    “ಜಾಡಿ”ನೀರಿದ್ದನ್ನೆ
    ಬೇಡಮಳೆ ನವಗೀಗ
    ಮೋಡಲ್ಲಿ ಹನಿಹನಿಯ ನೀರಿದ್ದರೂ !!

    ಪೈಸೆ ಇಡ್ಕಿರೆ “ಬಿಸ್ಲೇರಿ” ನೀರು ಸಿಕ್ಕುವಗ ನವಗೆ ಮಳೆ ಎಂತಕೆ ಬೇಕು ಅಲ್ಲದೊ ಭಾವಯ್ಯ !!?

    1. ಕಡ್ಪ ಪೂರಣ ಬೊಳುಂಬು ಮಾವಾ .. ಅಭಿವೃದ್ಧಿಯ ಹೆಸರಿಲಿ ಕಾಡು ಕಡುದರೆ ಮೀವಲೂ ಬಿಸ್ಲೇರಿ ನೀರೇ ಬೇಕಕ್ಕೋ.. !

  7. ನಿರೀಕ್ಷೆ
    ಓಡಿ ಹೋವುತ್ತು ರಣ-
    ಹೇಡಿಯ ತರಲ್ಲಿಯೇ
    ಮೋಡಲ್ಲಿ ಹನಿ ಹನಿಯ ನೀರಿದ್ದರೂ
    ನಾಡಿನ ಜೆನಂಗೊ ಬಲಿ-
    ವಾಡು ಕೂಟವ ಮಾಡಿ
    ನೋಡಿಯೊಂಡಿತ್ತಿದ್ದವು ಭರವಸೆಲಿ

    1. ರಣ ಹೇಡಿಯ ಹಾಂಗೆ ಓಡುವ ಮೋಡ .. ಎಂಥಾ ಕಲ್ಪನೆ ಮಾವಾ .. ಕೊಶಿಯಾತು .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×