Oppanna.com

ಸಮಸ್ಯೆ 70 : ಚಿತ್ರಕ್ಕೆ ಪದ್ಯ

ಬರದೋರು :   ಸಂಪಾದಕ°    on   24/05/2014    9 ಒಪ್ಪಂಗೊ

ಪವನಜ ಮಾವ ಕಳುಸಿದ ಈ ಚಿತ್ರಕ್ಕೆ ಈ ವಾರ ಒ೦ದು ಪದ್ಯ ಕಟ್ಟುವನೋ?
 
ಹಸುರಿನೆಲೆ ಮೇಲೆ
 

9 thoughts on “ಸಮಸ್ಯೆ 70 : ಚಿತ್ರಕ್ಕೆ ಪದ್ಯ

  1. ಕಾವ ಬೆಶಿಗೆ ಮೊಟ್ಟೆ ಬಿರುದು
    ಜೀವ ಬಂದ ಲಾರ್ವ ಹರದು
    ಹಾವ ಭಾವ ಬದಲೆ ಪ್ಯೂಪವೊಡದು ರೆಂಕೆಲೀ
    ರಾವು ತಿಂಬಲೀಗ ಹಸುರ
    ಮೇವು ಶ್ವೇತದಂಗಿ ಚಿಟ್ಟೆ
    ಸಾವು ಬಪ್ಪ ಮದಲೆ ಹಾರಿ ಬೆಳಶು ಸಂತತೀ ||

  2. ಹೊಸ ಬೆಳಿಯಂಗಿಲಿ
    ಕುಸುರಿನ ಕಲೆಯ ಮಣಿ
    ಬಸರಿ ಪತಂಗಕ್ಕೆ ಹೊಸ ಹೊಣೆ
    ಹಸುರಿನ ಪತ್ರೆಲಿ
    ಬಸರಿನ ಕಳದೂ
    ಹೊಸಕುಲ ರಚನೆಯೆ ಸುರುವಾತು

    1. ಶರಷಟ್ಪದಿಲೊ೦
      ದೆರಡಕ್ಷರದೆಡೆ
      ಸರಿಮಾಡಿರೆ ಗಣ ಸರಿಯಾತು..
      ಲಾಯ್ಕ ಆಯಿದು ಮಾವ.ಒ೦ದೆರಡು ಸಣ್ಣ ತಿದ್ದುಪಡಿ..

      ಹೊಸ ಬೆಳಿಯಂಗಿಲಿ
      ಕುಸುರ ಕಲೆಯ ಮಣಿ
      ಬಸರಿ ಪತಂಗಕೆ ಹೊಸ ಹೊಣೆಯು
      ಹಸುರಿನ ಪತ್ರೆಲಿ
      ಬಸರಿನ ಕಳದೂ
      ಹೊಸಕುಲ ರಚನೆಯೆ ಸುರುವಾತು

  3. ಈಗಷ್ಟೆ ಗೂಡಿ೦ದ ಹೆರ ಬಂದದು ಹೇಳುವ ಕಲ್ಪನೆಲಿ —
    ಹಸುರೆಲೆ ಹಾಸಿಲಿ ಕೋಶದ
    ಮುಸುಕಿನ ಬಿಡುಸಿಕ್ಕಿ ಹಾರುವಹೊಸತನಲ್ಲೀ I
    ಕುಸುಮದ ಬೆಳಿ ಎಸಳಿ೦ಗಾ
    ವಸನದ ಶುಭ್ರತೆಗೆ ಸೃಷ್ಟಿ ಮಡುಗಿದ ಬೊಟ್ಟೋ !!?

    1. ತಡವಾಗಿ ನೋಡಿದೆ ಭಾಗ್ಯಕ್ಕ.ಕ೦ದ ಲಾಯ್ಕ ಆಯಿದು.

  4. ನಿನ್ನೆಯುದೆಗಾಲಲ್ಲಿ ಮನೆ ಹೊಡೆ
    ಬೆನ್ನು ಹಾಕುತ್ತೆರಡು ಮೈಲಾ
    ತಿನ್ನು ನೆಡದರೆ ಹೊಟ್ಟೆ ಕರಗುಗು ಸೋಲುಗೋ ಹೇಳಿ।
    ಎನ್ನ ಮು೦ದೆಯೆ ಕ೦ಡ ಹೂಗಿನ
    ಸಣ್ಣ ಸೆಸಿಕರೆ ಬ೦ದು ಸೊ೦ಟದ
    ದಿನ್ನವಾ ಸುಖವಾಗಿ ಹೊತ್ತರೆಗಳಿಗೆ ನಿ೦ದಾತು।।
    ಎಲ್ಲಿ ನೋಡಿದರಲ್ಲಿ ಹಸುರಿನ
    ಚೆಲ್ಲಿ ನಿ೦ದಿದು ಸುತ್ತ ಸೆಸಿಮರ
    ನಿಲ್ಲು ಓಡೆಡ ನೋಡಿ ಕಣ್ಮನ ತು೦ಬುಸಿಗೊ ಹೇಳಿ।
    ಮೆಲ್ಲುಲಿಯ ತ೦ಗಾಳಿ ಬೀಸೊಗ
    ಹುಲ್ಲ ಮೇಲೆಯೆ ಕೂದರೆಕ್ಷಣ
    ಗೆಲ್ಲುಗಳ ಮೇಲೆನ್ನ ಕಣ್ಣಿನ ನೋಟ ಹಾರಿತ್ತು।।
    ಹಸುರ ಹಸೆ ಮೇಲಿತ್ತು ಸೂರ್ಯನ
    ಹೊಸಕಿರಣಗಳ ಕಾ೦ತಿಯನೆ ಮೀ
    ರುಸುವ ಶುಭ್ರದ ಬೆಳಿಯ ಚಿಟ್ಟೆಯ ಸೀರೆ ಕಪ್ಪ೦ಚು।
    ನಸುಕ ಚಿಲಿಪಿಲಿ ಮರದು ಮೇಲಾ
    ಗಸವೆ ನೋಡುಗು ರೆಪ್ಪೆ ಮುಚ್ಚದೆ
    ರಸದ ಊಟವಿದಾತು ಹರಗಿದ ದೃಶ್ಯವೈಭವವು।।

  5. ಕೆ. ನರಸಿಂಹ ಭಟ್ ಏತಡ್ಕ೦ದ ಕಳುಸಿದ ಪೂರಣ ಇಲ್ಲಿದ್ದು.
    ಶ್ವೇತಾಂಬರಿ
    ————–
    ಪಾತರಗಿತ್ತಿಯೆ ನಿನ್ನಾ
    ಪಾತರವೇ ಚೆಂದ ನೀನು ಸುತ್ತಿದ ಭಾರೀ
    ಶ್ವೇತ ವಸನದಾ ಮಣಿಗಳೆ
    ನೇತೊಂಡಿಪ್ಪ ತರ ಕಪ್ಪು ದೃಷ್ಟಿಯ ಬೊಟ್ಟೋ?
    (ಪಾತರ=ನಾಟ್ಯ )

  6. ಯಾರು ಹಸುರಿನೆಲೆಯ ಮೇಲೆ
    ನೀರು ದೋಸೆ ಹನುಸಿ ಹೋದ್ದು?
    ಚಾರುಕನ್ಯೆ ನಿನ್ನೆಯಿರುಳು ನೆಲಲಿ ಕಂಡಿದಾ?
    ಕಾರಿರುಳಿಲಿ ಬಿದ್ದು ಹೋಯ್ದು
    ತಾರೆಯೊಂದು, ಕಡೆಗದುವೆಯೆ
    ಹಾರಿ ಬಂದು ಮೋಕೆಲಪ್ಪಿ ಹಿಡುದು ಕೂತದಾ?
    ಹನುಸಿ = ಎರದು
    ಚಾರುಕನ್ಯೆ = ಸುಂದರ ಕನ್ಯೆ (ಪದ್ಯಲ್ಲಿ ದೇವಕನ್ಯೆ ಹೇಳುವ ಅರ್ಥಲ್ಲಿ ಬರದ್ದು)

    1. ಆಹಾ.. ಚಿಟ್ಟೆ ನೀರುದೋಸೆಯಾತೋ !!
      ಎರಡನೆ ಉಪಮೆಯೂ ತೂಕದ್ದು. ಒಳ್ಳೆ ಕಲ್ಪನೆ ಅದಿತಿ ಅಕ್ಕಾ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×