Oppanna.com

ಸಮಸ್ಯೆ 82 : “ಏಳು ಸುಮ್ಮನೆ ಕೂರೆಡದೊ° ಬಾ ಬರವ° ಶುದ್ದಿಗಳ”

ಬರದೋರು :   ಸಂಪಾದಕ°    on   03/01/2015    23 ಒಪ್ಪಂಗೊ

ಕೆಲೆ೦ಡರು ಬದಲ್ಸುವ ಈ ಕಾಲಲ್ಲಿ ಒಪ್ಪಣ್ಣ ಬೈಲಿಲಿ ಹೇಳಿದ ಶುದ್ದಿಯ ಸ೦ದೇಶವೇ ಈ ವಾರದ ಸಮಸ್ಯೆ. ಸ೦ಘಟನೆ ನಿ೦ದ ನೀರಾಗದ್ದೆ ಸದಾ ಚಲನೆಲಿ ಇರೆಕ್ಕು, ಅದಕ್ಕಾಗಿ ಓದೆಕ್ಕು,ಬರೆಯೆಕ್ಕು,ಸಮಾಜಮುಖಿಯಾಗಿ ಕೆಲಸ ಮಾಡೆಕ್ಕು.
ಭಾಮಿನಿ ಷಟ್ಪದಿಲಿ ನವ ಉತ್ಸಾಹಲ್ಲಿ ಪೂರಣ ಬರದು ಹೊಸ ವರುಷದ ಉದ್ದಕ್ಕೂ ಸಾಹಿತ್ಯಸೇವೆಯ ಮು೦ದುವರುಸಿ,ಮುನ್ನಡೆವ°,ಬನ್ನಿ.

“ಏಳು ಸುಮ್ಮನೆ ಕೂರೆಡದೊ° ಬಾ ಬರವ° ಶುದ್ದಿಗಳ”

 

23 thoughts on “ಸಮಸ್ಯೆ 82 : “ಏಳು ಸುಮ್ಮನೆ ಕೂರೆಡದೊ° ಬಾ ಬರವ° ಶುದ್ದಿಗಳ”

  1. ಹಿರಿಯರ ಒಳ್ಳೆ ಮಾತುಗಳ ಭಾಮಿನಿ ಛಂದಸ್ಸಿಲಿ ಬರವ ಒಂದು ಪ್ರಯತ್ನ —

    ಆಳುವವನೇ ಅರಸನಾದರು
    ಕಾಳು ಬೆಳೆಶುವ ರೈತನಾದರು
    ಬಾಳು ಹಿಡಿವ ಹಜಾಮನೆದುರಿಲಿ ತಲೆಯ ಬಾಗ್ಸೆಕ್ಕು I
    ”ಏಳು,ಗುರಿಮುಟ್ಟುವ ವರೆಗೆ ನೀ”
    ಹೇಳಿದಾನುಭವಿಗಳ ನೆನಪಿಲೆ-
    ದ್ದೇಳು ಸುಮ್ಮನೆ ಕೂರಡದೊ° ಬಾ ಬರವ° ಶುದ್ದಿಗಳ II

    ಹೇಳಿದ +ಆ + ಅನುಭವಿಗಳ =ಹೇಳಿದಾನುಭವಿಗಳ
    ೧)ದೇಶದ ರಾಷ್ಟ್ರಪತಿಯಾದರೂ ಕುಚ್ಚಿ ತೆಗೆಶುಲೆ ಕೆಲಸಿ/ ಕ್ಷೌರಿಕ೦ಗೆ ತಲೆಬಗ್ಗುಸೆಕ್ಕು (ಗಾಂಧೀಜಿಯವರ ಆತ್ಮ ಕತೆಂದ )– ಹೇಳಿದರೆ ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ಗೌರವ ಇದ್ದು ಮತ್ತು ಕೊಡೆಕ್ಕು ಹೇಳುವ ಅರ್ಥಲ್ಲಿ . ಯಾವುದಲ್ಲಿಯಾದರೂ ಮೇಲು-ಕೀಳು ಭಾವ ಅದರ ನೋಡುವವರ ದೃಷ್ಟಿಲಿ ಇಪ್ಪದು ಹೇಳಿ .
    2) “ಏಳು ,ಎದ್ದೇಳು ಗುರಿ ಮುಟ್ಟುವ ವರೆಗೆ ಜಾಗೃತನಾಗಿರು ” –ಸ್ವಾಮಿ ವಿವೇಕಾನ೦ದರ(ಉಪನಿಷತ್ತಿನ )ಮಾತು ; ವಿವೇಕಾನಂದ ಜಯಂತಿಗಿಂದು ಎನ್ನ ಕಿರು ಸಾಹಿತ್ಯ ಸೇವೆ .

    1. ಮಾತ್ರೆ ಹೆಚ್ಚಾದ್ದಕ್ಕೆ ಸಣ್ಣ ಬದಲಾವಣೆ —

      ಮಾತ್ರೆ ಹೆಚ್ಚಾದ್ದಕ್ಕೆ ಸಣ್ಣ ಬದಲಾವಣೆ —
      ಆಳುವವನೇ ಅರಸನಾದರು
      ಕಾಳು ಬೆಳೆಶುವ ರೈತನಾದರು
      ಬಾಳು ಹಿಡಿವ ಹಜಾಮನೆದುರಿಲಿ ತಲೆಯ ಬಾಗ್ಸೆಕ್ಕು I
      ”ಏಳು,ಗುರಿಮುಟ್ಟುವ ವರೆಗೆ ನೀ-
      ನೇಳು” ಹೇಳಿದವರ ನೆನಪಿಲೆ
      ದ್ದೇಳು ಸುಮ್ಮನೆ ಕೂರಡದೊ° ಬಾ ಬರವ° ಶುದ್ದಿಗಳ II

  2. ಕಾಳು ನಾಯಿಯ ಕಟ್ಟಿ ತೋಟಲಿ
    ಮಾಳದೊಳ ಕಾರಿರುಳು ಕಾವಗ
    ಗೀಳು ಹಿಡುದ ಗಣೇಶ ಬೀಡಿಯ ಚಟವೆ ಬಿಡ್ತಿಲ್ಲೆ II
    ಹಾಳು ಬೀಡಿಯ ಬಿಡ್ಲೆ ಹೇಳಿಯೆ
    ಸೇಲಮಿನ ವೀಳ್ಯದೆಲೆ ಸೇರ್ಸಿ
    ದ್ದೇಳು ಸುಮ್ಮನೆ ಕೂರಡದೊ° ಬಾ ಬರವ° ಶುದ್ದಿಗಳII

    1. ಸೂಪರ್ . ಸುಭಾವ ಬಕ್ಕೀಗ, ಚೆನ್ನೈ ಭಾವನ ಬಲುಗಿಯೊಂಡು

  3. ಬಾಳು ತ೦ದವು ಛೇ ವೆನಿಲ್ಲದ
    ಬೀಳು ಕದ್ದವು ಊರ ಕ೦ಡುಗೊ
    ಹಾಳು ಮಾಡಿದವೆಲ್ಲ ತೋಟವ ಇವರ ಬಿಡುಲಾಗI
    ನಾಳೆ ವಾರ್ತೆಲಿ ಹಾಕುಸಿರೆ ಕೈ
    ಕೋಳ ಹಾಕಿಯೆ ಎಳಗು ಜೈಲಿ೦
    ಗೇಳು ಸುಮ್ಮನೆ ಕೂರೆಡದೊ° ಬಾ ಬರವ° ಶುದ್ದಿಗಳII

    1. ಕೆಲವು ದಿಕ್ಕೆ ಸಂಧಿ ಆಯೆಕ್ಕಾತಲ್ಲದೋ..1

  4. ನಾಳೆ ನಾಡ್ತಿ೦ಗಾನು ಬರವೊದು
    ಹೇಳಿ ಸುಮ್ಮನೆ ಕಾಲ ಕಳದರೆ
    ಕೇಳುಗೆಲ್ಲರು “ಬೈಲು ಒಣಗಿತ್ತಲ್ಲದೋ ಭಾವ?”
    ಕೋಳ ಹಾಕಿದ್ದಿಲ್ಲೆ ಹೆರಡುಲೆ
    ರಾಳ ದೊ೦ದಿಗೊ ಬೇಕೊ? ನವಗೀ
    ಗೇಳು ಸುಮ್ಮನೆ ಕೂರಡದೊ° ಬಾ ಬರವ° ಶುದ್ದಿಗಳII

    1. ರಾಳ ದೊಂದಿಗೋ ಬೇಡವೇ ಬೇಡ..

  5. ಜೀವನ
    ಏಳು ಬೀಳುಗೊ ಸಹಜ ಬದುಕಿಲಿ
    ಹಾಳು ಮಾಡೆ ಡ ದಿನವ ಅಂತೆಯೆ
    ಏಳು ಸುಮ್ಮನೆ ಕೂರೆಡ ದೊ ಬಾ ಬರವ ಶುದ್ದಿಗಳ
    ಕೀಳು ಮಟ್ಟದ ಭಾಷೆ ಬಳಸೆ ಡ
    ಕಾಳು ಹೆಚ್ಚಾಗಿರಳಿ ಶುದ್ದಿಲಿ
    ಬಾಳು ಆಗಲಿ ಹಸನು ಮೋರೆಲಿರಲಿ ಸದಾ ನೆಗೆಯೇ

    1. ಆಹಾ. ಬೈಲಿಲಿ ಏತಡ್ಕ ಮಾವನ ಕೃಷಿ ರೈಸಿದ್ದು.

    2. ಅಂತೆಯೇ ಏಳು -> ಸಂಧಿ ಮಾಡಿರೆ ಒಳ್ಳೆದಕ್ಕು.

  6. ಬಾಳು ತ೦ದಾತಯ್ಯ ಅಡಕೆಯ
    ಹೋಳು ಮಾಡಿದ ಮೇಲೆ ತಟ್ಟೆಯ
    ವೀಳಯಕ್ಕೊ೦ದಷ್ಟು ಸುಣ್ಣವ ಉದ್ದಿ ಅಗುದಗುದು I
    ಮಾಳಿಗೆಲಿ ಪಿಡಿ ಆಡಿ ಸಮಯವ
    ಹಾಳು ಮಾಡಿರೆ ಎ೦ತ ಗುಣ ಬೇ
    ಗೇಳು ಸುಮ್ಮನೆ ಕೂರೆಡದೊ° ಬಾ ಬರವ ಶುದ್ದಿಗಳII

    1. ಪಿಡಿ ಆಡಿ -> ?, ಓಯಿ ರಘು.

      1. ಉದ್ದಿ ಅಗುದಗುದು -.?

        1. ವಿಸ೦ಧಿ ದೋಷವ ನಮ್ಮ ಮಟ್ಟಿ೦ಗೆ ಕರೇಲಿ ಮಡಗಿದ್ದಲ್ಲದೊ ಮಾವ?

  7. ಇದು ನೆರೆಕರೆಯ ಶುದ್ದಿಗಾರ ಹೇಳಿದ್ದು—- 🙂

    ಬೋಳು ಬೈಲಿಲಿ ನಾಳೆ ಭಾವನು
    ತಾಳಿ ಕಟ್ಟುವ ಸಂಭ್ರಮದ ದಿನ
    ಬಾಳೆಲಗೆ ಹೋಳಿಗೆಯ ಬಳುಸುಲೆ ಸುದರಿಕಗೆ ಬನ್ನಿ I
    ಹೋಳು ಕೊರವಗ ಮುಳಿಯ ಭಾವನೆ
    ಮೇಳ ಕಟ್ಟುವ ವಿಷಯ ಹೇಳಿದ-
    ವೇಳು ಸುಮ್ಮನೆ ಕೂರಡದೊ° ಬಾ ಬರವ° ಶುದ್ದಿಗಳII

    ಹೋಳು ಕೊರವಗ =ಬೆಂದಿಗೆ ಕೊರವದು ,
    ಬೋಳುಬೈಲು =ಒಂದು ಜಾಗೆಯ ಹೆಸರು

    1. ಹ ಹಾ.. ಇದು ಅದ್ಭುತ ಆಯಿದು ಭಾಗ್ಯಕ್ಕ .
      ಯಕ್ಷಗಾನ ಸಮ್ಮೇಳನ ಮನ್ನೆ ಮುಗುದತ್ತು ..

    2. ಬೊಳುಬೈಲು ಎಂಗೊಗೆ ನೆರೆಕರೆ , ಅಲ್ಲದೋ ಸುಭಾವ..? ನವಗೆ ಅತ್ತಾಳಕ್ಕೆ ದೆನಿಗೇಳ್ತವಿದಾ ಭಾಗಕ್ಕ.

      ಪೂರಣ ಲಾಯಿಕಿದ್ದು. ಒಳ್ಳೆ ಕಲ್ಪನೆ.

  8. ಆಹಾ .. ಶೈಲಜಕ್ಕಾ . ಒಳ್ಳೆ ಪೂರಣ. ಉಪಮೆಯೂ ಲಾಯ್ಕ ಆಯಿದು .

  9. ಏಳುಬೀಳುಗೊ ಬಪ್ಪ ಜೀವನ
    ತಾಳಿಗೊಂಡರೆ ಕಷ್ಟ ಖೊಷಿಲಿಯೆ
    ಬಾಳಿಬದ್ಕುವ ಪಾಠ ಕಲ್ತರೆ ಇಲ್ಲಿ ಸಾಕಾಗ
    ಧೂಳ ತೊಳವಲೆ ಅರದು ಹೊಳವಲೆ
    ಹೇಳು ಅನುಭವ ಬೈಲ ನೆಂಟ್ರಿಂ
    ಗೇಳು ಸುಮ್ಮನೆ ಕೂರೆಡದೊ ಬಾ ಬರವ ಶುದ್ದಿಗಳ || 🙂

    1. ಒಳ್ಳೆದಾಯಿದು ಶೈಲಕ್ಕ . ಏಳುಬೀಳುಗೊ,..ಬಾಳಿಬದ್ಕುವ …ಇದೇ ಪ್ರಾಸಲ್ಲಿ ಆನೂ ಬರದಿತ್ತಿದ್ದೆ . ನಿಂಗೊ ಬರದ್ದು ಕಂಡು ವಿಷಯವನ್ನೇ ಬದಲುಸಿದೆ 🙂

      1. ಅದಾ… ಆನು ಭಾಗ್ಯಕ್ಕ ಎಂತ ಬಯಿಂದವಿಲ್ಲೆ ಹೇಳಿ ಗ್ರೇಶಿದಷ್ಟೆ… ಪೂರಣ ಬಾರದ್ದರಿಂದ ನವಗೆ ಮಾತಡದ್ದೆ ಅಸಕ್ಕ ಹಿಡುದಿದಾ ..

    2. ” ನೆಂಟ್ರಿಂಗೇಳು ” ಸಂಧಿ ಮಾಡಿ ಬರದ್ದದು ಲಾಯಿಕ್ಕಾಯಿದು. ಆದರೆ, ಇಲ್ಲಿ “ನೆಂಟ್ರಿಂಗೆ ಹೇಳು ” ಅರ್ಥ ಬತ್ತು. ಸಮಸ್ಯೆಲಿ ಕೊಟ್ಟ ಅರ್ಥ ಬೇರೆ. ಆದರೂ ಸೂಕ್ತ ಬದಲಾವಣೆ ಒಪ್ಪತಕ್ಕದ್ದೇ. ಒಟ್ಟಾರೆ ಪೂರಣ ಲಾಯಿಕಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×