Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಹು. ಜೆ೦ಬ್ರ೦ಗಳ ಎಡಕ್ಕಿಲಿ ಬೈಲಿ೦ಗೆ ಬಪ್ಪಲೂ ಸಮಸ್ಯೆ ಆವುತ್ತು ಹೇಳಿ ಒ೦ದು ಬೇಜಾರು.ಕ್ಷಮೆ ಇರಳಿ.
ಈ ವಾರದ ಸಮಸ್ಯೆ : ಶಿವರಾತ್ರಿ ನೆಡುವಿರುಳು ಒರಗುತ್ತಿರೊ?
ಕುಸುನಷಟ್ಪದಿಯ ಈ ಸಮಸ್ಯೆಗೆ ಪರಿಹಾರ ನೋಡದ್ದರೆ ತೆ೦ಗಿನ ಮರಕ್ಕೆ ಹತ್ತುವವು ಬಕ್ಕು. ಹಾ೦.
ರವೆಯು೦ಡೆ ಗಮ್ಸಿಕ್ಕಿ
ರವಸುತ್ತು ಕೈಯೆಲ್ಲ
ನವರಾತ್ರಿ ಪಿಡಿಯೆರಡು ಹಾಕುತ್ತಿರೊ?
ನೆವ ಹೇಳಿ ಬೊ೦ಡ ಕ೦
ಡುವ ಜೋಕುಳುಗೊ ಬಕ್ಕು
ಶಿವರಾತ್ರಿ ನೆಡುವಿರುಳು ಒರಗುತ್ತಿರೊ?
ಭಾಗ್ಯಕ್ಕನ ಪೂರಣ ಒಳ್ಳೆದು ಹೇಳೆಕ್ಕೋ, ಯೇತಡ್ಕ ಮಾವನ ಪೂರಣ ಲಾಯಿಕಿದ್ದು ಹೇಳೆಕ್ಕೋ..ಎರಡೋ ಪಷ್ಟಾಯಿದು.
ಓಂ ನಮಃ ಶಿವಾಯ.
ಧನ್ಯವಾದ ಕುಮಾರಣ್ಣ.
ಶಿವಾರ್ಪಣ
ಅವಲಕ್ಕಿ ತಿಂದಿಕ್ಕಿ
ಸವಿಗನಸ ಕಂ ಡೊಂ ಡು
ಶಿವರಾತ್ರಿ ನೆಡುವಿರುಳು ಒರಗುತ್ತಿರೊ?
ಭವ ಸಾಗರವ ದಾಂಟು-
ಸುವ ಪಶುಪತಿಯನುಗ್ರ-
ಹವ ಕೋರಿ ಜಾಗರಣೆ ಮಾಡುತ್ತಿ ರೊ?
ಶಿವಾರ್ಪಣಕ್ಕೆ ಕುಸುಮದ ಸೇವೆ ; ಹವ್ಯಕ ಸೊಗಡಿಲಿ ಭಾರೀ ಲಾಯಿಕಾಯಿದು ಮಾವ.
ಧನ್ಯವಾದ ಭಾಗ್ಯಕ್ಕ.
ಭುವನೇಶ್ವರಿದೆಯಂಗ
ಭವಭಯವ ನೀಗುಸುವ
ಸವಿನಾಮ ಜಪಿಸೋ೦ನಮಃ ಶಿವಾಯ I
ಕಿವಿಯಾರೆ ಕೇಳದ್ದೆ
ಕವನಲ್ಲಿ ಬರೆಯದ್ದೆ
ಶಿವರಾತ್ರಿ ನೆಡುವಿರುಳು ಒರಗುತ್ತಿರೊ? II
ಭುವನೇಶ್ವರಿದೆಯಂಗ =ಅರ್ಧನಾರೀಶ್ವರ